Clean water for University Tress: ವಿವಿ ಮರಗಳಿಗಿನ್ನು ಶುದ್ಧೀಕರಿಸಿದ ನೀರು !
ಬೆಂಗಳೂರು ವಿವಿಯ ಹಲವು ಭಾಗದಲ್ಲಿ ಹರಿದು ಹೋಗುವ ವೃಷಭಾವತಿ ನೀರನ್ನು ಸಂಸ್ಕ ರಿಸಿ, ಬಳಿಕ ನೈಸರ್ಗಿಕವಾಗಿ 2ನೇ ಹಂತದಲ್ಲಿ ಸಂಸ್ಕರಿಸಿದ ಬಳಿಕ ಅದನ್ನು ಬೆಂಗಳೂರು ವಿಶ್ವ ವಿದ್ಯಾಲಯದ ಗಿಡ-ಮರಗಳಿಗೆ ನೀರುಣಿಸಲು ತೀರ್ಮಾನಿಸಲಾಗಿದೆ
Source : Senior Reporter
ಅಪರ್ಣಾ. ಎ.ಎಸ್ ಬೆಂಗಳೂರು
ವೃಷಭಾವತಿ, ಬೆಂಗಳೂರು ವಿವಿ ತ್ಯಾಜ್ಯ ನೀರಿನ ಸಂಸ್ಕರಣೆಗೆ ಸಿದ್ಧತೆ
ಸಾವಿರಾರು ಮರಗಳಿರುವ
ವಿವಿಯ ಬಯೋಪಾರ್ಕ್‌ಗೆ ನೀರು
ಈ ಸಂಬಂಧ ಜಲಮಂಡಳಿ ಹಾಗೂ ಬಿಬಿಎಂಪಿಗೆ ಪ್ರಸ್ತಾವನೆ ಸಲ್ಲಿಕೆ
ಸರಿ ಸುಮಾರು 900 ಎಕರೆ ವ್ಯಾಪ್ತಿಯಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯದ ಹಸಿರನ್ನು ಉಳಿಸಲು ಹಾಗೂ ಸಸ್ಯ, ಪ್ರಾಣಿ ಸಂಪತನ್ನು ಬೆಳೆಸುವ ನಿಟ್ಟಿನಲ್ಲಿ ಮತ್ತೊಂದು ಚಿಂತನೆ ಯನ್ನು ವಿಶ್ವವಿದ್ಯಾಲಯ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಕೆಲ ತಿಂಗಳ ಹಿಂದೆ ಕಲುಷಿತ ವೃಷಭಾವತಿ ನದಿಯ ಸಂಸ್ಕರಿಸುವ ಯೋಜನೆ ಸಿದ್ಧ ಪಡಿಸಿದ್ದ ವಿವಿ ಇದೀಗ, ಈ ಸಂಸ್ಕರಿಸಿದ ನೀರನ್ನು ಬೆಂಗಳೂರು ವಿಶ್ವವಿದ್ಯಾಲಯದ ಮರ, ಗಿಡಗಳಿಗೆ ಬಳಸಿಕೊಳ್ಳುವ ಚಿಂತನೆ ನಡೆಸಿದೆ.
ಬೆಂಗಳೂರು ವಿವಿಯ ಹಲವು ಭಾಗದಲ್ಲಿ ಹರಿದು ಹೋಗುವ ವೃಷಭಾವತಿ ನೀರನ್ನು ಸಂಸ್ಕರಿಸಿ, ಬಳಿಕ ನೈಸರ್ಗಿಕವಾಗಿ 2ನೇ ಹಂತದಲ್ಲಿ ಸಂಸ್ಕರಿಸಿದ ಬಳಿಕ ಅದನ್ನು ಬೆಂಗ ಳೂರು ವಿಶ್ವವಿದ್ಯಾಲಯದ ಗಿಡ-ಮರಗಳಿಗೆ ನೀರುಣಿಸಲು ತೀರ್ಮಾನಿಸಲಾಗಿದೆ. ಕೇವಲ ವೃಷಭಾವತಿ ಮಾತ್ರವಲ್ಲದೇ, ವಿವಿಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯ ನೀರನ್ನು ಸಂಸ್ಕ ರಿಸಲು ತೀರ್ಮಾನಿಸಲಾಗಿದೆ. ಈ ಯೋಜನೆ ಯಶಸ್ವಿಯಾದರೂ ಕೂಡಾ ವೃಷಭಾ ವತಿಯ ನೀರನ್ನು ಕುಡಿಯಲು ಬಳಸಲಾಗುವುದಿಲ್ಲ. ಈ ನೀರನ್ನು ಕ್ಯಾಂಪಸ್‌ನಲ್ಲಿರುವ ಬಯೋ ಪಾರ್ಕ್‌ಗೆ ಬಳಸಲಾಗುವುದು.
ಇದರಿಂದ ವಿವಿಯಲ್ಲಿ ಹಸಿರಿನ ಪ್ರಮಾಣವು ಹೆಚ್ಚಳವಾಗಲಿದೆ. ಬದಲಾಗಿ ಗಿಡಗಳಿಗೆ, ಶೌಚಾಲಯ ಸೇರಿದಂತೆ ಬಾಹ್ಯ ಬಳಕೆಗಾಗಿ ಉಪಯೋಗಿಸಲಾಗುವುದು ಎಂದು ಅಧಿಕಾರಿ ಗಳು ತಿಳಿಸಿದ್ದಾರೆ.
ಜಲಮಂಡಳಿ ಹಾಗೂ ಬಿಬಿಎಂಪಿಗೆ ಪ್ರಸ್ತಾವನೆ: ಇನ್ನು ಸಂಸ್ಕರಣೆಗೆ ಸಂಬಂಧಿಸಿದಂತೆ ಈಗಾಗಲೇ ವಿಶ್ವವಿದ್ಯಾಲಯದ ವತಿಯಿಂದ ಬಿಬಿಎಂಪಿ ಆಯುಕ್ತರು ಹಾಗೂ ಜಲ ಮಂಡಳಿಯ ಅಧ್ಯಕ್ಷರಿಗೆ ಚೆಕ್‌ಡ್ಯಾಮ್‌ನಲ್ಲಿ ನೀರಿನ ಸಂಸ್ಕರಣೆ ಹಾಗೂ ಶುದ್ಧೀಕರಣದ ಯೋಜನೆಗೆ ಅನುಮತಿ ನೀಡುವಂತೆ ಹಾಗೂ ಬೆಂಗಳೂರು ವಿವಿ ಜತೆಗೆ ಕೈಜೋಡಿಸಿ ಈ ಯೋಜನೆಗೆ ಸಹಕಾರ ನೀಡಲು ತಂತ್ರಜ್ಞರ ಸಹಕಾರವನ್ನು ನೀಡುವಂತೆ ಪತ್ರ ಬರೆದು ಮನವಿ ಮಾಡಲಾಗಿದ್ದು, ಪ್ರತಿಕ್ರಿಯೆಗೆ ಕಾಯಲಾಗುತ್ತಿದೆ. ಅವರಿಂದ ಪ್ರತಿಕ್ರಿಯೆಗಾಗಿ ಸಲಹೆಗಾಗಿ ಕಾಯುತ್ತಿದ್ದೇವೆ.
ಸಭೆ ನಡೆಸಿ ಕರೆದು ಎಂಪ್ರಿ, ಆರ್ಟ್ ಆಫ್ ಲಿವಿಂಗ್ ಹಾಗೂ ಬೆಂಗಳೂರು ವಿವಿ ಒಟ್ಟಾಗಿ ಜಲಮಂಡಳಿ ಹಾಗೂ ಬಿಬಿಎಂಪಿ ಅಧಿಕಾರಿಗಳ ಜತೆಗೆ ಈ ಯೋಜನೆಯ ಕುರಿತು ವಿವರ ವಾಗಿ ಚರ್ಚಿಸಿ ತರಬೇತಿ ಕಾರ್ಯಾಗಾರವನ್ನು ನಡೆಸಲು ಚಿಂತನೆ ನಡೆಸಿದ್ದೇವೆ. ವಿವಿ ಯಿಂದ ಯಾವುದೇ ಹಣಕಾಸಿನ ವ್ಯವಸ್ಥೆ ಬಳಸಿಕೊಳ್ಳ ಲಾಗುವುದಿಲ್ಲ. ಆರ್ಟ್ ಆಫ್ ಲಿವಿಂಗ್‌ನವರು ಸಹಾಯ ಹಸ್ತ ನೀಡುವ ಕುರಿತು ಹೇಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೈಸರ್ಗಿಕವಾಗಿಯೇ ಸ್ವಚ್ಛಗೊಳಿಸುವ ಪ್ರಯತ್ನ
ಜ್ಞಾನ ಭಾರತಿ ಕ್ಯಾಂಪಸ್‌ನಲ್ಲಿ ವಿವಿಧ ಹಂತಗಳಲ್ಲಿ ನದಿ ನೀರನ್ನು ಸ್ವಚ್ಛಗೊಳಿಸಲು ಮುಂದಾಗಿದ್ದು, ಮೊದಲ ಹಂತದಲ್ಲಿ ಮೆಷ್ ನೆಟ್‌ಗಳನ್ನು ಬಳಸಿಕೊಂಡು ಘನತ್ಯಾಜ್ಯ ಗಳನ್ನು ತೆಗೆಯಲಾಗುವುದು, ಬಳಿಕ ಈ ನೀರನ್ನು ಸಣ್ಣ ಸಣ್ಣ ತಡೆಗೋಡೆಗಳ ಮಾದರಿ ಯನ್ನು ನಿರ್ಮಿಸಿದರೆ ಸಣ್ಣ ಪ್ರಮಾಣದಲ್ಲಿ ನೀರನ್ನು ಶುದ್ಧವಾಗುವುದು, ಕಲ್ಲು, ಮರಳು ಗಳನ್ನು ಬಳಸಿಕೊಂಡು ಸ್ವಚ್ಛತೆಗೆ ಕೈಗೊಳ್ಳಲಾಗುವುದು. ಈ ವ್ಯವಸ್ಥೆಯ ಮೂಲಕ ನೀರನ್ನು ಸ್ವಚ್ಛಗೊಳಿಸಲಾಗುವುದು ಈ ಕುರಿತಂತೆ ಹಲವು ವಿಧಾನಗಳನ್ನು ಸಿದ್ಧಗೊಳಿಸ ಲಾಗುತ್ತಿದ್ದು, ಖರ್ಚು ವೆಚ್ಚಗಳ ಮೂಲದ ಕುರಿತು ಚಿಂತನೆ ನಡೆಸಲಾಗುತ್ತಿದೆ.
ಯಾವುದೇ ಚೆಕ್ ಡ್ಯಾಮ್‌ಗಳನ್ನು ನಿರ್ಮಿಸುವುದಕ್ಕಿಂತ ನಿರ್ವಹಣೆ ಮುಖ್ಯವಾಗುತ್ತದೆ. ನಿರ್ವಹಣೆ ಮಾಡದಿದ್ದರೆ, ನಿರ್ಮಿಸಿದ ಐದು ಹತ್ತು ವರ್ಷದಲ್ಲಿ ಹೂಳು ತುಂಬಿ, ಚೆಕ್ ಡ್ಯಾಮ್‌ಗಳು ಸಮತಟ್ಟಾಗುವ ಸಾಧ್ಯತೆಯಿರುತ್ತದೆ. ಈ ನಿಟ್ಟಿನಲ್ಲಿ ಜಲಮಂಡಳಿ ಹಾಗೂ ಬಿಬಿಎಂಪಿಯೊಂದಿಗೆ ಚರ್ಚಿಸಿ ಕ್ರಮವಹಿಸಲಾಗುವುದು.
-ಪ್ರೊ.ಅಶೋಕ್ ಡಿ.ಹಂಜರಗಿ
ಡೀನ್, ವಿಜ್ಞಾನ ವಿಭಾಗ, ಬೆಂಗಳೂರು ವಿವಿ, ನಿರ್ದೇಶಕರು ಪಿಎಂಇಬಿ
ಇದನ್ನೂ ಓದಿ: Mallappa C Khodnapur Column: ಮೋಬೈಲ್ ಗೀಳು- ಆಗದಿರಲಿ ಗೋಳು