Vishweshwar Bhat Column: ಇದು ಸೈಕಲ್ ದೇಶ
ವಿಶ್ವದಲ್ಲಿಯೇ ನೆದರ್ ಲ್ಯಾಂಡ್ಸ್ ಗೆ ಸೈಕಲ್ ಬಳಕೆಯಲ್ಲಿ ಮೊದಲ ಸ್ಥಾನ. ಇಬ್ಬರು ಭೇಟಿಯಾದರೆ, ಸೈಕಲ್ ವಿಷಯದಿಂದಲೇ ಅವರ ಮಾತುಕತೆ ಆರಂಭವಾಗುತ್ತದೆ ಮತ್ತು ಕೊನೆಯಲ್ಲಿ ಆ ವಿಷಯ ದೊಂದಿಗೇ ಅಂತ್ಯವಾಗುತ್ತದೆ. ತಾವು ಖರೀದಿಸಿದ ಹೊಸ ಸೈಕಲ್, ಮಾರುಕಟ್ಟೆಗೆ ಬಂದ ನೂತನ ಸೈಕಲ್ ಗಳ ಕುರಿತು ಅಲ್ಲಿನ ಜನ ಮಾತಾಡಲು ಇಷ್ಟಪಡುತ್ತಾರೆ


ಸಂಪಾದಕರ ಸದ್ಯಶೋಧನೆ
ನೆದರ್‌ಲ್ಯಾಂಡ್ಸ್‌ನಲ್ಲಿ ಅಲ್ಲಿನ ಜನಸಂಖ್ಯೆಗಿಂತ ಹೆಚ್ಚು ಸೈಕಲ್‌ಗಳಿವೆ ಎಂದರೆ ಆಶ್ಚರ್ಯವಾಗ ಬಹುದು. ಆ ದೇಶದಲ್ಲಿ 17 ದಶಲಕ್ಷ ಜನರಿದ್ದಾರೆ ಮತ್ತು 23 ದಶಲಕ್ಷ ಸೈಕಲ್ಲುಗಳಿವೆ. ರಾಜಧಾನಿ ಆಮ್‌ಸ್ಟರ್ ಡ್ಯಾಮ್ ನಗರದಲ್ಲಿ ಮನೆ ಮತ್ತು ಕೆಲಸದ ನಡುವಿನ ಎಲ್ಲ ಪ್ರಯಾಣಗಳಲ್ಲಿ ಸೈಕಲ್ಲು ಗಳು ಜನರ ಜೀವನಾಡಿ. ಸೈಕಲ್ಲುಗಳಿಲ್ಲದ ನೆದರ್‌ಲ್ಯಾಂಡ್ಸ್‌ನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಆ ದೇಶವು ತನ್ನನ್ನು ತಾನು ‘ಬೈಸಿಕಲ್ ದೇಶ’ ಎಂದು ಹೆಮ್ಮೆಯಿಂದ ಕರೆದುಕೊಳ್ಳುತ್ತದೆ. ವಿಶ್ವದಲ್ಲಿಯೇ ನೆದರ್ ಲ್ಯಾಂಡ್ಸ್ ಗೆ ಸೈಕಲ್ ಬಳಕೆಯಲ್ಲಿ ಮೊದಲ ಸ್ಥಾನ. ಇಬ್ಬರು ಭೇಟಿಯಾದರೆ, ಸೈಕಲ್ ವಿಷಯದಿಂದಲೇ ಅವರ ಮಾತುಕತೆ ಆರಂಭವಾಗುತ್ತದೆ ಮತ್ತು ಕೊನೆಯಲ್ಲಿ ಆ ವಿಷಯ ದೊಂದಿಗೇ ಅಂತ್ಯವಾಗುತ್ತದೆ. ತಾವು ಖರೀದಿಸಿದ ಹೊಸ ಸೈಕಲ್, ಮಾರುಕಟ್ಟೆಗೆ ಬಂದ ನೂತನ ಸೈಕಲ್‌ಗಳ ಕುರಿತು ಅಲ್ಲಿನ ಜನ ಮಾತಾಡಲು ಇಷ್ಟಪಡುತ್ತಾರೆ.
ನಾಲ್ಕು ವರ್ಷಗಳ ಹಿಂದೆ ನೆದರ್‌ಲ್ಯಾಂಡ್ಸ್ ಪ್ರವಾಸೋದ್ಯಮ ಒಂದು ಜಾಹೀರಾತನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಡಚ್ ಭಾಷೆಯಲ್ಲಿ ‘ಸುಸ್ವಾಗತ’ ಎಂದಷ್ಟೇ ಬರೆದಿತ್ತು. ಆದರೆ ಅದಕ್ಕೆ ಬಳಸಿದ ಚಿತ್ರದಲ್ಲಿ ಬರೀ ಸೈಕಲ್ಲುಗಳೇ ಇದ್ದವು. ಅದಕ್ಕಿಂತ ಪರಿಣಾಮಕಾರಿಯಾಗಿ ಆ ದೇಶವನ್ನು ಶೋಕೇಸ್ ಮಾಡಲು ಸಾಧ್ಯವೇ ಇರಲಿಲ್ಲ. ಕೆಲ ವರ್ಷಗಳ ಹಿಂದೆ ನಾನು ಆಮ್‌ಸ್ಟರ್‌ಡ್ಯಾಮ್ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅಲ್ಲಿನ ಜಾಹೀರಾತು ಫಲಕವೊಂದರಲ್ಲಿ There is something wrong with a society that drives a car to workout in a gym ಎಂದು ಬರೆದಿತ್ತು.
ಇದನ್ನೂ ಓದಿ: Vishweshwar Bhat Column: ಜಪಾನಿನಲ್ಲಿ ಹಿತವಾದ ಆಘಾತಗಳು
ಸೈಕಲ್ ಪ್ರಯಾಣವನ್ನು ಬೇರೆ ದೇಶಗಳಲ್ಲೂ ಪ್ರಚಾರ ಮಾಡಲು ಉತ್ತೇಜಿಸುವ ಜಾಹೀರಾತು ಅದಾ ಗಿತ್ತು. ಸೈಕಲ್ಲಿನ ಮಹತ್ವವನ್ನು ವಿಶ್ವದಲ್ಲಿಯೇ ಬಹುಬೇಗ ಮನಗಂಡ ನೆದರ್‌ಲ್ಯಾಂಡ್ಸ್, ಸೈಕಲ್ ಬಳಕೆಯನ್ನು ಜನಪ್ರಿಯಗೊಳಿಸಿದೆ. ಮನೆಯಿಂದ ಆಫೀಸಿಗೆ ಸೈಕಲ್ಲಿನಲ್ಲಿ ಹೋಗುವವರಿಗೆ ಅಲ್ಲಿನ ಸರಕಾರ ಪ್ರತಿ ಕಿಮೀಗೆ 0.22 ಡಾಲರ್ ಹಣವನ್ನು ನೀಡುತ್ತದೆ.
ಈ ಹಣ ತೆರಿಗೆಮುಕ್ತ. ವ್ಯಾಪಾರ ಉದ್ದೇಶಗಳಿಗಾಗಿ ಯಾರಾದರೂ ತಮ್ಮ ಸ್ವಂತ ಕಾರನ್ನು ಚಾಲನೆ ಮಾಡುವ ರೀತಿಯಲ್ಲಿಯೇ ಇದು ಕಾರ್ಯನಿರ್ವಹಿಸುತ್ತದೆ, ಪ್ರಯಾಣಿಸಿದ ದೂರಕ್ಕೆ ಸಂಬಂಧಿಸಿದ ಸ್ಥಿರ ಮೊತ್ತವನ್ನು ಮರಳಿ ಪಡೆಯಲು ಸಾಧ್ಯವಾಗುತ್ತದೆ. ಆದರೆ ಮುಖ್ಯ ವಿಷಯವೆಂದರೆ ಸೈಕಲ್ ಸವಾರರು ಕೆಲಸಕ್ಕೆ ಮತ್ತು ಹೊರಗೆ ಸವಾರಿ ಮಾಡುವ ಮೂಲಕ ಹಣವನ್ನು ಗಳಿಸಬಹುದು.
ಸೈಕಲ್ಲಿನಲ್ಲಿ ಆಫೀಸಿಗೆ ಬರುವ ಉದ್ಯೋಗಿಗಳಿಗೆ ಕಂಪನಿಯೇ ಸೈಕಲ್ ನೀಡುತ್ತದೆ. 10 ಸಾವಿರ ರುಪಾಯಿಯಿಂದ 3 ಲಕ್ಷ ರುಪಾಯಿ ಬೆಲೆ ಬಾಳುವ ಸೈಕಲ್ಲುಗಳಲ್ಲಿ ಜನ ಓಡಾಡುತ್ತಾರೆ. ಬಹುತೇಕ ಎಲ್ಲ ಕಂಪನಿಗಳೂ ಸೈಕಲ್ ಖರೀದಿಗೆ ಸಾಲ ಕೊಡುವುದು ಸಾಮಾನ್ಯ. ನೆದರ್‌ಲ್ಯಾಂಡ್ಸ್ ಪ್ರಧಾನಿ ಯೇ ಸೈಕಲ್ಲಿನಲ್ಲಿ ಮನೆಯಿಂದ ಆಫೀಸಿಗೆ ಪ್ರಯಾಣ ಮಾಡುತ್ತಾರೆ. ಹವಾಮಾನ ವೈಪರೀತ್ಯ ಗಳಿಲ್ಲದ ದಿನಗಳಲ್ಲಿ ಅವರು ಸೈಕಲ್ಲಿನಲ್ಲೇ ಓಡಾಡುತ್ತಾರೆ. ಅವರ ಸಂಪುಟದ ಸಚಿವರು ಮತ್ತು ಅಧಿಕಾರಿಗಳು ಸೈಕಲ್‌ನಲ್ಲಿ ಪಯಣಿಸುವುದು ಸಾಮಾನ್ಯ ದೃಶ್ಯ.
ಒಂದು ಮನೆಯಲ್ಲಿ ನಾಲ್ವರಿದ್ದರೆ, ಸೈಕಲ್ಲುಗಳು ಮಾತ್ರ ಆರೋ-ಏಳೋ. ಕಾರು ಅಲ್ಲಿನ ಪ್ರತಿಷ್ಠೆಯ ಮಾನದಂಡವಲ್ಲ. ಅಲ್ಲಿನ ಜನ ತಮ್ಮ ಸೈಕಲ್ಲುಗಳನ್ನೇ ಶ್ರೀಮಂತಿಕೆಯ ದ್ಯೋತಕವಾಗಿ ತೋರ್ಪ ಡಿಸಿಕೊಳ್ಳಲು ಇಷ್ಟಪಡುತ್ತಾರೆ. 2 ವರ್ಷಗಳ ಹಿಂದೆ, ಡಚ್ ಪ್ರಧಾನಿ, ‘ನಾನೇಕೆ ಸೈಕಲ್ ಬಳಸು ತ್ತೇನೆ?’ ಎಂದು ವರ್ಲ್ಡ್ ಇಕನಾಮಿಕ್ ಫಾರಂನಲ್ಲಿ ಭಾಷಣ ಮಾಡಿದ್ದು ವೈರಲ್ ಆಗಿತ್ತು. ನೆದರ್ ಲ್ಯಾಂಡ್ಸ್ ಒಂದೇ ಅಲ್ಲ,
ಯುರೋಪಿನಲ್ಲಿ ಇನ್ನೂ ಹತ್ತಾರು ದೇಶಗಳು ಸೈಕಲ್‌ಗಳನ್ನು ಇಷ್ಟಪಡುತ್ತವೆ. ಡೆನ್ಮಾರ್ಕ್ ಕೂಡ ಸೈಕಲ್ ಬಳಕೆಯಲ್ಲಿ ಸಾಕಷ್ಟು ಸಾಧನೆ ಮಾಡಿದೆ.