ವೀಕೆಂಡ್ ವಿತ್ ಮೋಹನ್
camohanbn@gmail.com
ಮೊಸಾದ್‌ನಲ್ಲಿ ಕೆಲಸ ಮಾಡಿರುವ ಒಬ್ಬೊಬ್ಬ ಅಧಿಕಾರಿಗಳದ್ದೂ ಒಂದೊಂದು ಕಥೆ. ಅವರು ನಡೆಸುವ ಕಾರ್ಯಾಚರಣೆಗಳ ಶೈಲಿ ವಿಭಿನ್ನ. ಇಸ್ರೇಲ್ ದೇಶವನ್ನು ಶತ್ರುಗಳಿಂದ ಕಾಪಾಡಲು ಹಗಲಿರುಳೂ ದುಡಿಯುವ ದೊಡ್ಡ ಗೂಢಚಾರಿಗಳಿದ್ದಾರೆ. ‘ಮೀರ್ ಅಮಿತ್’ ಮೊಸಾದಿನ ವಿಚಿತ್ರ ಅಧಿಕಾರಿ, ಯಾರ ಮುಲಾಜಿಗೂ ಒಳಗಾಗದೆ ಮೊಸಾದ್‌ಗಾಗಿ ಕೆಲಸ ಮಾಡುತ್ತಿದ್ದರು. ಸದಾ ಕ್ರಿಯಾಶೀಲರಾಗಿರುವ ವ್ಯಕ್ತಿತ್ವ, ಇಲ್ಲ ಎಂಬ ಪದದ ಅರ್ಥ ಗೊತ್ತಿಲ್ಲದ ಅಧಿಕಾರಿ.
ಇಸ್ರೇಲ್ 1947ರಲ್ಲಿ ಸ್ವತಂತ್ರವಾದ ನಂತರ ತನ್ನ ಸುತ್ತಲೂ ಇರುವ ಮುಸ್ಲಿಂ ದೇಶಗಳ ದ್ವೇಷದ ನಡುವೆಯೇ ಆಡಳಿತ ನಡೆಸಿಕೊಂಡು ಬರುತ್ತಿದೆ. ಸಣ್ಣ ದೇಶವೊಂದು ಸುತ್ತಲೂ ಇರುವ ಶತ್ರುಗಳ ನಿಗಾದಲ್ಲಿ ಆಡಳಿತ ನಡೆಸುವುದು ಸುಲಭವಲ್ಲ. ಶತ್ರುಗಳ ಚಲನವಲನಗಳ ಮೇಲೆ ಸದಾ ಹದ್ದಿನ ಕಣ್ಣನ್ನು ಇಟ್ಟಿರಬೇಕಾಗುತ್ತದೆ. ಯಹೂದಿಗಳನ್ನು ಕಂಡರೆ ಸಾಕು ಕೊಲ್ಲಿ ರಾಷ್ಟ್ರಗಳು ಕಾಲು ಕೆರೆದುಕೊಂಡು ಜಗಳಕ್ಕೆ ಬರುವ ವಿಷಯ ಸಾಮಾನ್ಯ. ಸುತ್ತಲೂ ಶತ್ರುಗಳಿದ್ದರೂ, ಇಂದು ಇಸ್ರೇಲ್ ಜಗತ್ತಿನ ಸಂಶೋಧನಾ ಕೇಂದ್ರವಾಗಿ ಬೆಳೆಯುವಲ್ಲಿ ಯಶಸ್ವಿಯಾಗಿದೆ. ಇಸ್ರೇಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಶತ್ರುಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಬೇಹುಗಾರಿಕಾ ಸಂಸ್ಥೆ ‘ಮೊಸಾದ್’. ತನ್ನ ಅಷ್ಟ ದಿಕ್ಕುಗಳಲ್ಲಿಯೂ ಶತ್ರುಗಳಿರುವಾಗ ಯಹೂದಿಗಳ ರಕ್ಷಣೆ ಮಾಡುವುದು ಸುಲಭದ ಕೆಲಸವಲ್ಲ. ಆದರೆ ಮೊಸಾದ್ ವಿಶಿಷ್ಟ ಕಾರ್ಯಾಚರಣೆಗಳ ಮೂಲಕ ಇಸ್ರೇಲ್ ದೇಶವನ್ನು ಶತ್ರುಗಳಿಂದ ಕಾಪಾಡಿಕೊಂಡು ಬಂದಿದೆ.
ಮೊಸಾದ್‌ನಲ್ಲಿ ಕೆಲಸ ಮಾಡಿರುವ ಒಬ್ಬೊಬ್ಬ ಅಧಿಕಾರಿಗಳದ್ದೂ ಒಂದೊಂದು ಕಥೆ. ಅವರು ನಡೆಸುವ ಕಾರ್ಯಾಚರಣೆಗಳ ಶೈಲಿ ವಿಭಿನ್ನ. ಇಸ್ರೇಲ್ ದೇಶವನ್ನು ಶತ್ರುಗಳಿಂದ ಕಾಪಾಡಲು ಹಗಲಿರುಳೂ ದುಡಿಯುವ ದೊಡ್ಡ ಗೂಢಚಾರಿಗಳಿದ್ದಾರೆ.
‘ಮೀರ್ ಅಮಿತ್’ ಮೊಸಾದಿನ ವಿಚಿತ್ರ ಅಧಿಕಾರಿ, ಯಾರ ಮುಲಾಜಿಗೂ ಒಳಗಾಗದೆ ಮೊಸಾದ್‌ಗಾಗಿ ಕೆಲಸ ಮಾಡುತ್ತಿದ್ದರು. ಸದಾ ಕ್ರಿಯಾಶೀಲರಾಗಿರುವ ವ್ಯಕ್ತಿತ್ವ, ಇಲ್ಲ ಎಂಬ ಪದದ ಅರ್ಥ ಗೊತ್ತಿಲ್ಲದ ಅಧಿಕಾರಿ. ಸಣ್ಣ ವಯಸ್ಸಿನಲ್ಲಿ ಸೈನ್ಯಕ್ಕೆ ಸೇರಿ ದೇಶಸೇವೆ ಮಾಡಿ, ನಂತರ ಮೊಸಾದ್ ಸೇರಿ ಅನೇಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: Mohan Vishwa Column: ಬಾಲಕಬುದ್ಧಿಯ ವೋಟ್ ಚೋರಿ ಟೂಲ್ ಕಿಟ್
1965ರಲ್ಲಿ ಒಂದು ದಿನ ಬೆಳಗ್ಗೆ ಇಸ್ರೇಲಿನ ವಾಯುಸೇನಾ ಮುಖ್ಯಸ್ಥರು ಉಪಾಹಾರ ಮಾಡುತ್ತಿದ್ದ ಸಂದರ್ಭದಲ್ಲಿ, ಮೀರ್ ಅಮಿತ್ ನನ್ನು ಕರೆದು ಇಸ್ರೇಲಿ ಸೈನ್ಯಕ್ಕೆ ಮಿಗ್-21 ಯುದ್ಧವಿಮಾನ ಬೇಕೆಂದರು. ಅಂದಿನ ಕಾಲದಲ್ಲಿ ಮಿಗ್-21 ಪ್ರಪಂಚದ ಶಕ್ತಿಶಾಲಿ ವಿಮಾನವಾಗಿತ್ತು ಮತ್ತು ಪಾಶ್ಚಿಮಾತ್ಯ ದೇಶಗಳ ಬಳಿಯೂ ಆ ವಿಮಾನ ಇರಲಿಲ್ಲ. ಹೇಳಿದ ಕೆಲಸಕ್ಕೆ ಇಲ್ಲ ಎಂದು ಹೇಳದ ಮೀರ್ ಅಮಿತ್, ಆ ಸೇನಾಧಿಕಾರಿಗೆ ಇಲ್ಲ ಎನ್ನಲಿಲ್ಲ. ಆದರೆ ಪ್ರಪಂಚದ ಅತ್ಯಾಧುನಿಕ ವಿಮಾನ ವನ್ನು ಇಸ್ರೇಲಿಗೆ ತರುವುದು ಸುಲಭದ ಕೆಲಸವಾಗಿರಲಿಲ್ಲ. ಅಸಾಧ್ಯವಾದ ಬೇಡಿಕೆಯೊಂದು ಆತನ ಮುಂದಿತ್ತು. ಸೇನಾಧಿಕಾರಿ ಹಠಕ್ಕೆ ಬಿದ್ದು, ವಿಮಾನವನ್ನು ಶೀಘ್ರದಲ್ಲಿ ಇಸ್ರೇಲಿಗೆ ತರಲೇಬೇಕೆಂದಿ ದ್ದರು. ಈ ಹಿಂದೆ ಅನೇಕ ಬಾರಿ ಈಜಿ ಮತ್ತು ಸಿರಿಯಾ ದೇಶಗಳಿಂದ ಮಿಗ್-21 ವಿಮಾನವನ್ನು ತರಬೇಕೆಂದು ಪ್ರಯತ್ನಪಟ್ಟರೂ ಅದು ಯಶಸ್ವಿಯಾಗಿರಲಿಲ್ಲ.
ತಕ್ಷಣ ಮೊಸಾದ್‌ನ ಅಧಿಕಾರಿಗಳಿಗೆ ಕೆಲಸ ಹಚ್ಚಿದ ಮೀರ್ ಅಮಿತ್, ಇರಾಕ್ ದೇಶದಲ್ಲಿದ್ದ ಯಹೂದಿ ವ್ಯಕ್ತಿಯೊಬ್ಬನನ್ನು ಸಂಪರ್ಕಿಸಿ ವಿಮಾನವನ್ನು ಇಸ್ರೇಲಿಗೆ ಕೊಂಡೊಯ್ಯಲು ಸಹಾಯ ಮಾಡುವಂತೆ ಕೇಳಿಕೊಂಡರು. ಈ ವ್ಯಕ್ತಿಯ ಹೆಂಡತಿ ಕ್ರಿಶ್ಚಿಯನ್, ಆಕೆಯ ತಂಗಿಯ ಗಂಡ ಇರಾಕ್ ದೇಶದ ವಾಯುಸೇನೆಯಲ್ಲಿ ಪೈಲಟ್ ಆಗಿದ್ದ. ಆತನ ಹೆಸರು ‘ರೆಡ್ ಫಾ’.

ಆತ ಮೂಲತಃ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವನಾಗಿದ್ದು, ಇರಾಕ್ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ. ಆತ ಕ್ರಿಶ್ಚಿಯನ್ ಆಗಿದ್ದರಿಂದ ಅಲ್ಲಿನ ಸೇನೆ ಆತನನ್ನು ಉನ್ನತ ಶ್ರೇಣಿಗೆ ಕೊಂಡೊಯ್ಯುವಲ್ಲಿ ಆಸಕ್ತಿ ತೋರಿರಲಿಲ್ಲ. ಆತ ನಿರಂತರವಾಗಿ ಮಿಗ್-21 ಯುದ್ಧವಿಮಾನವನ್ನು ಚಾಲಿಸುತ್ತಿದ್ದ ಪೈಲಟ್ ಆಗಿದ್ದ.
ತಾನು ಎಷ್ಟೇ ಸಕ್ರಿಯನಾಗಿದ್ದರೂ ತನ್ನನ್ನು ಅಧಿಕಾರಿಗಳು ಬೆಳೆಯಲು ಬಿಡುತ್ತಿಲ್ಲವೆಂಬ ಹತಾಶೆ ಅವನಿಗಿತ್ತು. ಕುರ್ದಿಶ್ ಪ್ರಾಂತ್ಯಗಳ ಮೇಲೆ ಬಾಂಬ್ ಹಾಕಬೇಕೆಂಬ ಅಪ್ಪಣೆ ಇರಾಕ್ ಸೇನೆಯಿಂದ ಬಂದಾಗ, ‘ಕ್ರಿಶ್ಚಿಯನ್ ಧರ್ಮವು ಈ ರೀತಿಯ ದಾಳಿಗಳನ್ನು ಒಪ್ಪುವುದಿಲ್ಲ’ ಎಂದು ಹೇಳಿದ್ದ.
ಇಷ್ಟೆ ಹತಾಶೆಯಿಂದ ಇರಾಕ್ ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಸಿಕ್ಕರೆ ಮೀರ್ ಅಮಿತ್ ಬಿಡುತ್ತಾನಾ? ಇರಾಕಿನಲ್ಲಿದ್ದ ಯಹೂದಿ ಕಷ್ಟಪಟ್ಟು ಈತನನ್ನು ಒಪ್ಪಿಸಿ ಅಥೆ ನಗರಕ್ಕೆ ಕರೆ ತಂದಿದ್ದ. ಆದರೆ ರೆಡ್ ಫಾ ತನ್ನ ಹೆಂಡತಿಗೆ ಅರೋಗ್ಯ ಸರಿಯಿಲ್ಲ ಹಾಗಾಗಿ ಆಕೆಯನ್ನೂ ಅಥೆ ನಗರಕ್ಕೆ ಕರೆದೊಯ್ಯಲೇಬೇಕೆಂದು ಹೇಳಿ ಹೊರಟಿದ್ದ.
ಅಥೆನ್ಸ್ ನಗರದಲ್ಲಿ, ಲಂಡನ್‌ನಿಂದ ಬಂದಿದ್ದ ಯಹೂದಿ ಪೈಲಟ್ ಒಬ್ಬನನ್ನು ರೆಡ್ ಫಾನಿಗೆ ಭೇಟಿ ಮಾಡಿಸುತ್ತಾರೆ. ಆತನ ಬಳಿ ‘ನನಗೆ ಕುರ್ದಿಶ್ ಪರ್ವತಗಳ ಮೇಲೆ ಬಾಂಬ್ ಹಾಕಲು ಹೇಳುತ್ತಿದ್ದಾರೆ. ಅಲ್ಲಿ ಸಾವಿರಾರು ಮಕ್ಕಳು ಮತ್ತು ಹೆಂಗಸರು ವಾಸವಿzರೆ. ಆ ಕೆಲಸವನ್ನು ನಾನು ಮಾಡಲಾಗದ ಕಾರಣಕ್ಕಾಗಿ ಇರಾಕ್ ಬಿಡಬೇಕೆಂದು ನಿರ್ಧರಿಸಿರುವೆ’ ಎಂದು ರೆಡ್- ಹೇಳಿಕೊಳ್ಳುತ್ತಾನೆ.
ಮೊಸಾದ್ ಹಾಕಿದ ಬಲೆಗೆ ಸರಿಯಾದ ವ್ಯಕ್ತಿ ಅನಾಯಾಸವಾಗಿ ಬೀಳುತ್ತಿರುವುದು ಮೀರ್ ಅಮಿತ್‌ಗೆ ಖಾತ್ರಿಯಾಗುತ್ತದೆ. ಆತ ಇರಾಕ್ ಬಿಟ್ಟು ಬರುವುದು ಖಾತ್ರಿಯಾದ ಕೂಡಲೇ, ಗ್ರೀಸ್‌ನಲ್ಲಿ ಬರಮಾಡಿ ಕೊಂಡು ದೊಡ್ಡ ಪಾರ್ಟಿ ನೀಡಲಾಗುತ್ತದೆ. ಆ ಪಾರ್ಟಿಯಲ್ಲಿ ಆತನಿಗೆ ಮಿಗ್-21 ವಿಮಾನದ ಸಮೇತ ಇರಾಕ್ ಬಿಡಬೇಕೆಂದು ಹೇಳಲಾಗುತ್ತದೆ.
ತಕ್ಷಣ ಜರ್ಜರಿತನಾದ ರೆಡ್ ಫಾ ಆ ರೀತಿ ಮಾಡಿದರೆ ತನ್ನನ್ನು ಸಾಯಿಸಿ ಬಿಡುತ್ತಾರೆಂದು ಭಯ ದಿಂದ ಹೇಳುತ್ತಾನೆ. ಆಗ ಆತನನ್ನು ಸಮಾಧಾನಪಡಿಸಿದ ಲಂಡನ್ ಪೈಲಟ್, ನಿನ್ನನ್ನು ಇಸ್ರೇಲ್ ಕೈಬೀಸಿ ಕರೆಯಲು ಸಿದ್ಧವಾಗಿದೆಯೆಂದು ಹೇಳುತ್ತಾನೆ. ಹೇಳಿದ ತಕ್ಷಣ ತಲೆಯ ಮೇಲಿನ ಟೋಪಿ ಯನ್ನು ಕೆಳಗಿಟ್ಟು ‘ನಾನು ಲಂಡನ್ ಪೈಲಟ್ ಅಲ್ಲ, ಮೊಸಾದ್ ಬೇಹುಗಾರಿಕಾ ಸಂಸ್ಥೆಯ ಅಧಿಕಾರಿ’ ಎಂದು ಹೇಳುತ್ತಾನೆ.
ರೆಡ್- ಅಂದಿನ ರಾತ್ರಿ ಯೋಚಿಸುತ್ತಾನೆ, ಮರುದಿನ ಮಿಗ್-21 ಯುದ್ಧವಿಮಾನ ಸಮೇತ ಬರುವು ದಾಗಿ ಹೇಳುತ್ತಾನೆ. ಆದರೆ ಅದಕ್ಕಿಂತಲೂ ಮೊದಲು, ತನ್ನ ಕುಟುಂಬವನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕೆಂದು ಹೇಳುತ್ತಾನೆ. ಆತನ ಷರತ್ತುಗಳಿಗೆ ಒಪ್ಪಿದ ಮೀರ್ ಅಮಿತ್, ಈ ಕಾರ್ಯಾ ಚರಣೆಗೆ ‘ಡೈಮಂಡ್’ ಎಂಬ ಸಂಕೇತ ಪದವನ್ನು ಹೇಳುತ್ತಾನೆ.
ರೆಡ್ ಫಾನನ್ನು ಅಥೆ ನಗರದಿಂದ ನೇರವಾಗಿ ರೋಮ್ ನಗರಕ್ಕೆ ಕರೆತರಲಾಗುತ್ತದೆ. ಮೊಸಾದ್ ಅಧಿಕಾರಿಗಳು ಈತನಿಗೆ ಕಾರ್ಯಾಚರಣೆಯ ಬಗ್ಗೆ ವಿವರಿಸುತ್ತಾರೆ. ಮತ್ತೊಂದೆಡೆ ಮೊಸಾದ್ ಅಧಿಕಾರಿಗಳು ಆತನ ಚಲನವಲನಗಳ ಮೇಲೆ ನಿಗಾ ಇಟ್ಟಿರುತ್ತಾರೆ. ಆತನ ಮೇಲೆ ಸಂಪೂರ್ಣವಾಗಿ ನಂಬಿಕೆ ಬಂದ ನಂತರವಷ್ಟೇ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತಾರೆ.
ರೋಮ್ ನಗರದಿಂದ ಆತನನ್ನು ಅಥೆ ನಗರಕ್ಕೆ ವಾಪಸ್ ಕರೆ ತರಲಾಗುತ್ತದೆ. ಅಲ್ಲಿಂದ ಇರಾಕಿನ ಯಹೂದಿ ಹುಡುಗನಿಗೆ ರೆಡ್ ಫಾನನ್ನು ಇಸ್ರೇಲಿಗೆ ಕರೆತರುವಂತೆ ಹೇಳಲಾಗುತ್ತದೆ. ಇಬ್ಬರೂ ವಿಮಾನ ಹತ್ತುವ ಸಂದರ್ಭದಲ್ಲಿ ಒಂದು ಗೊಂದಲವಾಗುತ್ತದೆ. ರೆಡ್ ಫಾ ಇಸ್ರೇಲ್ ವಿಮಾನ ಹತ್ತುವ ಬದಲು ಈಜಿ ದೇಶದ ಕೈರೋ ವಿಮಾನ ಹತ್ತುತ್ತಾನೆ.
ಅತ್ತ ಇಸ್ರೇಲಿಗೆ ಹೊರಡುವ ವಿಮಾನದಲ್ಲಿ ಕಾಯುತ್ತಿದ್ದವನಿಗೆ, ರೆಡ್ ಫಾ ಕೈಕೊಟ್ಟನೆಂಬ ಅನುಮಾನ ಬರುತ್ತದೆ. ಆದರೆ ಕೈರೋ ವಿಮಾನದಲ್ಲಿ ಒಬ್ಬ ಪ್ರಯಾಣಿಕ ಹೆಚ್ಚಾಗಿರುವುದು ವಿಮಾನ ಸಿಬ್ಬಂದಿಗೆ ತಿಳಿದು, ರೆಡ್ ಫಾನನ್ನು ಎಚ್ಚರಿಸಿ ಕೆಳಗಿಳಿಯುವಂತೆ ಹೇಳುತ್ತಾರೆ. ಅವನು ನಂತರ ಓಡಿಬಂದು ಇಸ್ರೇಲ್ ವಿಮಾನವನ್ನು ಹತ್ತುತ್ತಾನೆ.
ಇಸ್ರೇಲಿಗೆ ಬಂದಿಳಿದ ರೆಡ್ ಫಾನಿಗೆ ಕಾರ್ಯಾಚರಣೆಯ ಸಂಪೂರ್ಣ ವಿವರಗಳನ್ನು ನೀಡಿದ ಮೊಸಾದ್ ಅಧಿಕಾರಿಗಳು 24 ಗಂಟೆಯೊಳಗೆ ಆತನನ್ನು ಅಥೆ ಮೂಲಕ ಬಾಗ್ದಾದ್ ನಗರಕ್ಕೆ ಕಳುಹಿಸುತ್ತಾರೆ. ರೆಡ್ ಫಾನ ಬೇಡಿಕೆಯಂತೆ ಆತನ ಹೆಂಡತಿ ಮತ್ತು ಮಕ್ಕಳನ್ನು ಇಂಗ್ಲೆಂಡ್ ಮೂಲಕ ಅಮೆರಿಕಕ್ಕೆ ಕಳುಹಿಸುವ ತಯಾರಿಯಾಗುತ್ತದೆ. ಆದರೆ ಆತನಿಗೆ ಇರಾಕ್‌ನಲ್ಲಿ ಸಂಬಂಧಿ ಗಳಿರುತ್ತಾರೆ.
ಆತನ ಅಮ್ಮ, ಅಪ್ಪ, ಅಕ್ಕ, ತಂಗಿ, ಅವರ ಮಕ್ಕಳು ಎಲ್ಲರನ್ನೂ ಬೇರೆಡೆಗೆ ಸ್ಥಳಾಂತರಿಸುವುದು ದೊಡ್ಡ ಸವಾಲಾಗಿರುತ್ತದೆ. ಆತನ ಹೆಂಡತಿ ಮತ್ತು ಮಕ್ಕಳನ್ನು ಇಸ್ರೇಲಿಗೆ ಕರೆದುಕೊಂಡು ಹೋಗಿ, ಸಂಬಂಧಿಕರನ್ನು ಅಮೆರಿಕಕ್ಕೆ ಕಳುಹಿಸುವ ಯೋಜನೆ ತಯಾರಾಗುತ್ತದೆ. ಅಷ್ಟು ದೊಡ್ಡ ತಯಾರಿ ನಡೆಯುತ್ತಿದ್ದರೂ ರೆಡ್ ಫಾ ತನ್ನ ಹೆಂಡತಿಗೆ ಹೇಳಿರುವುದಿಲ್ಲ. ಮೂಲತಃ ಇರಾಕ್ ಮೂಲದವ ಳಾದ ಆಕೆ ಒಪ್ಪುವುದಿಲ್ಲವೆಂಬುದು ಆತನಿಗೆ ಮತ್ತು ಮೊಸಾದ್ ಅಧಿಕಾರಿಗಳಿಗೆ ತಿಳಿದಿರುತ್ತದೆ.
ರೆಡ್-ನ ಸೂಚನೆಯಂತೆ ಆತನ ಹೆಂಡತಿ ಆಮ್‌ಸ್ಟರ್‌ಡ್ಯಾಮ್‌ಗೆ ಬಂದಿಳಿಯುತ್ತಾಳೆ. ಅಲ್ಲಿಂದ ಆಕೆಯನ್ನು ಮೊಸಾದ್ ಅಧಿಕಾರಿಗಳು ಪ್ಯಾರಿಸ್ ನಗರಕ್ಕೆ ಕರೆದೊಯ್ಯುತ್ತಾರೆ. ಅಲ್ಲಿಂದ ಇಸ್ರೇಲಿಗೆ ಹೊರಡುವ ಹಿಂದಿನ ರಾತ್ರಿ ಆಕೆಗೆ ವಿಷಯವನ್ನು ಹೇಳಲಾಗುತ್ತದೆ. ತನ್ನ ಗಂಡ ಒಬ್ಬ ದೇಶದ್ರೋಹಿ ಯೆಂದು ಆಕೆ ಇಡೀ ರಾತ್ರಿ ಕಣ್ಣೀರಿಡುತ್ತಾಳೆ, ದಾರಿಕಾಣದೆ ಗಂಡನೊಂದಿಗೆ ಇಸ್ರೇಲಿಗೆ ಹೊರಡಲು ತಯಾರಾಗುತ್ತಾಳೆ.
1966ರ ಜುಲೈ 17ರಂದು ಕೋಡೆಡ್ ಸಂದೇಶದ ಮೂಲಕ, ರೆಡ್ ಫಾ ಆಗ 14ರಂದು ಮಿಗ್-21 ವಿಮಾನದ ಮೂಲಕ ಹೊರಡಲು ತಯಾರಾಗಿದ್ದಾನೆಂಬ ಮಾಹಿತಿ ರವಾನೆಯಾಗುತ್ತದೆ. ಆಗಸ್ಟ್ 14ರಂದು ಟೇಕ್ ಆಫ್ ಆಗಿದ್ದ ವಿಮಾನ ತಾಂತ್ರಿಕ ದೋಷದಿಂದ ವಾಪಸ್ ಹೋಗಿರುತ್ತದೆ. ಕಾರ್ಯಾಚರಣೆ ಹಾಳಾಯಿತೆಂದು ಮೀರ್ ಅಮಿತ್ ತಲೆ ಮೇಲೆ ಕೈ ಇಟ್ಟುಕೊಂಡು ಕೂರುತ್ತಾನೆ. ಆದರೆ ಮರುದಿನ ರೆಡ್ ಫಾ ಯುದ್ಧವಿಮಾನವನ್ನು ಟೇಕ್ ಆಫ್ ಮಾಡಿ ಹೊರಡುತ್ತಾನೆ, ಬೆಳಗ್ಗೆ 8 ಗಂಟೆಗೆ ಇಸ್ರೇಲಿನ ಸೈನಿಕ ವಿಮಾನ ನಿಲ್ದಾಣಕ್ಕೆ ಮಿಗ್-21 ವಿಮಾನವನ್ನು ತಂದಿಳಿಸುತ್ತಾನೆ.
ವಿಮಾನವನ್ನು ಕಂಡಾಕ್ಷಣ ಮೊಸಾದ್ ಅಧಿಕಾರಿಗಳಿಗೆ ಎಲ್ಲಿಲ್ಲದ ಸಂತಸ, ಮೀರ್ ಅಮಿತ್ ಇಸ್ರೇಲ್ ವಾಯುಸೇನೆ ಅಧಿಕಾರಿಗೆ ಮಾತು ನೀಡಿದಂತೆ ವಿಮಾನವನ್ನು ತರಿಸಿರುತ್ತಾನೆ. ಹಿಂದೆಂದೂ ಆಗಿರದ ಕೆಲಸ ಆತನ ರಹಸ್ಯ ಕಾರ್ಯಾಚರಣೆಯ ಮೂಲಕ ಆಗಿರುತ್ತದೆ. ಮೊಸಾದ್ ಅಧಿಕಾರಿಗಳು ಮೀರ್ ಅಮಿತ್‌ನನ್ನು ಅಭಿನಂದಿಸುತ್ತಾರೆ. ಕಾಕತಾಳೀಯವೆಂಬಂತೆ ಅದೇ ವಿಮಾನ ಕೇವಲ 10 ತಿಂಗಳ ಅಂತರದಲ್ಲಿ ಇಸ್ರೇಲ್ ನಡೆಸಿದ ಐತಿಹಾಸಿಕ ಆರು ದಿನಗಳ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆ ಯುದ್ಧದಲ್ಲಿ ಇಸ್ರೇಲ್ ದೇಶವು ಈಜಿಪ್ಟ್ ಅನ್ನು ಸೋಲಿಸುತ್ತದೆ.
ಇಂದಿಗೂ ಅದು ಜಗತ್ತಿನ ಇತಿಹಾಸದಲ್ಲಿನ ಸಾಹಸಮಯ ಯುದ್ಧವೆಂದು ಖ್ಯಾತಿ ಪಡೆದಿದೆ. ನಂತರ ಇಸ್ರೇಲ್ ಬಳಿಯಿದ್ದ ಮಿಗ್-21 ವಿಮಾನವನ್ನು ತಾನು ಕೂಡ ಪರೀಕ್ಷಿಸಲು ಅಮೆರಿಕ ಕೇಳಿಕೊಳ್ಳು ತ್ತದೆ. ಆ ಒಂದು ವಿಮಾನವನ್ನಿಟ್ಟುಕೊಂಡು ಅಮೆರಿಕ ಮತ್ತು ಇಸ್ರೇಲ್ ತಮ್ಮ ವಾಯುಸೇನಾ ಕ್ಷೇತ್ರದಲ್ಲಿ ದೊಡ್ಡಮಟ್ಟದ ಸಂಶೋಧನೆಗಳನ್ನು ನಡೆಸಿ ಜಗತ್ತಿನ ‘ಸೂಪರ್ ಫೈಟರ್ ಜೆಟ್’ಗಳನ್ನು ನಿರ್ಮಾಣ ಮಾಡಿವೆ.
ಭಾರತವು ಸಹ ರಷ್ಯಾ ನಿರ್ಮಿತ ಮಿಗ್-21 ವಿಮಾನವನ್ನು ಐದು ದಶಕಗಳ ಕಾಲ ಸೇನೆಯಲ್ಲಿ ಬಳಕೆ ಮಾಡಿತ್ತು. ಅನೇಕ ಯುದ್ಧಗಳಲ್ಲಿ ಮುಂಚೂಣಿಯಲ್ಲಿ ಸೇವೆ ಸಲ್ಲಿಸಿದ್ದ ಮಿಗ್-21 ವಿಮಾನ ಗಳು ಎರಡು ದಿನಗಳ ಹಿಂದೆ ಭಾರತೀಯ ವಾಯುಸೇನೆಯಿಂದ ನಿವೃತ್ತಿ ಹೊಂದಿವೆ.