ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಮೆಜಾನ್ ಹಬ್ಬ:, ಬೆಂಗಳೂರಿನಲ್ಲಿ ಹೊಸ ಫುಲ್ ಫಿಲ್ ಮೆಂಟ್ ಸೆಂಟರ್ ಪ್ರಾರಂಭದ ಮೂಲಕ ತನ್ನ ಕಾರ್ಯಾಚರಣೆಗಳ ವಿಸ್ತರಣೆ

ಇತ್ತೀಚೆಗೆ ಅಮೆಜಾನ್ ದೆಹಲಿ ಎನ್.ಸಿ.ಆರ್., ಇಂದೋರ್, ಭುವನೇಶ್ವರ, ಕೊಚ್ಚಿ ಮತ್ತು ರಾಜಪುರ ಗಳಲ್ಲಿ ಐದು ಹೊಸ ಎಫ್.ಸಿ.ಗಳನ್ನು ಪ್ರಾರಂಭಿಸಿದ್ದು ಪಂಚಕುಲ. ನಾಗಪುರ, ಹುಬ್ಬಳ್ಳಿ, ಮೊಹಾಲಿ, ಹೌರಾ ಮತ್ತು ಇಂದೋರ್ ನಂತಹ ನಗರಗಳಲ್ಲಿ 30 ಕೊನೆಯ ಹಂತದ ಡೆಲಿವರಿ ಸ್ಟೇಷನ್ ಗಳನ್ನು ಪ್ರಾರಂಭಿಸಿದೆ.

ಬೆಂಗಳೂರು: ಮುಂದಿನ ಹಬ್ಬದ ಋತುವಿನ ಹಿನ್ನೆಲೆಯಲ್ಲಿ ಅಮೆಜಾನ್ ಇಂದು ತನ್ನ ಕಾರ್ಯಾ ಚರಣೆಗಳ ಜಾಲಕ್ಕೆ ಪ್ರಮುಖ ವಿಸ್ತರಣೆಯನ್ನು ಇಂದು ಪ್ರಕಟಿಸಿದ್ದು 12 ಹೊಸ ಫುಲ್ ಫಿಲ್ಮೆಂಟ್ ಸೆಂಟರ್ (ಎಫ್.ಸಿ.ಗಳು) ಮತ್ತು 6 ಎಫ್.ಸಿ.ಗಳ ವಿಸ್ತರಣೆಯನ್ನು ಪ್ರಾರಂಭಿಸಿದೆ. ಈ ವಿಸ್ತರಣೆಯಿಂದ ಒಟ್ಟು ಸಂಯೋಜಿತ ಪೂರಕ ಸಂಗ್ರಹ ಸಾಮರ್ಥ್ಯವು 8.6 ಮಿಲಿಯನ್ ಕ್ಯೂಬಿಕ್ ಅಡಿಗಳಷ್ಟಿದ್ದು 100 ಒಲಂಪಿಕ್ ಗಾತ್ರದ ಈಜುಕೊಳಗಳಿಗೆ ಸಮನಾಗಿದೆ. ಈ ವಿಸ್ತರಣೆಯು ಐದು ನಗರಗಳಿಗೆ ಅಮೆಜಾನ್ ಎಫ್.ಸಿ.ಯನ್ನು ಮೊದಲ ಬಾರಿಗೆ ತಂದಿದ್ದು ಅದರಲ್ಲಿ ಹೂಗ್ಲಿ, ತಿರುವಳ್ಳೂರು, ಕೃಷ್ಣಗಿರಿ, ವಿಶಾಖಪಟ್ಟಣ ಮತ್ತು ಹುಬ್ಬಳ್ಳಿಗಳಿಗೆ ತಂದಿದೆ.

ಈ ವಿಸ್ತರಣೆಯು ಹುಬ್ಬಳ್ಳಿ, ತ್ರಿವೇಂಡ್ರಂ, ರಾಜಪುರ, ಗೋರಖ್ ಪುರ, ಮೊರದಾಬಾದ್ ಮತ್ತು ಪ್ರಯಾಗ್ ರಾಜ್ ಗಳಲ್ಲಿ ಆರು ಹೊಸ ಸಾರ್ಟ್ ಸೆಂಟರ್ (ಎಸ್.ಸಿ.ಗಳು) ಪ್ರಾರಂಭವನ್ನೂ ಹೊಂದಿ ದ್ದು ಸಂಯೋಜಿತ ಪ್ರದೇಶ 500 ಚದರ ಅಡಿಯಷ್ಟಾಗಿದೆ. ಇದು ಈ ವರ್ಷ ಜೂನ್ ತಿಂಗಳಲ್ಲಿ ಪ್ರಾರಂಭಿಸಿದ 5 ಫುಲ್ ಫಿಲ್ಮೆಂಟ್ ಸೆಂಟರ್ ಗಳು ಮತ್ತು 30ಕ್ಕೂ ಹೆಚ್ಚು ಕೊನೆಯ ಹಂತದ ಡೆಲಿವರಿ ಸ್ಟೇಷನ್ ಗಳಿಗೆ ಪೂರಕವಾಗಿದ್ದು ಈಗಾಗಲೇ ಭಾರತದ ಅತ್ಯಂತ ಸುಧಾರಿತ ಇ-ಕಾಮರ್ಸ್ ಜಾಲ ಗಳಲ್ಲಿ ಒಂದಾಗಿರುವ ಇದನ್ನು ಮತ್ತಷ್ಟು ಸದೃಢಗೊಳಿಸುತ್ತಿದೆ. ಈ ಹೊಸ ತಾಣಗಳನ್ನು ಲಾಜಿಸ್ಟಿಕ್ಸ್ ಉದ್ಯಮದಲ್ಲಿ ನಾಯಕರಾಗಿರುವ ಕಾರ್ಯತಂತ್ರೀಯ ಪಾಲುದಾರರಿಂದ ನಿರ್ವಹಿಸ ಲ್ಪಡುತ್ತವೆ ಮತ್ತು ದೇಶಾದ್ಯಂತ ಗ್ರಾಹಕರಿಗೆ ಡೆಲಿವರಿ ವೇಗಗಳನ್ನು ಗಮನಾರ್ಹವಾಗಿ ಹೆಚ್ಚಿಸಲಿವೆ.

ಇದನ್ನೂ ಓದಿ: Vishweshwar Bhat Column: ಇದು ಭಾಗ್ಯ...ಇದು ಭಾಗ್ಯ !

ಈ ವಿಸ್ತರಣೆಯು ಮಾರಾಟಗಾರರಿಗೆ ಆಯ್ಕೆಯನ್ನು ಅವರಿಗೆ ಹತ್ತಿರದಲ್ಲಿ ಮಾಡಿಕೊಳ್ಳುವ ಮೂಲಕ ಉತ್ತಮ ರೀತಿಯಲ್ಲಿ ಗ್ರಾಹಕರಿಗೆ ಸೇವೆ ಒದಗಿಸಲು ಮತ್ತು ಈ ಪ್ರದೇಶಕ್ಕೆ ಆರ್ಥಿಕ ಅನುಕೂಲಗಳನ್ನು ಪೂರೈಸುವ ಸಾವಿರಾರು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆ ಇದೆ. ಈ ಅವಕಾಶಗಳಲ್ಲಿ ಅಮೆಜಾನ್ ನ ಆಪರೇಷನ್ಸ್ ಜಾಲದಲ್ಲಿ ವೈವಿಧ್ಯಮಯ ಉದ್ಯೋಗಗಳಿದ್ದು ಅದರಲ್ಲಿ ಪೂರ್ಣಕಾಲಿಕ ಮತ್ತು ಅರೆಕಾಲಿಕ ಆಯ್ಕೆಗಳು (ಅಂದರೆ ಫುಲ್ ಫಿಲ್ಮೆಂಟ್ ಮತ್ತು ಸಾರ್ಟೇಷನ್ ಅಸೋಸಿಯೇಟ್ಸ್, ಟೀಮ್ ಲೀಡ್ಸ್, ಪ್ರೊಸೆಸ್ ಅಸಿಸ್ಟೆಂಟ್ಸ್, ಇತ್ಯಾದಿ) ಒಳಗೊಂಡಿರುತ್ತವೆ. ಈ ಎಲ್ಲ ಹೊಸ ಕಟ್ಟಡಗಳು ಸಿದ್ಧವಾಗಿವೆ ಮತ್ತು ಮುಂದಿನ ಹಬ್ಬದ ಋತುವಿಗೆ ಕಾರ್ಯಾಚರಣೆ ನಡೆಸಲಿವೆ.

“ಭಾರತವು ಈ ಹಬ್ಬದ ಋತುವಿಗೆ ಸಜ್ಜಾಗುತ್ತಿದ್ದಂತೆ ನಾವು ನಮ್ಮನ್ನು ದೇಶಾದ್ಯಂತ ಗ್ರಾಹಕರಿಗೆ ಸೇವೆ ಒದಗಿಸಲು ಮಾರಾಟಗಾರರಿಗೆ ಸನ್ನದ್ಧರಾಗಿಸಲು ಸಜ್ಜುಗೊಳಿಸಿಕೊಳ್ಳುತ್ತಿದ್ದೇವೆ. 12 ಹೊಸ ಫುಲ್ ಫಿಲ್ಮೆಂಟ್ ಸೆಂಟರ್ ಗಳು ಮತ್ತು 6 ಹೊಸ ಸಾರ್ಟ್ ಸೆಂಟರ್ ಗಳು ದೇಶಾದ್ಯಂತ ಗ್ರಾಹಕರಿಗೆ ಪೂರೈಸುವ ನಮ್ಮ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ. ನಮ್ಮ ದೀರ್ಘಾವಧಿ ಆದ್ಯತೆಯು ವೇಗ, ಸುರಕ್ಷತೆ ಮತ್ತು ವಿಶ್ವಾಸಾರ್ಹತೆಗೆ ಆದ್ಯತೆ ನೀಡಿದ ಭಾರತದ ಮುಂಚೂಣಿಯ ಲಾಜಿಸ್ಟಿಕ್ಸ್ ಜಾಲ ನಿರ್ಮಿಸುವುದು ನಮ್ಮ ದೀರ್ಘಾವಧಿ ಆದ್ಯತೆಯಾಗಿದೆ” ಎಂದು ಅಮೆಜಾನ್ ಆಪರೇಷನ್ಸ್ ನ ಭಾರತ ಮತ್ತು ಆಸ್ಟ್ರೇಲಿಯಾದ ವಿಪಿ ಅಭಿನವ್ ಸಿಂಗ್ ಹೇಳಿದರು.

ಇತ್ತೀಚೆಗೆ ಅಮೆಜಾನ್ ದೆಹಲಿ ಎನ್.ಸಿ.ಆರ್., ಇಂದೋರ್, ಭುವನೇಶ್ವರ, ಕೊಚ್ಚಿ ಮತ್ತು ರಾಜಪುರ ಗಳಲ್ಲಿ ಐದು ಹೊಸ ಎಫ್.ಸಿ.ಗಳನ್ನು ಪ್ರಾರಂಭಿಸಿದ್ದು ಪಂಚಕುಲ. ನಾಗಪುರ, ಹುಬ್ಬಳ್ಳಿ, ಮೊಹಾಲಿ, ಹೌರಾ ಮತ್ತು ಇಂದೋರ್ ನಂತಹ ನಗರಗಳಲ್ಲಿ 30 ಕೊನೆಯ ಹಂತದ ಡೆಲಿವರಿ ಸ್ಟೇಷನ್ ಗಳನ್ನು ಪ್ರಾರಂಭಿಸಿದೆ. 2025ರ ಪ್ರಾರಂಭದಲ್ಲಿ ಅಮೆಜಾನ್ ಭಾರತದ ಅತ್ಯಂತ ವೇಗದ, ಸುರಕ್ಷಿತ ಮತ್ತು ಅತ್ಯಂತ ವಿಶ್ವಾಸಾರ್ಹ ಕಾರ್ಯಾಚರಣೆಗಳ ಜಾಲ ನಿರ್ಮಾಣ ಮತ್ತು ನಿರ್ವಹಣೆಗೆ ತನ್ನ ಬದ್ಧತೆಯ ಭಾವಾಗಿ ಹೆಚ್ಚುವರಿ 2000 ಕೋಟಿ ರೂ. ಹೂಡಿಕೆಯನ್ನು ಪ್ರಕಟಿಸಿದೆ. ಈ ಹೂಡಿಕೆ ಯನ್ನು ಕಾರ್ಯಾಚರಣೆಗಳ ಮೂಲಸೌಕರ್ಯ ವಿಸ್ತರಣೆ, ಅಸೋಸಿಯೇಟ್ ಸುರಕ್ಷತೆ ಮತ್ತು ಸ್ವಾಸ್ಥ್ಯ ಸುಧಾರಣೆ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ. ಈ ಹೊಸ ಹೂಡಿಕೆಯು ಭಾರತದಾ ದ್ಯಂತ ಎಲ್ಲ ಸೇವೆ ಒದಗಿಸಬಲ್ಲ ಪಿನ್-ಕೋಡ್ ಗಳಿಗೆ ಕಂಪನಿಯು ಪೂರೈಸಲು ಕಾರ್ಯಾಚರಣೆ ಗಳ ಜಾಲ ಸೃಷ್ಟಿಸಲು ಅಮೆಜಾನ್ ಹೂಡಿಕೆಗಳೊಂದಿಗೆ ಒಳಗೊಂಡಿದೆ.

ಅಮೆಜಾನ್ ಹಬ್ಬದ ಋತುವಿಗೆ ಸಜ್ಜಾಗುತ್ತಿದೆ

ಕಳೆದ ವಾರ ಅಮೆಜಾನ್ ಮುಂದಿನ ಹಬ್ಬದ ಋತುವಿಗೆ ಭಾರತದಾದ್ಯಂತ ಲಕ್ಷಾಂತರ ಗ್ರಾಹಕರಿಗೆ ಸೇವೆ ಒದಗಿಸಲು ಸಜ್ಜಾಗಿ ತನ್ನ ಕಾರ್ಯಾಚರಣೆಗಳ ಜಾಲದಾದ್ಯಂತ 150,000 ಋತು ಆಧರಿತ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸಿರುವುದಾಗಿ ಪ್ರಕಟಿಸಿತ್ತು. ಇವುಗಳಲ್ಲಿ ಭಾರತದಾದ್ಯಂತ ಮುಂಬೈ, ದೆಹಲಿ, ಪುಣೆ, ಬೆಂಗಳೂರು, ಹೈದರಾಬಾದ್, ಲಖನೌ, ಕೊಚ್ಚಿ, ಕೊಯಮತ್ತೂರು, ಇಂದೋರ್, ರಾಯ್ಪುರ, ಜಲಂಧರ್, ರಾಂಚಿ, ರಾಂಚಿ, ಅನಂತನಾಗ್ ಮತ್ತು ಜಲಗಾಂವ್ ಸೇರಿ 400ಕ್ಕೂ ಹೆಚ್ಚು ನಗರಗಳಲ್ಲಿ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಒಳಗೊಂಡಿವೆ. ಮುಖ್ಯವಾಗಿ ಅಮೆಜಾನ್ ಸಾವಿರಾರು ಮಹಿಳಾ ಅಸೋಸಿಯೇಟ್ ಗಳು ಮತ್ತು 2000 ಪಿಡಬ್ಲ್ಯೂಡಿ (ವಿಶೇಷ ಚೇತನರು) ಗಳನ್ನು ತನ್ನ ಪ್ರಸ್ತುತದ ಜಾಲಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಅಮೆಜಾನ್ ಇಂಡಿಯಾ ಈಗಾಗಲೇ ಇವರಲ್ಲಿ ಬಹಳಷ್ಟು ಮಂದಿ ಹೊಸ ಸಿಬ್ಬಂದಿಯ ಸೇರ್ಪಡೆ ಮಾಡಿ ಕೊಂಡಿದೆ.

*

ಹೊಸ ಎಫ್.ಸಿ.ಗಳನ್ನು ದೆಹಲಿ ಎನ್.ಸಿ.ಆರ್., ಬೆಂಗಳೂರು, ಕೊಲ್ಕತಾ, ನಾಗ್ಪುರ, ಥಾಣೆ, ವಿಶಾಖ ಪಟ್ಟಣ, ಹುಬ್ಬಳ್ಳಿ, ಹೂಗ್ಲಿ, ಹೈದರಾಬಾದ್, ತಿರುವಳ್ಳೂರು ಮತ್ತು ಕೃಷ್ಣಗಿರಿಗಳಲ್ಲಿ ಪ್ರಾರಂಭಿ ಸಿದ್ದು 8.6 ಮಿಲಿಯನ್ ಕ್ಯೂಬಿಕ್ ಅಡಿಯಷ್ಟು ಸಂಗ್ರಹ ಸಾಮರ್ಥ್ಯ ಸೇರ್ಪಡೆ ಮಾಡಿಕೊಂಡಿದೆ

      • ಹೊಸ ಸಾರ್ಟ್ ಸೆಂಟರ್ ಗಳು ಹುಬ್ಬಳ್ಳಿ, ತ್ರಿವೇಂಡ್ರಂ, ರಾಜಪುರ, ಗೋರಖ್ ಪುರ, ಮೊರದಾಬಾದ್ ಮತ್ತು ಪ್ರಯಾಗರಾಜ್ ಗಳಲ್ಲಿ ಪ್ರಾರಂಭಿಸಲಾಗಿದ್ದು ಸಂಯೋಜಿತ ಪ್ರದೇಶ 500ಕೆ ಚದರ ಅಡಿ
      • ಈ ಜಾಲದ ಪ್ರಗತಿಯು ಅಮೆಜಾನ್ ಹಿಂದೆ ಪ್ರಾರಂಭಿಸಿದ 5 ಫುಲ್ ಫಿಲ್ಮೆಂಟ್ ಸೆಂಟರ್ ಗಳು ಮತ್ತು ಈ ವರ್ಷ ಜೂನ್ ತಿಂಗಳಲ್ಲಿ ಪ್ರಾರಂಭಿಸಿದ 30+ ಹೊಸ ಕೊನೆಯ ಹಂತದ ಡೆಲಿವರಿ ಸ್ಟೇಷನ್ ಗಳಿವೆ
      • ಅಮೆಜಾನ್ ಭಾರತದ ಅತ್ಯಂತ ಸುಧಾರಿತ ಕಾರ್ಯಾಚರಣೆಗಳ ಮೂಲಸೌಕರ್ಯಗಳಿಗೆ 2025ರಲ್ಲಿ 2000 ಕೋಟಿ ರೂ. ಹೂಡಿಕೆಯ ಯೋಜನೆ ಹೊಂದಿದೆ