ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kantara: Chapter 1: 'ಕಾಂತಾರ: ಚಾಪ್ಟರ್ 1’ ಅಬ್ಬರ; ಮೂರು ದಿನದ ಕಲೆಕ್ಷನ್ ಎಷ್ಟು?

Kantara: Chapter 1: ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಬಹು ನಿರೀಕ್ಷಿತ ಚಿತ್ರ 'ಕಾಂತಾರ: ಚಾಪ್ಟರ್ 1' ಬಿಡುಗಡೆಯಾಗಿದೆ. ಕನ್ನಡ ಮಾತ್ರವಲ್ಲದೆ ಇತರ ಭಾಷೆಯ ಪ್ರೇಕ್ಷಕರು ರಿಷಭ್ ನಟನೆ, ನಿರ್ದೇಶನಕ್ಕೆ ಫಿದಾ ಆಗಿದ್ದಾರೆ. ಸದ್ಯ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬಹಳಷ್ಟು ಹೈಪ್ ಕ್ರಿಯೇಟ್ ಮಾಡಿದ್ದು ಬಿಡು ಗಡೆಯಾದ ಕೇವಲ ಮೂರು ದಿನಗಳಲ್ಲಿ ಈ ಚಿತ್ರವು ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಹೆಸರು ಮಾಡುತ್ತಿದೆ.

Kantara_ Chapter 1

ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಬಹು ನಿರೀಕ್ಷಿತ ಚಿತ್ರ 'ಕಾಂತಾರ: ಚಾಪ್ಟರ್ 1' (Kantara: Chapter 1)ಬಿಡುಗಡೆಯಾಗಿದೆ. ಸಿನಿಮಾ ಬಹಳಷ್ಟು ಅದ್ಬುತ ವಾಗಿದೆ ಎಂದು ಸಿನಿ ಪ್ರಿಯರು ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಚಿತ್ರ ಬಿಡುಗಡೆ ಆಗಿ ಮೂರನೇ ದಿನವೂ ಸಹ ಬಹುತೇಕ ಶೋಗಳು ಮುಂಗಡವಾಗಿ ಬುಕ್ ಆಗುತ್ತಿವೆ. ಕನ್ನಡ ಮಾತ್ರವಲ್ಲದೆ ಇತರ ಭಾಷೆಯ ಪ್ರೇಕ್ಷ ಕರು ರಿಷಭ್ ನಟನೆ, ನಿರ್ದೇಶನಕ್ಕೆ ಫಿದಾ ಆಗಿದ್ದಾರೆ. ಸದ್ಯ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬಹಳಷ್ಟು ಹೈಪ್ ಕ್ರಿಯೇಟ್ ಮಾಡಿದ್ದು ಬಿಡುಗಡೆಯಾದ ಕೇವಲ ಮೂರು ದಿನಗಳಲ್ಲಿ ಈ ಚಿತ್ರವು ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಹೆಸರು ಮಾಡುತ್ತಿದೆ.

ಕಾಂತರ ಸಿನಿಮಾ ಮೆಚ್ಚು ಕೊಂಡಿದ್ದ ಪ್ರೇಕ್ಷಕರು ಸದ್ಯ' ಕಾಂತಾರ: ಚಾಪ್ಟರ್ 1' ಬಗ್ಗೆಯೂ ಎಲ್ಲಡೆ ಸಿನಿಮಾದ ಬಗ್ಗೆ ಒಳ್ಳೆಯ ಮಾತು ಕೇಳಿ ಬರುತ್ತಿದೆ. ಚಿತ್ರದ ಮೇಕಿಂಗ್, ಕ್ಯಾಮರಾ ವರ್ಕ್ ಪರ್ಫ ಮೆನ್ಸ್ ಗೆ ಫುಲ್ ಮಾರ್ಕ್ ನೀಡುತ್ತಿದ್ದಾರೆ. ಅಕ್ಟೋಬರ್ 2 ರಂದು ಬೃಹತ್ ಆರಂಭ ಪಡೆದ ಈ ಚಿತ್ರ ಭಾರತದಲ್ಲಿ ಸುಮಾರು 162.85 ಕೋಟಿ ನಿವ್ವಳ ಗಳಿಕೆ ಮಾಡುವ ಮೂಲಕ ಭಾರಿ ಯಶಸ್ಸು ಕಂಡಿದೆ.

ಮೊದಲ ದಿನ 61.85 ಕೋಟಿ, ಎರಡನೇ ದಿನ 46 ಕೋಟಿ, ಮೂರನೇ ದಿನ 55 ಕೋಟಿ ಒಟ್ಟು ಮೂರು ದಿನಗಳ ಗಳಿಕೆ 162.85 ಕೋಟಿ ರೂ ದಾಖಲೆ ಮಾಡಿದೆ. ಕರ್ನಾಟಕದಲ್ಲಿ 768 ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಅದರಲ್ಲಿ ಬೆಂಗಳೂರಿನಲ್ಲಿಯೇ 368 ಸ್ಕ್ರೀನ್‌ಗಳಲ್ಲಿ ಪ್ರಸಾರ ಕಂಡಿದ್ದು ಕೇವಲ ಮೂರು ದಿನಕ್ಕೆ ಸುಮಾರು 47.5 ಕೋಟಿ ಕಲೆಕ್ಷನ್ ಆಗಿದೆ ಎನ್ನಲಾಗಿ. ಭಾರತದಲ್ಲಿ ಮಾತ್ರವಲ್ಲದೆ ವಿದೇಶಿ ಮಾರುಕಟ್ಟೆಗಳಲ್ಲಿಯೂ 'ಕಾಂತಾರ ಚಾಪ್ಟರ್ 1' ಉತ್ತಮ ಪ್ರದರ್ಶನ ನೀಡಿದೆ. ಮೊದಲ ಎರಡು ದಿನಗಳಲ್ಲಿಯೇ 2.5 ಮಿಲಿಯನ್‌ಗಿಂತಲೂ ಹೆಚ್ಚು ಸುಮಾರು 22 ಕೋಟಿ ಗಳಿಕೆ ಮಾಡಿದೆ.

ಇದನ್ನು ಓದಿ:Kantara: Chapter 1: ಇದೇ ನೋಡಿ ʼಕಾಂತಾರ: ಚಾಪ್ಟರ್‌ 1' ಚಿತ್ರದ ಶೂಟಿಂಗ್‌ ನಡೆದ ಸ್ಥಳ

ಕಾಂತಾರ ಚಿತ್ರವು 2022ರ ಬ್ಲಾಕ್‌ಬಸ್ಟರ್ ಚಿತ್ರ ವಾಗಿ ಮುಡಿ ಬಂದಿತ್ತು. ಇದೀಗ 'ಕಾಂತಾರ: ಚಾಪ್ಟರ್ 1' ಬಿಡುಗಡೆ ಯಾಗಿ ಯಶಸ್ಸು ಕಾಣುತ್ತಿದೆ. ಈ ಚಿತ್ರಕ್ಕೆ ರಿಷಬ್ ಶೆಟ್ಟಿಯವರೇ ಕಥೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ರುಕ್ಮಿಣಿ ವಸಂತ್, ಜಯರಾಮ್ ಮತ್ತು ಗುಲ್ಶನ್ ದೇವಯ್ಯ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿ ಕೊಂಡಿದ್ದಾರೆ. ಈಗಾಗಲೇ ಅನೆಕ ಖ್ಯಾತ ನಟರು ಈ ಸಿನಿ ಮಾವನ್ನು ಹೊಗಳಿದ್ದು ಸಂದೀಪ್ ರೆಡ್ಡಿ ವಂಗಾ, ನಟ ಯಶ್ ಸೇರಿದಂತೆ ಅನೇಕರು ಚಿತ್ರವನ್ನು ಹೊಗಳಿದ್ದಾರೆ. ವಂಗಾ ಅವರು ಈ ಚಿತ್ರವನ್ನು 'ಭಾರತೀಯ ಸಿನಿಮಾ ಈ ಹಿಂದೆಂದೂ ನೋಡಿ ರದಂತಹ ನಿಜವಾದ ಮಾಸ್ಟರ್‌ಪೀಸ್' ಎಂದು ಕರೆದಿದ್ದಾರೆ. ಒಟ್ಟಿನಲ್ಲಿ ಕಾಂತರ ಚಿತ್ರದ ನಟ- ನಟಿಯರ ಪ್ರತಿಭೆ ಹಾಗೂ ಪರಿಶ್ರಮ ಹಾಗೂ ಟೀಮ್ ವರ್ಕ್ ಮೂಲಕ ಇಂದು 'ಕಾಂತಾರ ಚಾಪ್ಟರ್ 1'ಸಿನಿಮಾ ಯಶಸ್ವೀ ಪ್ರದರ್ಶನಗಳನ್ನು ನೀಡಿ ಹಿಟ್ ಗಳಿಸುತ್ತಿದೆ.