ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರಾಜ್ಯದಲ್ಲಿ ನೆಲ ಕಚ್ಚಿದ ಆಸ್ತಿ ನೋಂದಣಿ

ಕಂದಾಯ ನಿವೇಶನಗಳಿಗೆ ಖಾತೆ ನೀಡುವುದು ಮತ್ತು ನೋಂದಣಿ ಮಾಡುವುದನ್ನು ಕಳೆದ ವರ್ಷವೇ ಸ್ಥಗಿತಗೊಳಿಸಿದ್ದ ಸರಕಾರ, ಈಗ ಪರಿವರ್ತನೆ ಆಗಿದ್ದರೂ ಮತ್ತು ಬಹುತೇಕ ಸಕ್ರಮವಾದ್ದರೂ ಅಂಥ ಆಸ್ತಿಗಳನ್ನೂ ನೋಂದಣಿ ಮಾಡುತ್ತಿಲ್ಲ. ಕಾರಣ ಎಲ್ಲದಕ್ಕೂ ಆನ್‌ಲೈನ್ ಖಾತಾ (ಇ-ಸ್ವತ್ತು, ಇ-ಆಸ್ತಿಗಳಂಥ) ದಾಖಲೆಗಳನ್ನು ಕಡ್ಡಾಯ ಎನ್ನುವ (ಕಾವೇರಿ-2) ನಿಯಮ. ಇದರಿಂದ ಆಸ್ತಿಗಳ ನೋಂದಣಿಗೆ ಬೇಕಾಗಿರುವ ಖಾತಾಗಳು ಸುಲಭವಾಗಿ ಲಭ್ಯವಾಗದೆ ನೋಂದಣಿ ಪ್ರಕ್ರಿಯೆ ನೊಂದು ಸಾಗಿದೆ.

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ಆನ್‌ಲೈನ್‌ನಲ್ಲಿ ಖಾತೆ ನೋಂದಣಿ ಕಡ್ಡಾಯದ ಬಳಿಕ ಹಲವು ಗೊಂದಲ ನೋಂದಣಿಯಲ್ಲಿ ಶೇ.40 ಕುಸಿತ ನೋಂದಣಿ ಶುಲ್ಕವೂ ಏರಿಕೆ, ವ್ಯಾಜ್ಯಗಳೂ ಹೆಚ್ಚಳ ಫ್ಲ್ಯಾಟ್‌ಗಳು ಮಾರಾಟವಾಗದ ಸಂಕಟದಲ್ಲಿ ಬಿಲ್ಡರ್‌ಗಳು

ರಾಜ್ಯದಲ್ಲಿ ಎಡೆ ಆಸ್ತಿ ಮಾಲಿಕರಿಗೆ ಆನ್‌ಲೈನ್ ಖಾತೆ ನೀಡುವ ಪ್ರಯತ್ನಗಳು ನಡೆಯು ತ್ತಿದ್ದರೆ, ಮತ್ತೊಂದು ಕಡೆ ಅದೇ ಖಾತೆ ಹಂಚಿಕೆ ಆಸ್ತಿಗಳ ನೋಂದಣಿ ವಿಚಾರ ದಲ್ಲಿ ದೊಡ್ಡ ಕ್ಯಾತೆಯನ್ನೇ ತಂದಿಟ್ಟಿದೆ. ಇದರಿಂದ ಆಸ್ತಿಗಳ ನೋಂದಣಿಯಲ್ಲಿ ಶೇ.30ರಿಂದ 40ರಷ್ಟು ಕುಸಿತ ಉಂಟಾಗಿದ್ದು, ಆದಾಯ ಸಂಗ್ರಹದಲ್ಲಿ ಗಣನೀಯ ಪ್ರಮಾಣದಲ್ಲಿ ಕೊರತೆ ಕಂಡುಬಂದಿದೆ. ಈ ಗಂಭೀರ ಮಾಹಿತಿ ಸರಕಾರಕ್ಕೆ ಆತಂಕ ಮೂಡಿಸಿದ್ದು, ಆದಾಯ ಗುರಿ ಮುಟ್ಟಲಾಗದ ನೋಂದಣಿ ಅಧಿಕಾರಿಗಳ ನಿದ್ದೆಗೆಡಿಸಿದೆ.

ಕಂದಾಯ ನಿವೇಶನಗಳಿಗೆ ಖಾತೆ ನೀಡುವುದು ಮತ್ತು ನೋಂದಣಿ ಮಾಡುವುದನ್ನು ಕಳೆದ ವರ್ಷವೇ ಸ್ಥಗಿತಗೊಳಿಸಿದ್ದ ಸರಕಾರ, ಈಗ ಪರಿವರ್ತನೆ ಆಗಿದ್ದರೂ ಮತ್ತು ಬಹುತೇಕ ಸಕ್ರಮವಾದ್ದರೂ ಅಂಥ ಆಸ್ತಿಗಳನ್ನೂ ನೋಂದಣಿ ಮಾಡುತ್ತಿಲ್ಲ. ಕಾರಣ ಎಲ್ಲದಕ್ಕೂ ಆನ್‌ಲೈನ್ ಖಾತಾ (ಇ-ಸ್ವತ್ತು, ಇ-ಆಸ್ತಿಗಳಂಥ) ದಾಖಲೆಗಳನ್ನು ಕಡ್ಡಾಯ ಎನ್ನುವ (ಕಾವೇರಿ-2) ನಿಯಮ. ಇದರಿಂದ ಆಸ್ತಿಗಳ ನೋಂದಣಿಗೆ ಬೇಕಾಗಿರುವ ಖಾತಾಗಳು ಸುಲಭವಾಗಿ ಲಭ್ಯವಾಗದೆ ನೋಂದಣಿ ಪ್ರಕ್ರಿಯೆ ನೊಂದು ಸಾಗಿದೆ.

ಇದನ್ನೂ ಓದಿ: Vishweshwar Bhat Column: ದುರಂತಕ್ಕೆ ಸ್ಪಂದಿಸುವ ರೀತಿ

ಇದರ ಮಧ್ಯೆ, ಸರಕಾರ ನೋಂದಣಿ ಶುಲ್ಕವನ್ನು ಕಳೆದ ತಿಂಗಳು ಶೇ.1ರಷ್ಟು ಏರಿಕೆ ಮಾಡಿದ್ದು, ಇದರಿಂದಲೂ ನೋಂದಣಿ ಕುಸಿತ ಕಂಡಿದೆ. ಇದೇ ವೇಳೆ ಖಾತಾಗಳು ಸಿಗದೆ ಬ್ಯಾಂಕ್‌ಗಳು ಸಾಲ ಸೌಲಭ್ಯ ನೀಡಲು ನಿರಾಕರಿಸುತ್ತಿದ್ದು, ಆಸ್ತಿ ಖರೀದಿಸುವುದು ಮತ್ತು ಮಾರಾಟ ಮಾಡುವುದು ಸದ್ಯ ದೊಡ್ಡ ಸಾಹಸವೇ ಆಗಿದೆ.

ಅದರಲ್ಲೂ ಆಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿ ಮಾರಾಟ ಮಾಡುವವರು ನೋಂದಣಿ ಇಲ್ಲದೆ ತಲೆಗೆ ಕೈಹಾಕಿ ಕುಳಿತಿದ್ದು, ಹೂಡಿರುವ ಬಂಡಾವಾಳವೂ ಕೈಸೇರದೇ ಸಾಲಗಾರ ರಾಗುತ್ತಿದ್ದಾರೆ. ಇಂಥ ಸಮಸ್ಯೆಬೆಂಗಳೂರಿನಲ್ಲಿ ಹೆಚ್ಚಾಗಿದೆ ಎಂದು ಬಿಲ್ಡರ್‌ಗಳು ಹೇಳು ತ್ತಿದ್ದಾರೆ.

ಈ ಪರಿಣಾಮದಿಂದ ಆಸ್ತಿಗಳ ನೋಂದಣಿ ಮೂಲದಿಂದ ಈ ವರ್ಷ ಸಂಗ್ರಹಿಸಬೇಕಿದ್ದ ಆದಾಯದ ಗುರಿ ದಿಕ್ಕು ತಪ್ಪಿದ್ದು, ಇದಕ್ಕೆ ಸಂಬಂಧಿಸಿದ ಕಾರಣಗಳು ಮತ್ತು ವಾಸ್ತವ ಚಿತ್ರ ಸಹಿತ ಮಾಹಿತಿಗಳನ್ನು ನೋಂದಣಿ ಇಲಾಖೆ ಹಿರಿಯ ಅಧಿಕಾರಿಗಳು ಸರಕಾರಕ್ಕೆ ಸಲ್ಲಿಸ ಬೇಕಿತ್ತು. ಆದರೆ ನೋಂದಣಿ ಇಲಾಖೆಯ ಹಿರಿಯ ಅಧಿಕಾರಿಗಳು ಸರಕಾರಕ್ಕೆ ಅವಾಸ್ತವ ಮಾಹಿತಿಗಳನ್ನು ನೀಡುತ್ತಿದ್ದಾರೆ.

ಎಲ್ಲವೂ ಸರಿಯಾಗಲಿದೆ, ಇಲಾಖೆ ಗುರಿ ಮುಟ್ಟಲಿದೆ ಎನ್ನುವ ತಪ್ಪು ಮಾಹಿತಿಗಳನ್ನು ನೀಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಸರಕಾರ ಆಸ್ತಿಗಳ ನೋಂದಣಿ ಹೆಚ್ಚಳಕ್ಕೆ ಬೇಕಾದ ನೀತಿಗಳನ್ನಾಗಲಿ ಅಥವಾ ಆಸ್ತಿಗಳ ಮಾಲೀಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಲಿ ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾ ನೋಂದಣಿ ಅಧಿಕಾರಿಗಳು ತಿಳಿಸಿದ್ದಾರೆ.

ರೂ. 4000 ಕೋಟಿ ಖೋತಾ !

ನೋಂದಣಿಯಿಂದ ಈ ವರ್ಷ ಸುಮಾರು ರೂ.28000 ಕೋಟಿ ಸಂಗ್ರಹಿಸುವ ಗುರಿ ಹೊಂದಿದ್ದು, ಇದರಲ್ಲಿ ಇಷ್ಟೊತ್ತಿಗಾಗಲೇ (ಕಳೆದ 6 ತಿಂಗಳಲ್ಲಿ) ಸುಮಾರು ರೂ.14000 ಕೋಟಿ ಲಭಿಸಬೇಕಿತ್ತು. ಆದರೆ ಈತನಕ ಕೇವಲ ರೂ. 10000 ಕೋಟಿ ಮಾತ್ರ ಸಂಗ್ರಹ ವಾಗಿದೆ. ಈ ಆದಾಯ ಕೊರತೆ ರಾಜ್ಯದ ಇತರೆಡೆಗಿಂತ ಬೆಂಗಳೂರಿನ ಹೆಚ್ಚಾಗಿದ್ದು, ಇದು ಸರಕಾರಕ್ಕೆ ದಿಗಿದು ತಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೆಲ್ಲಕ್ಕಿಂತ ಮುಖ್ಯವಾಗಿ ಆಸ್ತಿಗಳ ನೋಂದಣಿಯಾಗದೆ ರಾಜ್ಯದಲ್ಲಿ ಆಸ್ತಿಗಳ ಮಾರಾಟಕ್ಕೆ ಸಂಬಂಧಿಸಿದ ಆರ್ಥಿಕ ಚಟುವಟಿಗಳೇ ಮಂಕಾಗಿದೆ.

ಇನ್ನು ಆನ್‌ಲೈನ್ ಖಾತಾ ಸೇರಿದಂತೆ ಎಲ್ಲಾ ದಾಖಲೆಗಳೂ ಸರಿಯಾಗಿರುವ ಆಸ್ತಿಗಳ ನೋಂದಣಿಗೆ ಆಸ್ತಿಯ ಮಾರ್ಗಸೂಚಿ ಬೆಲೆಯ ಶೇ.5.5ರಷ್ಟು ಮುದ್ರಾಂಕ ಶುಲ್ಕ ಸೇರಿದಂತೆ ಶೇ.7.65ರಷ್ಟು ನೋಂದಣಿ ಶುಲ್ಕ ಪಾವತಿಸಬೇಕಿದೆ. ಇದರೊಂದಿಗೆ ಆದಾಯ ತೆರಿಗೆ ಮತ್ತು ಇತರೆ ಸೇವಾಶುಲ್ಕಗಳು ಸೇರಿದಂತೆ ಆಸ್ತಿಯ ಶೇ.10ರಷ್ಟು ಭಾಗವನ್ನು ಮಾಲಿಕರು ನೋಂದಣಿ ಪ್ರಕ್ರಿಯೆಗೇ ವೆಚ್ಚ ಮಾಡುವಂತಾಗಿದ್ದು, ಇದರಿಂದ ಜನರು ಆಸ್ತಿ ಖರೀದಿಸಲು ಮತ್ತು ಮಾರಾಟ ಮಾಡಲು ಹೆದರುವಂತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ನೋಂದಣಿ ಇಲಾಖೆಯ ನಿರ್ದೇಶಕರನ್ನು (ಐಜಿಆರ್) ಕೇಳಿದರೆ ಪ್ರಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಏನಿದು ನೋಂದಣಿ ನರಳಾಟ ?

ಈ ಹಿಂದೆ ಗ್ರಾಮೀಣ ಭಾಗದಲ್ಲಿ ಇ-ಸ್ವತ್ತು ಇಲ್ಲದಿದ್ದರೂ ನೋಂದಣಿಯಾಗುತ್ತಿತ್ತು. ಬೆಂಗಳೂರಿನಲ್ಲಿ ಆಸ್ತಿಗಳಿಗೆ ಎ ಅಥವಾ ಬಿ ಯಾವುದೇ ರೀತಿಯ ಖಾತೆಗಳಿದ್ದರೂ ನೋಂದಣಿಯಾಗುತ್ತಿತ್ತು. ಆದರೆ ಈಗ ಬಿ ಖಾತಾಗಳಿಗೆ ನೋಂದಣಿ ಭಾಗ್ಯವಿಲ್ಲ. ಅಷ್ಟೇ ಏಕೆ ಎ ಖಾತೆ ಆಗಿದ್ದರೂ ಸುಲಭವಾಗಿ ನೋಂದಣಿ ಮಾಡಲಾಗದು.

ಅಂದರೆ ಆಸ್ತಿಯನ್ನು ಆನ್‌ಲೈನ್ ಮೂಲಕ ಪಡೆದು ಡಿಜಿಟಲ್ ಖಾತೆ ಪಡೆಯಬೇಕು. ಇಲ್ಲವಾದರೆ ಆ ಆಸ್ತಿಗಳ ನೋಂದಣಿ ಸಾಧ್ಯವಿಲ್ಲ. ಇನ್ನು ಬಡಾವಣೆ ಮಾಡಲು ಕೃಷಿ ಯಿಂದ ಪರಿವರ್ತನೆಯಾಗಿರುವ ಆಸ್ತಿಗಳನ್ನೂ ಸುಲಭವಾಗಿ ನೋಂದಣಿ ಮಾಡಲಾಗದು. ಅಂದರೆ ಆಸ್ತಿಯ ಕೆಲವು ಭಾಗ ಮಾರಾಟ ಮಾಡಿ, ಉಳಿಕೆಯನ್ನು ಭವಿಷ್ಯಕ್ಕೆ ಕಾಯ್ದಿರಿಸು ವಂತಿಲ್ಲ. ಅಂಥ ಆಸ್ತಿಗಳ ನೋಂದಣಿಗೂ ಖಾತಾ ಸಿಗುವುದಿಲ್ಲ. ಖಾತಾ ಬೇಕಾದರೆ ಇರುವ ಎ ಆಸ್ತಿಯನ್ನೂ ನೋಂದಣಿ ಮಾಡಿಸಬೇಕು. ಹಾಗೆಯೇ ಕುಟುಂಬಗಳಲ್ಲಿ ಆಸ್ತಿಗಳನ್ನು ವಿಭಾಗ ಮಾಡಿಕೊಂಡು ಇಚ್ಛಿಸಿದಂತೆ ಕೊಂಚ ಭಾಗ ಆಸ್ತಿಗಳನ್ನು ಮಾರಾಟ ಮಾಡುವು ದಕ್ಕೂ ಅವಕಾಶವಿಲ್ಲ.

ಇನ್ನೂ ವಿಚಿತ್ರವೆಂದರೆ, ಎಷ್ಟೋ ಪ್ರಕರಣಗಳಲ್ಲಿ ಆಸ್ತಿಗಳ ವಿವಾದ, ವ್ಯಾಜ್ಯಕ್ಕೆ ಸಂಬಂಧಿಸಿ ದಂತೆ ಕೋರ್ಟ್ ತೀರ್ಪು ನೀಡಿರುವುದು ಮತ್ತು ಡಿಕ್ರಿಗಳನ್ನು ನೀಡಿರುವ ಆಸ್ತಿಗಳ ನೋಂದಣಿಯೂ ಸಾಧ್ಯವಿಲ್ಲದಂತಾಗಿದೆ. ಆನ್‌ಲೈನ್ ಖಾತಾ ಇಲ್ಲದ ನೋಂದಣಿ ಮಾಡದ ಕಾರಣ ರಾಜ್ಯದ ಅನೇಕ ಕಡೆ ಕೋರ್ಟ್ ಆದೇಶದ ಪ್ರಕಾರವೂ ಆಸ್ತಿಗಳ ನೋಂದಣಿ ಸಾಧ್ಯವಿಲ್ಲದಂತಾಗಿದೆ. ಇನ್ನು ಬೆಂಗಳೂರಿನಲ್ಲಿ ನಿಯಮ ಉಲ್ಲಂಘನೆ ನೆಪದಲ್ಲಿ ಬಹುತೇಕ ಅಪಾರ್ಟ್‌ಮೆಂಟ್‌ಗಳಿಗೆ ಆರಂಭಿಕ ಮತ್ತು ಪೂರ್ಣಗೊಳಿಸಿದ ಪ್ರಮಾಣ ಪತ್ರಗಳು (ಒಸಿ ಮತ್ತು ಸಿಸಿ ಸರ್ಟಿಫಿಕೇಟ್) ಇಲ್ಲದೆ, ಖಾತಾಗಳು ಲಭಿಸುತ್ತಿಲ್ಲ. ಇದರಿಂದ ಬೆಂಗಳೂರಿನಲ್ಲಿ ರುವ ಸುಮಾರು 10 ಲಕ್ಷಕ್ಕೂ ಹೆಚ್ಚು ಅಪಾರ್ಟ್‌ಮೆಂಟ್ ಗಳು ನೋಂದಣಿ ಮಾಡಿಸಲಾಗದೆ ಅಲ್ಲಿನ ಫ್ಲ್ಯಾಟ್ ಗಳು ಮಾರಾಟವಾಗುತ್ತಿಲ್ಲ.