ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Harish roy: ʼಕೆಜಿಎಫ್‌ ಚಾಚಾʼ ಹರೀಶ್‌ ರಾಯ್‌ಗೆ ಕ್ಯಾನ್ಸರ್‌, ಸಹಾಯಕ್ಕೆ ಮೊರೆ

Cancer: ಹರೀಶ್ ರಾಯ್ ಅವರಿಗೆ ಥೈರಾಯ್ಡ್ ಕ್ಯಾನ್ಸರ್ ಕಾಣಿಸಿಕೊಂಡಿದೆ. ಅದು ಈಗ ಹೊಟ್ಟೆಗೂ ಪಸಿರಿಸಿದ್ದು, ಹೊಟ್ಟೆ ಊದಿಕೊಂಡಿದೆ. ಅವರು ಸಾಕಷ್ಟು ತೆಳ್ಳಗಾಗಿದ್ದಾರೆ. ಕೆಜಿಎಫ್ ಚಾಚಾನ ಸ್ಥಿತಿ ನೋಡಿ ಅನೇಕರು ಕಣ್ಣೀರು ಹಾಕಿದ್ದು, ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಯಶ್ ಬಳಿಯೂ ಸಹಾಯಕ್ಕಾಗಿ ಒತ್ತಾಯಿಸಿದ್ದಾರೆ.

ಬೆಂಗಳೂರು: ‘ಕೆಜಿಎಫ್’ ಸಿನಿಮಾ ಮೂಲಕ ‘ಕೆಜಿಎಫ್ ಚಾಚಾ’ ಎಂದೇ ಫೇಮಸ್ ಆದ ಹರೀಶ್ ರಾಯ್ (Actor Harish Roy) ಅವರನ್ನು ಗಂಭೀರ ಆರೋಗ್ಯ ಸಮಸ್ಯೆ ಕಾಡುತ್ತಿದ್ದು, ಚಿಕಿತ್ಸೆಗಾಗಿ ಸಹಾಯ ಮಾಡುವಂತೆ ಅವರು ಸಿನಿ ಅಭಿಮಾನಿಗಳಲ್ಲಿ ಕೋರಿದ್ದಾರೆ. ಅವರಿಗೆ ಕ್ಯಾನ್ಸರ್ (Cancer) ಕಾಣಿಸಿಕೊಂಡಿದ್ದು, ಸಾವು-ಬದುಕಿನ ನಡುವೆ ಹೋರಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಅವರು ಸಹಾಯಕ್ಕಾಗಿ ಅಂಗಲಾಚಿ ವಿಡಿಯೋ ಮಾಡಿದ್ದು, ಅದನ್ನು ಇನ್‌ಸ್ಟಾದಲ್ಲಿ ಅಪ್‌ಲೋಡ್‌ ಮಾಡಲಾಗಿದೆ.

ಹರೀಶ್‌ ರಾಯ್‌ ಅವರ ಸ್ಥಿತಿ ನೋಡಿ ಬಹುಮಂದಿ ಬೇಸರಪಟ್ಟುಕೊಂಡಿದ್ದಾರೆ. ಅವರು ಕೆಜಿಎಫ್‌ ಸಿನಿಮಾದಲ್ಲಿ ರಾಕಿ ಭಾಯ್​ನ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಈ ಮೊದಲು ಹಲವು ಸಿನಿಮಾಗಳಲ್ಲಿ ವಿಲನ್ ಪಾತ್ರಗಳ ಮೂಲಕ ಹರೀಶ್ ಗಮನ ಸೆಳೆದಿದ್ದರು. ಇದೀಗ ಹರೀಶ್ ರಾಯ್ ಅವರಿಗೆ ಥೈರಾಯ್ಡ್ ಕ್ಯಾನ್ಸರ್ ಕಾಣಿಸಿಕೊಂಡಿದೆ. ಅದು ಈಗ ಹೊಟ್ಟೆಗೂ ಪಸಿರಿಸಿದ್ದು, ಹೊಟ್ಟೆ ಊದಿಕೊಂಡಿದೆ. ಅವರು ಸಾಕಷ್ಟು ತೆಳ್ಳಗಾಗಿದ್ದಾರೆ. ಕೆಜಿಎಫ್ ಚಾಚಾನ ಸ್ಥಿತಿ ನೋಡಿ ಅನೇಕರು ಕಣ್ಣೀರು ಹಾಕಿದ್ದು, ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಯಶ್ ಬಳಿಯೂ ಸಹಾಯಕ್ಕಾಗಿ ಒತ್ತಾಯಿಸಿದ್ದಾರೆ.



ಗೋಪಿ ಗೌಡ ಹೆಸರಿನ ವ್ಯಕ್ತಿ ಈ ಬಗ್ಗೆ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ಕ್ಯಾನ್ಸರ್​ ಹೊಟ್ಟೆಗೆ ಸ್ಪ್ರೆಡ್ ಆಗಿ, ಹೊಟ್ಟೆಯಲ್ಲಿ ನೀರು ತುಂಬಿಕೊಂಡಿದೆ. ಅವರಿಗೆ ಸಹಾಯ ಮಾಡಿ’ ಎಂದು ಗೋಪಿ ಅವರು ಹೇಳಿದ್ದಾರೆ. ಈ ವೇಳೆ ಹರೀಶ್ ರಾಯ್ ಅವರು ಭಾವುಕರಾಗಿದ್ದರು. ನನ್ನನ್ನು ಉಳಿಸಿಕೊಡಿ ಎಂದು ಸಹಾಯ ಬೇಡಿದ್ದಾರೆ. ಹರೀಶ್ ರಾಯ್ ಅವರು ಅನಾರೋಗ್ಯ ಕಾರಣದಿಂದ ನಟನೆಯಿಂದ ತುಸು ಕಾಲದಿಂದ ದೂರವೇ ಉಳಿದಿದ್ದು, ಹೀಗಾಗಿ ಅವರಿಗೆ ಆಸ್ಪತ್ರೆ ಖರ್ಚು ನೋಡಿಕೊಳ್ಳುವಷ್ಟು ಹಣ ಇಲ್ಲದಂತೆ ಆಗಿದೆ. ‘ನನನ್ನು ಉಳಿಸಿ’ ಎಂದು ಅವರು ಫಿಲ್ಮ್ ಚೇಂಬರ್, ನಿರ್ಮಾಪಕರು, ನಿರ್ದೇಶಕರು, ಸಹ ಕಲಾವಿದರಿಗೆ ವಿಡಿಯೋ ಮೂಲಕ ಸಹಾಯ ಕೇಳಿದ್ದಾರೆ.

ಹರೀಶ್‌ ಕೇರ

View all posts by this author