ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jaya Bachchan: ಸೆಲ್ಫಿ ಕೇಳಿದ ಅಭಿಮಾನಿ ಮೇಲೆ ಜಯಾ ಬಚ್ಚನ್ ಫುಲ್‌ ಗರಂ- ಇಲ್ಲಿದೆ ವಿಡಿಯೊ

Jaya Bachchan: ಬಾಲಿವುಡ್ ನ ಚಲನಚಿತ್ರ ನಿರ್ಮಾಪಕರಾದ ಮನೋಜ್ ಕುಮಾರ್ ಅವರು ಎಪ್ರಿಲ್ 4ರಂದು ನಿಧನ ಹೊಂದಿದ್ದರು. ಹೀಗಾಗಿ ಇಡೀ ಬಾಲಿವುಡ್ ತಾರಾಗಣವೇ ಈ ಬಗ್ಗೆ ಕಂಬನಿ ಮಿಡಿದಿದೆ. ಅವರಿಗೆ ಸಂತಾಪ ಸೂಚಿಸಲು ಚಿತ್ರರಂಗದ ಅನೇಕ ಗಣ್ಯರು ನೆರೆದಿದ್ದು ನಟಿ ಜಯ ಬಚ್ಚನ್ ಕೂಡ ಆಗಮಿಸಿದ್ದರು. ಈ ಸಂದರ್ಭ‌ ಜಯಾ ಬಚ್ಚನ್ ಬಳಿ ಬಲವಂತವಾಗಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾದ ಅಭಿಮಾನಿ ಮೇಲೆ ಹಿರಿಯ ನಟಿ ಗರಂ ಆಗಿದ್ದಾರೆ.

ಸೆಲ್ಫಿ ಕೇಳಿದ ಫ್ಯಾನ್‌ ಮೇಲೆ ಜಯಾ ಬಚ್ಚನ್‌ ಗರಂ-ವಿಡಿಯೊ ಇದೆ

Profile Pushpa Kumari Apr 7, 2025 3:55 PM

ನವದೆಹಲಿ: ತಮ್ಮ ಪ್ರೀತಿಯ ನಟ ನಟಿಯರ ಜೊತೆಗೆ ಫೋಟೊ, ಸೆಲ್ಫಿ‌ ತೆಗೆದುಕೊಳ್ಳಬೇಕು ಎಂಬ ಆಸೆ ಅಭಿಮಾನಿಗಳಲ್ಲಿ‌ ಇದ್ದೇ ಇರುತ್ತದೆ. ಇದಕ್ಕೆ ಕೆಲವು ನಟ ನಟಿಯರು ಅಭಿಮಾನಿಗಳಿಗೆ ಖುಷಿಯಿಂದ ಸಮ್ಮತಿಸಿದರೆ ಇನ್ನು ಕೆಲವರೂ ಅಭಿಮಾನಿಗಳ ಅತಿರೇಕದ ವರ್ತನೆಗೆ ಕೋಪಗೊಂಡು ಬಿಡುತ್ತಾರೆ. ಇದೇ ರೀತಿ ಬಾಲಿವುಡ್ ನಟಿ ಜಯಾ ಬಚ್ಚನ್ (Jaya Bachchan) ಬಳಿ ಬಲವಂತವಾಗಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾದ ಅಭಿಮಾನಿ ವಿರುದ್ಧ ನಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ನ ಚಲನಚಿತ್ರ ನಿರ್ಮಾಪಕರಾದ ಮನೋಜ್ ಕುಮಾರ್ ನಿಧನರಾದ ಕಾರಣ ಅವರಿಗೆ ಸಂತಾಪ ಸಲ್ಲಿಸಲು ಚಿತ್ರರಂಗದ ಅನೇಕ ಗಣ್ಯರು ನೆರೆದಿದ್ದು, ಈ ಸಂತಾಪ ಸಭೆಗೆ ಜಯಾ ಬಚ್ಚನ್ ಕೂಡ ಆಗಮಿಸಿದ್ದರು. ಈ ಸಂದರ್ಭ ಅಭಿಮಾನಿಯೋರ್ವರು ಬಲವಂತವಾಗಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಬಾಲಿವುಡ್​ ನಟಿ ಜಯಾ ಬಚ್ಚನ್ ಗರಂ ಆಗಿದ್ದು ಈ ವಿಡಿಯೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ (Viral Video)ಆಗುತ್ತಿದೆ.

ಬಾಲಿವುಡ್ ನ ಚಲನಚಿತ್ರ ನಿರ್ಮಾಪಕರಾದ ಮನೋಜ್ ಕುಮಾರ್ ಅವರು ಎಪ್ರಿಲ್ 4ರಂದು ನಿಧನ ಹೊಂದಿದ್ದರು. ಹೀಗಾಗಿ ಇಡೀ ಬಾಲಿವುಡ್ ತಾರಾಗಣವೇ ಈ ಬಗ್ಗೆ ಕಂಬನಿ ಮಿಡಿದಿದೆ. ಅವರಿಗೆ ಸಂತಾಪ ಸೂಚಿಸಲು ಚಿತ್ರರಂಗದ ಅನೇಕ ಗಣ್ಯರು ನೆರೆದಿದ್ದು ನಟಿ ಜಯಾ ಬಚ್ಚನ್ ಕೂಡ ಆಗಮಿಸಿದ್ದರು. ಈ ಸಂದರ್ಭ‌ ಜಯಾ ಬಚ್ಚನ್ ಬಳಿ ಬಲವಂತವಾಗಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾದ ಅಭಿಮಾನಿ ವಿರುದ್ಧ ನಟಿ ಅಸಮಾಧಾನ ವ್ಯಕ್ತಪಡಿಸಿದ್ದು‌ ಅಭಿಮಾನಿಯ ಅನುಚಿತ ವರ್ತನೆಗೆ ಸಿಟ್ಟಾಗಿ ಕೆಂಡಾಮಂಡಲವಾಗಿದ್ದಾರೆ.

ಜಯಾ ಬಚ್ಚನ್‌ ಕೋಪಗೊಂಡ ವಿಡಿಯೊ ಇಲ್ಲಿದೆ

ಫಿಲ್ಮಿಗ್ಯಾನ್ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಹಂಚಿಕೊಂಡಿದ್ದ ಈ ವಿಡಿಯೋದಲ್ಲಿ ಜಯಾ ಬಚ್ಚನ್ ಸೇರಿದಂತೆ ಇತರ ಗಣ್ಯರು ಮನೋಜ್ ಕುಮಾರ್ ನಿಧನದ ಪ್ರಾರ್ಥನ ಸಂದರ್ಭದಲ್ಲಿ ಬೇಸರದಲ್ಲಿ ನಿಂತಿರುವುದನ್ನು ಕಾಣ ಬಹುದು. ಜಯಾ ಬಚ್ಚನ್ ಕೂಡ ಯಾರ ಜೊತೆಗೂ ಅಷ್ಟಾಗಿ ಮಾತಿಗೆ ಇಳಿಯದೆ ತನ್ನಷ್ಟಕ್ಕೆ ಇದ್ದರು. ಆಗ ಒಮ್ಮಿಂದೊಮ್ಮೆಲೆ ಮಹಿಳಾ ಅಭಿಮಾನಿಯೊಬ್ಬರು ಜಯಾ ಬಚ್ಚನ್ ಅವರ ಭುಜ ತಟ್ಟಿ ಕರೆದಿದ್ದಾರೆ. ಆ ಬಳಿಕ ಆಕೆ ಸನ್ನೆ ಮಾಡಿ ಒಂದು ಫೋಟೊಗಾಗಿ ವಿನಂತಿಸಿದ್ದಾರೆ. ಆದರೆ ಜಯ ಬಚ್ಚನ್ ಕ್ಯಾಮರಗಳ ಎದುರೇ ಮಹಿಳೆಯ ಕೈ ಎಳೆದು ಮುಂದಕ್ಕೆ ದೂಡಿದ್ದಾರೆ. ಬಳಿಕ ನಾವು ಆಗಮಿಸಿದ್ದು ಯಾವ ಕಾರ್ಯಕ್ರಮಕ್ಕೆ ಎಂಬುದು ನೆನಪಿನಲ್ಲಿ ಇಡಿ ಎಂದು ಎಚ್ಚರಿಸಿ ಗದರಿದ್ದಾರೆ. ಅಲ್ಲಿದ್ದಂತಹ ಎಲ್ಲರೂ ಈ ದೃಶ್ಯ ಕಂಡು ಒಮ್ಮೆ ಶಾಕ್‌ ಆಗಿದ್ದಾರೆ.

ಇದನ್ನು ಓದಿ: Peddi Movie: ಮತ್ತೊಮ್ಮೆ ರಗಡ್‌ ಅವತಾರದಲ್ಲಿ ಗ್ಲೋಬಲ್‌ ಸ್ಟಾರ್‌ ರಾಮ್‌ ಚರಣ್‌; ಶಿವಣ್ಣ ಜತೆಗಿನ ‘ಪೆದ್ದಿ’ ಚಿತ್ರದ ಗ್ಲಿಂಪ್ಸ್ ಔಟ್

ಈ ವಿಡಿಯೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದ್ದು ಅಭಿಮಾನಿಗಳು ನಾನಾ ಬಗೆಯ ಪ್ರತಿಕ್ರಿಯೆ ‌ನೀಡಿದ್ದಾರೆ ಸೆಲೆಬ್ರಿಟಿಗಳಿಗೂ ಭಾವನೆ ಇದೆ, ವೈಯಕ್ತಿಕ ಸ್ವಾತಂತ್ರ್ಯ ಇದೆ ಅಭಿಮಾನಿಗಳ ಈ ರೀತಿ ನಡೆ ಸರಿಯಲ್ಲ ಎಂದು ಬಳಕೆದಾರರೊಬ್ಬರು ಈ ಬಗ್ಗೆ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನಟಿಯ ವರ್ತನೆ ಸರಿಯಾಗಿಯೇ ಇದೆ‌. ಫೋಟೋ ಕ್ಲಿಕ್ಕಿಸಿಕೊಳ್ಳಲು ಇದು ಸರಿಯಾದ ಸಮಯ ಅಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಈ ಸಂತಾಪ ಸಭೆಯಲ್ಲಿ ಅಮಿತಾ ಬಚ್ಚನ್ ಗೈರಾಗಿದ್ದು‌ ಜಯಾ ಬಚ್ಚನ್ ಮಾತ್ರ ಆಗಮಿಸಿದ್ದರು. ಆಮಿರ್ ಖಾನ್, ಫರ್ಹಾನ್ ಅಖ್ತರ್, ರಾಕೇಶ್ ರೋಷನ್, ನೀಲ್ ನಿತಿನ್ ಮುಖೇಶ್, ಇಶಾ ಡಿಯೋಲ್, ಕೃಷಿಕಾ ಲುಲ್ಲಾ ಮತ್ತು ಗಾಯಕ ಸೋನು ನಿಗಮ್ ಸೇರಿದಂತೆ ಹಲವಾರು ಪ್ರಮುಖ ಬಾಲಿವುಡ್ ಗಣ್ಯರು ಸಂತಾಪ ಸಭೆಯಲ್ಲಿ ಪಾಲ್ಗೊಂಡಿದ್ದರು.