Ramya and Vinay Rajkumar: ನಟ ವಿನಯ್ ರಾಜ್‌ಕುಮಾರ್ ಜೊತೆ ರಮ್ಯಾ ಡೇಟಿಂಗ್? ಏನಿದು ರೂಮರ್ಸ್?
Ramya and Vinay Rajkumar: ರಮ್ಯಾ ಅವರು ರಾಜ್‌ಕುಮಾರ್ ಮೊಮ್ಮಗ ನಟ ವಿನಯ್ ರಾಜ್‌ಕುಮಾರ್ ಜೊತೆ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಅವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಇದೀಗ ಸ್ವತಃ ನಟಿ ರಮ್ಯಾ ಅವರೇ ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊ ಒಂದನ್ನು ಶೇರ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ..

Ramya and Vinay -

ಬೆಂಗಳೂರು: ಸ್ಯಾಂಡಲ್ ವುಡ್ ಮೋಹಕ ತಾರೆ ರಮ್ಯಾ (Ramya) ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಅಭಿ, ಮುಸ್ಸಂಜೆ ಮಾತು, ಸಂಜು ವೆಡ್ಸ್ ಗೀತಾ, ರಂಗ ಎಸೆಸೆಲ್ಸಿ, ದತ್ತಾ, ಅಮೃತಧಾರೆ, ಅರಸು ಸೇರಿದಂತೆ ಸಾಲು ಸಾಲು ಹಿಟ್ ಸಿನಿಮಾದಲ್ಲಿ ಅಭಿನಯಿಸಿದ್ದ ನಟಿ ರಮ್ಯಾ ಅವರಿಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲಿ ಯೂ ಸಿನಿಮಾ ಮಾಡಿದ್ದ ನಟಿ ರಮ್ಯಾ ಅವರು ಬಳಿಕ ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಅದಾದ ಬಳಿಕ ಯಾವ ಸಿನಿಮಾ ಕೂಡ ಮಾಡಲಿಲ್ಲ. ಹಾಗಿದ್ದರೂ ನಟ ದರ್ಶನ್ ಪ್ರಕರಣದಲ್ಲಿ ರೇಣುಕಾ ಸ್ವಾಮಿ ಕುಟುಂಬದ ಪರ ಹೇಳಿಕೆ ನೀಡುವ ಮೂಲಕ ಇತ್ತೀಚೆಗಷ್ಟೇ ದೊಡ್ಡ ಮಟ್ಟಿಗೆ ಸುದ್ದಿಯಾಗಿದ್ದರು. ಈ ನಡುವೆ ರಮ್ಯಾ ಅವರು ರಾಜ್ ಕುಮಾರ್ ಮೊಮ್ಮಗ ನಟ ವಿನಯ್ ರಾಜ್‌ಕುಮಾರ್ ಜೊತೆ ಹೆಚ್ಚಾಗಿ ಕಾಣಿಸಿಕೊಂಡಿದ್ದು ಅವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಇದೀಗ ಸ್ವತಃ ನಟಿ ರಮ್ಯಾ ಅವರೇ ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊ ಒಂದನ್ನು ಶೇರ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ನಟಿ ರಮ್ಯಾ ಅವರು ಸಿನಿಮಾದಿಂದ ದೂರ ಉಳಿದ ಬಳಿಕ ಸಾರ್ವಜನಿಕವಾಗಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಹಾಗಿದ್ದರೂ ಅವರು ನಟ ವಿನಯ್ ರಾಜ್ ಕುಮಾರ್ ಜೊತೆಗಿದ್ದ ಕೆಲವು ಫೋಟೊಗಳು ವೈರಲ್ ಆಗಿದೆ. ಇವರ ಅಭಿಮಾನಿಗಳು ಹೊಸ ಸಿನಿಮಾ ಮಾಡ್ತಿರಬೇಕು ಎಂದು ಅಂದುಕೊಂಡಿದ್ದರೆ, ಟ್ರೋಲರ್ಸ್ ಮಾತ್ರ ಇವರಿಬ್ಬರ ನಡುವೆ ಏನೋ ಇದೆ ಎಂಬ ಗಾಸಿಪ್ ಅನ್ನು ಹರಡಿಸುತ್ತಿದ್ದಾರೆ. ಇಷ್ಟೆಲ್ಲ ವದಂತಿ ಹರಿದಾಡಿದ್ದ ಬೆನ್ನಲ್ಲೇ ನಟಿ ರಮ್ಯಾ ಅವರು ಈ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ನಟಿ ರಮ್ಯಾ ಹಾಗೂ ವಿನಯ್ ರಾಜ್ ಕುಮಾರ್ ಅವರು ಜೊತೆಗೆ ಸೇರಿ ಒಂದು ವಿಡಿಯೋ ಮಾಡಿದ್ದು ಅದನ್ನೇ ಕ್ಲ್ಯಾರಿಟಿ ಎಂಬ ಅರ್ಥದಲ್ಲಿ ಪೋಸ್ಟ್ ಮಾಡಿದ್ದಾರೆ. ವೈರಲ್ ಆದ ವಿಡಿಯೋ ದಲ್ಲಿ ವಿನಯ್ ತನ್ನ ಮೊಬೈಲ್ ನಿಂದ ರಮ್ಯಾಗೆ ಮೆಸೇಜ್ ಮಾಡಿ ತಾನು ಕಳಿಸಿದ ಲೊಕೇಶನ್ ಗೆ ಬರುವಂತೆ ಹೇಳುತ್ತಾರೆ. ಇದರಲ್ಲಿ ರಿಂಗ್ ಕೊಡಿಸುವ ಬಗ್ಗೆ ತಿಳಿಸಿದ್ದು ನಿನಗೆ ಯಾಕೆ ರಿಂಗ್ ಕೊಡಿಸ ಬೇಕು ಅಂತ ಅನಿಸಿತು ಎಂದು ರಮ್ಯಾ ಕೂಡ ಪ್ರಶ್ನಿಸುತ್ತಾರೆ. ಬಳಿಕ ಇಬ್ಬರು ಸೇರಿ ಜ್ಯುವೆಲರಿ ಶಾಪ್ ನಲ್ಲಿ ಡೈಮಂಡ್ ರಿಂಗ್ ಖರೀದಿ ಮಾಡುತ್ತಾರೆ.
ಇದನ್ನು ಓದಿ:OG Movie: ಪವನ್ ಕಲ್ಯಾಣ್ ಅಭಿನಯದ ʼಓಜಿʼ ಚಿತ್ರಕ್ಕೆ ಭಜರಂಗಿ ಲೋಕಿ ವಿಲನ್
ರಿಂಗ್ ಸೆಲೆಕ್ಟ್ ಮಾಡೋಕೆ ರಮ್ಯಾಗೆ ವಿನಯ್ ಬಿಟ್ಟು ಬಿಡುತ್ತಾರೆ. ಆಗಲೇ "ನಿಂಗ್ಯಾಕೆ ರಿಂಗ್ ಕೊಡಬೇಕು ಅಂತ ಅನಿಸಿತು" ಅಂತ ರಮ್ಯಾ ಕೇಳಿದಾಗ, ಅದಕ್ಕೆ ವಿನಯ್ ಉತ್ತರಿಸುತ್ತಾರೆ ಅವಳನ್ನು ಮೀಟ್ ಮಾಡಿ 3 ವರ್ಷ ಆಯ್ತಲ್ಲ. ಅದಕ್ಕೆ ಈ ಬಾರಿ ಚೆನ್ನಾಗಿರೋದು ಏನಾದರೂ ಕೊಡೋಣ ಅಂತ ಎಂದು ಹೇಳುತ್ತಾರೆ. ಕೊನೆಗೆ ರಮ್ಯಾ ಅವರೇ ರಿಂಗ್ ಸೆಲೆಕ್ಟ್ ಮಾಡುತ್ತಾರೆ.. ಬಳಿಕ ಅಂಗಡಿ ಮಾಲಕ ಇಬ್ಬರಿಗೂ ಶುಭ ಕೋರುತ್ತಾನೆ.
ಆಗ ರಮ್ಯಾ ಅವರು ಅವರಿಗೆ ಒಕೆ ಬಟ್ ನನಗ್ಯಾಕೆ.. ಎಲ್ಲರೂ ಹಾಗೆಯೇ ಅಂದು ಕೊಳ್ತಾರೆ ಬಟ್ ನಾವು ಒಳ್ಳೆ ಫ್ರೆಂಡ್ಸ್...ಎಂದು ಹೇಳುವ ಮೂಲಕ ಸಂಬಂಧಗಳ ಅನುಬಂಧ ವಜ್ರದಂತಿರಬೇಕು ಎಂಬ ಮೂಲಕ ವಿಡಿಯೋ ಕೊನೆಗೊಳ್ಳುವುದು. ಅವರಿಬ್ಬರು ಒಳ್ಳೆ ಸ್ನೇಹಿತರಷ್ಟೇ ಗಾಸಿಪ್ ಎಲ್ಲವೂ ಸುಳ್ಳು ಎಂಬ ಅರ್ಥದಲ್ಲಿ ಈ ಪೋಸ್ಟ್ ವೈರಲ್ ಆಗಿದೆ. ಈ ಮೂಲಕ ಉಂಟಾದ ಎಲ್ಲ ವದಂತಿಗಳನ್ನು ನಟಿ ರಮ್ಯಾ ಅವರು ತಳ್ಳಿ ಹಾಕಿದ್ದಾರೆ.