Hema Malini: ಅಮಿತಾಬ್ ಬಚ್ಚನ್ ಜೊತೆ ʻಆʼ ಸೀನ್‌ಗಾಗಿ ಟೈಟ್ ಆಗಿ ಬ್ಲೌಸ್ ಹೊಲಿಯೋಕೆ ಹೇಳಿದ್ರಂತೆ ಹೇಮಾ ಮಾಲಿನಿ!
ಬಾಲಿವುಡ್ ಖ್ಯಾತ ನಟಿ ಹೇಮಾ ಮಾಲಿನಿಯ ಕುತೂಹಲಕಾರಿ ವಿಚಾರವೊಂದನ್ನು ರೇಣು ಚೋಪ್ರಾ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ನಟಿ ಹೇಮಾ ಮಾಲಿನಿ ಕೇವಲ ಸಿನಿಮಾ ತೆರೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲಿಯೂ ತುಂಬಾ ರೋಮ್ಯಾಂಟಿಕ್ ಎನ್ನುವ ಕುತೂಹಲಕಾರಿ ವಿಚಾರವೊಂದನ್ನು ರೇಣು ಚೋಪ್ರಾ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.


ಮುಂಬೈ: ಬಾಲಿವುಡ್‌ನ ಒಂದು ಕಾಲದ ಡ್ರೀಮ್ ಗರ್ಲ್ ಅಂದ್ರೆ ಅದು ಹೇಮಾ ಮಾಲಿನಿ (Hema Malini). ಇಂದಿಗೂ ಸಿನಿ ಪ್ರಿಯರ ಮನಸ್ಸು ಗೆದ್ದಿರುವ ನಟಿ ಹೇಮಾ ಮಾಲಿನಿ ಅದೇ ಚಾರ್ಮ್ ಉಳಿಸಿಕೊಂಡಿದ್ದಾರೆ. 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ನಟಿ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿ ಮನರಂಜಿಸಿದ್ದರು. ಸದ್ಯ ಸಿನಿಮಾದಿಂದ ದೂರ ಉಳಿದಿರುವ ನಟಿ ಪ್ರಸ್ತುತ ಚಿತ್ರರಂಗವನ್ನು ತೊರೆದು ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಇದೀಗ ಬಾಲಿವುಡ್ ಖ್ಯಾತ ನಟಿ ಹೇಮಾ ಮಾಲಿನಿಯ ಕುತೂಹಲಕಾರಿ ವಿಚಾರವೊಂದನ್ನು ನಿರ್ಮಾಪಕಿ ರೇಣು ಚೋಪ್ರಾ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ನಟಿ ಹೇಮಾ ಮಾಲಿನಿ ಕೇವಲ ಸಿನಿಮಾ ತೆರೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲಿಯೂ ತುಂಬಾ ರೋಮ್ಯಾಂಟಿಕ್ ಎನ್ನುವ ಕುತೂಹಲಕಾರಿ ವಿಚಾರವೊಂದನ್ನು ರೇಣು ಚೋಪ್ರಾ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
2003ರಲ್ಲಿ ಬಿಡುಗಡೆಯಾದ ಬಾಗ್ಬನ್ ಚಿತ್ರದಲ್ಲಿ ಬಾಲಿವುಡ್ ದಿಗ್ಗಜ ನಟ ಅಮಿತಾಭ್ ಬಚ್ಚನ್ ಮತ್ತು ಹೇಮಾ ಮಾಲಿನಿ ಪತಿ ಪತ್ನಿ ಆಗಿ ನಟಿಸಿದ್ದರು. ಕೌಟುಂಬಿಕ ಮೌಲ್ಯಗಳು ಮತ್ತು ಪರಸ್ಪರ ಪ್ರೀತಿಯ ಬಂಧವನ್ನು ತೋರ್ಪಡಿಸಿದ ಈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಜೊತೆ ಮತ್ತೊಮ್ಮೆ ಹೇಮಾ ಮಾಲಿನಿ ತೆರೆ ಹಂಚಿಕೊಂಡಿದ್ದರು. ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಕಂಡ ಈ ಸಿನಿಮಾ ಸೂಪರ್ ಹಿಟ್ ಕಂಡಿತ್ತು. ಅಮಿತಾಭ್ ಬಚ್ಚನ್ ಮತ್ತು ಹೇಮಾ ಮಾಲಿನಿಯವರ ಅಭಿನಯಕ್ಕೆ ಸಿನಿಪ್ರಿಯರು ಮನಸೋತಿದ್ದರು.
ಅಮಿತಾಬ್ ಬಚ್ಚನ್ ಮತ್ತು ಹೇಮಾ ಮಾಲಿನಿಯ ಕ್ಯೂಟ್ ಪೇರ್ ಸಿನಿಪ್ರಿಯರನ್ನು ಭಾರೀ ಸೆಳೆದಿತ್ತು. ಇನ್ನು ಈ ಚಿತ್ರದ ದೃಶ್ಯದಲ್ಲಿ ಬರುವ ಒಂದು ಸನ್ನಿವೇಶಕ್ಕಾಗಿ ಹೇಮಾ ಮಾಲಿನಿ ಯಾವ ರೀತಿ ತಯಾರು ಆಗಿದ್ದರು, ಸಿನಿಮಾ ಪಾತ್ರಕ್ಕೆ ಯಾವ ರೀತಿ ಹೊಂದಿಕೊಂಡಿದ್ದರು ಎಂದು ನಿರ್ದೇಶಕ ರವಿ ಚೋಪ್ರಾ ಅವರ ಪತ್ನಿ ರೇಣು ಚೋಪ್ರಾ ಬಹಿರಂಗ ಪಡಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಮಾ ಮಾಲಿನಿ ತುಂಬಾ ರೊಮ್ಯಾಂಟಿಕ್ ಎನ್ನುವ ವಿಚಾರ ಬಿಚ್ಚಿಟ್ಟ ರೇಣು ಚೋಪ್ರಾ ಬಾಗ್ಬನ್ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಅವರೊಂದಿಗೆ ನಟಿಸುತ್ತಿದ್ದೇನೆ ಎಂಬ ಉತ್ಸಾಹ ನಟಿಯಲ್ಲಿ ಹೆಚ್ಚಿತ್ತು. ಹೀಗಾಗಿ ಸಿನಿಮಾ ಪಾತ್ರದಲ್ಲಿ ನಟಿ ಹೆಚ್ಚು ಆಳವಾಗಿ ತೊಡಗಿದ್ದರು ಎಂದು ಹೇಳಿಕೊಂಡಿದ್ದಾರೆ.
ಈ ಚಿತ್ರದಲ್ಲಿ ಹೇಮಾ ಮಾಲಿನಿ ಕನ್ನಡಿಯ ಮುಂದೆ ನಿಂತು ತಯಾರಾಗುತ್ತಿದ್ದ ದೃಶ್ಯವಿತ್ತು. ಆ ಸಂದರ್ಭದಲ್ಲಿ ರಾಜ್ ಹಿಂದಿನಿಂದ ಬಂದು ಅವಳನ್ನು ನೋಡಿ ವಾವ್ ಎಂದು ಹೇಳುವ ಡೈಲಾಗ್ ಇತ್ತು. ಈ ದೃಶ್ಯಕ್ಕಾಗಿ ನಟಿ ಹೆಚ್ಚು ತಯಾರು ಆಗಿದ್ದರು. ಈ ಸನ್ನಿವೇಶಕ್ಕಾಗಿ ನಟಿ ತನ್ನ ಬ್ಲೌಸ್ ಅನ್ನು ಸ್ವಲ್ಪ ಟೈಟ್ ಆಗಿ ಹೊಲಿಯಿರಿ ಎಂದು ಹೇಳಿದ್ದರಂತೆ. ಅಮಿತ್ ಜೀ ಬಂದು ನನ್ನನ್ನು ಹಿಡಿದಾಗ ಆ ಸ್ಪರ್ಶ ನನಗೆ ತಿಳಿಯಬೇಕು. ನೋಡುಗರಿಗೆ ಆ ಭಾವನೆ ಅರ್ಥವಾಗಬೇಕು ಎಂದು ಹೇಳಿದ್ದರಂತೆ, ಅಮಿತಾಬ್ ಅವರ ಈ ಸ್ಪರ್ಶ ರೊಮ್ಯಾಂಟಿಕ್ ಆಗಿ ಕಾಣಬೇಕು, ಅವರು ನನ್ನನ್ನು ಮುಟ್ಟಿದ್ದಾರೆ, ಅದು ಮದುವೆಯಾಗಿ ಹಲವು ವರ್ಷಗಳ ನಂತರ ಎಂಬ ಭಾವನೆ ತುಂಬಾ ಅರ್ಥ ಪೂರ್ಣ ವಾಗಿಸುತ್ತದೆ ಎಂದು ತಿಳಿಸಿದ್ದರು. ಹಾಗಾಗಿ ನಟಿ ಸಿನಿಮಾ ಪರದೆಯ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲಿಯೂ ಹೇಮಾ ಮಾಲಿನಿ ತುಂಬಾ ರೋಮ್ಯಾಂಟಿಕ್ ಎಂದು ರೇಣು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನು ಓದಿ: Share Cinema Teaser: ಕನ್ನಡತಿ ಖ್ಯಾತಿ ಕಿರಣ್ ರಾಜ್ ನಟನೆಯ ʼಶೇರ್ʼ ಸಿನಿಮಾದ ಟೀಸರ್ ರಿಲೀಸ್
ಸಿನಿಮಾ ಪಾತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಲ್ಲದೆ, ಚಿತ್ರದಲ್ಲಿ ಬರುವ ರಾಜ್ ಮತ್ತು ಪೂಜಾ ಅವರ ಸಂಬಂಧದ ಚಿತ್ರಣವನ್ನು ಜನರಿಗೆ ಅರ್ಥವಾಗಿಸಲು ಬೇಕಾದ ಸಲಹೆಗಳನ್ನು ಚರ್ಚಿಸುತ್ತಿದ್ದರು ಎಂದು ರೇಣು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. 1968ರಲ್ಲಿಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದ ನಟಿ ಸಪ್ನೋ ಕಾ ಸೌದಾಗರ್' ಚಿತ್ರದ ಮೂಲಕ ನಟನೆಯಲ್ಲಿ ತೊಡಗಿಸಿಕೊಂಡರು. ಆ ಬಳಿಕ ಸೀತಾ ಔರ್ ಗೀತಾ, ಶೋಲೆ, ಸತ್ತೆ ಪೆ ಸತ್ತಾ', ಧರ್ಮಾತ್ಮ ಇತ್ಯಾದಿ ಹಲವು ಸಿನಿಮಾದಲ್ಲಿ ಕಾಣಿಸಿಕೊಂಡು ಸದ್ಯ ನಟಿ ಹೇಮಾ ಮಾಲಿನಿ ರಾಜಕೀಯದಲ್ಲಿ ಬ್ಯುಸಿ ಇದ್ದಾರೆ.