ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dinesh Gooligowda Column: ಕಾಂಗ್ರೆಸ್‌ ಸರಕಾರಕ್ಕೆ ಎರಡು ವರ್ಷ, ಜನರಿಗೆ ತಂದಿತು ಅತೀವ ಹರ್ಷ

ಸರಕಾರವು ಅಸ್ತಿತ್ವಕ್ಕೆ ಬಂದ ದಿನದಿಂದಲೂ ವಿಪಕ್ಷದವರು ಒಂದಿಲ್ಲೊಂದು ಟೀಕೆ ಮಾಡುತ್ತಾ, ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಲೇ ಬಂದರು, ರಾಜ್ಯ ದಿವಾಳಿಯಾಗಲಿದೆ ಎಂದೇ ಬೊಬ್ಬೆ ಹೊಡೆದರು. ಆದರೆ ಆರ್ಥಿಕ ಶಿಸ್ತಿನ ಎಲ್ಲೆ ಮೀರದೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜತೆಜತೆಗೆ ಅಭಿವೃದ್ಧಿಯ ಖಾತ್ರಿಯನ್ನೂ ಕಾಂಗ್ರೆಸ್ ಸರಕಾರ ನೀಡುತ್ತಿದೆ ಎಂಬುದನ್ನು ಹಲವು ಅಂಕಿ-ಅಂಶಗಳು ಸಾಬೀತುಪಡಿಸುತ್ತಿವೆ.

ಕಾಂಗ್ರೆಸ್‌ ಸರಕಾರಕ್ಕೆ ಎರಡು ವರ್ಷ, ಜನರಿಗೆ ತಂದಿತು ಅತೀವ ಹರ್ಷ

Profile Ashok Nayak May 20, 2025 6:30 AM

ಪ್ರಶಂಸಾಪರ್ವ

ದಿನೇಶ್‌ ಗೂಳಿಗೌಡ

ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯಪೂರ್ವದಿಂದಲೂ ಜನರಿಗೆ ಬದುಕನ್ನು ಕಟ್ಟಿ ಕೊಡುವ ಕೆಲಸವನ್ನು ಮಾಡುತ್ತಲೇ ಬಂದಿದ್ದು, ಈಗಿನ ಕಾಂಗ್ರೆಸ್ ಸರಕಾರವೂ ಇದಕ್ಕೆ ಬದ್ಧವಾಗಿದೆ. ಬಿಜೆಪಿಯ ದುರಾ ಡಳಿತದಿಂದ ಬಸವಳಿದಿದ್ದ ರಾಜ್ಯದ ಜನರ ಬಾಳನ್ನು ‘ಗ್ಯಾರಂಟಿ’ ಯೋಜನೆಗಳು ಹಸನಾಗಿಸುತ್ತಿವೆ. ಸರಕಾರವು ಜನರಿಗೆ ನೆಮ್ಮದಿಯ ಬದುಕನ್ನು ಕಟ್ಟಿಕೊಟ್ಟಿದ್ದರ ಜತೆಗೆ, ರಾಜ್ಯದ ಅಭಿವೃದ್ಧಿಗೂ ಹತ್ತಾರು ಯೋಜನೆಗಳನ್ನು ರೂಪಿಸಿ, ಅವನ್ನು ಸಮರ್ಥವಾಗಿ ಜಾರಿಗೆ ತಂದ ಪರಿಣಾಮ ‘ಕರ್ನಾಟಕ ಮಾಡೆಲ್’ ಈಗ ‘ಭಾರತದ ಮಾಡೆಲ್’ ಆಗಿ ಬಿಟ್ಟಿದೆ. ಕರ್ನಾಟಕದತ್ತ ಭಾರತವಷ್ಟೇ ಅಲ್ಲದೆ, ಇಡೀ ವಿಶ್ವವೇ ತಿರುಗಿನೋಡುತ್ತಿದೆ.

ಸರಕಾರವು ಅಸ್ತಿತ್ವಕ್ಕೆ ಬಂದ ದಿನದಿಂದಲೂ ವಿಪಕ್ಷದವರು ಒಂದಿಲ್ಲೊಂದು ಟೀಕೆ ಮಾಡುತ್ತಾ, ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಲೇ ಬಂದರು, ರಾಜ್ಯ ದಿವಾಳಿಯಾಗಲಿದೆ ಎಂದೇ ಬೊಬ್ಬೆ ಹೊಡೆದರು. ಆದರೆ ಆರ್ಥಿಕ ಶಿಸ್ತಿನ ಎಲ್ಲೆ ಮೀರದೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜತೆಜತೆಗೆ ಅಭಿವೃದ್ಧಿಯ ಖಾತ್ರಿಯನ್ನೂ ಕಾಂಗ್ರೆಸ್ ಸರಕಾರ ನೀಡುತ್ತಿದೆ ಎಂಬುದನ್ನು ಹಲವು ಅಂಕಿ-ಅಂಶಗಳು ಸಾಬೀತುಪಡಿಸುತ್ತಿವೆ.

ಜಿಎಸ್‌ಡಿಪಿ ಬೆಳವಣಿಗೆಯಲ್ಲಿ ದೇಶದಲ್ಲೇ ಮೊದಲ ಸ್ಥಾನಕ್ಕೇರಿರುವ ಕರ್ನಾಟಕ, ತೆರಿಗೆ ಸಂಗ್ರಹಣೆ ಮತ್ತು ವಿದೇಶಿ ಬಂಡವಾಳ ಹೂಡಿಕೆಯಲ್ಲಿ 2ನೇ ಸ್ಥಾನಕ್ಕೇರಿದೆ. ‘ಕೇರ್ ಎಡ್ಜ್’ ವರದಿ ಪ್ರಕಾರ, ದೇಶ ದಲ್ಲೇ ಅತ್ಯುತ್ತಮ ಸಾಧನೆ ಮಾಡಿದ ರಾಜ್ಯಗಳ ಪೈಕಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ದೇಶದ ಒಟ್ಟಾರೆ ಜಿಡಿಪಿ ಬೆಳವಣಿಗೆಯು ಶೇ.8.2ರಷ್ಟು ಇದ್ದರೆ, ಕರ್ನಾಟಕದ ಜಿಡಿಪಿ ಶೇ.10.2ರಷ್ಟು ದಾಖಲಾಗಿದ್ದು ತೆರಿಗೆ ಸಂಗ್ರಹದಲ್ಲಿ 2ನೇ ಸ್ಥಾನವನ್ನು ತಲುಪಿದೆ.

ಸರಕಾರದ ದೂರ ದೃಷ್ಟಿ ಯೋಜನೆಗಳೇ ಇದಕ್ಕೆ ಕಾರಣ. ಕಾಂಗ್ರೆಸ್ ಸರಕಾರದ ‘ಗ್ಯಾರಂಟಿ’ ಮಾದರಿ ಯನ್ನು ಕೇಂದ್ರದ ಬಿಜೆಪಿ ಯಥಾವತ್ ನಕಲು ಮಾಡಿದೆ. ವಿಪರ್ಯಾಸವೆಂದರೆ, ಕಾಂಗ್ರೆಸ್ ಸರಕಾ ರವು ಗ್ಯಾರಂಟಿಗಳ ಜಾರಿಯ ವಿಷಯದಲ್ಲಿ ನುಡಿದಂತೆ ನಡೆದರೆ, ಬಿಜೆಪಿ ಆಡಳಿತದ ರಾಜ್ಯಗಳು ಅವುಗಳ ಜಾರಿಗೆ ತಿಣುಕಾಡುತ್ತಿವೆ!

ಇದನ್ನೂ ಓದಿ: Kiran Upadhyay Column: ಕಣ್ಣುಕಟ್ಟುವ ವಿದ್ಯೆಯೇ ಇಂದು ಕೆಲಸಕ್ಕೆ ಬಂದಿದೆ !

ಬಹುಮುಖ್ಯವಾಗಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಫಿಲೆಮಾನ್ ಯಾಂಗ್ ಅವರು ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಪ್ರಶಂಸಿಸಿದ್ದಾರೆ. ಕರ್ನಾಟಕ ಸರಕಾರದ ‘ಜಾತಿಗಣತಿ ಮಾದರಿ’ಯನ್ನು ದೇಶಾದ್ಯಂತ ಮೊದಲ ಬಾರಿಗೆ ಜಾರಿ ಮಾಡಲು ಕೇಂದ್ರ ಸರಕಾರ ಮುಂದಾಗಿದೆ. ತನ್ಮೂಲಕ ಕರ್ನಾಟಕ ಸರಕಾರದ ಮಾಡೆಲ್, ‘ದೇಶದ ಮಾಡೆಲ್’ ಕೂಡ ಆಗಿದೆ ಎಂಬುದು ಹೆಮ್ಮೆಯ ಸಂಗತಿ.

2024ರ ವರ್ಷದಲ್ಲಿ, ಉದ್ಯೋಗ ಸೃಷ್ಟಿಯ ವಿಷಯದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಕರ್ನಾಟಕವು ಶೇ.63.93ರಷ್ಟು ಉದ್ಯೋಗಾವಕಾಶವನ್ನು ಹೊಂದಿದ್ದು, ಉದ್ಯೋಗ ಪಡೆಯಲು ಅರ್ಹರಾಗಿರುವ ಪದವೀಧರರ ವಿಷಯದಲ್ಲಿ 7ನೇ ಸ್ಥಾನವನ್ನು ಹೊಂದಿದೆ. ಕಲಬುರಗಿ ಜಿಲ್ಲೆಯಲ್ಲಿ 1 ಸಾವಿರ ಎಕರೆ ಪ್ರದೇಶದಲ್ಲಿ ‘ಪಿಪಿಪಿ’ ಮಾದರಿಯಲ್ಲಿ ‘ಮೆಗಾ ಜವಳಿ ಪಾರ್ಕ್ ಸ್ಥಾಪಿಸಲು ಯೋಜಿಸಿರುವ ಕಾಂಗ್ರೆಸ್ ಸರಕಾರ, 1 ಲಕ್ಷ ಜನರಿಗೆ ನೇರ ಉದ್ಯೋಗ ಹಾಗೂ 2 ಲಕ್ಷ ಜನರಿಗೆ ಪರೋಕ್ಷ ಉದ್ಯೋಗ ಸೃಷ್ಟಿಸಲು ಪಣತೊಟ್ಟಿದೆ.

‘ಇನ್ವೆಸ್ಟ್ ಕರ್ನಾಟಕ’ ಕಾರ್ಯಕ್ರಮದಲ್ಲಿ 10 ಲಕ್ಷ ಕೋಟಿ ರು. ಹೂಡಿಕೆಯ ಗುರಿಯನ್ನು ಪರಿ ಪೂರ್ಣವಾಗಿ ಸಾಧಿಸಲಾಗಿದ್ದು ಇದರಿಂದ 6 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ದೊಡ್ಡ ದೊಡ್ಡ ಕಂಪನಿಗಳ ಜತೆಗೂಡಿ 1 ಲಕ್ಷ ಮಂದಿ ಯುವಜನರಿಗೆ ತರಬೇತಿ ನೀಡಲಾಗುತ್ತಿದೆ. 100 ಕೇಂದ್ರಗಳಲ್ಲಿ 30 ಸಾವಿರ ಮಹಿಳೆಯರಿಗೆ ಉದ್ಯೋಗಾಧಾರಿತ ಕೌಶಲದ ತರಬೇತಿ ನೀಡಲು ಸ್ವ-ಉದ್ಯೋಗ ಯೋಜನೆ ಜಾರಿ ಮಾಡುವ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಕಾಂಗ್ರೆಸ್ ಸರಕಾರ ಮುಂದಾಗಿದೆ.

ಕೇಂದ್ರ ಸರಕಾರದ ತೆರಿಗೆ ಹಂಚಿಕೆ ಮತ್ತು ಅನುದಾನದಲ್ಲಿನ ಅನ್ಯಾಯದ ನಡುವೆಯೂ ಕಾಂಗ್ರೆಸ್ ಸರಕಾರವು ತಾನು ಅಸ್ತಿತ್ವಕ್ಕೆ ಬಂದ ಎರಡೇ ವರ್ಷದಲ್ಲಿ ಕರ್ನಾಟಕದ ಮಾಡೆಲ್ ಅನ್ನು ರಾಷ್ಟ್ರಕ್ಕೆ ತೋರಿಸಿಕೊಟ್ಟಿದೆ. ಉಳಿದಿರುವ ಮೂರು ವರ್ಷಗಳಲ್ಲಿ ಇಡೀ ವಿಶ್ವವೇ ಕನಾಟಕದತ್ತ ತಿರುಗಿ ನೋಡುವಂತೆ ಮಾಡಿ, ತನ್ನ ಈ ಸಾಧನೆಯನ್ನು ಮುಂದಿಟ್ಟುಕೊಂಡು ಜನರ ಬಳಿಗೆ ತೆರಳಿ, ಮತ್ತೊಮ್ಮೆ ಜನಾಶೀರ್ವಾದ ಪಡೆದು ಕಾಂಗ್ರೆಸ್ ಸರಕಾರವು ಅಸ್ತಿತ್ವಕ್ಕೆ ಬರಲಿದೆ.

(ಲೇಖಕರು ಶಾಸಕರು, ಕರ್ನಾಟಕ ವಿಧಾನಪರಿಷತ್)