ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sai Pallavi: ಬಿಕಿನಿ ಲುಕ್‌ ಟ್ರೋಲ್ ಮಾಡಿದ್ದವರಿಗೆ ನಟಿ ಸಾಯಿ ಪಲ್ಲವಿ ತಿರುಗೇಟು!

Actress Sai Pallavi bikini dress: ಇತ್ತೀಚೆಗೆ ನಟಿ ಸಾಯಿ ಪಲ್ಲವಿ ಪ್ರವಾಸಕ್ಕೆಂದು ತೆರಳಿದ್ದು ಬೀಚ್ ಸೈಡ್ ನಲ್ಲಿ ಬಿಕಿನಿ ಧರಿಸಿ ಫೋಟೊ ಶೂಟ್ ಮಾಡಿಸಿಕೊಂಡಿದ್ದರು ಎನ್ನಲಾದ ಫೋಟೋ ವೈರಲ್ ಆಗಿತ್ತು.. ಹೀಗಾಗಿ ಟ್ರೋಲರ್ಸ್ ಈ ಫೋಟೊಗೆ ಟೀಕೆ ಮಾಡಿದ್ದರು. ಆದರೆ ಸಾಯಿ ಪಲ್ಲವಿ ಅಭಿಮಾನಿಗಳು ಆಕೆಯ ಪರ ನಿಂತು ಎಲ್ಲ ಟೀಕೆಗೂ ಪ್ರತ್ಯುತ್ತರ ನೀಡಿದ್ದರು. ಇದೀಗ ಈ ವಿಚಾರದ ಬಗ್ಗೆ ಸ್ವತಃ ನಟಿ ಸಾಯಿ ಪಲ್ಲವಿ ಅವರು ವಿಡಿಯೋ ಒಂದನ್ನು ಹಂಚಿಕೊಂಡಿದ್ದು ಸ್ಪಷ್ಟನೆ ನೀಡಿದ್ದಾರೆ.

ನವದೆಹಲಿ: ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ನಟಿ ಸಾಯಿ ಪಲ್ಲವಿ (Sai Pallavi) ಅವರು ತಮ್ಮ ಸರಳತೆಯಿಂದಲೇ ಖ್ಯಾತಿ ಪಡೆದಿದ್ದಾರೆ. ಸಹಜ ಸೌಂದರ್ಯ ಸಾಂಪ್ರದಾಯಿಕ ಉಡುಗೆ ಯಿಂದ ಹೆಚ್ಚು ಪ್ರಸಿದ್ಧರಾದ ಇವರು ಸಿನಿಮಾ ಮಾತ್ರವಲ್ಲದೆ ವೈಯಕ್ತಿಕ ಜೀವನದಲ್ಲೂ ಸರಳ ವಾಗಿ ಇದ್ದವರು. ಸಿನಿಮಾದಲ್ಲಿ ಹಾಗೂ ಸಿನಿಮಾ ಸಂಬಂಧಿತ ಕಾರ್ಯಕ್ರಮ, ಪ್ರಶಸ್ತಿ ಪ್ರಧಾನ ಸಮಾರಂಭ ಯಾವುದೇ ಇರಲಿ ನಟಿ ಸಾಯಿ ಪಲ್ಲವಿ ಅವರು ಹೆಚ್ಚು ಸೀರೆ ಧರಿಸಿಕೊಂಡೆ ಎಂಟ್ರಿ ನೀಡುತ್ತಾರೆ‌. ಹೀಗಾಗಿಯೇ ಇವರಿಗೆ ದೊಡ್ಡ ಮಟ್ಟಿಗಿನ ಅಭಿಮಾನಿ ಬಳಗ ಇದೆ.

ಅಂತೆಯೇ ನಟಿ ಸಾಯಿ ಪಲ್ಲವಿ ಅವರು ಈ ಸಾಂಪ್ರದಾಯಿಕ ಲೈಫ್ ಸ್ಟೈಲ್ ನಿಂದ ಹೊರಬಂದಿದ್ದಾರೆ ಎಂಬ ಸುದ್ದಿ ಇತ್ತೀಚೆಗಷ್ಟೇ ವೈರಲ್ ಆಗಿದೆ‌.‌ ಅವರು ತಮ್ಮ ತಂಗಿ ಪೂಜಾ ಅವರ ಜೊತೆಗೆ ಇತ್ತೀಚೆಗೆ ಪ್ರವಾಸ ಕ್ಕೆಂದು ತೆರಳಿದ್ದು ಬೀಚ್ ಸೈಡ್ ನಲ್ಲಿ ಬಿಕಿನಿ ಧರಿಸಿ ಫೋಟೊ ಶೂಟ್ ಮಾಡಿಸಿ ಕೊಂಡಿದ್ದರು ಎನ್ನಲಾದ ಫೋಟೋ ವೈರಲ್ ಆಗಿತ್ತು.. ಹೀಗಾಗಿ ಟ್ರೋಲರ್ಸ್ ಈ ಫೋಟೊಗೆ ಟೀಕೆ ಮಾಡಿದ್ದರು. ಆದರೆ ಸಾಯಿ ಪಲ್ಲವಿ ಅಭಿಮಾನಿಗಳು ಆಕೆಯ ಪರ ನಿಂತು ಎಲ್ಲ ಟೀಕೆಗೂ ಪ್ರತ್ಯುತ್ತರ ನೀಡಿದ್ದರು. ಇದೀಗ ಈ ವಿಚಾರದ ಬಗ್ಗೆ ಸ್ವತಃ ನಟಿ ಸಾಯಿ ಪಲ್ಲವಿ ಅವರು ವಿಡಿಯೋ ಒಂದನ್ನು ಹಂಚಿಕೊಂಡಿದ್ದು ಸ್ಪಷ್ಟನೆ ನೀಡಿದ್ದಾರೆ.

ನಟಿ ಸಾಯಿ ಪಲ್ಲವಿ ಅವರ ಸಹೋದರಿ ಪೂಜಾ ಅವರು ತಮ್ಮ ಇನ್ ಸ್ಟಾ ಗ್ರಾಂ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ನಟಿ ಸಾಯಿ ಪಲ್ಲವಿ ಜೊತೆಗೆ ಬೀಚ್ ಸೈಡ್ ನಲ್ಲಿ ಮೋಜು ಮಸ್ತಿ ಮಾಡುವ ಫೋಟೊ ತುಂಬಾ ಹೈಲೆಟ್ ಆಗಿತ್ತು. ಕೆಲವು ಟ್ರೋಲರ್ಸ್ ಇದೇ ಫೋಟೊಗೆ ಎಐ ಎಡಿಟ್ ಮಾಡಿ ನಟಿ ಸಾಯಿ ಪಲ್ಲವಿ ಅವರ ಬಿಕಿನಿ ಫೋಟೊ ಜನರೇಟ್ ಮಾಡಿ ಅದನ್ನು ಅಪ್ಲೋಡ್ ಮಾಡಿ ಸಾಕಷ್ಟು ಟೀಕೆ ಮಾಡಿದ್ದರು. ಇದೀಗ ಇಂತಹ ಟ್ರೋಲರ್ಸ್ ಗೆ ವಿಡಿಯೋ ಮೂಲಕವೇ ನಟಿ ಸಾಯಿ ಪಲ್ಲವಿ ಅವರು ಟಾಂಗ್ ನೀಡಿದ್ದಾರೆ.



ನಟಿ ಸಾಯಿ ಪಲ್ಲವಿ ಅವರು ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯವಾಗಿದ್ದು ಸಾಕಷ್ಟು ಫ್ಯಾನ್ಸ್ ಫಾಲೋವರ್ಸ್ ಅನ್ನು ಕೂಡ ಹೊಂದಿದ್ದಾರೆ. ಯಾವಾಗಲೂ ಡ್ಯಾನ್ಸ್ ವಿಡಿಯೋ, ಸಿನಿಮಾ ಕ್ಲಿಪ್ಸ್, ಶೂಟಿಂಗ್ ದೃಶ್ಯ ಅಪ್ಲೋಡ್ ಮಾಡುತ್ತಿದ್ದ ನಟಿ ಸಾಯಿ ಪಲ್ಲವಿ ಅವರು ಈ ಬಾರಿ ತಮ್ಮ ಸಹೋದರಿ ಜೊತೆಗಿನ ಪ್ರವಾಸದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅದರ ಜೊತೆಗೆ ವಿಶೇಷ ಕ್ಯಾಪ್ಶನ್ ಅನ್ನು ಕೂಡ ಬರೆದಿದ್ದಾರೆ. ಈ ವಿಡಿಯೋ ಮತ್ತು ಅದರಲ್ಲಿನ ಫೋಟೊಗಳು ನಿಜ ವಾದವು.. ಇದನ್ನು ಯಾವುದೇ ತರನಾಗಿ ಎಐ ತಂತ್ರಜ್ಞಾನದ ಮೂಲಕ ಸೃಷ್ಟಿ ಮಾಡಲಿಲ್ಲ ಎಂದು ಬರೆದಿದ್ದಾರೆ. ಈ ಮೂಲಕ ಟ್ರೋಲ್ ಮಾಡುವವರಿಗೆ ಸರಿಯಾಗಿ ಉತ್ತರ ನೀಡಿದ್ದಾರೆ.

ಇದನ್ನೂ ಓದಿ:Ramya and Vinay Rajkumar: ನಟ ವಿನಯ್ ರಾಜ್‌ಕುಮಾರ್‌ ಜೊತೆ ರಮ್ಯಾ ಡೇಟಿಂಗ್? ಏನಿದು ರೂಮರ್ಸ್‌?

ನಟಿ ಸಾಯಿ ಪಲ್ಲವಿ ಅವರು ಹಂಚಿಕೊಂಡ ವಿಡಿಯೋ ವೈರಲ್ ಆಗಿದ್ದು ಅದರಲ್ಲಿ, ಬೀಚ್ ರೈಡ್ , ಬೋಟ್ ರೈಡ್, ಹಾಗೂ ತಮ್ಮ ತಂಗಿಯ ಜೊತೆಗೆ ಕಳೆದ ಅವಿಸ್ಮರಣೀಯ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ನಟಿ ಸಾಯಿ ಪಲ್ಲವಿ ಅವರ ಈ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆಯ ಕಾಮೆಂಟ್ ಕೂಡ ಹಾಕಿದ್ದಾರೆ. ಈ ವಿಡಿಯೋ ಹಂಚಿಕೊಂಡ ಕೆಲವೇ ಕ್ಷಣಕ್ಕೆ ಅತೀ ಹೆಚ್ಚು ವೀಕ್ಷಣೆ ಹಾಗೂ ಕಾಮೆಂಟ್, ಲೈಕ್ಸ್ ಅನ್ನು ಸಹ ಪಡೆದುಕೊಂಡಿದೆ. ಸದ್ಯ ನಟಿ ಸಾಯಿ ಪಲ್ಲವಿ ಅವರು ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದಲ್ಲಿ ಸೀತೆಯಾಗಿ ನಟಿಸುತ್ತಿದ್ದಾರೆ. ಶ್ರೀರಾಮ ನಾಗಿ ರಣ್‌ಬೀರ್ ಕಪೂರ್, ರಾವಣನಾಗಿ ಯಶ್ ಕಾಣಿಸಿಕೊಳ್ಳಲಿದ್ದಾರೆ. ಇದಾದ ಬಳಿಕ 'ಮೇರೆ ರಹೋ' ಎಂಬ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.