ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಯಸ್ಸು ಎಂಬ ಸವಾಲು ಮೀರಿ, ಭರವಸೆಯ ದೀಪ ಹಚ್ಚಿದ ಟ್ರಸ್ಟ್‌ವೆಲ್ ಆಸ್ಪತ್ರೆ: 73 ವರ್ಷದವರ ಕಿಡ್ನಿಯನ್ನು 77 ವರ್ಷದ ವೃದ್ಧರಿಗೆ ಯಶಸ್ವಿ ಕಸಿ!

ವಯಸ್ಸು ಕೇವಲ ಒಂದು ಸಂಖ್ಯೆ ಎಂಬುದು ಮತ್ತೊಂದು ಬಾರಿ ಸಾಬೀತಾಗಿದೆ. ಬೆಂಗಳೂರಿನ ಟ್ರಸ್ಟ್‌ ವೆಲ್‌ ಆಸ್ಪತ್ರೆಯು ವೃದ್ಧರೊಬ್ಬರಿಗೆ ಯಶಸ್ವಿ ಕಿಡ್ನಿ ಕಸಿಯನ್ನು ನಡೆಸಿದ್ದಾರೆ. ಈ ಮೂಲಕ ಅಪರೂಪದ ಮತ್ತು ಸ್ಪೂರ್ತಿದಾಯಕ ಘಟನೆಗೆ ವೈದ್ಯರು ಸಾಕ್ಷಿಯಾಗಿದ್ದು, ಅಂಗಾಂಗ ದಾನದಲ್ಲಿ ವಯಸ್ಸಿನ ಮಿತಿ ಬಗ್ಗೆ ಇರುವ ಗ್ರಹಿಕೆಗಳನ್ನು ಬದಲಿಸಿದ್ದಾರೆ.

73 ವರ್ಷದವರ ಕಿಡ್ನಿಯನ್ನು 77 ವರ್ಷದ ವೃದ್ಧರಿಗೆ ಯಶಸ್ವಿ ಕಸಿ!

Ashok Nayak Ashok Nayak Aug 13, 2025 7:17 PM

ಬೆಂಗಳೂರು: ವಯಸ್ಸು ಕೇವಲ ಒಂದು ಸಂಖ್ಯೆ ಎಂಬುದು ಮತ್ತೊಂದು ಬಾರಿ ಸಾಬೀತಾಗಿದೆ. ಬೆಂಗಳೂರಿನ ಟ್ರಸ್ಟ್‌ವೆಲ್‌ ಆಸ್ಪತ್ರೆಯು ವೃದ್ಧರೊಬ್ಬರಿಗೆ ಯಶಸ್ವಿ ಕಿಡ್ನಿ ಕಸಿಯನ್ನು ನಡೆಸಿದ್ದಾರೆ. ಈ ಮೂಲಕ ಅಪರೂಪದ ಮತ್ತು ಸ್ಪೂರ್ತಿದಾಯಕ ಘಟನೆಗೆ ವೈದ್ಯರು ಸಾಕ್ಷಿಯಾಗಿದ್ದು, ಅಂಗಾಂಗ ದಾನದಲ್ಲಿ ವಯಸ್ಸಿನ ಮಿತಿ ಬಗ್ಗೆ ಇರುವ ಗ್ರಹಿಕೆಗಳನ್ನು ಬದಲಿಸಿದ್ದಾರೆ. ಇದು 73ನೇ ವಯಸ್ಸಿನಲ್ಲಿ ಕೊನೆಗೊಂಡ ಜೀವವೊಂದು 77ನೇ ವಯಸ್ಸಿನ ಜೀವಕ್ಕೆ ಮರುಹುಟ್ಟು ನೀಡಿದ ಕಥೆಯಾಗಿದ್ದು, ವೈದ್ಯಕೀಯ ಲೋಕದ ಅಚ್ಚರಿಗೆ ಉದಾಹರಣೆಯಾಗಿದೆ.

ಕಳೆದ ವಾರ ಟ್ರಸ್ಟ್‌ವೆಲ್‌ ಆಸ್ಪತ್ರೆಯ ವೈದ್ಯಕೀಯ ತಂಡವು 73 ವರ್ಷದ ಮೃತ ವ್ಯಕ್ತಿಯಿಂದ ಪಡೆದ ಕಿಡ್ನಿಯನ್ನು ಬಳಸಿ ಯಶಸ್ವಿ ಕಸಿ ಶಸ್ತ್ರಚಿಕಿತ್ಸೆ ನಡೆಸಿದೆ. ಸಾಮಾನ್ಯವಾಗಿ, 70 ವರ್ಷ ಮೇಲ್ಪಟ್ಟ ದಾನಿಗಳನ್ನು ಕಸಿ ಶಸ್ತ್ರಚಿಕಿತ್ಸೆಗೆ ಅಂಚಿನಲ್ಲಿರುವ ಅಥವಾ ವಿಸ್ತೃತ ಮಾನದಂಡದ ದಾನಿಗಳು ಎಂದು ಪರಿಗಣಿಸಲಾಗುತ್ತದೆ. ಆದರೆ, ಈ ಪ್ರಕರಣವನ್ನು ಮತ್ತಷ್ಟು ವಿಶೇಷವಾಗಿಸಿದ್ದು, ಕಿಡ್ನಿ ಸ್ವೀಕರಿಸಿದ ರೋಗಿಯ ವಯಸ್ಸು. ಬಹು-ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ 77 ವರ್ಷದ ವೃದ್ಧರೊಬ್ಬರಿಗೆ 73 ವರ್ಷದ ವ್ಯಕ್ತಿಯ ಕಿಡ್ನಿಯನ್ನು ಯಶಸ್ವಿಯಾಗಿ ಕಸಿ ಮಾಡಲಾಗಿದೆ.

ಭಾರತದಲ್ಲಿ 70 ವರ್ಷ ಮೇಲ್ಪಟ್ಟವರಿಂದ ಅಂಗಾಂಗ ದಾನ ಪಡೆಯುವುದು ತೀರಾ ವಿರಳ. ವಯಸ್ಸಾದವರಿಂದ ಪಡೆದ ಅಂಗಾಂಗಗಳ ಕಾರ್ಯಕ್ಷಮತೆ, ಶಸ್ತ್ರಚಿಕಿತ್ಸೆಯ ನಂತರದ ಚೇತರಿಕೆಯ ಸವಾಲುಗಳು ಮತ್ತು ದೀರ್ಘಕಾಲೀನ ಫಲಿತಾಂಶಗಳ ಬಗೆಗಿನ ಕಳವಳಗಳಿಂದಾಗಿ ಸಾಮಾನ್ಯವಾಗಿ ವೃದ್ಧರ ಅಂಗಾಗ ಕಸಿಗೆ ಹಿಂದೇಟು ಹಾಕಲಾಗುತ್ತದೆ. ಹಲವು ಬಾರಿ ಇಂತಹ ಕಿಡ್ನಿಗಳನ್ನು ತಿರಸ್ಕರಿಸಲಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ವೈದ್ಯಕೀಯ ಧೈರ್ಯ ಮತ್ತು ಕರುಣೆ ಒಂದಾಗಿದ್ದು, ಫಲಿತಾಂಶ ಕೂಡ ಅದ್ಭುತವಾಗಿತ್ತು.

ಇದನ್ನೂ ಓದಿ: Vishweshwar Bhat Column: ದೂರ ಮಾಪನ ಉಪಕರಣ

ಈ ಕಸಿ ಕೇವಲ ವೈದ್ಯಕೀಯ ಯಶಸ್ಸಲ್ಲ, ಇದೊಂದು ಭರವಸೆಯ ಸಂದೇಶವಾಗಿದೆ ಎಂದು ಟ್ರಸ್ಟ್‌ವೆಲ್ ಆಸ್ಪತ್ರೆಯ ಹಿರಿಯ ಮೂತ್ರಪಿಂಡ ತಜ್ಞರಾದ ಡಾ ಅರವಿಂದ್ ಸಿ ಹೇಳಿದ್ದಾರೆ. ನಾವು ಹಿರಿಯ ವಯಸ್ಸಿನ ದಾನಿಗಳ ಅಂಗಾಂಗಗಳಿಗೆ ಕಡಿಮೆ ಪ್ರಾಮುಖ್ಯತೆ ಕೊಡುತ್ತೇವೆ. ಆದರೆ, ಕಠಿಣವಾದ ಪರೀಕ್ಷೆ ಮತ್ತು ಶಸ್ತ್ರಚಿಕಿತ್ಸೆಯ ಬಳಿಕ ಎಚ್ಚರಿಕೆಯ ಆರೈಕೆಯಿಂದ ಮಾಡಿದರೆ ವೃದ್ಧರ ಅಂಗಾಂಗಗಳು ಕೂಡ ಸ್ವೀಕರಿಸುವವರಿಗೆ, ಇಳಿವಯಸ್ಸಿನಲ್ಲೂ ಸಹ ಹಲವು ವರ್ಷಗಳ ಗುಣ ಮಟ್ಟದ ಜೀವನವನ್ನು ನೀಡಬಲ್ಲವು ಎಂದಿದ್ದಾರೆ.

ಕಿಡ್ನಿ ಕಸಿ ಮಾಡಿಸಿಕೊಂಡಿದ್ದ 77 ವರ್ಷದ ವೃದ್ಧರನ್ನು ಶಸ್ತ್ರಚಿಕಿತ್ಸೆಯ ನಂತರ ತೀವ್ರ ನಿಗಾದಲ್ಲಿ ಇರಿಸಲಾಗಿತ್ತು. ಇವರು ಬಹು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಆದರೆ, ವಾರದ ಬಳಿಕ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅವರ ಸೀರಮ್ ಕ್ರಿಯೇಟಿನೈನ್ ಮಟ್ಟವು 1.26 mg/dL ನಷ್ಟು ಉತ್ತಮ ಮಟ್ಟದಲ್ಲಿದೆ. ಕಸಿ ಮಾಡಿದ ಕಿಡ್ನಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂಬುದಕ್ಕೆ ಇದು ಸ್ಪಷ್ಟ ಸಾಕ್ಷಿಯಾಗಿದೆ.

ಈ ಐತಿಹಾಸಿಕ ಪ್ರಕರಣವು ವಿಸ್ತೃತ ಮಾನದಂಡ ದಾನಿಗಳ (Extended Criteria Donors - ECD) ಬಳಕೆಯ ಅಪಾರ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದೆ. ಇಸಿಡಿ ಎಂದರೆ 60 ವರ್ಷ ಮೇಲ್ಪಟ್ಟ ಆರೋಗ್ಯವಂತ ದಾನಿಗಳು ಅಥವಾ 50 ವರ್ಷ ಮೇಲ್ಪಟ್ಟು ಅಧಿಕ ರಕ್ತದೊತ್ತಡ, ಸೆರೆಬ್ರೊ ವಾಸ್ಕುಲರ್ ಕಾರಣದಿಂದ ಮರಣ, ಅಥವಾ ಅಧಿಕ ಸೀರಮ್ ಕ್ರಿಯೇಟಿನೈನ್ ಮಟ್ಟದಂತಹ ಕನಿಷ್ಠ ಎರಡು ಸಮಸ್ಯೆಗಳನ್ನು ಹೊಂದಿರುವ ದಾನಿಗಳಾಗಿರುತ್ತಾರೆ. ಇಸಿಡಿ ಅಂಗಾಂಗಗಳ ಬಗ್ಗೆ ಸಾರ್ವಜನಿಕ ಜಾಗೃತಿ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಅವುಗಳ ಸ್ವೀಕಾರದ ಸವಾಲುಗಳು ಇವೆ. ಆದರೆ, ಈಗ ಟ್ರಸ್ಟ್‌ವೆಲ್ ಆಸ್ಪತ್ರೆಯ ಯಶಸ್ಸು ಅಂಗಾಂಗ ದಾನದ ಚರ್ಚೆಗಳಲ್ಲಿ ಕಡೆಗಣಿಸಲ್ಪಡು ತ್ತಿದ್ದ ವರ್ಗದತ್ತ ಹೊಸ ಗಮನವನ್ನು ಸೆಳೆದಿದೆ. ಇದರಲ್ಲಿ ಭಾಗಿಯಾದ ಕುಟುಂಬಗಳಿಗೆ ಇದು ವೈಯಕ್ತಿಕ ಕಥೆ. ಆದರೆ, ವೈದ್ಯಕೀಯ ಸಮುದಾಯಕ್ಕೆ ಇದೊಂದು ಮಾದರಿ ಪ್ರಕರಣವಾಗಿದೆ.

ವಿಜ್ಞಾನ ಮತ್ತು ಮಾನವೀಯತೆ ಕೈಜೋಡಿಸಿ ನಡೆದರೆ, ಕಸಿ ಜಗತ್ತಿನಲ್ಲಿ ವಯಸ್ಸು ಎಂದಿಗೂ ಒಂದು ಅಡ್ಡಿಯಾಗಬಾರದು ಎಂದು ಡಾ. ಅರವಿಂದ್ ಸಿ ಅಭಿಪ್ರಾಯಪಟ್ಟಿದ್ದಾರೆ. ಈ ಪ್ರಕರಣವು ಇತರರಿಗೂ ಪ್ರೇರಣೆಯಾಗುತ್ತದೆ. ಯಾವುದೇ ವಯಸ್ಸಿನಲ್ಲಿ ಜೀವದಾನ ಮಾಡಲು ಪ್ರೇರೇಪಿಸುತ್ತದೆ ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ. ಭಾರತವು ಅಂಗಾಂಗಗಳ ಕೊರತೆಯನ್ನು ನೀಗಿಸಲು ಪ್ರಯತ್ನಿಸುತ್ತಿರುವ ಈ ಸಂದರ್ಭದಲ್ಲಿ, ಇಂತಹ ಕಥೆಗಳು ನಮಗೆ ಎರಡನೇ ಅವಕಾಶ ನೀಡುತ್ತಿದ್ದು, ಅತ್ಯಂತ ಅನಿರೀಕ್ಷಿತ ಸ್ಥಳಗಳಿಂದ ಮತ್ತು ಜೀವನದ ಯಾವುದೇ ಹಂತದಲ್ಲಿ ಸೆಕೆಂಡ್‌ ಚಾನ್ಸ್‌ ಬರಬಹುದು ಎಂಬುದನ್ನು ನೆನಪಿಸುತ್ತವೆ.

ಟ್ರಸ್ಟ್‌ವೆಲ್ ಆಸ್ಪತ್ರೆಗಳ ಬಗ್ಗೆ:

ಟ್ರಸ್ಟ್‌ವೆಲ್ ಆಸ್ಪತ್ರೆಯು ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ 250 ಹಾಸಿಗೆಗಳ ಮಲ್ಟಿ-ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿದೆ. ರೋಗಿಗಳ ಅಗತ್ಯಗಳನ್ನು ನಿಜವಾಗಿಯೂ ಅರ್ಥ ಮಾಡಿ ಕೊಂಡಿರುವ ತಜ್ಞರೇ ಇದನ್ನು ನಡೆಸುತ್ತಿರುವುದು ಇದರ ವೈಶಿಷ್ಟ್ಯ. ದಶಕಗಳಿಂದ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ನೀಡುತ್ತಿರುವ ಆಯ್ದ ಕ್ಷೇತ್ರಗಳ ವೈದ್ಯಕೀಯ ಪರಿಣತರು ಒಂದೆಡೆ ಸೇರಿ, ಅತ್ಯುತ್ತಮ ಆಸ್ಪತ್ರೆಯ ಮೂಲಸೌಕರ್ಯವನ್ನು ನಿರ್ಮಿಸಿದ್ದಾರೆ ಮತ್ತು ಉದ್ಯಮದ ಶ್ರೇಷ್ಠ ಪದ್ಧತಿಗಳನ್ನು ಇಲ್ಲಿ ಅಳವಡಿಸಿಕೊಂಡಿದ್ದಾರೆ.