ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವರುಣನ ಕಾಟಕ್ಕೆ ಪಟಾಕಿ ಮಾರಾಟ ಠುಸ್‌ !

ಪ್ರತಿ ಬಾರಿಯೂ ನೂರಾರು ಅಂಗಡಿಗಳು ನಾಯಿ ಕೊಡೆಗಳಂತೆ ತೆರೆದು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸದೆ ಪಟಾಕಿ ಮಾರಾಟ ಭರಾಟೆ ಜೋರಾಗಿ ನಡೆಯುತ್ತಿತ್ತು. ಈ ಬಾರಿ ಜಿಲ್ಲಾಡಳಿತ ಎಲ್ಲಾ ಸ್ಥಳೀಯ ಸಂಸ್ಥೆಗಳ ಕಣ್ಗಾವಲಿನಡಿ ನಿಯಮಗಳನ್ನು ಪಾಲಿಸಿರುವುದನ್ನು ಖಚಿತ ಪಡಿಸಿಕೊಂಡಿದೆ. ಬೆರಳೆಣಿಕೆ ಯಷ್ಟು ಪಟಾಕಿ ಅಂಗಡಿಗಳಿಗೆ(27) ಮಾತ್ರ ಅಧಿಕೃತ ಮಾರಾಟ ಪರವಾನಗಿ ನೀಡಿ ವ್ಯಾಪಾರ ಮಾಡಲು ಅವಕಾಶ ನೀಡಿದೆ.

ಆನೇಕಲ್ ರವಿ ಬೆಂಗಳೂರು

ಹೂಡಿದ ಬಂಡವಾಳಕ್ಕೆ ಸಿಗದ ನಿರೀಕ್ಷಿತ ಲಾಭ

ಪಟಾಕಿ ವ್ಯಾಪಾರಿಗಳು ಕಂಗಾಲು

ಆನೇಕಲ್ ತಾಲೂಕಿನ ಗಡಿ ಭಾಗ ಅತ್ತಿಬೆಲೆ ರಾಜ್ಯದ ಅತಿ ಹೆಚ್ಚು ಪಟಾಕಿ ಮಾರಾಟಕ್ಕೆ ಹೆಸರುವಾಸಿ ಯಾದ ವ್ಯಾಪಾರಿ ಕೇಂದ್ರ. ತಮಿಳುನಾಡಿನಿಂದ ತಯಾರಾಗಿ ಬರುವ ಪಟಾಕಿಗಳು ವಿವಿಧ ಬ್ರಾಂಡ್‌ ಗಳ ಲೇಬಲ್‌ನಲ್ಲಿ ಪ್ಯಾಕ್ ಆಗಿ ನೂರಾರು ಟನ್‌ಗಳು ಮಾರಾಟವಾಗುತ್ತಿದೆ. ಆದರೆ ಪಟಾಕಿ ಮೇಲೆ ವ್ಯಾಪಾರಿಗಳು ಹಾಕಿದ ಬಂಡವಾಳವೇ ವಾಪಸಾಗಿಲ್ಲವಂತೆ!

ಕೋಟ್ಯಂತರ ರು.ಗಳ ವಹಿವಾಟು ಕೆಲವೇ ದಿನಗಳಲ್ಲಿ ನಡೆದು ರಾಜ್ಯದ ಬೊಕ್ಕಸಕ್ಕೆ ಅಲ್ಪ ಪ್ರಮಾಣದ ತೆರಿಗೆ ಆದಾಯವನ್ನೂ ತಂದು ಕೊಡುತ್ತದೆ. ಆದರೆ ಈ ಬಾರಿ ದೀಪಾವಳಿ ಝಡಿ ಮಳೆ ೮ ದಿನ ಮೊದಲೇ ಪ್ರಾರಂಭವಾಗಿ ರಾತ್ರಿಯಿಡಿ, ಕೆಲಬಾರಿ ದಿನವಿಡೀ ಸುರಿದು ರಸ್ತೆ ಕೆಸರು ಮಯವಾಗಿ ಗ್ರಾಹಕರಿಗೆ ತೊಂದರೆಯಾಯಿತು.

ಪ್ರತಿ ಬಾರಿಯೂ ನೂರಾರು ಅಂಗಡಿಗಳು ನಾಯಿ ಕೊಡೆಗಳಂತೆ ತೆರೆದು ಮುನ್ನೆಚ್ಚರಿಕೆ ಕ್ರಮ ಗಳನ್ನು ವಹಿಸದೆ ಪಟಾಕಿ ಮಾರಾಟ ಭರಾಟೆ ಜೋರಾಗಿ ನಡೆಯುತ್ತಿತ್ತು. ಈ ಬಾರಿ ಜಿಲ್ಲಾಡಳಿತ ಎಲ್ಲಾ ಸ್ಥಳೀಯ ಸಂಸ್ಥೆಗಳ ಕಣ್ಗಾವಲಿನಡಿ ನಿಯಮಗಳನ್ನು ಪಾಲಿಸಿರುವುದನ್ನು ಖಚಿತ ಪಡಿಸಿಕೊಂಡಿದೆ. ಬೆರಳೆಣಿಕೆಯಷ್ಟು ಪಟಾಕಿ ಅಂಗಡಿಗಳಿಗೆ(27) ಮಾತ್ರ ಅಧಿಕೃತ ಮಾರಾಟ ಪರವಾನಗಿ ನೀಡಿ ವ್ಯಾಪಾರ ಮಾಡಲು ಅವಕಾಶ ನೀಡಿದೆ.

ಇದನ್ನೂ ಓದಿ: Vishweshwar Bhat Column: ಹಳೆ ವಿಮಾನವನ್ನು ಬಳಸುವುದೇಕೆ ?

ನಷ್ಟವಿಲ್ಲ ಲಾಭ ಕಡಿಮೆ: ಬಹುತೇಕ ಅಂಗಡಿ ಮಾಲೀಕರು ತಮ್ಮಲ್ಲಿರುವ ದಾಸ್ತಾನು ಖಾಲಿ ಆಗಲಿಲ್ಲ. ಹೂಡಿದ ಬಂಡವಾಳಕ್ಕೆ ನಿರೀಕ್ಷಿತ ಲಾಭ ಸಿಗಲಿಲ್ಲ ಎಂದರೆ ಕೆಲವರು ಅಸಲು ನೋಡು ವುದೇ ಕಷ್ಟ. ದಿನವಿಡೀ ಸುರಿದ ಮಳೆಯ ಕಾರಣ ಹೆಚ್ಚಿನ ಗ್ರಾಹಕರು ಅಂಗಡಿಯತ್ತ ಸುಳಿಯಲಿಲ್ಲ.

ಮೂರು, ನಾಲ್ಕು ಚಕ್ರ ವಾಹನದಲ್ಲಿ ಬಂದವರು ಒಂದಷ್ಟುಕೊಂಡರೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದವರ ಸಂಖ್ಯೆ ಮಳೆ ಕಾರಣ ಬಹಳ ಕಡಿಮೆ ಇತ್ತು ಎಂದು ಅಲವತ್ತುಕೊಂಡರು.

ಸ್ಥಳೀಯ ಮುಖಂಡ, ಸಗಟು ಹಾಗೂ ಚಿಲ್ಲರೆ ಪಟಾಕಿ ಮಾರಾಟಗಾರ ರಾಮಸ್ವಾಮಿ ಮಾತನಾಡಿ, ಸತತ ೨ ತಿಂಗಳ ಮೊದಲಿನಿಂದಲೂ ಓಡಾಟ ಮಾಡಿ ನಾಲ್ಕರು ಕಚೇರಿಗಳನ್ನು ಸುತ್ತಿ ಎನ್‌ಒಸಿ ಪಡೆದು ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ವಹಿಸಿ ಸೇಲ್ಸ ಬಾಯ್‌ಗಳನ್ನು ನೇಮಿಸಿಕೊಂಡು ಮಾರಾಟ ಮಾಡಿದರೂ ಸೋರಿಕೆ ತಡೆಯಲು ಸಾಧ್ಯವಾಗಲಿಲ್ಲ. ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆದು ಮಾರಾಟ ಮಾಡಬೇಕಾದ ಸಂದರ್ಭ ಇದ್ದು ಲಾಭ ಕಡಿಮೆಯಾಗಿದೆ ಎಂದರು.

ಆದೇಶದ ಉಳಿದ ಹಸಿರು ಪಟಾಕಿ

ಸರಕಾರ ಹಸಿರು ಪಟಾಕಿ ಮಾರಾಟ ಕಡ್ಡಾಯ ಎಂದು ಆದೇಶ ಹೊರಡಿಸಿದ್ದು ನಾಮ್ ಕಾ ವಾಸ್ತೆ ಅಂಗಡಿ ಮುಂದೆ ಕೆಲ ಮಾದರಿಯ ಹಸಿರು ಪಟಾಕಿ ಪೇರಿಸಿಟ್ಟಿದ್ದರು. ಗ್ರಾಹಕರೂ ಹೆಚ್ಚಿನ ಮಟ್ಟದಲ್ಲಿ ಕೊಳ್ಳಲು ಆಸಕ್ತಿ ವಹಿಸಲಿಲ್ಲ. ಅಂಗಡಿಯವರೂ ಮಾರಾಟ ಮಾಡಲು ಉತ್ಸಾಹ ವಹಿಸಲಿಲ್ಲ. ಬೆಸ್ಕಾಂನವರು ಉದಾರವಾಗಿ ನೀಡಿದ ವಿದ್ಯುತ್ ಕಾರಣ ಎಲ್ಲಾ ಅಂಗಡಿಗಳೂ ವಿದ್ಯುತ್ ದೀಪಗಳಿಂದ ಝಗ ಮಗಿಸುತ್ತಿದ್ದವು. ಅಗ್ನಿ ಶ್ಯಾಮಕ ವಾಹನಗಳು, ಆಂಬುಲೆನ್ಸ್ ಗಳು ಆಯಕಟ್ಟು ಸ್ಥಳದಲ್ಲಿದ್ದವು ಒಟ್ಟಾರೆ ಪಟಾಕಿ ಭರಾಟೆಗೆ ತೆರೆ ಬಿದ್ದಿತು.

*

ಬಹಳ ವರ್ಷಗಳಿಂದ ಪಟಾಕಿ ವ್ಯಾಪಾರ ಮಾಡುತ್ತಿದ್ದು, ಈ ಬಾರಿ ಶೇ. ೫೦%ಕ್ಕೂ ಹೆಚ್ಚು ದಾಸ್ಥಾನು ಉಳಿದಿದೆ. ಅತ್ತಿಬೆಲೆ ಇಂದ ಈಚೆಗೆ ಪಟಾಕಿ ಮಳಿಗೆ ಇಟ್ಟು ಒಳ್ಳೆ ಕಂಪನಿಗಳ ಮಾಲನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟ ಮಾಡಿದರೂ ಅತ್ತಿಬೆಲೆ ಗಡಿ ದಾಟಿ ಪಟಾಕಿ ಕೊಳ್ಳುವ ಮನೋಭಾವದವರೇ ಹೆಚ್ಚು. ಹಾಗಾಗಿ ಈ ಬಾರಿ ಲಾಭ ಇಲ್ಲದ ಕಾರಣ ನಷ್ಟವೇ ಹೆಚ್ಚು.

-ಮೋಹನ್ ರಾಜಾಜಿನಗರ ಪತ್ರಿಕಾ ವಿತರಕ