ಮುಂಬೈ: ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುವ ನಟಿ ರುಚಿ ಗುಜ್ಜರ್ (Ruchi Gujjar) ಅವರು ಅಪಾರ ಅಭಿಮಾನಿಗಳ ಮನಗೆದ್ದ ನಟಿ ಯಾಗಿದ್ದಾರೆ. ಇತ್ತೀಚೆಗಷ್ಟೆ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪ್ರಧಾನಿ ಮೋದಿ ಫೋಟೊ ಇರುವ ನೆಕ್ಲೇಸ್ ತೊಟ್ಟು ನೆಟ್ಟಿಗರ ಗಮನ ಸೆಳೆದಿದ್ದರು. ಇದೀಗ ಅದರ ಬೆನ್ನಲ್ಲೆ ನಟಿ ರುಚಿ ಗುಜ್ಜರ್ ನಿರ್ಮಾಪಕ ಕರಣ್ ಸಿಂಗ್ ಚೌಹಾಣ್ ಅವರ ವಿರುದ್ಧ 24 ಲಕ್ಷ ರೂಪಾಯಿಗಳ ಹಣಕಾಸಿನ ವ್ಯವಹಾರದಲ್ಲಿ ವಂಚನೆ, ನಂಬಿಕೆ ದ್ರೋಹ ಮತ್ತು ಬೆದರಿಕೆ ಆರೋಪ ಹೊರಿಸಿ ಓಶಿವಾರಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಸದ್ಯ ಈ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.
ಹಿಂದಿ ದೂರದರ್ಶನ ಧಾರಾವಾಹಿಯ ನಿರ್ಮಾಪಕ ಎಂದು ಕರಣ್ ಸಿಂಗ್ ಚೌಹಾಣ್ ಅವರು ವಾಟ್ಸ್ ಆ್ಯಪ್ ಮೂಲಕ ನಟಿ ರುಚಿ ಗುಜ್ಜರ್ ಅವರನ್ನು ಸಂಪರ್ಕಿಸಿದ್ದರು. ಬಳಿಕ ಆ ಧಾರ ವಾಹಿಯ ಸಹ-ನಿರ್ಮಾಣ ಮಾಡುವಂತೆ ರುಚಿ ಗುಜ್ಜರ್ ಅವರಲ್ಲಿ ಮನವಿ ಮಾಡಿದ್ದಾರಂತೆ. ರುಚಿ ತನ್ನ ಕಂಪೆನಿಯಾದ ಎಸ್‌ಆರ್ ಈವೆಂಟ್ ಮತ್ತು ಎಂಟರ್‌ಟೈನ್‌ಮೆಂಟ್‌ನಿಂದ 2023 ಜುಲೈನಿಂದ 2024ರ ಜನವರಿ ವರೆಗೆ ಕರಣ್ ಸಿಂಗ್ ಚೌಹಾಣ್ ಅವರ ಸಂಸ್ಥೆಯಾದ ಕೆ ಸ್ಟುಡಿಯೋಸ್ ಮತ್ತು ಇತರ ಖಾತೆಗಳಿಗೆ 24 ಲಕ್ಷ ರೂ.ಗಳನ್ನು ವರ್ಗಾಯಿಸಿದ್ದೇನೆ ಎಂದು ಎಫ್ಐಆರ್ ನಲ್ಲಿ ಉಲ್ಲೇಖಿ ಸಿದ್ದಾರೆ.
ಧಾರಾವಾಹಿಯ ನಿರ್ಮಾಪಕ ಎಂದು ಕರಣ್ ಸಿಂಗ್ ಚೌಹಾಣ್ ಅವರು ನನ್ನನ್ನು ನಂಬಿಸಿ ಇದುವರೆಗೆ 24ಲಕ್ಷ ರೂಪಾಯಿಗಳನ್ನು ಪಡೆದಿದ್ದಾರೆ. ಆದರೆ, ಧಾರಾವಾಹಿಯ ಯಾವುದೇ ಕೆಲಸ ಆರಂಭವಾಗಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ನಾನು ಪದೇ ಪದೇ ಧಾರವಾಹಿ ಬಗ್ಗೆ ವಿಚಾರಿಸಿ ದರೂ ಕರಣ್ ಶೀಘ್ರವೇ ಧಾರವಾಹಿ ಆರಂಭ ಆಗುತ್ತೆ ಎಂದು ಸುಳ್ಳು ಆಶ್ವಾಸನೆ ನೀಡುತ್ತಾ ಬಂದಿದ್ದಾರೆ ಎಂದು ನಟಿ ರುಚಿ ಗುಜ್ಜರ್ ದೂರಿನಲ್ಲಿ ತಿಳಿಸಿದ್ದಾರೆ.
ಧಾರಾವಾಹಿಗೆ ಹಣವನ್ನು ಬಳಸುವ ಬದಲು, ಕರಣ್ ಆ ಹಣವನ್ನು 'ಸೋ ಲಾಂಗ್ ವ್ಯಾಲಿ' ಎಂಬ ಚಿತ್ರದಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ವಿಚಾರ ತಿಳಿದಿದೆ. ಜುಲೈ 27 ರಂದು ಈ ಚಿತ್ರ ಬಿಡುಗಡೆ ಯಾಗುತ್ತಿದೆ ಎಂಬ ಮಾಹಿತಿ ನನಗೆ ಸಿಕ್ಕಿತು. ಹೀಗಾಗಿ ನಾನು ನನ್ನ ಹಣವನ್ನು ಈಗಲೇ ಹಿಂದಿರುಗಿ ಸುವಂತೆ ಕರಣ್ ಅವರಲ್ಲಿ ಕೇಳಿದೆ. ಆದರೆ ಆ ಮೇಲೆ ಅವನು ನನಗೆ ಬೆದರಿಕೆ ಹಾಕಲು ಪ್ರಾರಂಭಿ ಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಎಫ್‌ಐಆರ್‌ನಲ್ಲಿ ಹಣ ವರ್ಗಾವಣೆಯಾದ ಖಾತೆ ಸಂಖ್ಯೆಗಳು ಮತ್ತು ಇತರ ಹಣಕಾಸಿನ ವಹಿವಾಟು ಗಳ ವಿವರ ದಾಖಲೆಗಳನ್ನು ನಟಿ ರುಚಿ ಗುಜ್ಜರ್ ಒದಗಿಸಿದ್ದಾರೆ. ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕರಣ್ ಸಿಂಗ್ ಚೌಹಾಣ್ ವಿರುದ್ಧ ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 318(4), 352, ಮತ್ತು 351(2) ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.