ಕರ್ನಾಟಕಕ್ಕೆ ಫ್ರೆಂಚ್ ರುಚಿ ತಂದಿರುವ ಕ್ರೊನೆನ್ ಬರ್ಗ್ 1664 ಬ್ಲಾಂಕ್
ಫ್ರೆಂಚ್ ಸೂಕ್ಷ್ಮತೆಯೊಂದಿಗೆ ರೂಪಿಸಲಾದ 1664 ಬ್ಲಾಂಕ್ ಸೂಕ್ಷ್ಮವಾಗಿ ಸಮತೋಲನಗೊಳಿಸಿದ ರುಚಿಯನ್ನು ನೀಡುತ್ತದೆ. ಎಬಿವಿ ಶೇ.5ಕ್ಕಿಂತ ಕಡಿಮೆ ಇರುವ ಈ ಬಿಯರ್ ಹಗುರ ಮತ್ತು ಮೃದು ವಾಗಿದ್ದು ಸಿಟ್ರಸ್, ವಿಶೇಷ ಹಣ್ಣುಗಳು, ಕೊತ್ತಂಬರಿ ಮತ್ತು ಬಿಳಿ ಪೀಚ್ ಹಣ್ಣಿನ ಸೂಕ್ಷ್ಮ ರುಚಿ ನೀಡು ತ್ತದೆ. ಇದರ ತಾಜಾ ಗುಣವು ಫೈನ್ ಹಾಪ್ಸ್ ರುಚಿಯೊಂದಿಗೆ ಬೆರೆತು ವಿಶಿಷ್ಟವಾಗಿ ಆನಂದಿಸಬಲ್ಲ ಪಾನೀಯದ ಅನುಭವ ನೀಡುತ್ತದೆ


ಬೆಂಗಳೂರು: ಮುಂಚೂಣಿಯ ಫ್ರೆಂಚ್ ಬಿಯರ್ ಕ್ರೊನೆನ್ಬರ್ಗ್ 1664 ಬ್ಲಾಂಕ್ ಅಧಿಕೃತವಾಗಿ ಕರ್ನಾಟಕದಲ್ಲಿ ಬಿಡುಗಡೆಯಾಗಿದ್ದು ತನ್ನ ವಿಶೇಷ ಶೈಲಿ ಮತ್ತು ವಿಶಿಷ್ಟ ರುಚಿಯನ್ನು ಬೆಂಗಳೂರಿನ ಚಲನಶೀಲ ಮತ್ತು ವಿಕಾಸಗೊಳ್ಳುತ್ತಿರುವ ಬಿಯರ್ ಜಗತ್ತಿಗೆ ತಂದಿದೆ. ತನ್ನ ಸೊಗಸಾದ ನೀಲಿ ಬಾಟಲಿ ಮತ್ತು ಗರಿಗರಿಯಾದ ಸಿಟ್ರಸ್ ರುಚಿಗಳಿಗೆ ಖ್ಯಾತಿ ಪಡೆದ 1664 ಬ್ಲಾಂಕ್ ಸೂಪರ್ ಪ್ರೀಮಿಯಂ ಬಿಯರ್ ವಲಯಕ್ಕೆ ಪರಿಷ್ಕರಿಸಿದ ಆದರೆ ವಿನೋದಮಯ ತಿರುವು ನೀಡಿದೆ.
ಫ್ರೆಂಚ್ ಸೂಕ್ಷ್ಮತೆಯೊಂದಿಗೆ ರೂಪಿಸಲಾದ 1664 ಬ್ಲಾಂಕ್ ಸೂಕ್ಷ್ಮವಾಗಿ ಸಮತೋಲನಗೊಳಿಸಿದ ರುಚಿಯನ್ನು ನೀಡುತ್ತದೆ. ಎಬಿವಿ ಶೇ.5ಕ್ಕಿಂತ ಕಡಿಮೆ ಇರುವ ಈ ಬಿಯರ್ ಹಗುರ ಮತ್ತು ಮೃದು ವಾಗಿದ್ದು ಸಿಟ್ರಸ್, ವಿಶೇಷ ಹಣ್ಣುಗಳು, ಕೊತ್ತಂಬರಿ ಮತ್ತು ಬಿಳಿ ಪೀಚ್ ಹಣ್ಣಿನ ಸೂಕ್ಷ್ಮ ರುಚಿ ನೀಡುತ್ತದೆ. ಇದರ ತಾಜಾ ಗುಣವು ಫೈನ್ ಹಾಪ್ಸ್ ರುಚಿಯೊಂದಿಗೆ ಬೆರೆತು ವಿಶಿಷ್ಟವಾಗಿ ಆನಂದಿಸ ಬಲ್ಲ ಪಾನೀಯದ ಅನುಭವ ನೀಡುತ್ತದೆ. ಇದು ಸಂಜೆಯ ಆತ್ಮೀಯ ಕ್ಷಣಗಳು, ಸಂಭ್ರಮಾಚರಣೆ ಗಳು ಅಥವಾ ಸಾಂದರ್ಭಿಕ ಕ್ಷಣಗಳಲ್ಲಿ ಸೇವೆನೆಗೆ ಪರಿಪೂರ್ಣವಾಗಿಸುತ್ತದೆ.
ಇದನ್ನೂ ಓದಿ: R T Vittalmurthy Column: ಸಿದ್ದು ಗುಡುಗಿದ್ರೂ ಸುರ್ಜೇವಾಲ ಉಳಿದಿದ್ದು ಹೇಗೆ ?
ಕಾರ್ಸ್ ಬರ್ಗ್ ಇಂಡಿಯಾದ ಮಾರ್ಕೆಟಿಂಗ್ ವಿ.ಪಿ. ಪಾರ್ಥಸಾರಥಿ ಝಾ ಈ ಬಿಡುಗಡೆ ಕುರಿತು, “ನಾವು 1664 ಬ್ಲಾಂಕ್ ಅನ್ನು ಜಾಗತಿಕ ಜೀವನಶೈಲಿ ಮತ್ತು ಮೌಲ್ಯಯುತ ಅನುಭವಗಳನ್ನು ಅಪ್ಪಿಕೊಳ್ಳುವುದನ್ನು ಮುಂದುವರಿಸುತ್ತಿರುವ ಕರ್ನಾಟಕಕ್ಕೆ ತರಲು ಬಹಳ ಸಂತೋಷ ಹೊಂದಿದ್ದೇವೆ. ತನ್ನ ಫ್ರೆಂಚ್ ಪರಂಪರೆ, ಆಕರ್ಷಕ ನೀಲಿ ಬಾಟಲಿ ಮತ್ತು ದೋಷರಹಿತ ರುಚಿಯಿಂದ 1664 ಬ್ಲಾಂಕ್ ಒಂದು ತಿರುವಿನೊಂದಿಗೆ ಉತ್ತಮ ರುಚಿ ನೀಡುತ್ತದೆ. ಇದು ಅತ್ಯಾಧುನಿಕತೆ, ಗುಣಮಟ್ಟ ಮತ್ತು ಸಹಜ ಶಕ್ತಿ ಬಯಸುವ ಗ್ರಾಹಕರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸ ನಮ್ಮದು” ಎಂದರು.
ಅರ್ಥ ಮತ್ತು ಅನುಭವವನ್ನು ನೀಡುವ ಬಿಯರ್ ಗಳನ್ನು ಭಾರತೀಯ ಗ್ರಾಹಕರು ಹೆಚ್ಚಾಗಿ ಆವಿಷ್ಕರಿಸುತ್ತಿದ್ದು 1664 ಬ್ಲಾಂಕ್ ಜಾಗತಿಕ ರುಚಿ ಬಯಸುವ ಹೊಸ ತಲೆಮಾರಿನ ಅಭಿಜ್ಞರಿಗೆ ಇಷ್ಟವಾಗುತ್ತದೆ. ಅದನ್ನು ರುಚಿಕರ ಭೋಜನದೊಂದಿಗೆ, ನಗರದ ರಾತ್ರಿಗಳ ನಡುವೆ ಅಥವಾ ಹಬ್ಬದ ಸಂಭ್ರಮಾಚರಣೆಗಳಲ್ಲಿ ಆನಂದಿಸಬಹುದು, ಈ ಬ್ರಾಂಡ್ ಲಾಲಿತ್ಯ ಮತ್ತು ವಿನೋದದ ಪರಿಪೂರ್ಣ ಸಾಮರಸ್ಯ ಪ್ರತಿನಿಧಿಸುತ್ತದೆ.
ಮಹಾರಾಷ್ಟ್ರ, ಗೋವಾ ಮತ್ತು ಚಂಡೀಗಢದ ಆಯ್ದ ನಗರಗಳಲ್ಲಿ ಲಭ್ಯವಿರುವ 1664 ಬ್ಲಾಕ್ ಈಗ ಕರ್ನಾಟಕದ ಶ್ರೇಷ್ಠ ಬಾರ್ ಗಳು, ಮೇಲ್ವರ್ಗದ ರೆಸ್ಟೋರೆಂಟ್ ಗಳು ಮತ್ತು ಮುಂಚೂಣಿಯ ರೀಟೇಲ್ ಮಳಿಗೆಗಳಿಗೆ ಪ್ರವೇಶಿಸುತ್ತಿದೆ. ಈ ಉನ್ನತ ಗುಣಮಟ್ಟದ ಬಿಯರ್ ಭಾರತದಾದ್ಯಂತ ಬೇಡಿಕೆ ಹೆಚ್ಚಾಗುತ್ತಿದ್ದು ಕ್ರೊನೆನ್ ಬರ್ಗ್ 1664 ಬ್ಲಾಂಕ್ ಬಿಯರ್ ಪ್ರಿಯರ ಅಚ್ಚುಮೆಚ್ಚಿನದಾಗಲು ಸಜ್ಜಾಗಿದೆ.
1664ರಿಂದಲೂ ಶ್ರೇಷ್ಠತೆಯ ಪರಂಪರೆ
ಕ್ರೊನೆನ್ ಬರ್ಗ್ ನ ಕಥೆ 1664ರಲ್ಲಿ ಹೊಸದಾಗಿ ಪ್ರಮಾಣೀಕೃತ ಮಾಸ್ಟರ್ ಬ್ರೂವರ್ ಜೆರೋಮ್ ಹ್ಯಾಟ್ ಅವರು ಫ್ರಾನ್ಸ್ ನ ಸ್ಟ್ರಾಸ್ ಬರ್ಗ್ ನಲ್ಲಿ ತಮ್ಮ ಮೊದಲ ಬ್ರ್ಯೂ ರೂಪಿಸಿದಾಗ ಪ್ರಾರಂಭವಾಗುತ್ತದೆ. ಇಂದು 1664 ಬ್ಲಾಂಕ್ ತನ್ನ ಪರಂಪರೆಯನ್ನು ಮುಂದುವರಿಸುತ್ತಿದ್ದು “ಕೇವಿಯರ್ ಆಫ್ ಹಾಪ್ಸ್” ಎಂದು ಖ್ಯಾತಿ ಪಡೆದ ಸ್ಟ್ರಿಸೆಲ್ಸ್ ಪಾಲ್ಟ್ ಹಾಪ್ಸ್ ನಂತಹ ಅಪರೂಪದ ಗುಣಮಟ್ಟದ ಅಳವಡಿಕೆಗಳು ಮತ್ತು ತನ್ನ ವಿಶಿಷ್ಟ ಸಿಟ್ರಸ್ ಟ್ವಿಸ್ಟ್ ಹೊಂದಿದೆ. 70 ದೇಶಗಳಲ್ಲಿರುವ 1664 ಬ್ಲಾಂಕ್ ಜಾಗತಿಕವಾಗಿ ತನ್ನ ಪರಿಷ್ಕೃತ ರುಚಿ ಮತ್ತು ದೋಷರಹಿತ ಶೈಲಿಗೆ ಖ್ಯಾತಿ ಪಡೆದಿದೆ.