ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ವಿಶ್ವೇಶ್ವರ ಭಟ್‌

Editor in Chief, Author, Columnist

info1@vishwavani.news

ವಿಶ್ವೇಶ್ವರ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಮೂರೂರಿನವರು. ಧಾರವಾಡ ವಿವಿಯಲ್ಲಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ, ಪತ್ರಿಕೋದ್ಯಮದಲ್ಲೂ ಸ್ನಾತಕೋತ್ತರ ಪದವಿ ಗಳಿಸಿದರು. ನಂತರ ಲಂಡನ್ನಲ್ಲಿ ಪತ್ರಿಕೋದ್ಯಮ ಕುರಿತಂತೆ ವಿಶೇಷ ಶಿಕ್ಷಣ ಪಡೆದರು. ಸಂಯುಕ್ತ ಕರ್ನಾಟಕದ ಮೂಲಕ ವೃತ್ತಿ ಆರಂಭಿಸಿದರು. ಬಳಿಕ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರಿಗೆ ಮಾಧ್ಯಮ ಸಲಹೆಗಾರರಾಗಿ, ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ನಂತರ ವಿಜಯ ಕರ್ನಾಟಕ, ಕನ್ನಡಪ್ರಭ ಪ್ರಧಾನ ಸಂಪಾದಕರಾಗಿ ಆ ಪತ್ರಿಕೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. 2016ರಲ್ಲಿ ವಿಶ್ವವಾಣಿ ದಿನ ಪತ್ರಿಕೆ ಆರಂಭಿಸಿದರು. ವಿಶ್ವವಾಣಿ ಸಮೂಹ ಇದೀಗ ಲೋಕಧ್ವನಿ, ವಿಶ್ವವಾಣಿ ಟಿವಿ ಮತ್ತು ವಿಶ್ವವಾಣಿ ಪುಸ್ತಕ ಪ್ರಕಾಶನವನ್ನು ಒಳಗೊಂಡು ಬೆಳೆಯುತ್ತಿದೆ. ವಿಶ್ವೇಶ್ವರ ಭಟ್ 97 ಕೃತಿಗಳನ್ನು ರಚಿಸಿದ್ದಾರೆ. 'ನೂರೆಂಟು ವಿಶ್ವ', 'ಸಂಪಾದಕರ ಸದ್ಯಶೋಧನೆ', ಭಟ್ಟರ್ ಸ್ಕಾಚ್, 'ಇದೇ ಅಂತರಂಗ ಸುದ್ದಿ' ಹಾಗೂ 'ಆಸ್ಕ್ ದಿ ಎಡಿಟರ್' ಅಂಕಣಗಳನ್ನು ಬರೆಯುತ್ತಿದ್ದಾರೆ.

Articles
Vishweshwar Bhat Column: ವಿಮಾನದಲ್ಲಿ ಆಲೂಗಡ್ಡೇಗೇನು ಕೆಲಸ ?

ವಿಮಾನದಲ್ಲಿ ಆಲೂಗಡ್ಡೇಗೇನು ಕೆಲಸ ?

ಆಲೂಗಡ್ಡೆಗಳಲ್ಲಿ ಶೇ.80ರಷ್ಟು ನೀರಿನ ಅಂಶವಿದೆ. ಈ ನೀರಿನ ಅಂಶ ಮತ್ತು ಅವುಗಳಲ್ಲಿ ಇರುವ ಇತರ ರಾಸಾಯನಿಕಗಳ ಬಳಕೆಯಿಂದ ಅವು ಮಾನವ ದೇಹದಂತೆಯೇ ರೇಡಿಯೋ ತರಂಗಗಳನ್ನು ಗ್ರಹಿಸು ತ್ತವೆ ಅಥವಾ ಪ್ರತಿಬಿಂಬಿಸುತ್ತವೆ. ವೈ-ಫೈ ತರಂಗಗಳು ಹೆಚ್ಚಾಗಿ 2.4 GHz ಮತ್ತು 5 GHz ವಾಯು ಅಲೆಯನ್ನು ಬಳಸುತ್ತವೆ.

Vishweshwar Bhat Column: ದುಬೈ ಎಂಬ ವೈಶಿಷ್ಟ್ಯಗಳ ಮೂಟೆ

ದುಬೈ ಎಂಬ ವೈಶಿಷ್ಟ್ಯಗಳ ಮೂಟೆ

ಇತ್ತೀಚೆಗೆ ದುಬೈಯನ್ನು ‘ವಿಶ್ವದ ಏಳನೇ ಸುರಕ್ಷಿತ ನಗರ’ ಎಂದು ಘೋಷಿಸಲಾಗಿದೆ. ಕಟ್ಟುನಿಟ್ಟಾದ ಸ್ಥಳೀಯ ಕಾನೂನುಗಳು ಮತ್ತು ಉತ್ತಮ ಸಂಪರ್ಕ ಹೊಂದಿದ ಕಣ್ಗಾವಲು ವ್ಯವಸ್ಥೆ ದುಬೈಯನ್ನು ಸುರಕ್ಷಿತ ನಗರವನ್ನಾಗಿಸಿದೆ. ವಾಸ್ತವವಾಗಿ, ದುಬೈ ಏಕಾಂಗಿ ಮಹಿಳಾ ಪ್ರಯಾಣಿಕರಿಗೆ ವಿಶ್ವದ ಸುರಕ್ಷಿತ ನಗರ ಎಂದೂ ಹೆಸರುವಾಸಿಯಾಗಿದೆ. ಮಹಿಳೆಯರು ಭಯವಿಲ್ಲದೇ ಮಧ್ಯರಾತ್ರಿಯಲ್ಲಿ ಏಕಾಂಗಿಯಾಗಿ ಪ್ರಯಾಣಿಸಬಹುದು.

Vishweshwar Bhat Column: ನಮ್ಮ ರೆಸಾರ್ಟ್‌, ಹೋಮ್‌ ಸ್ಟೇ ಮಾಲೀಕರೇಕೆ ಈ ಆವಕಾಶವನ್ನು ಬಳಸಿಕೊಳ್ಳುವುದಿಲ್ಲ ?

ಹೋಮ್‌ ಸ್ಟೇ ಮಾಲೀಕರೇಕೆ ಈ ಆವಕಾಶವನ್ನು ಬಳಸಿಕೊಳ್ಳುವುದಿಲ್ಲ ?

ಒಮ್ಮೆ ಮಳೆಗಾಲ ಶುರುವಾದರೆ ಸಾಕು, ಅದು ಮುಗಿಯುವವರೆಗೆ ಪ್ರವಾಸಿಗರು ಕೇರಳದತ್ತ ಸುಳಿಯುತ್ತಿರಲಿಲ್ಲ. ವರ್ಷದ ಎಂಟು ತಿಂಗಳು ಗಳಿಸಿದ್ದು ಆ ನಾಲ್ಕು ತಿಂಗಳಲ್ಲಿ ಕರಗಿ ಹೋಗುವಂಥ ಸ್ಥಿತಿ. ಯಾವುದೇ ಉದ್ಯಮವಾದರೂ ಸತತ ನಾಲ್ಕು ತಿಂಗಳು ಬಕ್ಕಬೋರಲಾದರೆ, ಆರ್ಥಿಕ ಹೊರೆಯ ಹೊಡೆತವನ್ನು ತಡೆದುಕೊಳ್ಳುವುದು ಕಷ್ಟ. ಇದಕ್ಕೊಂದು ಪರಿಹಾರವನ್ನು ಕೇರಳ ಕಂಡುಕೊಳ್ಳಲೇಬೇಕಿತ್ತು.

Vishweshwar Bhat Column: ಪೈಲೆಟ್ʼಗೆ ನಿದ್ದೆ ಬಂದರೆ ?

ಪೈಲೆಟ್ʼಗೆ ನಿದ್ದೆ ಬಂದರೆ ?

ಒಂದು ವೇಳೆ ಒಬ್ಬರಿಗೆ ನಿದ್ರೆ ಬಂದರೆ ಅಥವಾ ಅಸ್ವಸ್ಥತೆಯುಂಟಾದರೆ ಇತರರು ನಿಯಂತ್ರಣ ತೆಗೆದು ಕೊಳ್ಳುತ್ತಾರೆ. ವಿಮಾನ ಅಪಘಾತಕ್ಕೆ ಪೈಲಟ್ ನಿದ್ದೆಯೇ ಕಾರಣವಾದ ಪ್ರಸಂಗಗಳು ಇವೆ. 2010ರಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ 812 ಮಂಗಳೂರು ವಿಮಾನ ನಿಲ್ದಾಣದಲ್ಲಿ ಭೀಕರ ಅಪಘಾತ ಕ್ಕೀಡಾಯಿತು.

Vishweshwar Bhat Column: ವಿಮಾನದಲ್ಲಿ ಧ್ವನಿವರ್ಧಕ ವ್ಯವಸ್ಥೆ

ವಿಮಾನದಲ್ಲಿ ಧ್ವನಿವರ್ಧಕ ವ್ಯವಸ್ಥೆ

ವಿಮಾನದಲ್ಲಿ ಪ್ರಯಾಣ ಮಾಡುವಾಗ ನಾವು ವಿವಿಧ ರೀತಿಯ ಧ್ವನಿಗಳನ್ನು ಕೇಳುತ್ತೇವೆ. ಆ ಪೈಕಿ ಪೈಲಟ್ ಉದ್ಘೋಷ, ಗಗನಸಖಿಯರ (ಕ್ಯಾಬಿನ್ ಕ್ರ್ಯೂ) ಸೂಚನೆಗಳು, ಮೃದು ಸಂಗೀತ ಮತ್ತು ಕೆಲ ವೊಮ್ಮೆ ತುರ್ತು ಸೂಚನೆಗಳು ಸೇರಿರುತ್ತವೆ. ಈ ಎಲ್ಲದಕ್ಕೂ ಅಡಿಪಾಯವಾದ ವ್ಯವಸ್ಥೆಯೇ ವಿಮಾನ ದಲ್ಲಿನ ಧ್ವನಿವರ್ಧಕ ವ್ಯವಸ್ಥೆ (ಸೌಂಡ್ ಸಿಸ್ಟಮ್). ಇದು ವಿಮಾನದ ಸಂವಹನ, ಸುರಕ್ಷತೆ ಮತ್ತು ಪ್ರಯಾಣಿಕರ ಅನುಭವವನ್ನು ಹೆಚ್ಚಿಸುವ ಪ್ರಮುಖ ಅಂಶಗಳಾಗಿದ್ದು, ಹಲವಾರು ತಾಂತ್ರಿಕ ಘಟಕಗಳ ಸಮೂಹವಾಗಿದೆ.

Vishweshwar Bhat Column: ಯಾವುದೋ ರೂಪದಲ್ಲಿ ದೇವರು ಬಂದೇ ಬರುತ್ತಾನೆ !

ಯಾವುದೋ ರೂಪದಲ್ಲಿ ದೇವರು ಬಂದೇ ಬರುತ್ತಾನೆ !

ಆ ಸೇನಾ ತುಕಡಿಯಲ್ಲಿ ಹದಿನೈದು ಮಂದಿ ಯೋಧರಿದ್ದರು. ಅವರಿಗೆ ನಾಯಕನಾಗಿ ಒಬ್ಬ ಮೇಜರ್ ಇದ್ದ. ಆತ ಎರಡು ಯುದ್ಧಗಳಲ್ಲಿ ಪಾಲ್ಗೊಂಡಿದ್ದ, ಎರಡು ಬಾರಿಯೂ ಗೆಲುವಿನ ಸವಿ ಕಂಡಿದ್ದ ಅನುಭವಿ. ಅವನ ಮುಂದಾಳತ್ವದ ತಂಡವನ್ನು ಹಿಮಾ ಲಯದ ತಪ್ಪಲಿನಲ್ಲಿ ಸೇವೆಗೆ ನಿಯೋಜಿಸ ಲಾಗಿತ್ತು. ಮೂರು ತಿಂಗಳ ಸುದೀರ್ಘ ಅವಧಿಯವರೆಗೂ ಆ ಗಡಿ ಪ್ರದೇಶದಲ್ಲಿ ತುಂಬ ಎಚ್ಚರದಿಂದ ಪಹರೆ ಕಾಯುವ ಕೆಲಸ ಈ ಸೇನಾ ತುಕಡಿಯ ಯೋಧರದ್ದಾಗಿತ್ತು.

Vishweshwar Bhat Column: ದುರಂತವೂ, ಭಾಷಾ ಸಮಸ್ಯೆಯೂ

ದುರಂತವೂ, ಭಾಷಾ ಸಮಸ್ಯೆಯೂ

ಡಿಎಚ್‌ಎಲ್ ವಿಮಾನದಲ್ಲಿ ಇಬ್ಬರು ಮತ್ತು ಬಾಶ್ಕಿರಿಅನ್ ವಿಮಾನದಲ್ಲಿ 69 ಪ್ರಯಾಣಿಕರಿದ್ದರು. ಎಲ್ಲ 71 ಪ್ರಯಾಣಿಕರು ಅಸುನೀಗಿದರು. ಸ್ವಿಸ್ ಎಟಿಸಿ ಸೇವೆಯಲ್ಲಿ ಪೀಟರ್ ನೀಲ್ಸನ್ ಎಂಬ ಏರ್ ಟ್ರಾಫಿಕ್ ಕಂಟ್ರೋಲರ್ ನಿಯಂತ್ರಣದಲ್ಲಿದ್ದ. ಆತ ಕಠಿಣವಾದ ಕಾರ್ಯಭಾರದ ಪರಿಣಾಮ ನಿರ್ಲಕ್ಷ್ಯದಿಂದ ಎರಡು ವಿಮಾನಗಳಿಗೆ ಒಂದೇ ಎತ್ತರದಲ್ಲಿ ಹಾರಲು ಅನುಮತಿ ನೀಡಿದ್ದ.

Vishweshwar Bhat Column: ಏರ್‌ ಟ್ರಾಫಿಕ್‌ ಕಂಟ್ರೋಲ್ʼನ ಮಹತ್ವ

ಏರ್‌ ಟ್ರಾಫಿಕ್‌ ಕಂಟ್ರೋಲ್ʼನ ಮಹತ್ವ

ವಿಮಾನಗಳ ಹಾರಾಟವನ್ನು ನಿರ್ವಹಿಸುವ ಎಟಿಸಿಯ ಪ್ರಮುಖ ಕೆಲಸಗಳೆಂದರೆ, ಗಗನದಲ್ಲಿ ವಿಮಾನಗಳ ಮಧ್ಯೆ ದೂರ ಕಾಯ್ದುಕೊಳ್ಳುವುದು, ವಿಮಾನಗಳ ಲ್ಯಾಂಡಿಂಗ್ ಹಾಗೂ ಟೇಕಾಫ್‌ ಗೆ ಅನುಮತಿಸುವುದು, ಗಗನಮಾರ್ಗ ( air routes) ನಿರ್ವಹಣೆ, ತುರ್ತು ಪರಿಸ್ಥಿತಿಯಲ್ಲಿ ಮಾರ್ಗದರ್ಶನ ನೀಡುವುದು ಹಾಗೂ ವಾತಾವರಣದ ತ್ವರಿತ ಮಾಹಿತಿ ಹಂಚಿಕೆ.

Vishweshwar Bhat Column: ವಿಮಾನದ ತುರ್ತು ಭೂಸ್ಪರ್ಶ

ವಿಮಾನದ ತುರ್ತು ಭೂಸ್ಪರ್ಶ

ಇತ್ತೀಚೆಗೆ ಏರ್ ಇಂಡಿಯಾ ವಿಮಾನ ಅಹಮದಾಬಾದಿನಲ್ಲಿ ಅಪಘಾತಕ್ಕೀಡಾದ ಬಳಿಕ, ಒಂದು ವಾರದ ಅವಧಿಯಲ್ಲಿ ಐದು ವಿಮಾನಗಳು ತುರ್ತು ಭೂಸ್ಪರ್ಶ (ಎಮರ್ಜೆನ್ಸಿ ಲ್ಯಾಂಡಿಂಗ್) ಮಾಡಿದ ಘಟನೆಗಳು ವರದಿಯಾದವು. ವಿಮಾನಯಾನ ರಂಗದಲ್ಲಿ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡುವುದನ್ನು ಗಂಭೀರವಾಗಿಯೇ ಪರಿಗಣಿಸಲಾಗುತ್ತದೆ.

‌Vishweshwar Bhat Column: ವಿಮಾನ ಮತ್ತು ಬರ್ಡ್‌ ಹಿಟ್

ವಿಮಾನ ಮತ್ತು ಬರ್ಡ್‌ ಹಿಟ್

ಒಮ್ಮೆ ವಿಮಾನ ಟೇಕಾಫ್ ಆಗಿ, ಸುಮಾರು ಐನೂರು ಮೀಟರ್ ಮೇಲಕ್ಕೆ ಹೋಗುವವರೆಗೆ, ಹಕ್ಕಿಗಳು ಅಪ್ಪಳಿಸುವ ಅಪಾಯವಿರುತ್ತದೆ. ವಿಮಾನ ಮೋಡದೊಳಗೆ ಹೋದ ಬಳಿಕ ಹಕ್ಕಿಗಳ ಅಪಾಯ ಇಲ್ಲ. ಬರ್ಡ್ ಹಿಟ್ ( Bird Hit ) ಅಥವಾ ಬರ್ಡ್ ಸ್ಟ್ರೈಕ್ (Bird Strike) ಎನ್ನುವುದು ವಿಮಾನ ಉದ್ಯಮದಲ್ಲಿ ಬಹಳ ಗಂಭೀರ ಸಮಸ್ಯೆ.

Vishweshwar Bhat Column: ಈ ದೇಶದಲ್ಲಿ ಚಪ್ಪಲಿಗಳಿಗೂ ಒಂದು ವಸ್ತುಸಂಗ್ರಹಾಲಯವಿದೆ ಗೊತ್ತಾ ?!

ಈ ದೇಶದಲ್ಲಿ ಚಪ್ಪಲಿಗಳಿಗೂ ಒಂದು ವಸ್ತುಸಂಗ್ರಹಾಲಯವಿದೆ ಗೊತ್ತಾ ?!

ಫಿಲಿಪೈನ್ಸ್‌ ಗೆ ಹೋದಾಗ ರಾಜಧಾನಿ ಮನಿಲಾದ ಮರಿಕಿನಾ ಪ್ರದೇಶದಲ್ಲಿರುವ ಚಪ್ಪಲಿಗಳ ವಸ್ತು‌ ಸಂಗ್ರಹಾಲಯಕ್ಕೆ ಹೋಗಬೇಕೆಂದು ಮೊದಲೇ ನಿರ್ಧರಿಸಿದ್ದೆ. ‘ಫಿಲಿಪೈನ್ಸ್ ಶೂ ಕ್ಯಾಪಿಟಲ್’ ಎಂದೇ ಖ್ಯಾತಿ ಪಡೆದಿರುವ ಮರಿಕಿನಾ, ತನ್ನ ಶ್ರೀಮಂತ ಪಾದರಕ್ಷೆಗಳ ಇತಿಹಾಸವನ್ನು ಸಾರುವ ವಿಶಿಷ್ಟ ವಸ್ತು ಸಂಗ್ರಹಾಲಯಕ್ಕೆ ನೆಲೆಯಾಗಿದೆ ಎಂಬ ಸಂಗತಿ ಗೊತ್ತಿತ್ತು. ‌

Vishweshwar Bhat Column: ವಿಮಾನದೊಳಗಿನ ವಾತಾವರಣ

ವಿಮಾನದೊಳಗಿನ ವಾತಾವರಣ

ಇಂದು ನಾವು 40 ಸಾವಿರ ಅಡಿಗಳ ಎತ್ತರದಲ್ಲಿ ಹಾರುವ ವಿಮಾನದಲ್ಲಿ ಆರಾಮವಾಗಿ ಕುಳಿತು, ಟಿವಿ ನೋಡುತ್ತೇವೆ, ಸ್ನಾನ ಮಾಡುತ್ತೇವೆ, ಓದುತ್ತೇವೆ, ಬರೆಯುತ್ತೇವೆ, ಊಟ ಮಾಡುತ್ತೇವೆ, ನಿದ್ರಿಸುತ್ತೇವೆ... ಇವೆಲ್ಲವೂ ನಮಗೆ ಸಾಧ್ಯವಾಗುತ್ತಿದೆ. ಆದರೆ ಬಾಹ್ಯ ವಾತಾವರಣದಲ್ಲಿ ಆಗುವ ತಾಪಮಾನದ ಬಗ್ಗೆ ಯೋಚಿಸಿ ದರೆ, ಒಮ್ಮೆ ಎಂಥವರಿಗಾದರೂ ಆಶ್ಚರ್ಯವಾಗುತ್ತದೆ.

Vishweshwar Bhat Column: ವಿಮಾನದ ಇಂಧನ ಲೆಕ್ಕಾಚಾರ

ವಿಮಾನದ ಇಂಧನ ಲೆಕ್ಕಾಚಾರ

ಗಂಟೆಗೆ 900 ಕಿ.ಮೀ. ವೇಗದಲ್ಲಿ ಕ್ರಮಿಸುವ ಈ ವಿಮಾನ ಪ್ರತಿ ಸೆಕೆಂಡ್‌ಗೆ ಸುಮಾರು 4 ಲೀಟರ್ ಇಂಧನವನ್ನು ಕುಡಿಯುತ್ತದೆ. ಇದೇ ಲೆಕ್ಕಾಚಾರದಲ್ಲಿ ಈ ವಿಮಾನಕ್ಕೆ ಪ್ರತಿ ಗಂಟೆಗೆ 14000 ಲೀಟರ್ (3700 ಗ್ಯಾಲನ್) ಇಂಧನ ಬೇಕು. ಈ ವಿಮಾನದ ಇಂಧನ ಬಳಕೆಯನ್ನು ಕಾರಿನೊಂದಿಗೆ ಹೋಲಿಕೆ ಮಾಡುವುದಾದರೆ, ಕಾರುಗಳು ಒಂದು ಲೀಟರ್‌ಗೆ ಸುಮಾರು 15 ರಿಂದ 20 ಕಿ.ಮಿ. ಓಡುತ್ತವೆ.

Vishweshwar Bhat Column: ಭಾಷೆಯೆಂಬ ಧರ್ಮಕ್ಕೆ ಅಕ್ಷರವೆಂಬ ಜಾತಿ !

ಭಾಷೆಯೆಂಬ ಧರ್ಮಕ್ಕೆ ಅಕ್ಷರವೆಂಬ ಜಾತಿ !

The first me I drew typeface, I felt like I was at the bottom of Mt. Everest. In swimsuit. - Hennes Von Dohren ನನಗೇನಾದರೂ ಹೆಣ್ಣುಮಗಳು ಇದ್ದಿದ್ದರೆ, ಭೂಮಿಕಾ, ದೇವಿಕಾ, ಆಶಿಕಾ, ದೀಪಿಕಾ... ಬದಲು ನಿಶ್ಚಿತವಾಗಿಯೂ ಹೆಲ್ವೆಟಿಕಾ ಎಂಬ ಹೆಸರನ್ನು ಇಡುತ್ತಿದ್ದೆನೇನೋ ಎಂದು ಎಷ್ಟೋ ಸಲ ಅನಿಸಿದ್ದಿದೆ. ಇಂಗ್ಲಿಷ್ ಅಕ್ಷರಗಳಲ್ಲಿ ಅತಿ ಸುಂದರವಾದ ಅಕ್ಷರವೆಂದರೆ ಹೆಲ್ವೆಟಿಕಾ ಜಾತಿಗೆ ಸೇರಿದ ಅಕ್ಷರಗಳು.

Vishweshwar Bhat Column: ವಿಮಾನಗಳಲ್ಲಿ ಬ್ರೇಕ್‌ ವ್ಯವಸ್ಥೆ

ವಿಮಾನಗಳಲ್ಲಿ ಬ್ರೇಕ್‌ ವ್ಯವಸ್ಥೆ

ಕೆಲವು ವಿಮಾನಗಳಲ್ಲಿ Braking Energy Monitoring System ಕೂಡ ಇರುತ್ತದೆ. ಇದು ಬ್ರೇಕ್‌ಗಳ ಮೇಲೆ ಒತ್ತಡದ ಪ್ರಮಾಣವನ್ನು ಹತ್ತಿರದಿಂದ ಗಮನಿಸುತ್ತದೆ. ಇಲ್ಲಿ ನಿಮಗೆ ಕೆಲವು ಸ್ವಾರಸ್ಯಕರ ಸಂಗತಿ ಗಳನ್ನು ಹೇಳಬೇಕು. ಬೋಯಿಂಗ್ 777 ವಿಮಾನದಲ್ಲಿ 12 ಚಕ್ರಗಳು ಇರುತ್ತವೆ. ಪ್ರತಿ ಲ್ಯಾಂಡಿಂಗ್ ಗಿಯರ್‌ನಲ್ಲಿ ಆರು ಬ್ರೇಕ್ ಅಸೆಂಬ್ಲಿಗಳು ಇರುತ್ತವೆ

Vishweshwar Bhat Column: ಕಿನುಕೋನಿಯ ಪುಸ್ತಕ ಮಳಿಗೆ

ಕಿನುಕೋನಿಯ ಪುಸ್ತಕ ಮಳಿಗೆ

ನಾನು ಸಿಂಗಾಪುರಕ್ಕೆ ಹೋದಾಗಲೆಲ್ಲ ಕಿನೋಕುನಿಯ ಪುಸ್ತಕದ ಅಂಗಡಿಗೆ ಭೇಟಿ ನೀಡದೇ ಬಂದಿದ್ದೇ ಇಲ್ಲ. ಇದೊಂದು ಅದ್ಭುತ ಪುಸ್ತಕ ಲೋಕ. ಪ್ರಾಯಶಃ ಜಗತ್ತಿನ ಅತಿ ದೊಡ್ಡ ಮತ್ತು ಸುಂದರ ಪುಸ್ತಕ ಮಳಿಗೆಗಳಲ್ಲೊಂದು. ಇಲ್ಲಿ ನಿಮಗೆ ಯಾವುದಾದರೂ ಪುಸ್ತಕ ಸಿಗದಿದ್ದರೆ, ಅದನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತಾರೆ.

Vishweshwar Bhat Column: ಇದು ವಿಮಾನದ ಟೈರಿನ ಕಥೆ

ಇದು ವಿಮಾನದ ಟೈರಿನ ಕಥೆ

ವಿಮಾನಗಳ ಟೈರುಗಳು ಸಾಮಾನ್ಯ ವಾಹನಗಳ ಟೈರುಗಳಿಗಿಂತ ತುಂಬಾ ಭಿನ್ನವಾಗಿವೆ. ಅವನ್ನು ಬಹುಮಟ್ಟಿನ ರಬ್ಬರ್ ಮತ್ತು ಶಕ್ತಿಶಾಲಿ ಪದರಗಳಿಂದ ತಯಾರಿಸಿರುತ್ತಾರೆ. ಅವು ಗಂಟೆಗೆ ಸುಮಾರು 200 ಮೈಲು (322 ಕಿ.ಮೀ./ಗಂಟೆ) ವೇಗದಲ್ಲಿ ಭೂಮಿಯನ್ನು ಸ್ಪರ್ಶಿಸುತ್ತವೆ. ತೀವ್ರವಾದ ಶಾಕ್, ಉಷ್ಣತೆಯ ಬದಲಾವಣೆ ಮತ್ತು ಭಾರಿ ತೂಕವನ್ನು ಅವು ಸಹಿಸಿಕೊಳ್ಳಬೇಕಾಗುತ್ತದೆ.

Vishweshwar Bhat Column: ಕೈಲಾಸಂ ಕುರಿತು

ಕೈಲಾಸಂ ಕುರಿತು

ಕೈಲಾಸಂ 1884ರಲ್ಲಿ ಮೈಸೂರಲ್ಲಿ ಹುಟ್ಟಿ 1946ರಲ್ಲಿ ಬೆಂಗಳೂರಿನಲ್ಲಿ ನಿಧನರಾದರು. ನೂರಾರು ವರ್ಷಗಳೇ ಕಳೆದರೂ ಅವರ ನಾಟಕಗಳು ಈಗಲೂ ಹೆಸರುವಾಸಿಯಾಗಿವೆ. ಅವರ ಜೋಕ್ಸ್ ಅಮರ! Wit, pun ಇವುಗಳ ಮಾಸ್ಟರ್ ಆಗಿದ್ದರು ಕೈಲಾಸಂ. ಅವರ ಕನ್ನಡದಲ್ಲಿ ಸಂಸ್ಕೃತದ ಬದಲು ಇಂಗ್ಲಿಷ್ ತುಂಬಾ ಸೇರಿಕೊಂಡು ಇರುತ್ತಿತ್ತು.

Vishweshwar Bhat Column: ಹೊಣೆಯರಿತ ವ್ಯಕ್ತಿಗಳು, ಬ್ರ್ಯಾಂಡ್‌ ಗಳು ನಿರೀಕ್ಷೆಯನ್ನೂ ಹುಸಿಗೊಳಿಸೋದಿಲ್ಲ

ಹೊಣೆಯರಿತ ವ್ಯಕ್ತಿಗಳು, ಬ್ರ್ಯಾಂಡ್‌ ಗಳು ನಿರೀಕ್ಷೆಯನ್ನೂ ಹುಸಿಗೊಳಿಸೋದಿಲ್ಲ

ಗ್ವಾಲಿಯರ್‌ನಲ್ಲಿ ವಿಮಾನ ಲ್ಯಾಂಡಿಂಗ್ ಮಾಡಲು ಆಗದಷ್ಟು ಪ್ರತಿಕೂಲ ಹವಾಮಾನ ಪರಿಸ್ಥಿತಿ ಇದೆ ಎಂಬ ಸಂಗತಿ ಕ್ಯಾಪ್ಟನ್‌ಗೂ ತಿಳಿದು ಬಂತು. ಕೊಂಚಕಾಲ ಕಾಯಬೇಕಾಗುತ್ತದೆ ಎಂದು ವಿಮಾನ ಸಿಬ್ಬಂದಿ ಹೇಳುತ್ತಿದ್ದರೆ ಅನೇಕ ಪ್ರಯಾಣಿಕರು ಬೇರೆ ಬೇರೆ ಜಾಲತಾಣಗಳಲ್ಲಿ ಜಾಲಾಟ ಮಾಡಿ ಇಂದು ಇಡೀ ದಿನ ಹವಾಮಾನ ಹೀಗೆಯೇ ಇರುತ್ತದೆ ಎಂಬ ಮುನ್ಸೂಚನೆಯನ್ನೂ ಕೊಡಲಾರಂಭಿಸಿದರು.

Vishweshwar Bhat Column: ಯಾವ ಆಸನ ಸುರಕ್ಷಿತ ?

ಯಾವ ಆಸನ ಸುರಕ್ಷಿತ ?

ವಿಮಾನ ಪ್ರಯಾಣವು ಇಂದಿನ ದಿನಗಳಲ್ಲಿ ಅತ್ಯಂತ ಸುರಕ್ಷಿತ ಸಾರಿಗೆ ಮಾಧ್ಯಮಗಳಲ್ಲಿ ಒಂದಾಗಿದೆ. ವಿಮಾನಯಾನ ಉದ್ಯಮವು ಕಟ್ಟುನಿಟ್ಟಾದ ನಿಯಮಾವಳಿಗಳನ್ನು ಅನುಸರಿಸುತ್ತದೆ ಮತ್ತು ಬೋಯಿಂಗ್, ಏರ್‌ಬಸ್ ನಂಥ ವಿಮಾನ ತಯಾರಿಕಾ ಕಂಪನಿಗಳು ತಮ್ಮ ವಿಮಾನಗಳನ್ನು ತೀವ್ರ ಒತ್ತಡ ಮತ್ತು ಅಪಾಯಕಾರಿ ಪರಿಸ್ಥಿತಿಗಳಿಗೆ ಒಡ್ಡಿ ಪರೀಕ್ಷಿಸುತ್ತವೆ.

Vishweshwar Bhat Column: ಬೋಯಿಗ್‌ 787-8 ಡ್ರೀಮ್‌ ಲೈನರ್

ಬೋಯಿಗ್‌ 787-8 ಡ್ರೀಮ್‌ ಲೈನರ್

ವಿಮಾನವು ಏರ್‌ಲೈನ್‌ಗಳಿಗೆ ಆರ್ಥಿಕ ಲಾಭವನ್ನು ನೀಡುವುದರ ಜತೆಗೆ ಪ್ರಯಾಣಿಕರಿಗೆ ಸೌಕರ್ಯ‌ ದಾಯಕ ಮತ್ತು ಆನಂದದಾಯಕ ಯಾತ್ರೆಯನ್ನು ಒದಗಿಸುತ್ತದೆ. ಇದು ಪರಿಸರ ಸ್ನೇಹಿ ವಿಮಾನ ವಾಗಿದ್ದು ವಿಮಾನಯಾನ ಉದ್ಯಮದಲ್ಲಿ ಕಾರ್ಬನ್ ಫೂಟ್‌ಪ್ರಿಂಟ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಡ್ರೀಮ್‌ಲೈನರ್‌ನ ಕಿಟಕಿಗಳು ಇತರ ವಿಮಾನಗಳಿಗಿಂತ ಶೇ.30ರಷ್ಟು ದೊಡ್ಡದಾಗಿದ್ದು, ಇದು ಪ್ರಾಕೃತಿಕ ಬೆಳಕು ಹೆಚ್ಚು ಒಳಬರುವಂತೆ ಮಾಡುತ್ತದೆ

Vishweshwar Bhat Column: ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ನಮ್ಮ ಮನೆಯಲ್ಲಿ ಹುಟ್ಟಿದರೆ ಯುದ್ಧಕ್ಕೆ ಕಳಿಸಬೇಕಾಗುತ್ತದೆ. ಅದೇ ರೀತಿ, ಸಂಕೇಶ್ವರರ ಉದಾ ಹರಣೆ ಯನ್ನು ಪಠ್ಯ-ಪುಸ್ತಕಗಳಲ್ಲಿ ಓದಲು, ಭಾಷಣಗಳಲ್ಲಿ ಕೇಳಲು ಚೆಂದ. ಆದರೆ ಅದನ್ನು ಜಾರಿಗೊಳಿಸು ವುದು ಅಸಾಧ್ಯ. ಹಾಗೆಯೇ ಯಾರಾದರೂ, ‘ನೀವು ಬಹಳ ಚೆಂದವಾಗಿ ಬರೆಯುತ್ತೀರಿ, ಪತ್ರಿಕೆಯನ್ನು ಬಹಳ ಸುಂದರವಾಗಿ ತರುತ್ತೀರಿ’ ಎಂದು ಹೇಳಿದರೆ, ಕೇಳಿ ಸುಮ್ಮನಾಗಬೇಕು.

Vishweshwar Bhat Column: ವಿಮಾನದಲ್ಲಿ ಲಗೇಜ್‌ ನಿರ್ವಹಣೆ

ವಿಮಾನದಲ್ಲಿ ಲಗೇಜ್‌ ನಿರ್ವಹಣೆ

ಜಪಾನಿನ ಕಾನ್ಸೈ ವಿಮಾನ ನಿಲ್ದಾಣ. ಅಲ್ಲಿ ಕಳೆದ ಮೂವತ್ತು ವರ್ಷಗಳಿಂದ ಪ್ರಯಾಣಿಕರ ಒಂದೇ ಒಂದು ಲಗೇಜ್ ಕಾಣೆಯಾಗಿಲ್ಲ ಅಥವಾ ತಡವಾಗಿ ಬಟವಾಡೆ ಆಗಿಲ್ಲ. ಅಷ್ಟು ಕರಾರುವಾಕ್ಕಾಗಿ ಅಲ್ಲಿ ಲಗೇಜುಗಳನ್ನು ನಿರ್ವಹಿಸಲಾಗುತ್ತದೆ. ಅದೊಂದೇ ಕಾರಣಕ್ಕೆ ಆ ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ.

Vishweshwar Bhat Column: ವಿಮಾನ ನೀರಿನ ಮೇಲಿಳಿದರೆ....?

ವಿಮಾನ ನೀರಿನ ಮೇಲಿಳಿದರೆ....?

‘ವಿಮಾನ ನೀರಿನ ಮೇಲೆ ಎಮರ್ಜೆನ್ಸಿ ಲ್ಯಾಂಡ್ ಆದರೆ ಏನು ಮಾಡಬೇಕು, ಅಂಥ ಸಂದರ್ಭದಲ್ಲಿ ಲೈಫ್ ಜಾಕೆಟ್ ಹೇಗೆ ಧರಿಸಬೇಕು’ ಎಂಬ ಸೂಚನೆ ನೀಡಿದಾಗ ಬಹುತೇಕ ಪ್ರಯಾಣಿಕರು ತುಸು ಗಲಿಬಿಲಿ ಗೊಳಗಾಗುತ್ತಾರೆ. ಕೆಲವು ಪ್ರಯಾಣಿಕರಿಗೆ ಈ ಸೂಚನೆ ತಕ್ಷಣವೇ ಉಸಿರಾಟ ತೊಂದರೆ‌ಯನ್ನುಂಟು ಮಾಡಬಹುದು, ಇನ್ನು ಕೆಲವರಿಗೆ ಬೆವರು ಕಿತ್ತುಕೊಂಡು ಬರಬಹುದು.