ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

B S Shivanna Column: ಎರಡು ವರ್ಷಗಳ ಗ್ಯಾರಂಟಿ ಸಾಕಾರ

ರಾಜ್ಯದ ಗ್ಯಾರಂಟಿ ಯೋಜನೆಗಳು ಜನರ ಜೀವನದಲ್ಲಿ ದಿಕ್ಸೂಚಿಯಾಗಿವೆ. ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿ ಯೋಜನೆಗಳು- ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಮತ್ತು ಯುವನಿಧಿ- ಕರ್ನಾಟಕದ ಜನತೆಯ ಪಾಲಿಗೆ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣದ ದಾರಿದೀಪವಾಗಿವೆ. ಈ ಯೋಜನೆಗಳು ಕೇವಲ ಚುನಾವಣಾ ಭರವಸೆಗಳಾಗಿ ಉಳಿಯಲಿಲ್ಲ; ಅವುಗಳನ್ನು ಕಾರ್ಯ ರೂಪಕ್ಕೆ ತಂದು ಜನರ ಬದುಕಿಗೆ ಭದ್ರತೆಯನ್ನು ಒದಗಿಸಲಾಗಿದೆ

ಎರಡು ವರ್ಷಗಳ ಗ್ಯಾರಂಟಿ ಸಾಕಾರ

Profile Ashok Nayak May 20, 2025 6:30 AM

ಗುಣಗಾನ

ಬಿ.ಎಸ್.ಶಿವಣ್ಣ

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ 2023ರ ಮೇ 20 ಒಂದು ಅವಿಸ್ಮರಣೀಯ ದಿನ. ಇದು ಮೌಲ್ಯಾಧಾರಿತ ರಾಜಕಾರಣದ ಪ್ರತಿನಿಧಿ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನವಾಗಿ ಇತಿಹಾಸದ ಮೈಲಿಗಲ್ಲಾಗಿದೆ. ಮೇ 20ರಂದು ಕಾಂಗ್ರೆಸ್ ಸರಕಾರವು 2 ವರ್ಷಗಳ ಆಡಳಿತವನ್ನು ಪೂರೈಸುತ್ತಿದ್ದು, ಈ ಅವಧಿಯಲ್ಲಿ ಜನಕೇಂದ್ರಿತ ಯೋಜನೆಗಳ ಮೂಲಕ ಅದು ರಾಜ್ಯದ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತಂದಿದೆ. ಹೌದು, ಸಿದ್ದರಾಮಯ್ಯ ಅವರ ಆಳ್ವಿಕೆ ಎಂದರೆ ‘ಜನ ಕಲ್ಯಾಣ ಗ್ಯಾರಂಟಿ‘. ಮುಖ್ಯಮಂತ್ರಿಯಾದ ಮೊದಲ ಅವಧಿಯಲ್ಲಿ ‘ಭಾಗ್ಯಗಳ ಸರದಾರ’ ಆಗಿದ್ದ ಸಿದ್ದರಾಮಯ್ಯ, ಈ ಬಾರಿ ‘ಗ್ಯಾರಂಟಿ’ ಯೋಜನೆಗಳ ಮೂಲಕ ರಾಷ್ಟ್ರ ರಾಜಕಾರಣದಲ್ಲೂ ಗಮನ ಸೆಳೆದಿದ್ದಾರೆ.

ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದ ಬಿಜೆಪಿಯವರು, ಕೇಂದ್ರದಲ್ಲೂ ಮತ್ತು ಬೇರೆ ರಾಜ್ಯ ಗಳಲ್ಲೂ ಇದೇ ಯೋಜನೆ ಯನ್ನು ಜಾರಿಗೆ ತಂದಿದ್ದು ಸಿದ್ದರಾಮಯ್ಯನವರ ಜನಪರ ನಿಲುವಿಗೆ ದಕ್ಕಿದ ಯಶಸ್ಸು ಎಂದೇ ವ್ಯಾಖ್ಯಾನಿಸಬಹುದು.

ರಾಜ್ಯದ ಗ್ಯಾರಂಟಿ ಯೋಜನೆಗಳು ಜನರ ಜೀವನದಲ್ಲಿ ದಿಕ್ಸೂಚಿಯಾಗಿವೆ. ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿ ಯೋಜನೆಗಳು- ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಮತ್ತು ಯುವನಿಧಿ- ಕರ್ನಾಟಕದ ಜನತೆಯ ಪಾಲಿಗೆ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣದ ದಾರಿದೀಪವಾಗಿವೆ. ಈ ಯೋಜನೆಗಳು ಕೇವಲ ಚುನಾವಣಾ ಭರವಸೆಗಳಾಗಿ ಉಳಿಯಲಿಲ್ಲ; ಅವುಗಳನ್ನು ಕಾರ್ಯ ರೂಪಕ್ಕೆ ತಂದು ಜನರ ಬದುಕಿಗೆ ಭದ್ರತೆಯನ್ನು ಒದಗಿಸಲಾಗಿದೆ.

ಇದನ್ನೂ ಓದಿ: B S Shivanna Column: ಪಂಚ ಗ್ಯಾರಂಟಿಗಳು ಮತ್ತು ಕರ್ನಾಟಕ ಸರಕಾರದ ಆರ್ಥಿಕತೆ

ಬಂಡವಾಳ ವೆಚ್ಚವನ್ನು ಸರಿದೂಗಿಸುವ ಜತೆಗೆ ಇಂಥ ಕಲ್ಯಾಣ ಕಾರ್ಯಕ್ರಮಗಳನ್ನು ಯಶಸ್ವಿ ಯಾಗಿಸುವುದು ಆಳುವ ಸರಕಾರಕ್ಕೆ ಸದಾ ಸವಾಲು. ಆದರೆ ಸಿದ್ದರಾಮಯ್ಯನವರು ತಮ್ಮ ಅನುಭವ ಮತ್ತು ಆಡಳಿತಾತ್ಮಕ ಚಾಕಚಕ್ಯತೆಯಿಂದ ಇವೆರಡನ್ನೂ ಸರಿದೂಗಿಸಿದ್ದಾರೆ.

ಗೃಹಲಕ್ಷ್ಮೀ: ಈ ಯೋಜನೆಯಡಿ, ರಾಜ್ಯದ ಲಕ್ಷಾಂತರ ಕುಟುಂಬಗಳ ಮನೆಯ ಯಜಮಾನಿ ಯರಿಗೆ ಪ್ರತಿ ತಿಂಗಳು 2000 ರು. ಆರ್ಥಿಕ ನೆರವು ಒದಗಿಸಲಾಗುತ್ತಿದೆ. ಈ ಯೋಜನೆಯಿಂದಾಗಿ ಮಹಿಳೆಯರು ತಮ್ಮ ಕುಟುಂಬದ ಮೂಲಭೂತ ಅಗತ್ಯಗಳನ್ನು ಪೂರೈಸುವುದರ ಜತೆಗೆ, ತಮ್ಮ ವೈಯಕ್ತಿಕ ಕನಸುಗಳಿಗೂ ಚಾಲನೆ ನೀಡಿದ್ದಾರೆ. ಗೃಹಲಕ್ಷ್ಮೀ ಯೋಜನೆಯು ಮಹಿಳಾ ಸಬಲೀಕ ರಣದೆಡೆಗಿನ ಒಂದು ದಿಟ್ಟಹೆಜ್ಜೆಯಾಗಿದೆ.

ಗೃಹಜ್ಯೋತಿ: ವಿದ್ಯುತ್ ಬಿಲ್‌ನ ಪಾವತಿಯಿಂದ ಕುಟುಂಬಗಳನ್ನು ಮುಕ್ತಗೊಳಿಸಿದ ಈ ಯೋಜನೆ ಯಡಿ, 200 ಯುನಿಟ್‌ವರೆಗೆ ಉಚಿತ ವಿದ್ಯುತ್ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಇದರಿಂದಾಗಿ ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಉಳಿತಾಯವಾಗಿದ್ದು, ಈ ಹಣವನ್ನು ಶಿಕ್ಷಣ, ಆರೋಗ್ಯ ಮತ್ತು ಇತರ ಅಗತ್ಯಗಳಿಗೆ ಬಳಸಲು ಸಾಧ್ಯವಾಗಿದೆ.

ಅನ್ನಭಾಗ್ಯ: ಹಸಿವುಮುಕ್ತ ಕರ್ನಾಟಕದ ಕನಸನ್ನು ನನಸಾಗಿಸುವ ಈ ಯೋಜನೆಯಡಿ, ಬಿಪಿಎಲ್ ಕಾರ್ಡುದಾರರಿಗೆ ಉಚಿತ ಅಕ್ಕಿ ವಿತರಣೆಯ ಜತೆಗೆ, ಹಣಕಾಸಿನ ನೆರವನ್ನೂ ಒದಗಿಸಲಾಗುತ್ತಿದೆ. ಈ ಯೋಜನೆಯಿಂದಾಗಿ ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಆಹಾರ ಭದ್ರತೆ ದಕ್ಕಿದಂತಾಗಿದೆ.

ಶಕ್ತಿ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಒದಗಿಸುವ ಈ ಯೋಜನೆಯು, ಗ್ರಾಮೀಣ ಮತ್ತು ನಗರ ಪ್ರದೇಶಗಳ ಮಹಿಳೆಯರಿಗೆ ಸ್ವಾವಲಂಬನೆಯ ದಾರಿಯನ್ನು ತೋರಿಸಿದೆ. ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯ ಸೇವೆಗಳಿಗೆ ಸುಲಭವಾಗಿ ತಲುಪಲು ಈ ಯೋಜನೆ ಸಹಕಾರಿ ಯಾಗಿದೆ.

ಯುವನಿಧಿ: ಯುವಜನರಿಗೆ ಆರ್ಥಿಕ ಸ್ವಾತಂತ್ರ್ಯ ಒದಗಿಸುವ ಈ ಯೋಜನೆಯಡಿ, ಪದವೀಧರರಿಗೆ ಮತ್ತು ಡಿಪ್ಲೊಮಾದಾರರಿಗೆ ತಿಂಗಳಿಗೆ ಕ್ರಮವಾಗಿ 3000 ರು. ಮತ್ತು 1500 ರು. ಭತ್ಯೆಯನ್ನು ಒದಗಿಸ ಲಾಗುತ್ತಿದೆ. ಇದರಿಂದಾಗಿ ಯುವಕರು ತಮ್ಮ ಕೌಶಲವನ್ನು ಅಭಿವೃದ್ಧಿಪಡಿಸಿಕೊಂಡು ಉದ್ಯೋಗಾ ವಕಾಶವನ್ನು ಸೃಷ್ಟಿಸಿಕೊಳ್ಳಲು ಸಾಧ್ಯವಾಗಿದೆ.

ಈ ಗ್ಯಾರಂಟಿ ಯೋಜನೆಗಳು ಕರ್ನಾಟಕದ ಜನರ ಬದುಕಿನಲ್ಲಿ ಆರ್ಥಿಕ ಸ್ಥಿರತೆಯನ್ನು ತಂದಿವೆ. ಸಿದ್ದರಾಮಯ್ಯ ಅವರು ತಮ್ಮ ಚುನಾವಣಾ ಭರವಸೆಗಳನ್ನು ಈಡೇರಿಸುವ ಮೂಲಕ, ‘ನುಡಿದಂತೆ ನಡೆದ ಸರಕಾರ’ ಎಂಬ ಘೋಷಣೆಗೆ ಸಾಕ್ಷಿಯಾಗಿದ್ದಾರೆ.

ಸಾಮಾಜಿಕ ನ್ಯಾಯ ಮತ್ತು ಕೋಮು ಸೌಹಾರ್ದ: ಸಿದ್ದರಾಮಯ್ಯ ಅವರ ಆಡಳಿತದ ಮತ್ತೊಂದು ಪ್ರಮುಖ ಸಾಧನೆಯೆಂದರೆ, ಸಾಮಾಜಿಕ ನ್ಯಾಯ ಮತ್ತು ಕೋಮು ಸೌಹಾರ್ದದ ಸಂರಕ್ಷಣೆ. ಕರ್ನಾಟಕವು ಎಲ್ಲ ಜಾತಿ, ಧರ್ಮ ಮತ್ತು ಸಮುದಾಯಗಳಿಗೆ ಸಮಾನ ಅವಕಾಶ ಗಳನ್ನು ಒದಗಿಸುವ ‘ಸರ್ವಜನಾಂಗದ ಶಾಂತಿಯ ತೋಟ’ವಾಗಿ ಮುಂದುವರಿದಿದೆ.

ವಿಶೇಷವಾಗಿ, ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮಾನ ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಸರಕಾರವು ಹಲವು ಕಾರ್ಯಕ್ರ ಮಗಳನ್ನು ಜಾರಿಗೊಳಿಸಿದೆ. ಕೋಮು ಸೌಹಾರ್ದವನ್ನು ಕಾಪಾಡಲು ಸರಕಾರವು ದಿಟ್ಟ ಕ್ರಮ ಗಳನ್ನು ಕೈಗೊಂಡಿದೆ. ಕೋಮುಗಲಭೆಗಳನ್ನು ತಡೆಗಟ್ಟಲು ಕಾನೂನು-ಸುವ್ಯವಸ್ಥೆಯನ್ನು ಬಲಪಡಿಸಿದ್ದು, ಎಲ್ಲ ಸಮುದಾಯಗಳ ನಡುವೆ ಶಾಂತಿ ಮತ್ತು ಸೌಹಾರ್ದವನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಯನ್ನು ಸಚಿವ ಸಂಪುಟದಲ್ಲಿ ಮಂಡಿಸಲಾಗಿದ್ದು, ಶೋಷಿತ ವರ್ಗಗಳ ದಶಕಗಳ ಕನಸಿಗೆ ಈ ಮೂಲಕ ಸಿದ್ದರಾಮಯ್ಯ ಬಲ ನೀಡಿದ್ದಾರೆ. ಅಷ್ಟೇ ಅಲ್ಲ, ದಲಿತ ಸಮುದಾಯದ ಮೀಸಲು ವರ್ಗೀಕರಣ ಸಮಸ್ಯೆಯ ಪರಿಹಾರಕ್ಕಾಗಿ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅಧ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗ ರಚನೆ ಮಾಡಲಾಗಿದ್ದು ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಇತ್ತೀಚೆಗಷ್ಟೇ ಕೇಂದ್ರ ಸರಕಾರವೂ ಜಾತಿಗಣತಿಯನ್ನು ಘೋಷಣೆ ಮಾಡಿದ್ದು, ಸಿದ್ದರಾಮಯ್ಯ ಮಾದರಿಯು ‘ರಾಷ್ಟ್ರಕ್ಕೇ ಮಾದರಿ’ ಎಂಬುದು ಮತ್ತೊಮ್ಮೆ ಸಾಬೀತಾ ದಂತಾಗಿದೆ.

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ: ಕರ್ನಾಟಕ ಸರಕಾರವು ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಯನ್ನು ಮಾಡಿದೆ. 2024ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 81.15ರಷ್ಟು ತೇರ್ಗಡೆ ಪ್ರಮಾಣ ದಾಖಲಾಗಿದ್ದು, ಈ ಬಾಬತ್ತಿನಲ್ಲಿ ಕಳೆದ ವರ್ಷಕ್ಕಿಂತ ಶೇ.7.89 ರಷ್ಟು ಹೆಚ್ಚಳವಾಗಿದೆ. ಇದರ ಜತೆಗೆ, ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಮೂಲಸೌಕರ್ಯಗಳನ್ನು ಸುಧಾರಿಸಲಾಗಿದೆ. ವಿಶೇಷ ಚೇತನರಿಗಾಗಿ ಮಾಸಿಕ ಭತ್ಯೆಯನ್ನು ಜಾರಿ ಗೊಳಿಸಿದ್ದು, ದೇಶದಲ್ಲೇ ಮೊದಲಿಗನಾಗಿ ಕರ್ನಾಟಕವು ಮಾದರಿಯಾಗಿದೆ.

ಅಷ್ಟೇ ಅಲ್ಲ, ಈ ಬಾರಿ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಶುಲ್ಕ ಹೆಚ್ಚಳಕ್ಕೆ ಖಾಸಗಿ ಸಂಸ್ಥೆಗಳಿಂದ ಎಷ್ಟೇ ಒತ್ತಡ ಬಂದರೂ ಮಣಿಯದಿರುವ ಮೂಲಕ ವಿದ್ಯಾರ್ಥಿಗಳು ಹಾಗೂ ಪೋಷಕರ ಹಿತಾಸಕ್ತಿಯ ರಕ್ಷಣೆ ಮಾಡಿರುವುದು ಸಿದ್ದರಾಮಯ್ಯ ಸರಕಾರದ ಜನಕೇಂದ್ರಿತ ಆಡಳಿತದ ಮತ್ತೊಂದು ಹೆಜ್ಜೆ. ಆರೋಗ್ಯ ಕ್ಷೇತ್ರದಲ್ಲಿ, ಸರಕಾರಿ ಆಸ್ಪತ್ರೆಗಳನ್ನು ಆಧುನೀಕರಿ ಸಲಾಗಿದ್ದು, ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತಿದೆ.

ಆರ್ಥಿಕ ಸ್ಥಿರತೆ ಮತ್ತು ಮೂಲಸೌಕರ್ಯ ಅಭಿವೃದ್ಧಿ: ಕಾಂಗ್ರೆಸ್ ಸರಕಾರವು ರಾಜ್ಯದ ಆರ್ಥಿಕ ಸ್ಥಿರತೆಗೆ ಒತ್ತುನೀಡಿದೆ. ಕೃಷಿ, ಕೈಗಾರಿಕೆ ಮತ್ತು ಐಟಿ ಕ್ಷೇತ್ರಗಳಿಗೆ ಉತ್ತೇಜನ ನೀಡುವ ಮೂಲಕ ರಾಜ್ಯದ ಜಿಡಿಪಿಯನ್ನು ಬಲಪಡಿಸಲಾಗಿದೆ. ರೈತರಿಗೆ ಸಾಲಮನ್ನಾ, ಕೃಷಿ ಸಬ್ಸಿಡಿಗಳು ಮತ್ತು ಆಧುನಿಕ ಕೃಷಿ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸಲಾಗಿದೆ. ಮೂಲಸೌಕರ್ಯ ಅಭಿವೃದ್ಧಿ ಯಲ್ಲಿ, ರಸ್ತೆಗಳು, ಸೇತುವೆಗಳು ಮತ್ತು ಸಾರ್ವಜನಿಕ ಸಾರಿಗೆಯ ಸುಧಾರಣೆಗೆ ಒತ್ತುನೀಡಲಾಗಿದೆ.

ಇದರ ಜತೆಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಅನುದಾನ, ಪೌರ ಕಾರ್ಮಿಕರ ವೇತನ ಪರಿಷ್ಕರಣೆ, ಪೋಡಿ ಮುಕ್ತ ಗ್ರಾಮ, ಖಾತಾ ಸಮಸ್ಯೆ ಪರಿಹಾರ, ಕಾವೇರಿ ನೀರು ಸಂಪರ್ಕ, ಕೇಂದ್ರ ಸರಕಾರದ ಅಸಹಕಾರದ ಮಧ್ಯೆಯೂ ನೀರಾವರಿ ಯೋಜನೆಗಳ ವಿಸ್ತರಣೆ, ಮೆಟ್ರೋ ಜಾಲ ಹೆಚ್ಚಳ ಇವು ಸಿದ್ದರಾಮಯ್ಯ ಸರಕಾರ ಕೈಗೊಂಡ ಅಭಿವೃದ್ಧಿಯ ಮೈಲುಗಲ್ಲುಗಳಾಗಿವೆ.

ಜನಪ್ರಿಯ ನಾಯಕತ್ವ: ಸಿದ್ದರಾಮಯ್ಯ ಅವರ ನಾಯಕತ್ವವು ಜನರಲ್ಲಿ ಭರವಸೆ ಮೂಡಿಸಿದೆ. ತಮ್ಮ ಸರಳತೆ, ಜನಸ್ನೇಹಿ ಧೋರಣೆ ಮತ್ತು ದಿಟ್ಟ ನಿರ್ಧಾರಗಳಿಂದ ಅವರು ಕರ್ನಾಟಕದ ಜನತೆಯ ಮನಸ್ಸಿನಲ್ಲಿ ಗಾಢವಾದ ಛಾಪನ್ನು ಒತ್ತಿದ್ದಾರೆ. ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಸಂಪುಟದ ಸಹೋ ದ್ಯೋಗಿಗಳ ಸಮನ್ವಯದ ಆಡಳಿತವು ಸರಕಾರದ ಕಾರ್ಯ ಕ್ಷಮತೆಯನ್ನು ಇನ್ನಷ್ಟು ಹೆಚ್ಚಿಸಿದೆ.

ಸಂಭ್ರಮದ ಕ್ಷಣ: ಮೇ 20ರಂದು ಹೊಸಪೇಟೆಯಲ್ಲಿ ಎರಡು ವರ್ಷದ ಗ್ಯಾರಂಟಿ ಸಂಭ್ರಮವನ್ನು ಆಚರಿಸಲು ಸಿದ್ದರಾಮಯ್ಯ ಅವರು ಜನತೆಗೆ ಆಹ್ವಾನವನ್ನು ನೀಡಿದ್ದಾರೆ. ಈ ಸಂಭ್ರಮವು ಕೇವಲ ಸರಕಾರದ ಸಾಧನೆಯ ಆಚರಣೆಯಷ್ಟೇ ಅಲ್ಲ, ಜನರ ಜತೆಗಿನ ಸರಕಾರದ ಬಾಂಧವ್ಯವನ್ನು ಗಟ್ಟಿಗೊಳಿಸುವ ಕ್ಷಣವೂ ಆಗಿದೆ. ಕಾಂಗ್ರೆಸ್ ಸರಕಾರವು ತನ್ನ ಜನಪರ ಯೋಜನೆಗಳ ಮೂಲಕ ಕರ್ನಾಟಕವನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸುತ್ತಿದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಎರಡು ವರ್ಷಗಳ ಆಡಳಿತವು ಕರ್ನಾಟಕದ ಜನತೆಗೆ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಭದ್ರತೆಯನ್ನು ಒದಗಿಸಿದೆ. ಗ್ಯಾರಂಟಿ ಯೋಜನೆ ಗಳು, ಸಾಮಾಜಿಕ ನ್ಯಾಯ, ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಮೂಲಕ ಸರಕಾರವು ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತಂದಿದೆ.

“ಕರ್ನಾಟಕವೇ ನನ್ನ ಕರ್ಮಭೂಮಿ, ಕನ್ನಡವೇ ನನ್ನ ಉಸಿರು" ಎಂದು ಹೇಳುವ ಸಿದ್ದರಾಮಯ್ಯ ಅವರ ಧ್ಯೇಯವು ರಾಜ್ಯವನ್ನು ಸಮೃದ್ಧಿಯ ಹಾದಿಯಲ್ಲಿ ಕೊಂಡೊಯ್ಯುತ್ತಿದೆ. ಈ ಎರಡು ವರ್ಷ ಗಳ ಸಾಧನೆಯು ಕರ್ನಾಟಕದ ಜನತೆಗೆ ಹೆಮ್ಮೆಯ ಕ್ಷಣವಾಗಿದ್ದು, ಭವಿಷ್ಯದಲ್ಲಿ ಇನ್ನಷ್ಟು ಅಭಿವೃದ್ಧಿಯ ಭರವಸೆಯನ್ನು ಮೂಡಿಸಿದೆ.

(ಲೇಖಕರು ರಾಮಮನೋಹರ್ ಲೋಹಿಯಾ

ವಿಚಾರ ವೇದಿಕೆಯ ಅಧ್ಯಕ್ಷರು)