ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ramayana Movie: ರಾಮಾಯಣಕ್ಕೋಸ್ಕರವೇ 10 ವರ್ಷ ಮೀಸಲಿಟ್ಟ ನಿರ್ದೇಶಕ; ಸಿನಿಮಾಗಾಗಿ ನಿತೇಶ್ ತಿವಾರಿ ಮಾಡಿದ ಅಧ್ಯಯನ ಹೇಗಿತ್ತು ಗೊತ್ತಾ?

ದಂಗಲ್ , ಚಿಚೋರೆಯಂತಹ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ನೀಡಿದ್ದ ನಿರ್ದೇಶಕ ನಿತೇಶ್ ತಿವಾರಿ ಅವರು ರಾಮಾಯಣ ಸಿನಿಮಾ ಮಾಡಲು ಸಾಕಷ್ಟು ಪರಿಶ್ರಮಿಸುತ್ತಿದ್ದಾರೆ. ರಾಮಾಯಣದಂತಹ ಮಹಾಕಾವ್ಯದ ಕಥೆಯ ವಿಚಾರಗಳ ಅಧ್ಯಯನ ಮಾಡಲು ಬರೋಬ್ಬರಿ 10 ವರ್ಷಗಳೇ ಸಂದಿದೆ ಎಂಬ ವಿಚಾರ ತಿಳಿದು ಬಂದಿದೆ. ಈ ಸಿನಿಮಾದ ಶೂಟಿಂಗ್ ಈಗ ನಡೆಯುತ್ತಿದ್ದರೂ ಕೂಡ ಇದೇ ಸಿನಿಮಾಕ್ಕಾಗಿ ಕಳೆದ 10 ವರ್ಷದಿಂದಲೂ ನಿರ್ದೇಶಕ ನಿತೇಶ್ ತಿವಾರಿ ಅವರು ಸಾಕಷ್ಟು ಅಧ್ಯಯನ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ರಾಮಾಯಣಕ್ಕೋಸ್ಕರವೇ 10 ವರ್ಷ ಮೀಸಲಿಟ್ಟ ನಿರ್ದೇಶಕ!

Ramayana movie

Profile Pushpa Kumari Jul 24, 2025 1:23 PM

ನವದೆಹಲಿ: ನಿತೇಶ್ ತಿವಾರಿ (Nitesh Tiwari) ನಿರ್ದೇಶನದ ರಾಮಾಯಣ (Ramayana) ಸಿನಿಮಾದಲ್ಲಿ ಬಹುಸಂಖ್ಯೆಯ ತಾರಾಗಣವಿದ್ದು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ದಂಗಲ್ , ಚಿಚೋರೆಯಂತಹ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ನೀಡಿದ್ದ ನಿರ್ದೇಶಕ ನಿತೇಶ್ ತಿವಾರಿ ಅವರು ರಾಮಾಯಣ ಸಿನಿಮಾ ಮಾಡಲು ಸಾಕಷ್ಟು ಪರಿಶ್ರಮಿಸುತ್ತಿದ್ದಾರೆ. ರಾಮಾಯಣದಂತಹ ಮಹಾ ಕಾವ್ಯದ ಕಥೆಯ ವಿಚಾರಗಳ ಅಧ್ಯಯನಮಾಡಲು ಬರೋಬ್ಬರಿ 10 ವರ್ಷಗಳೇ ಸಂದಿದೆ ಎಂಬ ವಿಚಾರ ತಿಳಿದು ಬಂದಿದೆ. ಈ ಸಿನಿಮಾದ ಶೂಟಿಂಗ್ ಈಗ ನಡೆಯುತ್ತಿದ್ದರೂ ಕೂಡ ಇದೇ ಸಿನಿಮಾ ಕ್ಕಾಗಿ ಕಳೆದ 10 ವರ್ಷದಿಂದಲೂ ನಿರ್ದೇಶಕ ನಿತೇಶ್ ತಿವಾರಿ ಅವರು ಸಾಕಷ್ಟು ಅಧ್ಯಯನ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ನಿರ್ದೇಶಕ ತಿವಾರಿ ಮತ್ತು ನಿರ್ಮಾಪಕ ನಮಿತ್ ಮಲ್ಹೋತ್ರಾ ವಶಿಷ್ಠ ಅವರು 2015ರಿಂದಲೇ ರಾಮಾಯಣ ಸಿನಿಮಾ ಮಾಡಲು ಯೋಜನೆ ರೂಪಿಸಿದ್ದರಂತೆ. ರಾಮಾಯಣಕ್ಕಾಗಿ ಯೋಗ ಶಾಸ್ತ್ರ ಗಳನ್ನು ಅಧ್ಯಯನ ಮಾಡಿದ್ದಾರೆ ಅದರೊಂದಿಗೆ ಈ ಬಗ್ಗೆ ತಿಳಿದಿರುವ ಪಂಡಿತರೊಂದಿಗೆ ಸಮಾ ಲೋಚಿಸಲು 10 ವರ್ಷಗಳ ಕಾಲ ಕಳೆದಿದ್ದಾರಂತೆ. ರಾಮನ ಕುರಿತಾದ ಸಂಗತಿ ಗಳನ್ನು ಪ್ರಾಚೀನ ಕಾಲದಿಂದಲೂ ತೋರ್ಪಡಿಸಿದ ರೀತಿಯನ್ನು ಪ್ರೇಕ್ಷಕರಿಗೆ ತಿಳಿಸುವ ಉದ್ದೇಶದಿಂದ ಹತ್ತು ವರ್ಷಗಳ ಕಾಲ ಅಧ್ಯಯನ ಮಾಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನು ಓದಿ:Ramayana: 'ರಾಮಾಯಣ'ದಲ್ಲಿ ನಟಿಸಲು ನೂರಾರು ಕೋಟಿ ರೂ. ಸಂಭಾವನೆ ಪಡೆದ ಯಶ್-ರಣಬೀರ್ ಕಪೂರ್‌

ಈ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ ಬಳಿಕ ಸ್ಕ್ರಿಪ್ಟ್ ಅನ್ನು ಸಿದ್ಧಪಡಿಸಲಾಗಿದೆ. ಸಿನಿಮಾಕ್ಕಾಗಿ ಚಿತ್ರತಂಡವು 2024ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ಬೇಕಾದ ತಾಂತ್ರಿಕ ಪೂರ್ವಾಭ್ಯಾಸಗಳನ್ನು ಕೂಡ ಮಾಡಿದೆ. ಬಳಿಕ ಭಾರತದಲ್ಲಿ ಬಹಳ ದೊಡ್ಡ ಸೆಟ್ ನಿರ್ಮಿಸಲಾಯಿತು. ಈ ಚಿತ್ರದ ಸಹ-ನಿರ್ದೇ ಶಕ ರವಿ ಉದ್ಯಾವರ್ ಕೂಡ ಕೆಲವು ವಿಶೇಷ ಟೆಕ್ನಿಕಲ್ ಅನುಭವಕ್ಕಾಗಿ ವಿದೇಶಿ ಸ್ಟುಡಿಯೋಸ್ ಅವರಲ್ಲಿ ಅಭ್ಯಾಸಿಸಿದ್ದಾರೆ‌. ಆಸ್ಕರ್ ಪ್ರಶಸ್ತಿ ವಿಜೇತ ಸ್ಟುಡಿಯೋ ಎಂಬ ಖ್ಯಾತಿಯ ಡಿಎನ್ಇಜಿ ಹಾಗೂ ವಿಎಫೆಎಕ್ಸ್ ಅನ್ನು ಸಹ ಬಳಸಲು ಸಿನಿಮಾ ತಂಡ ನಿರ್ಧಾರವನ್ನು ಕೈಗೊಂಡಿತ್ತು ಎನ್ನಲಾಗುತ್ತಿದೆ.

ಬಹುದೊಡ್ಡ ತಾರಾಗಣದ ಸಂಗಮ:

ಈ ಸಿನಿಮಾದಲ್ಲಿ ಬಹುದೊಡ್ಡ ತಾರಾಗಣವೇ ಸಂಗಮವಾಗಿದೆ. ಬಾಲಿವುಡ್ ನಟ ರಣಬೀರ್ ಕಪೂರ್ ರಾಮನ ಪಾತ್ರದಲ್ಲಿ, ಸೀತೆಯ ಪಾತ್ರದಲ್ಲಿ ನಟಿ ಸಾಯಿ ಪಲ್ಲವಿ, ರಾಕಿಂಗ್ ಸ್ಟಾರ್ ಯಶ್ ಅವರು ರಾವಣನ ಪಾತ್ರದಲ್ಲಿ, ನಟ ರವಿ ದುಬೆ ಲಕ್ಷ್ಮಣನ ಪಾತ್ರದಲ್ಲಿ ಮತ್ತು ಸನ್ನಿ ಡಿಯೋಲ್ ಹನುಮನ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಪೋಷಕ ಪಾತ್ರಗಳಲ್ಲಿ ಅಮಿತಾಬ್ ಬಚ್ಚನ್, ರಾಕುಲ್ ಪ್ರೀತ್ ಸಿಂಗ್, ಕುನಾಲ್ ಕಪೂರ್, ಲಾರಾ ದತ್ತ, ಅರುಣ್ ಗೋವಿಲ್ ಮತ್ತು ಶೀಬಾ ಚಡ್ಡಾ ಮೊದಲಾದವರು ಈ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.

ಈ ಸುದ್ದಿಯನ್ನೂ ಓದಿ: Ramayana: 'ರಾಮಾಯಣ'ದಲ್ಲಿ ನಟಿಸಲು ನೂರಾರು ಕೋಟಿ ರೂ. ಸಂಭಾವನೆ ಪಡೆದ ಯಶ್-ರಣಬೀರ್ ಕಪೂರ್‌

ರಣಬೀರ್ ಕಪೂರ್ ಅಭಿನಯದ ರಾಮಾಯಣ ಸಿನಿಮಾವು ಎರಡು ಭಾಗದಲ್ಲಿ ತೆರೆ ಮೇಲೆ ಬರಲಿದೆ. ಈ ಎರಡು ಭಾಗಗಳನ್ನು ಕೂಡ 2026 ಮತ್ತು 2027ರ ದೀಪಾವಳಿ ದಿನದಂದು ರಿಲೀಸ್ ಮಾಡಲಾಗುತ್ತದೆ. ಈ ಎರಡು ಭಾಗಗಳನ್ನು ನಿತೇಶ್ ತಿವಾರಿ ನಿರ್ದೇಶಿಸಲಿದ್ದಾರೆ. ಬಿಡುಗಡೆ ದಿನಾಂಕವನ್ನು ಪ್ರೈಮ್ ಫೋಕಸ್ ಸ್ಟುಡಿಯೋಸ್‌ನ ನಮಿತ್ ಮಲ್ಹೋತ್ರಾ ದೃಢಪಡಿಸಿದ್ದು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸುತ್ತಿದೆ.