ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kaushik Gattigar Column: ಸ್ವಾಭಿಮಾನಿ ರಾಷ್ಟ್ರನಿರ್ಮಾಣ ನಮ್ಮ ಹೊಣೆಯಾಗಲಿ

ಡೀಪ್ ಸ್ಟೇಟ್‌ನ ಕಾರ್ಯವಿಧಾನ/ವೈಖರಿಯನ್ನು ಇಂದು ಜಗತ್ತಿನಲ್ಲಿ ತುಂಬಾ ಸ್ಪಷ್ಟವಾಗಿ ಗುರುತಿಸ ಬಹುದಾಗಿದೆ ಹಾಗೂ ಭವಿಷ್ಯದ ಘಟನೆಗಳನ್ನು ಸುಲಭವಾಗಿ ಊಹಿಸಬಹುದಾಗಿದೆ. ಮೊದಲಿಗೆ, ಜಾತಿ, ಮತ, ಜನಾಂಗ, ವರ್ಣ, ಲಿಂಗ ಮುಂತಾದ ಭೇದಗಳನ್ನೂ ಭ್ರಷ್ಟಾಚಾರ ಅಥವಾ ಆರ್ಥಿಕ ಅಸಮಾನತೆ ಯಂಥ ಸ್ಥಳೀಯ ಸಮಸ್ಯೆಗಳನ್ನೂ ಗುರುತಿಸುವುದು.

ನೆರೆಹೊರೆ

ಕೌಶಿಕ್‌ ಗಟ್ಟಿಗಾರ್

ಕಳೆದ 15 ವರ್ಷಗಳ ವಿಶ್ವದ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ, ನಮಗೆ ಕಾಣ ಸಿಗುವುದು ಒಂದೇ ಮಾದರಿಯ ವ್ಯವಸ್ಥಿತ ಗಲಭೆಗಳು, ಕ್ರಾಂತಿಗಳು, ಚಳವಳಿಗಳು ಹಾಗೂ ಆಂದೋಲನಗಳು. ವೈಶ್ವಿಕವಾಗಿ ‘ಅರಬ್ ಸ್ಪ್ರಿಂಗ್’ನಿಂದ ಪ್ರಾರಂಭವಾಗಿ, ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಆಂದೋಲನ ದವರೆಗೆ, ಉಕ್ರೇನ್‌ನ ಭೂಸಂಘರ್ಷದಿಂದ ಶ್ರೀಲಂಕಾ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಪರಿಸ್ಥಿತಿ‌ ಗಳವರೆಗೆ, ಅಂತೆಯೇ ಭಾರತದಲ್ಲಿನ ‘ಸಿಎಎ’ ಪ್ರತಿಭಟನೆ, ಶಹೀನ್‌ಬಾಗ್ ಹೋರಾಟದಿಂದ ಮೊದಲ್ಗೊಂಡು ರೈತರ ಹೋರಾಟದವರೆಗೆ ಕಂಡುಬರುತ್ತಿರುವುದು ಒಂದೇ ವಿನ್ಯಾಸ.

ಅಮೆರಿಕದ ಡೀಪ್ ಸ್ಟೇಟ್ (Deep State) ಸಂಬಂಧ, ಎಡಪಂಥೀಯ ಉದಾರವಾದಿಗಳು, ಕೋಟ್ಯ ಧಿಪತಿಗಳು ಹಣ ನೀಡಿ ಬೆಳೆಸಿದ ಸರಕಾರೇತರ ಸಂಸ್ಥೆಗಳು (NGO) ಮತ್ತು ಅವುಗಳ ಬೌದ್ಧಿಕ ಸವಾದ ಸಾಂಸ್ಕೃತಿಕ ಮಾರ್ಕ್ಸ್ ವಾದ ಮತ್ತು ಯಹೂದಿಗಳ ಅಂತ್ಯದ ಗುರಿಯ ಪಿತೂರಿಯೇ ಈ ದಂಗೆಗಳ ಹಿಂದಿದೆ.

ಸಾರ್ವಭೌಮ ರಾಷ್ಟ್ರಗಳನ್ನು ದುರ್ಬಲಗೊಳಿಸಿ, ಜಗತ್ತಿನಾದ್ಯಂತ ಅಶಾಂತಿಯ ವಾತಾವರಣ ನಿರ್ಮಿಸಿ, ಏಕರೂಪದ ಕಾರ್ಯವೈಖರಿಯ, ಪಾಶ್ಚಾತ್ಯ ಪ್ರಭುತ್ವದ, ಒಂದೇ ವಿಶ್ವ ಕ್ರಮದ (One World Order) ನಿರ್ಮಾಣದ ಗುರಿ ಈ ಎಲ್ಲಾ ದಂಗೆಗಳ ಹಿಂದಿದೆ.

ಇದನ್ನೂ ಓದಿ: Chikkaballapura: ಬರೋಬ್ಬರಿ 4 ಲಕ್ಷ ರೂ.ಗೆ ಮಾರಾಟವಾದ ಸಾರ್ವಜನಿಕ ಗಣೇಶೋತ್ಸವದ ಲಡ್ಡು!

Yagati Raghu Naadig Column: ಅವಧೂತರ ಕಾಲಿಗೇ ತೊಡರುಹಾಕಿಕೊಂಡ ಕಳ್ಳಬೆಕ್ಕು

ಕ್ರಾಂತಿ‌ ಕಾರ್ಖಾನೆಯ ನಿರ್ಮಾಣ: ಡೀಪ್ ಸ್ಟೇಟ್‌ನ ಕಾರ್ಯವಿಧಾನ/ವೈಖರಿಯನ್ನು ಇಂದು ಜಗತ್ತಿನಲ್ಲಿ ತುಂಬಾ ಸ್ಪಷ್ಟವಾಗಿ ಗುರುತಿಸಬಹುದಾಗಿದೆ ಹಾಗೂ ಭವಿಷ್ಯದ ಘಟನೆಗಳನ್ನು ಸುಲಭವಾಗಿ ಊಹಿಸಬಹುದಾಗಿದೆ. ಮೊದಲಿಗೆ, ಜಾತಿ, ಮತ, ಜನಾಂಗ, ವರ್ಣ, ಲಿಂಗ ಮುಂತಾದ ಭೇದಗಳನ್ನೂ ಭ್ರಷ್ಟಾಚಾರ ಅಥವಾ ಆರ್ಥಿಕ ಅಸಮಾನತೆಯಂಥ ಸ್ಥಳೀಯ ಸಮಸ್ಯೆಗಳನ್ನೂ ಗುರುತಿಸುವುದು.

ನಂತರ ಈ ವಿಷಯಗಳನ್ನು ವಿಶ್ವವಿದ್ಯಾಲಯಗಳಲ್ಲಿ, ಕಾಲೇಜುಗಳಲ್ಲಿ ತೀಕ್ಷ್ಣವಾಗಿ ವರ್ಧಿಸಿ, ದೇಶದ ಮೂಲ ಸಂಸ್ಕೃತಿಯಿಂದ ಬೇರ್ಪಡಿಸಿ, ಕಮ್ಯುನಿಸ್ಟ್ ಮೂಲಭೂತವಾದದ ಬ್ಯಾನರ್ ಅಡಿಯಲ್ಲಿ ‘ಹಕ್ಕು-ನ್ಯಾಯ-ಸ್ವಾತಂತ್ರ್ಯ’ದ ಹೆಸರಿನಲ್ಲಿ ಯುವಜನಾಂಗದ ಮನಸ್ಸಿನಲ್ಲಿ ಕ್ರಾಂತಿಯ ಬೀಜವನ್ನು ಬಿತ್ತುವುದು. ನಂತರ, ಹ್ಯಾಶ್ ಟ್ಯಾಗ್, ವಿಡಿಯೋ, ಕೃತಕ ಬುದ್ಧಿಮತ್ತೆ (ಎಐ) ಬಳಸಿ ತಯಾರಿಸಿದ ಕಂಟೆಂಟ್ ಮೂಲಕ ಮತ್ತು ಪ್ರಸಿದ್ಧ ವ್ಯಕ್ತಿಗಳ ಚಳವಳಿಗಳ ನೆರವಿನಿಂದ, ಈ ವಿಚಾರಧಾರೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂತಹಂತವಾಗಿ ಹರಿಬಿಡುವುದು, ಕ್ರಮೇಣ ಸದರಿ ವಿಷಯವು ತಲುಪುವ ವೇಗವನ್ನು ಹೆಚ್ಚಿಸುವುದು ಡೀಪ್ ಸ್ಟೇಟ್‌ನ ಕಾರ್ಯವೈಖರಿ. ಈ ‘ಮಹತ್ಕಾರ್ಯ’ಕ್ಕೆ ಕೋಟ್ಯಂತರ ಹಣವನ್ನು ಸುರಿದು, ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಸುದ್ದಿಯಾಗಿ ಕಾಣುವಂತೆ ನೋಡಿಕೊಳ್ಳಲಾಗುತ್ತದೆ.

ಪ್ರಜೆಗಳಿಂದ ರೂಪುಗೊಂಡ ಪ್ರಜಾಸತ್ತಾತ್ಮಕ ಸರಕಾರವನ್ನು ‘ಸರ್ವಾಧಿಕಾರಿ’ ಎಂಬಂತೆ ಬಿಂಬಿಸಿ, ‘ಆಡಳಿತ ವ್ಯವಸ್ಥೆಯ ಬದಲಾವಣೆ’ಯ ಪ್ರಕ್ರಿಯೆಗೆ ವೇಗವನ್ನು ತುಂಬಲಾಗುತ್ತದೆ. ಡೀಪ್ ಸ್ಟೇಟ್ ತನ್ನ ಕಾರ್ಯವೈಖರಿಯ ವಿಸ್ತರಣೆ ಹಾಗೂ ಕಾರ್ಯವಿಧಾನದ ಪ್ರಯೋಗವನ್ನು, 2010-2012ರ ಸುಮಾರಿನ ‘ಅರಬ್ ಸ್ಪ್ರಿಂಗ್’ ಮೂಲಕ ಮುನ್ನಡೆಸಿತು.

ತೈಲನಿಕ್ಷೇಪಗಳ ಕಾರಣದಿಂದಾಗಿ ಆರ್ಥಿಕವಾಗಿಯೂ, ವಿಶ್ವದ ವ್ಯಾಪಾರಮಾರ್ಗದ ಕಾರಣ ದಿಂದಾಗಿ ವಾಣಿಜ್ಯಿಕವಾಗಿಯೂ ಅಲ್ಲದೆ, ಮತೀಯವಾಗಿ ಮತ್ತು ಪ್ರಭುತ್ವದ ದೃಷ್ಟಿಯಿಂದ ಸದೃಢವಾಗಿದ್ದ ಅರಬ್ ದೇಶಗಳ ಮೇಲೆ ಡೀಪ್ ಸ್ಟೇಟ್‌ನ ವಕ್ರದೃಷ್ಟಿ ಬಿತ್ತು. ಲಿಬಿಯಾ, ಈಜಿಪ್ಟ್, ಯೆಮೆನ್, ಸಿರಿಯಾ, ಇರಾನ್, ಇರಾಕ್ ಹೀಗೆ ಮಧ್ಯಪ್ರಾಚ್ಯದ ದೇಶಗಳಲ್ಲಿ ಸರ್ವಾಧಿಕಾರ, ಮಾನವ ಹಕ್ಕುಗಳ ಉಲ್ಲಂಘನೆ, ಮಾಫಿಯಾ ಹಾಗೂ ಭಯೋತ್ಪಾದನೆಯ ಕಾರಣಗಳನ್ನು ತೋರಿಸಿ, ಆಂತರಿಕ ಅಶಾಂತಿ ಮತ್ತು ಪ್ರಕ್ಷುಬ್ಧತೆಯನ್ನು ಹುಟ್ಟುಹಾಕಿ, ದುರ್ಬಲ ಸರಕಾರವನ್ನು ಕಿತ್ತೊಗೆ ಯಲಾಯಿತು ಅಥವಾ ಅದನ್ನು ಅಮೆರಿಕದ ಕೈಗೊಂಬೆಯನ್ನಾಗಿಸಲಾಯಿತು. ಇಸ್ಲಾಮಿಕ್ ಉಗ್ರವಾದದ ಕಾರಣದಿಂದಾಗಿ ಸಹಸ್ರಾರು ಜೀವಗಳು ಬೆಲೆತೆತ್ತು, ಅರಬ್ ಪ್ರದೇಶದಲ್ಲಿ ಈ ‘ಸ್ಕ್ರಿಪ್ಟ್’ ಚೆನ್ನಾಗಿ ಕಾರ್ಯರೂಪಕ್ಕೆ ಬಂತು.

ಈ ಮಾದರಿಯ ಯಶಸ್ಸು ಮುಂದೆ, ರಷ್ಯಾವನ್ನು ಬಗ್ಗುಬಡಿಯಲು ಉಕ್ರೇನ್ ಅನ್ನೂ, ಚೀನಾವನ್ನು ಎದುರಿಸಲು ಹಾಂಗ್‌ಕಾಂಗ್ ಅನ್ನೂ ಛೂ ಬಿಡುವುದಕ್ಕೆ ಹಾಗೂ ಭಾರತವನ್ನು ಚುಚ್ಚಲು ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶಗಳಿಗೆ ಕುಮ್ಮಕ್ಕು ನೀಡುವುದಕ್ಕೆ, ತರುವಾಯದಲ್ಲೀಗ ನೇಪಾಳದಲ್ಲಿ ತನ್ನ ಕುತಂತ್ರವನ್ನು ಕಾರ್ಯಗತಗೊಳಿಸುವುದಕ್ಕೆ ಡೀಪ್ ಸ್ಟೇಟ್‌ಗೆ ದಾರಿಮಾಡಿ ಕೊಟ್ಟಿತು.

ಉದ್ದೇಶಿತ ಗುರಿ ಹಾಗೂ ಸ್ಥಳವನ್ನು ಮೊದಲಿಗೆ ಗುರುತುಮಾಡಿಕೊಳ್ಳುವುದು, ನಂತರ ಸ್ಥಳೀಯ ಚರ್ಚಾವಿಷಯ/ ಸಮಸ್ಯೆಯನ್ನು ಹೊರ ತೆಗೆಯುವುದು, ಮಾಧ್ಯಮದಲ್ಲಿ ಆ ಕುರಿತಾಗಿ ತೀವ್ರ ಪ್ರಚಾರ ಮಾಡುವುದು, ಸಾಮಾಜಿಕ ಜಾಲತಾಣಗಳಲ್ಲಿ ಸದರಿ ಆಖ್ಯಾನವನ್ನು ಟ್ರೆಂಡಿಂಗ್ ಮಾಡುವುದು, ವಿಶ್ವವಿದ್ಯಾಲಯಗಳಲ್ಲಿ ಹಂತಹಂತವಾಗಿ ವಿಷಬೀಜವನ್ನು ಬಿತ್ತಿ ಯುವಜನರನ್ನು ಆಮೂಲಾಗ್ರವಾಗಿ ತೀವ್ರವಾದಿಗಳನ್ನಾಗಿಸುವುದು, ಕೊನೆಗೆ ದುರ್ಬಲ ಸರಕಾರದ ಅಸ್ಥಿರತೆಗೆ ಕೈಹಾಕುವುದು- ಇವಿಷ್ಟೂ ಡೀಪ್ ಸ್ಟೇಟ್‌ನ ಕಾರ್ಯವಿಧಾನದ (Modus Operandi) ವಿವಿಧ ಹಂತ ಗಳಾಗಿವೆ. ಭಾರತದಲ್ಲಿ ಈಗಿರುವಂಥ ಪ್ರಬಲ ಸರಕಾರ ಮತ್ತು ಬಿಗಿ ಆಡಳಿತ ಒಂದೊಮ್ಮೆ ಇಲ್ಲದಿದ್ದರೆ, ಈ ಕಾರ್ಯವು ಡೀಪ್ ಸ್ಟೇಟ್‌ಗೆ ನೀರು ಕುಡಿದಷ್ಟೇ ಸಲೀಸು-ಸುಗಮ...!!

ಸಾಮಾಜಿಕ ಜಾಲತಾಣವೆಂಬ ಮಾರಕಾಸ್ತ್ರ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ವಿವಿಧ ಕಂಪನಿಗಳು ಇತ್ತೀಚೆಗೆ ನಡೆಸಿದ ವ್ಯವಹಾರ ಸಭೆಯಲ್ಲಿ ಮೆಟಾ, ಫೇಸ್‌ಬುಕ್, ಗೂಗಲ್ ಕಂಪನಿಗಳು ಕೋಟ್ಯಂತರ ಡಾಲರ್ ಮೊತ್ತದ ಹಣವನ್ನು ಅಮೆರಿಕದಲ್ಲಿ ಹೂಡಿಕೆ ಮಾಡುವುದಾಗಿ ಮುಕ್ತವಾಗಿ ಘೋಷಿಸಿದವು.

ಎಕ್ಸ್ (ಟ್ವಿಟರ್), ಫೇಸ್‌ಬುಕ್, ಇನ್‌ಸ್ಟಾಗ್ರಾಂನಂಥ ಸಾಮಾಜಿಕ ಜಾಲತಾಣಗಳ ಅಲ್ಗಾರಿದಮ್‌ಗಳು ತಟಸ್ಥವಾಗಿಲ್ಲ. ‘ಡೇಟಾ ಪಾಯಿಸನಿಂಗ್’, ‘ಡೇಟಾ ಇಂಜೆಕ್ಷನ್’, ‘ಡೇಟಾ-ಆಧಾರಿತ ತರಬೇತಿ’ಗಳಿಗಾಗಿ ಸಾಮಾಜಿಕ ಜಾಲತಾಣಗಳನ್ನು ಒಂದು ಉಪಕರಣದಂತೆ (ಟೂಲ್ ಕಿಟ್‌ನಂತೆ) ಬಳಸಿಕೊಳ್ಳ ಲಾಗುತ್ತಿದೆ.

ನೇಪಾಳದ ವಿಷಯದಲ್ಲಿ ಹೊಸ ಪ್ರಯೋಗವೊಂದು ನಡೆಯಿತು. ಭಾರತದ ನಿಯಮದ ಪ್ರಕಾರ ಸಾಮಾಜಿಕ ಜಾಲತಾಣವಾದ ‘ಮೆಟಾ’ ನೋಂದಣಿಯನ್ನು ಮಾಡಿಕೊಂಡರೆ, ನೇಪಾಳದಲ್ಲಿ ಡೀಪ್ ಸ್ಟೇಟ್‌ನ ಪ್ರಭಾವದ ಕಾರಣ ನೋಂದಾಯಿಸಿಕೊಳ್ಳಲಿಲ್ಲ. ಇಲ್ಲಿ ಡೀಪ್ ಸ್ಟೇಟ್‌ನ ಜತೆಗೆ, ಜಾಗತಿಕ ಮಾರುಕಟ್ಟೆಯ ಶಕ್ತಿಶಾಲಿ ಕುಳಗಳು ತಮ್ಮ ಕೈಚಳಕವನ್ನು ತೋರಿಸಿವೆ.

ಭಾರತದಲ್ಲಿ ನಡೆದ ರೈತರ ಹೋರಾಟದ ಸಮಯದಲ್ಲಿ, ಜಗತ್ತಿನಾದ್ಯಂತ ನಡೆದ ‘ಟ್ವೀಟ್’ ಮತ್ತು ‘ಕಂಟೆಂಟ್’ ಸೃಷ್ಟಿಯ ಮಾದರಿ ಇದೇ ರೀತಿಯದಾಗಿತ್ತು. ಸಾಮಾಜಿಕ ಜಾಲತಾಣವು ಕೇವಲ ಮನೋರಂಜನೆಯ ವೇದಿಕೆ ಮಾತ್ರವಾಗದೆ, ಮನೋವೈಜ್ಞಾನಿಕ ಯುದ್ಧದ ಅಸ್ತ್ರವಾಗಿಯೂ ಮಾರ್ಪಟ್ಟಿದೆ.

ಇದಕ್ಕೆಲ್ಲಾ ಚೀನಾದಂತೆ ತನ್ನದೇ ಆದ ಸಾಮಾಜಿಕ ಜಾಲತಾಣಗಳನ್ನು ಹೊಂದುವುದು ಸರಿಯಾದ ಮಾರ್ಗ. ಆತ್ಮನಿರ್ಭರತೆಯನ್ನು ಮಾತಿಗಷ್ಟೇ ಸೀಮಿತಗೊಳಿಸದೆ ಪ್ರಾಯೋಗಿಕವಾಗಿಯೂ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ನಮ್ಮ ಮುಂದೆ ಯುದ್ಧ ನಿಂತಿದೆ, ಹೀಗಾಗಿ ಸಾಮಯಿಕ ಭ್ರಮೆಯಿಂದ ಹೊರಬಂದು ರಾಷ್ಟ್ರಕ್ಕಾಗಿ ನಿಲ್ಲುವ ಕಾರ್ಯವನ್ನು ಮಾಡಬೇಕಿದೆ.

‘ಭಾರತೀಯ ಮೂಲಸಂಸ್ಕೃತಿಯ ನಾಶವೇ ಭಾರತದ ಪರಾಜಯದ ಮೂಲ’ ಎಂಬುದನ್ನು ಹಾಗೂ ‘ಭಾರತೀಯರಲ್ಲಿ ಕಾಣಬರುವ ಆಚಾರ-ವಿಚಾರ, ಧರ್ಮ, ನಂಬಿಕೆ, ಸಂಸ್ಕಾರ, ವ್ಯಕ್ತಿ-ವ್ಯಕ್ತಿಗಳ ನಡುವಿನ ನಂಟು, ಮನೆಮನೆಗಳಲ್ಲಿನ ಕುಟುಂಬ ಪ್ರಬೋಧನ ಇವುಗಳನ್ನು ಒಡೆದು ಬಿಟ್ಟರೆ, ಅದುವೇ ಭಾರತದ ಪತನಕ್ಕೆ ಹೇತುವಾಗುತ್ತದೆ’ ಎಂಬುದನ್ನು ವಿದೇಶಿ-ಪ್ರೇರಿತ ಕುತ್ಸಿತ ಶಕ್ತಿಗಳು ಅರಿತಿವೆ.

ಭಾರತೀಯರಾದ ನಾವು ಇದಕ್ಕೆ ಆಸ್ಪದ ನೀಡಬಾರದು. ನಮ್ಮ ‘ಸಾಂಸ್ಕೃತಿಕ ವಿರಾಸತ್’ ಅನ್ನು ಜೋಪಾನವಾಗಿ ಕಾಪಿಟ್ಟುಕೊಂಡು ವರ್ತಮಾನದಲ್ಲಿ ಆಚರಣೆಗೆ ತರುವುದರ ಜತೆಗೆ, ಮುಂದಿನ ಪೀಳಿಗೆಗೂ ಹಸ್ತಾಂತರಿಸಬೇಕಾದ ಗುರುತರ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ನಮ್ಮ ಆಖ್ಯಾನ ಗಳನ್ನು ಮರುಸ್ಥಾಪಿಸುವ, ನಮ್ಮ ಸಂಸ್ಕೃತಿ-ಪರಂಪರೆಗಳ ಕಥನಗಳನ್ನು ಮತ್ತೆ ಮತ್ತೆ ಬಿಂಬಿಸುವ, ಪ್ರಚುರಪಡಿಸುವ ಕೆಲಸಗಳು ಆಗಬೇಕಿದೆ.

ಜತೆಗೆ, ನಮ್ಮ ವಿಶ್ವವಿದ್ಯಾಲಯಗಳನ್ನು ಭದ್ರಪಡಿಸಿ, ಯುವಕರಲ್ಲಿ ಧಾರ್ಮಿಕ ಪ್ರಜ್ಞೆ ಮತ್ತು ಜಾಗರೂಕತೆಯನ್ನು ಮೂಡಿಸಿ, ಬೌದ್ಧಿಕ ವಿಸ್ಮೃತಿಯಿಂದ ಅವರನ್ನು ಹೊರ ತರಬೇಕಾದ ಚಟುವಟಿಕೆಗಳು ನಡೆಯಬೇಕಿದೆ. ಸದೃಢವಾದ ಕೌಟುಂಬಿಕ ವ್ಯವಸ್ಥೆಗಳ ನಿರ್ವಹಣೆಯಿಂದ ಪ್ರಬಲ ರಾಷ್ಟ್ರೀಯ ವ್ಯಕ್ತಿತ್ವದ ಮತ್ತು ಸಮೃದ್ಧ ರಾಷ್ಟ್ರದ ನಿರ್ಮಾಣ ಸಾಧ್ಯ ಎಂಬುದನ್ನೂ, ಸ್ವರಾಜ್ಯ ಮತ್ತು ಸ್ವಾವಲಂಬಿತನದಿಂದಲೇ ಭಾರತದ ಆತ್ಮಗೌರವದ ರಕ್ಷಣೆ ಸಾಧ್ಯ ಎಂಬುದನ್ನು ಮರೆಯದಿರೋಣ.

(ಲೇಖಕರು ಹವ್ಯಾಸಿ ಬರಹಗಾರರು)