ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕಾಂಗ್ರೆಸ್‌ʼಗೆ ಉತ್ತರಾಧಿಕಾರ ತಂದ ತಲೆನೋವು

ತಮ್ಮ ಹೇಳಿಕೆ ಈ ಪ್ರಮಾಣದಲ್ಲಿ ಅಲ್ಲೋಲ ಕಲ್ಲೋಲ ಏಳುತ್ತದೆ ಯತೀಂದ್ರ ಅವರೇ ಊಹಿಸಿರ ಲಿಲ್ಲ. ಹೀಗಾಗಿ ಅವರು ಉತ್ತರಾಧಿಕಾರ ಕುರಿತ ತಮ್ಮ ಹೇಳಿಕೆಯನ್ನು ಸಮರ್ಥಿಸು ವಂತೆಯೂ ಇಲ್ಲ. ತಿರುಚ‌ ಲಾಗಿದೆ ಎಂದೂ ಹೇಳಲಾಗುತ್ತಿಲ್ಲ. ಆದ್ದರಿಂದ ಹೊಸ ಹೇಳಿಕೆ ನೀಡುತ್ತಾ, ಸಿದ್ದರಾಮಯ್ಯ ಅವರೇ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಹೇಳಿದ್ದಾರೆ.

ಶಿವಕುಮಾರ್ ಬೆಳ್ಳಿತಟ್ಟೆ

ಮುಖ್ಯಮಂತ್ರಿ ಆಕಾಂಕ್ಷಿಗಳಲ್ಲಿ ಗೊಂದಲ, ಸಿದ್ದರಾಮಯ್ಯ ಸಹಜ ಆಡಳಿತದ ಹಾದಿಗೆ ಕಲ್ಲುಮುಳ್ಳು

ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಅವರ ಹೇಳಿಕೆ ಮುಂದಿನ ರಾಜಕಾರಣದ ಮುನ್ಸೂಚನೆಯಲ್ಲದಿದ್ದರೂ ಮುಂದೆ ಉಂಟಾಗಬಹುದಾದ ಗೊಂದಲಗಳಿಗೆ ದಾರಿ ಮಾಡಿರುವು ದಂತೂ ದಿಟ. ಅವರ ಹೇಳಿಕೆ ಮೇಲ್ನೋಟಕ್ಕೆ ಮುಂದಿನ ಸೈದ್ಧಾಂತಿಕ ಹೊಣೆಗಾರಿಕೆ ಬಗ್ಗೆ ಪ್ರಸ್ತಾಪಿಸಿ ದಂತೆ ಕಂಡರೂ ಒಳ ಸುಳಿಯಲ್ಲಿ ಸಾಕಷ್ಟು ಪ್ರಶ್ನೆಗಳಿಗೆ ದಾರಿ ಮಾಡಿದೆ.

ಎಲ್ಲರೂ ಅಂದುಕೊಂಡಂತೆ ಇದು ಬರೀ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣಕ್ಕೆ ಮಾತ್ರ ಬೇಸರದ ವಿಚಾರವಲ್ಲ. ಪಕ್ಷದ ಹಿರಿಯರಿಗೆ, ಸಚಿವಕಾಂಕ್ಷಿಗಳಿಗೆ, ಕೆಪಿಸಿಸಿ ಅಧ್ಯಕ್ಷ ಆಕಾಂಕ್ಷಿಗಳಿಗೆ ಇದೆಲ್ಲಕ್ಕಿಂತ ಮುಖ್ಯವಾಗಿ ಮುಖ್ಯಮಂತ್ರಿ ಆಕಾಂಕ್ಷಿಗಳಿಗೆ ಇದು ದೊಡ್ಡ ಆಘಾತದ ವಿಚಾರವಾಗಿದೆ.

ವಿಶೇಷವಾಗಿ ಎಐಸಿಸಿ ಅಧ್ಯಕ್ಷರು ಕೂಡ ಈ ಬೆಳವಣಿಗೆಯಿಂದ ಕೊಂಚ ಬೇಸರವಾಗಿದ್ದಾರೆ ಎನ್ನಲಾಗಿದೆ. ಇದು ಪಕ್ಷಕ್ಕೂ ಕೊಂಚ ಡ್ಯಾಮೇಜ್ ಮಾಡಿರುವುದು ಸ್ಪಷ್ಟ. ಇದರಿಂದ ಸಹಜವಾಗಿ ಮುಂದುವರಿಯುತ್ತಿದ್ದ ಸಿದ್ದರಾಮಯ್ಯ ಅವರ ಹಾದಿಯಲ್ಲೂ ಕೊಂಚ ಕಲ್ಲುಮುಳ್ಳು ಎಸೆದಂತಾ ಗಿದೆ ಎಂದು ಮುಖ್ಯಮಂತ್ರಿಗಳ ಆಪ್ತ ವಲಯದವರೇ ಹೇಳುತ್ತಿದ್ದಾರೆ.

ಇದನ್ನೂ ಓದಿ: Vishweshwar Bhat Column: ಇಸ್ರೇಲಿಗಳೇಕೆ ಹಾಂಗ, ನಾವು ಭಾರತೀಯರೇಕೆ ಹೀಂಗ ?

ತಮ್ಮ ಹೇಳಿಕೆ ಈ ಪ್ರಮಾಣದಲ್ಲಿ ಅಲ್ಲೋಲ ಕಲ್ಲೋಲ ಏಳುತ್ತದೆ ಯತೀಂದ್ರ ಅವರೇ ಊಹಿಸಿರ ಲಿಲ್ಲ. ಹೀಗಾಗಿ ಅವರು ಉತ್ತರಾಧಿಕಾರ ಕುರಿತ ತಮ್ಮ ಹೇಳಿಕೆಯನ್ನು ಸಮರ್ಥಿಸು ವಂತೆಯೂ ಇಲ್ಲ. ತಿರುಚಲಾಗಿದೆ ಎಂದೂ ಹೇಳಲಾಗುತ್ತಿಲ್ಲ. ಆದ್ದರಿಂದ ಹೊಸ ಹೇಳಿಕೆ ನೀಡುತ್ತಾ, ಸಿದ್ದರಾಮಯ್ಯ ಅವರೇ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಹೇಳಿದ್ದಾರೆ.

ಆದರೂ ಯತೀಂದ್ರ ಹೇಳಿಕೆಯಿಂದ ಎದ್ದಿರುವ ಅಲೆ ಮಾತ್ರ ಸದ್ಯಕ್ಕೆ ಕಡಿಮೆಯಾಗುವುದಿಲ್ಲ. ಹಾಗಂತ ಕೂಡಲೇ ನಾಯಕತ್ವ ಬದಲಾಗುವುದು ಸುಲಭವಲ್ಲ. ಹೀಗಾಗಿ ಬಿಹಾರ ಚುನಾವಣೆ ನಡೆಯುವವರೆಗೂ ಇಂಥ ಹೇಳಿಕೆಗಳು ಮತ್ತು ಪ್ರಹಸನಗಳು ಇನ್ನೂ ಕೆಲ ಕಾಲ ನಡೆಯುವ ಸಾಧ್ಯತೆ ಇದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಯತೀಂದ್ರ ಹೇಳಿಕೆ ಹೇಗೆ ಕೆಲಸ ಮಾಡಿದೆ?

ಯತೀಂದ್ರ ಅವರ ಉತ್ತರಾಧಿಕಾರದ ಹೇಳಿಕೆ ಬೇಕಿತ್ತಾ, ಸಿದ್ದರಾಮಯ್ಯ ಸರಕಾರ ಯಾವುದೇ ಆಕ್ಷೇಪಗಳಿಲ್ಲದೆ ನಡೆಯುತ್ತಿದ್ದ ಸಂದರ್ಭದಲ್ಲಿ ಇದೆ ಬೇಕಿತ್ತಾ ಎಂದು ಸಿದ್ದರಾಮಯ್ಯ ಅಪ್ತ ವಲಯದವರೇ ಕೇಳುತ್ತಿದ್ದಾರೆ. ಏಕೆಂದರೆ ಯತೀಂದ್ರ ಹೇಳಿಕೆ ಮುಂದಿನ ಮುಖ್ಯಮಂತ್ರಿ, ದಲಿತ ಮುಖ್ಯಮಂತ್ರಿ, ನಾಯಕತ್ವ ಬದಲಾವಣೆ ಹಾಗೂ ಅಹಿಂದಕ್ಕೆ ಮರುಜೀವ, ಸಿದ್ದರಾಮಯ್ಯ ರಾಜಕೀಯ ನಿವೃತ್ತಿಗೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಅಂದರೆ, ಯತೀಂದ್ರ ಹೇಳಿಕೆ ಸೈದ್ಧಾಂತಿಕ ಹಿನ್ನೆಲೆಯದೇ ಆಗಿದ್ದರೆ, ಸಿದ್ದರಾಮಯ್ಯ ರಾಜಕೀಯ ಸಂಧ್ಯಾ ಕಾಲದಲ್ಲಿ ಇದ್ದಾರೆ ಎಂದರೆ, ಅವರು ಅವಧಿಗೂ ಮುನ್ನ ರಾಜಕೀಯ ನಿವೃತ್ತಿಯಾಗು ತ್ತಾರೆಯೇ, ಅಹಿಂದವನ್ನು ಮುನ್ನಡೆಸುತ್ತಾರೆಯೇ, ಅದರ ನೇತೃತ್ವವನ್ನು ಜಾರಕಿಹೊಳಿ ಅವರು ವಹಿಸುತ್ತಾರೆಯೇ ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿದೆ.

ಇನ್ನು ನಾಯಕತ್ವ ವಿಚಾರಕ್ಕೆ ಬಂದರೆ, ಅಹಿಂದ ನಾಯಕತ್ವವನ್ನು ಮುನ್ನಡೆಸಲು ಎಐಸಿಸಿ ಅಧ್ಯಕ್ಷರೂ ಆಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಗುವುದಿಲ್ಲವೇ, ಅವರು ಉತ್ತರಾಧಿಕಾರ ಹೊಂದಲು ಶಕ್ತರಲ್ಲವೇ, ಹಾಗೊಂದು ಯತೀಂದ್ರ ಹೇಳಿಕೆಯನ್ನು ದಲಿತ ಮುಖ್ಯಮಂತ್ರಿಯ ಪ್ರಸ್ತಾಪ ಎಂದುಕೊಂಡರೂ ಖರ್ಗೆ ಅವರ ಕಾಲ ಮುಗಿಯಿತೇ ಎನ್ನುವ ಪ್ರಶ್ನೆಗಳು ಕಾಂಗ್ರೆಸ್ ವಲಯದಲ್ಲಿದೆ. ಇದರ ಮಧ್ಯೆ, ಕಾಂಗ್ರೆಸ್‌ನಲ್ಲಿರುವ ಮುಖ್ಯಮಂತ್ರಿ ಆಕಾಂಕ್ಷಿಗಳಲ್ಲಿ ಯತೀಂದ್ರ ಹೇಳಿಕೆ ತೀರಾ ಬೇಸರ ತಂದಿದೆ ಎನ್ನಲಾಗಿದೆ.

ಅಂದರೆ, ನಾಯಕರಾದ ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆ, ಡಾ.ಜಿ.ಪರಮೇಶ್ವರ್, ಡಾ.ಎಚ್. ಸಿ.ಮಹಾದೇವಪ್ಪ, ಕೆ.ಎಚ್.ಮುನಿಯಪ್ಪ, ಎಂ.ಬಿ.ಪಾಟೀಲ್, ಈಶ್ವರ್ ಖಂಡ್ರೆ ಸೇರಿದಂತೆ ಅನೇಕರು ಬೇಸರವಾಗಿದ್ದರೂ ಹೇಳಿಕೊಳ್ಳುತ್ತಿಲ್ಲ ಎನ್ನಲಾಗಿದೆ. ಆದರೆ ಸದಾ ಸಿದ್ದರಾಮಯ್ಯ ಅವರ ಆಪ್ತರೆನಿಸಿಕೊಳ್ಳುತ್ತಿದ್ದ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹಾದೇವಪ್ಪ, ಕಾಂಗ್ರೆಸ್‌ಗೆ ಯಾರೂ ಅನಿವಾರ್ಯವಲ್ಲ ಎನ್ನುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಉತ್ತರಾಧಿಕಾರದ ಹಿಂದಿನ ಶಕ್ತಿ ಯಾರು ?

ಹಾಗೆ ನೋಡಿದರೆ, ಮುಂದಿನ ಅಹಿಂದ ನಾಯಕತ್ವ ಅಥವಾ ಮುಂದಿನ ಮುಖ್ಯಮಂತ್ರಿ ವಿಚಾರ ವನ್ನು ಯತೀಂದ್ರ ಅವರ ಹೇಳುವ ಅನಿವಾರ್ಯತೆ ಇರಲಿಲ್ಲ. ಆದರೂ ಅಚ್ಚರಿಯ ಹೇಳಿಕೆ ನೀಡಿದ್ದು, ಇದರ ಹಿಂದೆ ಯತೀಂದ್ರ ಅವರಿಗೆ ಆಪ್ತರಾದ ಸಚಿವರೊಬ್ಬರಿದ್ದಾರೆ ಎಂದು ಹೇಳಲಾ ಗಿದೆ. ಡಿಸೆಂಬರ್ ಕ್ರಾಂತಿ ಕುತೂಹಲದಲ್ಲಿರುವ ಆ ಸಚಿವರು, ಮುಖ್ಯಮಂತ್ರಿ ಆಕಾಂಕ್ಷಿಗಳ ಮುಂದಿನ ಕಾರ್ಯತಂತ್ರದ ಬಗ್ಗೆ ತಿಳಿಯುವ ಹಾಗೂ ಅವರನ್ನು ಕೆಣಕುವ ಪ್ರಯತ್ನ ನಡೆಸಿದ್ದು ಅದು ತಕ್ಕಮಟ್ಟಿಗೆ ಯಶಸ್ವಿಯಾಗಿದೆ ಎನ್ನಲಾಗಿದೆ.