ಹೂವಪ್ಪ ಈ ಹೆಚ್.
60 ಕೆಜಿಗೆ 2000 ರೂ. ಏರಿಕೆ
ಉತ್ತರ ಭಾರತ ಮಾರುಕಟ್ಟೆಯಲ್ಲಿ ಬೇಡಿಕೆ
ನವಂಬರ್ ಚಳಿಗೆ ಮತ್ತಷ್ಟು ಬೆಲೆ ಏರಿಕೆ ಸಂಭವ
ಬೆಂಗಳೂರು: ಈ ಹಿಂದೆ ಶುಂಠಿ ಬೆಲೆ ಕುಸಿತದಿಂದಾಗಿ ಕಂಗಲಾಗಿದ್ದ ರೈತರಿಗೆ ಪ್ರಸ್ತುತ ಶುಂಠಿ ಬೆಲೆ ಏರಿಕೆಯಿಂದ ಹಿರಿ ಹಿರಿ ಹೀಗಗುವತಾಗಿದೆ. ಮುಖದಲ್ಲಿ ಮಂದಹಾಸ ಮೂಡಿದೆ. ಈಗಲೇ ಕಡಿಮೆ ದರಕ್ಕೆ ಮಾರಾಟ ಮಾಡಿದವರು ಕೈ ಕೈ ಹಿಚುಕಿಕೊಳ್ಳುತ್ತಿದ್ದಾರೆ.
ಉತ್ತರಭಾರತ ರಾಜ್ಯಗಳಾದ ಧೇಲ್ಲಿ ಮಧ್ಯಪ್ರದೇಶ, ಬಾಂಬೆ ಮಾರುಕಟ್ಟೆಗಳಿಂದ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಶುಂಠಿ ಬೆಲೆ ಏರಿಕೆಗೆ ಕಾರಣವಾಗಿದೆ.
ಮಲೆನಾಡು, ಅರೆಮಲೆನಾಡು ವ್ಯಾಪ್ತಿಯ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಹಾವೇರಿ, ದಾವಣಗೆರೆ ಜಿಲ್ಲೆಗಳಲ್ಲಿದೊಡ್ಡ ಪ್ರಮಾಣದಲ್ಲಿ ಶುಂಠಿ ಬೆಳೆಯಲಾಗುತ್ತಿದೆ. ದೇಶದಲ್ಲಿ ಕರ್ನಾಟಕ, ಕೇರಳ, ಆಂಧ್ರ, ತಮಿಳುನಾಡು, ಮಹಾರಾಷ್ಟ್ರದ ಕೆಲ ಪ್ರದೇಶಗಳಲ್ಲಿಯೂ ಶುಂಠಿ ಬೆಳೆಯಲಾಗುತ್ತಿದೆ.
ಇಡೀ ದೇಶದ ತರಕಾರಿ ಮಾರುಕಟ್ಟೆಯ ಬೇಡಿಕೆ ಕಡೆ ಗಮನ ಹರಿಸಿದರೆ ಒಂದು ದಿನಕ್ಕೆ ಸರಾಸರಿ 10 ಸಾವಿರ ಕ್ವಿಂಟಾಲ್ ಹಸಿ ಶುಂಠಿ ಅಗತ್ಯವಿದೆ. ಒಂದು ತಿಂಗಳಿಗೆ ಸರಾಸರಿ 3 ಲಕ್ಷ ಕ್ವಿಂಟಾಲ್ ಹಸಿ ಶುಂಠಿ ಮಾರಾಟವಾಗುತ್ತಿದೆ.
ಇದನ್ನೂ ಓದಿ: Vinayaka V Bhat Column: ಸಂಘದ ಶತಮಾನೋತ್ಸವಕ್ಕೆ ಮೆರುಗು ತಂದ ಪ್ರಿಯಾಂಕ್
ಕಳೆದ 18-20 ವರ್ಷಗಳಿಂದ ಶುಂಠಿ ಬೆಳೆದು ರಾಜ್ಯ ಹಾಗೂ ಹೊರ ರಾಜ್ಯಕ್ಕೆ ಶುಂಠಿ ಒದಗಿಸುತ್ತಿದ್ದು, ಹೊರದೇಶಗಳಿಗೂ ರಫ್ತಾಗುವ ಒಣ ಶುಂಠಿಗೆ ಈ ಪ್ರದೇಶಗಳು ತಮ್ಮದೇ ಆದ ಪ್ರಭಾವ ಹೊಂದಿವೆ.
ಬೆಂಗಳೂರು, ಎಪಿಎಂಸಿ ಮಾರುಕಟ್ಟೆಯಲ್ಲಿ ಜನವರಿ ಫೆಬ್ರವರಿ ತಿಂಗಳಷ್ಟೇ ಹಸಿಶುಂಠಿ ದರ ಪ್ರತಿ ಚೀಲಕ್ಕೆ (60 ಕೆ.ಜಿ.) ಹೊಸ ಸುಂಠಿ 1000-1200 ಹಳೇ ಶುಂಠಿ 1800-2000 ಇತ್ತು. ಇದೀಗ ಇದರ ಬೆಲೆ ಏರಿಕೆಯಾಗಿದ್ದು, ಹೊಸ ಶುಂಠಿ ಬೆಲೆ 2,800-3,000 ರು. ಇದ್ದು, ಹಳೇ ಶುಂಠಿ 3,500-4,000 ರೂ. ರಂತೆ ಆರತವಾಗುತ್ತಿದೆ ಒಂದೆರಡು ತಿಂಗಳಿಗೆ ಹೋಲಿಸಿದರೆ ವಾರದಲ್ಲೇ ಪ್ರತಿ ಚೀಲಕ್ಕೆ ಸರಾಸರಿ ರೂ. 1,800–2000ರಷ್ಟು ಬೆಲೆ ಹೆಚ್ಚಾಗಿದೆ.
ಆದರೆ ತೀವ್ರ ಈ ವರ್ಷ ರೋಗಬಾಧೆಯ ಕಾರಣಕ್ಕೆ ಅರ್ಧದಷ್ಟು ಫಸಲು ರೈತರ ಕೈ ಸೇರಿಲ್ಲ. ಬೆಳೆಯನ್ನು ಉಳಿಸಿಕೊಳ್ಳುವುದೋ, ಸಿಕ್ಕಷ್ಟು ದರಕ್ಕೆ ಮಾರುವುದೋ ಎನ್ನುವ ಚಿಂತೆಯಲ್ಲಿದ್ದ ರೈತರಿಗೆ ಈಗ ದರ ಏರಿಕೆಯು ಸಮಾಧಾನ ತಂದಿದೆ.
ಕೆಲವು ವರ್ಷಗಳ ಹಿಂದೆ ಶುಂಠಿಗೆ ಪ್ರತಿ 60 ಕೆಜಿ ಚೀಲಕ್ಕೆ 5–6 ಸಾವಿರದವರೆಗೂ ದಾಖಲೆಯ ಬೆಲೆ ಸಿಕ್ಕಿತ್ತು. ರೈತರು ಇದೇ ಹುರುಪಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಿದ್ದರು. ಆದರೆ ಇದೇ ವರ್ಷ ಜನವರಿ–ಫೆಬ್ರುವರಿಯಲ್ಲಿ 1,000–1,200ಕ್ಕೆ ಧಾರಣೆ ಕುಸಿದಿತ್ತು. ಹಸಿ ಶುಂಠಿ ಗೆ ಉತ್ತಮ ಬೆಲೆ ದೊರೆತ ಹಿನ್ನೆಲೆಯಲ್ಲಿ ಶುಂಠಿ ಬೆಳೆಯುವ ಪ್ರದೇಶ ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿದೆ. ಕಳೆದ ಬಾರಿ 60 ಕೆಜಿ ಚೀಲವೊಂದಕ್ಕೆ 6000-7000 ರು ಬೆಲೆ ದೊರೆತ ಹಿನ್ನೆಲೆಯಲ್ಲಿಈ ವರ್ಷ ಬೆಳೆಗಾರರು ಮತ್ತಷ್ಟು ಉತ್ತೇಜಿತರಾಗಿದ್ದು, ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದ ಶುಂಠಿ ಬಿತ್ತನೆಯನ್ನು ಮಾಡಲು ಮುಂದಾಗಿದ್ದರು.
ಹೊಲದಲ್ಲೇ ಬಿಟ್ಟವರಿಗೆ ಬಂಪರ್ ಬೆಲೆ :-
ಜೂನ್‌ನಲ್ಲಿ ಶುಂಠಿಯನ್ನು ಕೀಳಲು ಪ್ರಾರಂಭಿಸಿದಾಗ ಪ್ರತಿ 60 ಕೆಜಿ ಚೀಲಕ್ಕೆ 700 ರೂ. ಆರಂಭಿಕ ಬೆಲೆಯು ಸಿಕ್ಕಿತು. ದಿನ ಕಳೆದಂತೆ ಆಗಸ್ಟ್ ಕೊನೆಯ ವೇಳೆಗೆ ಬೆಲೆ ಏರಿಕೆಯ ಹಾದಿ ಹಿಡಿದು 3200 ರೂ.ವೆರೆಗೂ ತಲುಪಿತು. ಕಳೆದ ನಾಲ್ಕೈದು ದಿನಗಳಿಂದ ಹಸಿ ಶುಂಠಿಯ ಬೆಲೆಯು 60 ಕೆಜಿಯ ಚೀಲಕ್ಕೆ 4,000 ಸಾವಿರ ರೂ. ತಲುಪಿದ್ದು, ಇದುವರೆಗೂ ಹೆಚ್ಚಿನ ಬೆಲೆಯ ನಿರೀಕ್ಷೆಯಿಟ್ಟು ಹೊಲ ದಲ್ಲೇ ಬಿಟ್ಟಿದ್ದವರಿಗೆ ಬಂಪರ್ ಬೆಲೆಯು ದೊರಕುತ್ತಿದೆ.
ಬೆಲೆ ಹೆಚ್ಚಳ, ಬೆಳೆಗಾರರಿಗೆ ಸಂತಸ :-
ಬೆಲೆ ಹೆಚ್ಚಳದ ಹಿನ್ನೆಲೆ ಬೆಳೆಗಾರರಲ್ಲಿಉತ್ಸಾಹ ಇಮ್ಮಡಿಗೊಂಡಿದೆ. ಶುಂಠಿಯನ್ನು ನಾಟಿ ಮಾಡಲು ಸಕಾಲವಾದ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿಅತ್ಯಧಿಕ ನಾಟಿ ಮಾಡಲಾಗಿದೆ. ಸ್ಥಳೀಯವಾಗಿ ಕೂಲಿ ಕಾರ್ಮಿಕರ ಕೊರತೆ ಇದ್ದು ಹೊರಗಿನ ಕೂಲಿ ಕಾರ್ಮಿಕರನ್ನು ಕರೆತಂದು ಕೆಲಸ ಮಾಡಿಸ ಬೇಕಾಗಿರುವುದರಿಂದ ನಿರ್ವಹಣಾ ವೆಚ್ಚವೂ ಹೆಚ್ಚಿದೆ.
ಹಳೇ ಮೈಸೂರು ಭಾಗದಳ್ಳಿ ಕೂಡಾ ಶುಂಠಿ ಬೆಳೆಯಲಾಗುತ್ತಿದೆ. ಜಿಲ್ಲೆಗಳಲ್ಲಿ ಈಚಿನ ವರ್ಷಗಳಲ್ಲಿ ಶುಂಠಿಯನ್ನು ಪ್ರಮುಖ ವಾಣಿಜ್ಯ ಬೆಳೆಯನ್ನಾಗಿ ಬೆಳೆಯಲಾಗುತ್ತಿದೆ. ಮೈಸೂರು ಜಿಲ್ಲೆ ಒಂದರ ಲ್ಲಿಯೇ 8 ಸಾವಿರ ಹೆಕ್ಟೇರ್‌ಗೂ ಅಧಿಕ ಜಮೀನಿನಲ್ಲಿ ಶುಂಠಿ ಬಿತ್ತನೆಯಾಗಿದೆ.
*
ಈ ವರ್ಷ ಅತಿವೃಷ್ಟಿಯಿಂದ ಶುಂಠಿ ಬೆಳೆ ಕುಂಠಿತಗೊಂಡಿದೆ. ಫಸಲು ಕೊರತೆಯ ಪರಿಣಾಮ ಬರುವ ಡಿಸೆಂಬರ್ ಅಂತ್ಯದ ವೇಳೆಗೆ ಹಸಿ ಶುಂಠಿ ದರ ಏರಿಕೆಯಾಗಬಹುದು ಎಂದು ಹೇಳುತ್ತಾರೆ
ಬೆಂಗಳೂರು ಎಪಿಎಂಸಿ ಶುಂಠಿ ವ್ಯಾಪಾರಿ ಮಂಜೇಗೌಡ ಎಸ್ ಎನ್.
ಈ ವರ್ಷ ಶ್ರಮಪಟ್ಟು ಕೃಷಿ ಮಾಡಿದ ಹಲವು ರೈತರ ಶುಂಠಿ ಫಸಲು ಹಾಳಾಗಿದೆ. ಮಳೆ ಹಾನಿ, ಸಾಂಕ್ರಾಮಿಕ ಕೊಳೆ ರೋಗ ಇತ್ಯಾದಿ ಕಾರಣ ಹಲವು ರೈತರು ದಸರಾ ಹಬ್ಬದ ಸಮಯದಲ್ಲಿಯೇ ಅನಿವಾರ್ಯವಾಗಿ ಹಸಿ ಶುಂಠಿ ಕಿತ್ತು ಮಾರಿದ್ದವೇ ಈಗ ಬೆಲೆ ಏರಿಕೆ ನಮಗೆ ಲಭ್ಯವಿಲ್ಲದಾಗಿದೆ.
- ಅರುಣ ಗೌಡ, ಹಾಸನ ತಾಲೂಕು ರೈತ.