ಕಸಸಂಗ್ರಹ ವಾಹನಗಳಿಗೆ ಮುಕ್ತಿ ನೀಡದ ನಗರಾಡಳಿತದ ಕ್ರಮಕ್ಕೆ ಸಾರ್ವಜನಿಕರ ಆಕ್ರೋಶ
ನಗರದಲ್ಲಿ ಸಂಗ್ರಹವಾಗುವ ಹಸಿಕಸ ಒಣ ಕಸವನ್ನು ನಿತ್ಯವೂ ಹೊತ್ತೊಯ್ದು ವೈಜ್ಞಾನಿಕ ರೀತಿಯಲ್ಲಿ ವಿಲೇ ಮಾಡಿ ನಗರವಾಸಿಗಳ ಆರೋಗ್ಯ ಕಾಪಾಡಲೆಂಬ ಸದುದ್ದೇಶದಿಂದ ಸಾಮಾನ್ಯ ಸಭೆಯ ನಿರ್ಣಯ ದಂತೆ ೯೦ ಲಕ್ಷಕ್ಕೂ ಅಧಿಕ ಹಣದಲ್ಲಿ ಖರೀದಿಸಿರುವ ೧೧ ವಾಹನಗಳು ಕಳೆದೊಂದು ತಿಂಗಳಿಂದ ನಗರಸಭೆ ಆವರಣದಲ್ಲಿ ನಿಂತಲ್ಲೇ ನಿಂತು ತುಕ್ಕುಹಿಡಿಯುತ್ತಿವೆ.

ನಗರಸಭೆ ಆವರಣದಲ್ಲಿ ಧೂಳು ತಿನ್ನುತ್ತಾ ನಿಂತಿರುವ ಹೊಚ್ಚಹೊಸ ಕಸವಿಲೇವಾರಿ ವಾಹನಗಳ ಚಿತ್ರ. -

ಮುನಿರಾಜು ಎಂ ಅರಿಕೆರೆ
ಚಾಲಕರ ನೇಮಕಾತಿಯಿಲ್ಲದೆ ನಿಂತಲ್ಲೇ ನಿಂತು ದೂಳುಹಿಡಿಯುತ್ತಿರುವ ಹೊಸ ವಾಹನಗಳು
ಚಿಕ್ಕಬಳ್ಳಾಪುರ ಸಾರ್ವಜನಿಕರ ತೆರಿಗೆಯ ಹಣಬಳಸಿ ಇಲ್ಲಿನ ಸ್ಥಳಿಯ ನಗರಾಡಳಿತ ೯೬ ಲಕ್ಷದಲ್ಲಿ ಖರೀದಿಸಿರುವ ೧೧ ಕಸವಿಲೇವಾರಿಯ ನೂತನ ವಾಹನಗಳು ಚಾಲಕರ ನೇಮಕಾತಿ ನೆಪದಲ್ಲಿ ನಿಂತಲ್ಲೇ ನಿಂದು ದೂಳುತಿನ್ನುತ್ತಿರುವುದು ನಗರಸಭೆಯ ನಿರ್ಲಕ್ಷ್ಯಕ್ಕಿಡಿದ ಕನ್ನಡಿಯಂತಿಂದೆ.
ಹೌದು ಚಿಕ್ಕಬಳ್ಳಾಪುರ ನಗರಸಭೆ ಒಂದಿಲ್ಲೊಂದು ಸಂಗತಿಗಳಿಗೆ ಸದಾ ಸುದ್ದಿಯಲ್ಲಿರುತ್ತದೆ. ಇಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರೇ ಹೆಚ್ಚಿದ್ದರೂ ಕಡಿಮೆ ಸಂಖ್ಯೆಯ ಬಿಜೆಪಿ ಪಕ್ಷವು ಅಧಿಕಾರದಲ್ಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‌ನ ಹಲವು ಸದಸ್ಯರು ಪಕ್ಷಾಂತರ ಮಾಡಿ ಆಡಳಿತ ಪಕ್ಷದ ಜೆತೆಗೆ ಕೈಜೋಡಿಸಿದ್ದರೂ ಶಿಕ್ಷೆಯಿಂದ ಪಾರಾಗಿದ್ದಾರೆ.
ಈಗಿರುವ ನಗರಸಭೆ ಆಡಳಿತಾವಧಿ ಮುಗಿಯವ ಕೆಲವೇ ತಿಂಗಳಲ್ಲಿ ಸ್ಥಾಯಿಸಮಿತಿ ಅಧ್ಯಕ್ಷರ ನೇಮಕಾತಿ ನಡೆದಿದೆ. ಗಂಗಮ್ಮನಗುಡಿ, ಬಜಾರ್‌ರಸ್ತೆಗಳ ಅಗಲೀಕರಣ ಸಂಬಂಧ ಹಲವಾರು ಬಾರಿ ಮಾರ್ಕಿಂಗ್ ಮಾಡಿದರೂ ವಿಸ್ತರಣೆ ಮಾತ್ರ ಶೂನ್ಯ,ಹೀಗೆ ಹತ್ತು ಹಲವು ಕಾರಣಗಳಿಗಾಗಿ ನಗರಾ ಡಳಿತ ಸುದ್ದಿಯಲ್ಲಿರುವಂತೆ ಈ ಬಾರಿ ಕಸವಿಲೇವಾರಿ ವಾಹನಗಳ ವಿಚಾರದಲ್ಲಿ ಸುದ್ದಿಯಾಗುತ್ತಿದೆ.
ಏನಿದು ವಾಹನ ಸಮಸ್ಯೆ??
ನಗರದಲ್ಲಿ ಸಂಗ್ರಹವಾಗುವ ಹಸಿಕಸ ಒಣ ಕಸವನ್ನು ನಿತ್ಯವೂ ಹೊತ್ತೊಯ್ದು ವೈಜ್ಞಾನಿಕ ರೀತಿಯಲ್ಲಿ ವಿಲೇ ಮಾಡಿ ನಗರವಾಸಿಗಳ ಆರೋಗ್ಯ ಕಾಪಾಡಲೆಂಬ ಸದುದ್ದೇಶದಿಂದ ಸಾಮಾನ್ಯ ಸಭೆಯ ನಿರ್ಣಯದಂತೆ ೯೦ ಲಕ್ಷಕ್ಕೂ ಅಧಿಕ ಹಣದಲ್ಲಿ ಖರೀದಿಸಿರುವ ೧೧ ವಾಹನಗಳು ಕಳೆದೊಂದು ತಿಂಗಳಿAದ ನಗರಸಭೆ ಆವರಣದಲ್ಲಿ ನಿಂತಲ್ಲೇ ನಿಂತು ತುಕ್ಕುಹಿಡಿಯುತ್ತಿವೆ.ಕಾರಣ ಚಾಲಕರ ನೇಮಕಾತಿ ಆಗಿಲ್ಲ ಎನ್ನುವುದೇ ಆಗಿದೆ.ವಾಹನ ತಂದಷ್ಟೇ ವೇಗವಾಗಿ ಚಾಲಕರ ನೇಮಕಾತಿ ಆಗಿದ್ದಿದ್ದರೆ ಇವುಗಳು ಬಿಸಿಲು ಗಾಳಿಮಳೆಯೆನ್ನದೆ ನಿಂತಲ್ಲೇ ನಿಂತು ತುಕ್ಕು ಹಿಡಿಯುವಂತಾಗುತ್ತಿರಲಿಲ್ಲ ಎನ್ನುವುದು ಸಾರ್ವಜನಿಕರ ಮಾತಾಗಿದೆ.
*
ನಗರದಲ್ಲಿ ಪ್ರತಿನಿತ್ಯ ೩೦ ಟನ್ ಕಸ ಸಂಗ್ರಹವಾಗುತ್ತಿದೆ.ಇದನ್ನು ಡೋರ್ ಟು ಡೋರ್ ಸಂಗ್ರಹಿಸಿ ನಗರ ಹೊರವಲಯದಲ್ಲಿರುವ ಪುಟ್ಟತಿಮ್ಮನಹಳ್ಳಿ ಘಟಕಕ್ಕೆ ಸಾಗಿಸಲಾಗುತ್ತಿದೆ.ಈ ನಗರದಲ್ಲಿ ಜನಸಂಖ್ಯೆ ಹೆಚ್ಚದಂತೆ ಕಸದ ಸಮಸ್ಯೆ ವಿಪರೀತ ಹೆಚ್ಚಾಗುತ್ತಿದೆ.ಇದನ್ನು ನಿವಾರಿಸಲು ಈಗಿರುವ ೧೨ ವಾಹನಗಳ ಜತೆಗೆ ಹೊಸದಾಗಿ ೧೧ ವಾಹನಗಳ ಖರೀದಿಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಒಪ್ಪಿಗೆ ಪಡೆಯಲಾಗಿದೆ.ಅದರಂತೆ ಟಾಟಾ ಮೋಟಾರ್ಸ್ನಿಂದಿಲೇ ನೇತವಾಗಿ ಎಸ್‌ಆರ್ ಧರದಂತೆ ಸುಮಾರು ೯೬ ಲಕ್ಷದ ವೆಚ್ಚದಲ್ಲಿ ೧೧ ಕಸವನ್ನು ತುಂಬುವ ವಾಹನಗಳನ್ನು ಸರಕಾರಿ ನಿಯಮಾ ವಳಿಯಂತೆ ಖರೀದಿ ಮಾಡಿದ್ದೇವೆ.ಇವುಗಳನ್ನು ನಗರಸಭೆ ಆವರಣದಲ್ಲಿಯೇ ನಿಲ್ಲಿಸಲಾಗಿದೆ. ವಾಹನ ಚಾಲಕರ ಆಯ್ಕೆಗಾಗಿ ಜಿಲ್ಲಾಧಿಕಾರಿಗಳಿಗೆ ಫೈಲ್ ಕಳಿಸಲಾಗಿದೆ. ಅಲ್ಲಿ ಅನುಮೋದನೆ ದೊರೆತ ಕೂಡಲೇ ವಾಹನಗಳನ್ನು ಕಸಸಂಗಹಕ್ಕೆ ನಿಯೋಜನೆ ಮಾಡಲಾಗುತ್ತದೆ ಎನ್ನುವುದು ನಗರಸಭೆ ಅಧ್ಯಕ್ಷ ಎ ಗಜೇಂದ್ರ ಅವರ ಮಾತಾಗಿದೆ.
ಡೀಸೆಲ್ ಗಾಡಿಗಳನ್ನು ಖರೀದಿಸಿ ಹೀಗೆ ನಿಂತಲ್ಲೇ ನಿಲ್ಲುವಂತೆ ಮಾಡಿದರೆ ಅವುಗಳ ಬಾಳಿಕೆ ಮತ್ತು ಕಾರ್ಯನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬುದು ನಗರಾಡಳಿತಕ್ಕೆ ತಿಳಿಯದ ವಿಚಾರವೇನಲ್ಲ.ನಗರಸಭೆಗೆ ಬರುವ ನಾಗರೀಕರು ನಿಂತಲ್ಲೇ ನಿಂತಿರುವ ಗಾಡಿಗಳನ್ನು ನೋಡಿಕೊಂಡು ಹೋಗುವಾಗಲೆಲ್ಲಾ ಯಾಕೆ ಇವುಗಳನ್ನು ಬಳಸದೆ ದೂಳು ತಿನ್ನುವಂತೆ ಮಾಡಿದ್ದಾರಲ್ಲಾ ಎಂದು ಮಾತಾಡಿಕೊಡು ಹೋಗುವಂತೆ ಆಗಿರುವುದು ಸುಳ್ಳಲ್ಲ.
ಚಾಲಕರ ಕೊರತೆಯನ್ನು ನೀಗಿಸಲು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದು ಅವರಿಂದ ಅನುಮೋದನೆ ಸಿಕ್ಕಿ ಕೂಡಲೇ ಚಾಲಕರ ಟೆಂಡರ್ ಕರೆಯುವುದಾಗಿ ತಿಳಿಸಿದ ನಗರಸಭೆ ಅಧ್ಯಕ್ಷರು ಹೇಳಿದ್ದರೂ ಈ ಪ್ರಕ್ರಿಯೆ ಇನ್ನೂ ನಡೆದೇ ಇಲ್ಲ ಎಂಬುದು ಹೆಸರು ಹೇಳಲು ಇಚ್ಚಿಸದ ಸಿಬ್ಬಂದಿಗಳ ಮಾತಾಗಿದೆ.
ವಿಚಾರ ಏನೇ ಇರಲಿ ಸಾರ್ವಜನಿಕರ ತೆರಿಗೆ ಹಣದಲ್ಲಿ ಖರೀದಿಸಿರುವ ನೂತನ ವಾಹನಗಳನ್ನು ತಿಂಗಳಾನುಗಟ್ಟಲೆ ನಗರಸಭೆ ಆವರಣದಲ್ಲಿ ಯಾವುದೇ ಸುರಕ್ಷೆಯಿಲ್ಲದೆ ನಿಲ್ಲಿಸಿರುವುದು, ತಂದಿ ರುವ ಹೊಸ ವಾಹನಗಳ ಮೇಲೆ ಕನಿಷ್ಟ ಹೊದಿಕೆ ಹಾಕದೆ ಹಾಗೆ ಬಿಟ್ಟಿರುವುದು ಸರಿಯಲ್ಲ. ಗಾಳಿ ಮಳೆಗೆ, ಧೂಳು ತಿನ್ನುತ್ತಾ ಬಿದ್ದಿರುವುದು ನೋಡಿದರೆ ನಿಂತಲ್ಲೆ ತುಕ್ಕುಹಿಡಿಸುವರೋ ಎಂಬ ಆತಂಕ ಕಾಡುತ್ತದೆ.
ಆದಷ್ಟು ಶೀಘ್ರವೇ ನಗರಾಡಳಿತ ನಿಂತಲ್ಲೇ ನಿಂತಿರುವ ವಾಹನಗಳಿಗೆ ಮುಕ್ತಿ ನೀಡಿ ಕಸವಿಲೇವಾರಿಗೆ ಬಳಸಿಕೊಳ್ಳುವುದೋ ಇಲ್ಲವೋ ಕಾದು ನೋಡಬೇಕಿದೆ.