Mohan Vishwa Column: ಭಾರತದ ಅಣುಯುಗದ ಶಿಲ್ಪಿ ಹೋಮಿ ಭಾಭಾ
1909ರ ಅಕ್ಟೋಬರ್ 30ರಂದು ಮುಂಬೈನ ಪ್ರತಿಷ್ಠಿತ ಪಾರ್ಸಿ ಕುಟುಂಬದಲ್ಲಿ ಜನಿಸಿದ ಹೋಮಿ ಜಹಾಂಗೀರ್ ಭಾಭಾ ಬಾಲ್ಯದಿಂದಲೇ ಅಸಾಧಾರಣ ಬುದ್ಧಿವಂತಿಕೆಯನ್ನು ಪ್ರದರ್ಶಿಸುತ್ತಿದ್ದರು. ಅವರ ತಂದೆ ಖ್ಯಾತ ವಕೀಲರಾಗಿದ್ದು, ಕುಟುಂಬದಲ್ಲಿ ಶಿಕ್ಷಣ ಹಾಗೂ ಶಿಸ್ತಿಗೆ ಅತ್ಯಂತ ಮಹತ್ವ ನೀಡಲಾಗು ತ್ತಿತ್ತು. ಬಾಲ್ಯದಲ್ಲಿಯೇ ಗಣಿತ, ಭೌತಶಾಸ್ತ್ರ ಹಾಗೂ ಚಿತ್ರಕಲೆಯಲ್ಲಿ ಅವರಿಗೆ ವಿಶೇಷ ಆಸಕ್ತಿ ಬೆಳೆಯಿತು. ಮುಂದೆ ಅವರು ಇಂಗ್ಲೆಂಡ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ಇಂಜಿನಿಯ ರಿಂಗ್ ಅಧ್ಯಯನಕ್ಕಾಗಿ ತೆರಳಿದರೂ, ಅವರ ಮನಸ್ಸನ್ನು ಸಂಪೂರ್ಣವಾಗಿ ಸೆಳೆದದ್ದು ಸೈದ್ಧಾಂತಿಕ ಭೌತಶಾಸ್ತ್ರ. ಅಂತಿಮವಾಗಿ ತಮ್ಮ ಆಸಕ್ತಿಯ ದಾರಿಯನ್ನೇ ಆರಿಸಿಕೊಂಡ ಅವರು ವಿಶ್ವಮಟ್ಟದ ವಿಜ್ಞಾನಿಯಾಗಿ ಬೆಳೆದರು