ಮುಂಬೈ: ಭಾರತದ ಪ್ರಮುಖ ಖಾಸಗಿ ವಲಯದ ಬ್ಯಾಂಕ್ ಆದ ಎಚ್‌ಡಿಎಫ್‌ಸಿ ಬ್ಯಾಂಕ್, ತನ್ನ ವಾರ್ಷಿಕ ಶಾಪಿಂಗ್ ಮೇಳವಾದ ಫೆಸ್ಟಿವ್ ಟ್ರೀಟ್ಸ್ 2025 ಕಾರ್ಯಕ್ರಮವನ್ನು ಘೋಷಿಸಿದೆ. ಈ ಮೇಳದಲ್ಲಿ ಗ್ರಾಹಕರಿಗೆ ದೇಶವ್ಯಾಪಿ ಸಾಕಷ್ಟು ಆಫರ್ ಗಳು ಲಭ್ಯವಾಗಲಿದ್ದು, ಕಾರ್ಡ್ ಗಳು, ಸಾಲಗಳು, ಪೇಜಪ್ ಮತ್ತು ಈಸಿ ಇಎಂಐ ವ್ಯವಸ್ಥೆಯ ಮೂಲಕ 10,000ಕ್ಕೂ ಹೆಚ್ಚು ಆಫರ್‌ಗಳು ದೊರೆಯುತ್ತವೆ.
ಈ ಮೂಲಕ ಗ್ರಾಹಕರಿಗೆ ಹಬ್ಬದ ಶಾಪಿಂಗ್ ಅನ್ನು ಕೈಗೆಟಕುವ ದರದಲ್ಲಿ ಮತ್ತು ಲಾಭದಾಯಕ ವಾಗಿ ನಡೆಸಲು ಬ್ಯಾಂಕ್ ಅನುವು ಮಾಡಿಕೊಡಲಿದೆ. ಬ್ಯಾಂಕ್ ನ ವಿವಿಧ ಆಫರ್‌ಗಳು: ಬ್ಯಾಂಕ್ ಈ ಸಂದರ್ಭದಲ್ಲಿ ಎಕ್ಸ್ ಪ್ರೆಸ್ ಪರ್ಸನಲ್ ಲೋನ್, ಉದ್ಯಮ ಸಾಲಗಳು, ಕಾರ್ ಸಾಲ ಗಳು, ದ್ವಿಚಕ್ರ ವಾಹನ ಸಾಲಗಳು, ಗೃಹ ಸಾಲಗಳು, ಚಿನ್ನದ ಸಾಲಗಳು, ಕೃಷಿ ಸಾಲಗಳು, ವಾಣಿಜ್ಯ ವಾಹನಗಳು, ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್ ಗಳು, ಉಳಿತಾಯ ಖಾತೆಗಳು, ಪೇಜಪ್, ಷೇರುಗಳ ಮೇಲಿನ ಸಾಲ, ಆಸ್ತಿಯ ಮೇಲಿನ ಸಾಲ ಸೇರಿದಂತೆ ಹಲವಾರು ಉತ್ಪನ್ನಗಳ ಮೇಲೆ ಆಫರ್ ಗಳನ್ನು ನೀಡುತ್ತದೆ.
ಗ್ರಾಹಕರು ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು ಮತ್ತು ಈಸಿ ಇಎಂಐ ಮೂಲಕ ಮಾಡಿದ ಖರೀದಿಗಳ ಮೇಲೆ ಹಬ್ಬದ ಶಾಪಿಂಗ್ ನಲ್ಲಿ ರೂ. 50,000 ವರೆಗೆ ಉಳಿತಾಯ ಮಾಡಬಹುದು.
ಇದನ್ನೂ ಓದಿ: ಎಲೆಕ್ಟ್ರಿಕ್ ವೆಹಿಕಲ್ ಡೀಲರ್ ಫೈನಾನ್ಸಿಂಗ್ ಕಾರ್ಯಕ್ರಮಕ್ಕಾಗಿ, HDFC ಬ್ಯಾಂಕ್‍ನೊಂದಿಗೆ ಕೈ ಜೋಡಿಸಿದ ಟಾಟಾ ಮೋಟಾರ್ಸ್
ಬ್ಯಾಂಕ್ ಪ್ರಮುಖ ಬ್ರಾಂಡ್ ಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡಿದ್ದು, ಈ ಮೂಲಕ ಎಲ್‌ಜಿ ಯಲ್ಲಿ ಈಸಿಇಎಂಐ ಮೂಲಕ ರೂ. 50,000 ಕ್ಯಾಶ್‌ಬ್ಯಾಕ್ ಪಡೆಯಬಹುದು. ಗೂಗಲ್ ಪಿಕ್ಸಲ್ ಮೇಲೆ ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗಳು ಮತ್ತು ಈಸಿ ಇಎಂಐ ಮೂಲಕ ರೂ. 10,000 ವರೆಗೆ ಕ್ಯಾಶ್ ಬ್ಯಾಕ್ ಲಭ್ಯವಿದೆ. ಈ ಫೆಸ್ಟಿ ಟ್ರೀಟ್ಸ್ ಆಫರ್ ಗಳು ಉಡುಗೆ, ಎಲೆಕ್ಟ್ರಾನಿಕ್ಸ್, ಡೈನಿಂಗ್, ಪ್ರಯಾಣ ಮತ್ತು ಆಭರಣಗಳಂತಹ ವಿವಿಧ ಉತ್ಪನ್ನಗಳಿಗೆ ಅನ್ವಯಿಸುತ್ತವೆ.
ಈ ವರ್ಷದ ಶಾಪಿಂಗ್ ಆವೃತ್ತಿಯು ಹಬ್ಬಗಳಿಗೆ ತಕ್ಕಂತೆ ಹಂತಹಂತವಾಗಿ ಆರಂಭವಾಗುತ್ತದೆ, ಓಣಂನಿಂದ ಶುರುವಾಗಿ, ಗಣೇಶ ಚತುರ್ಥಿ, ನವರಾತ್ರಿ, ದುರ್ಗಾ ಪೂಜೆ ಮತ್ತು ದೀಪಾವಳಿವರೆಗೂ ಮುಂದುವರಿಯುತ್ತದೆ. ಇದರಿಂದ ಆಫರ್ ಗಳು ಎಲ್ಲಾ ರಾಜ್ಯಗಳ ಗ್ರಾಹಕರಿಗೆ ಸಕಾಲಿಕವಾಗಿ ಮತ್ತು ಪ್ರಸ್ತುತವಾಗಿ ದೊರೆಯುತ್ತವೆ. ವ್ಯಾಪಕ ಜಾಲದ ಬಳಕೆ: ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ 9,499 ಶಾಖೆಗಳು, 21,251 ಎಟಿಎಂಗಳು ಮತ್ತು ಆರು ಲಕ್ಷಕ್ಕೂ ಹೆಚ್ಚು ವ್ಯಾಪಾರಿ ಮತ್ತು ಡೀಲರ್ ಗಳ ಜಾಲವನ್ನು ಈ ಹಬ್ಬದ ಶಾಪಿಂಗ್ ಮೇಳ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲಿದೆ.
ರಿಟೇಲ್ ಕೇಂದ್ರಗಳು, ವಸತಿ ಸಂಕೀರ್ಣಗಳು ಮತ್ತು ಕಚೇರಿಗಳಲ್ಲಿ 37,000ಕ್ಕೂ ಹೆಚ್ಚು ಆನ್-ಗ್ರೌಂಡ್ ಚಟುವಟಿಕೆಗಳನ್ನು ಆಯೋಜಿಸಿ ಗ್ರಾಹಕರಿಗೆ ಆಫರ್‌ಗಳನ್ನು ಒದಗಿಸಲಿದೆ. ಈ ಕುರಿತು ಮಾತನಾಡಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ನ ಪೇಮೆಂಟ್ಸ್, ಲಯಬಿಲಿಟಿ ಪ್ರೊಡಕ್ಟ್ಸ್, ಕನ್ಸ್ಯೂಮರ್ ಫೈನಾನ್ಸ್ ಮತ್ತು ಮಾರ್ಕೆಟಿಂಗ್ ವಿಭಾಗದ ಕಂಟ್ರಿ ಹೆಡ್ ಶ್ರೀ. ಪರಾಗ್ ರಾವ್ ಅವರು, “ದೇಶವು ಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ನಮ್ಮ ಗ್ರಾಹಕರಿಗೆ ನಮ್ಮ ಕಾರ್ಡ್ ಗಳು, ಸಾಲಗಳು, ಪೇಜಪ್ ಮತ್ತು ಈಸಿ ಇಎಂಐ ಮೂಲಕ ಉಳಿತಾಯ ಮಾಡಲು ಅನುವು ಮಾಡಿ ಕೊಡುವ ಸಾಕಷ್ಟು ಆಫರ್ ಗಳನ್ನು ಒದಗಿಸುತ್ತಿದ್ದೇವೆ.
ಫೆಸ್ಟಿವ್ ಟ್ರೀಟ್ಸ್ ಎಂಬುದು ನಮ್ಮ ವಾರ್ಷಿಕ ಶಾಪಿಂಗ್ ಮೇಳವಾಗಿದ್ದು, ಗ್ರಾಹಕರಿಗೆ ಗರಿಷ್ಠ ಉಳಿತಾಯವನ್ನು ಗಳಿಸಲು ಅವಕಾಶ ನೀಡುವ ಮೂಲಕ ಗ್ರಾಹಕರಿಗೆ ನೆರವಾಗುತ್ತದೆ” ಎಂದು ಹೇಳಿದರು. ಎಚ್‌ಡಿಎಫ್‌ಸಿ ಬ್ಯಾಂಕ್ ನ ಡೈರೆಕ್ಟ್ ಟು ಕನ್ಸ್ಯೂಮರ್ ಪ್ರಾಡಕ್ಟ್ಸ್ ವಿಭಾಗದ ಮುಖ್ಯ ಸ್ಥರು ಮತ್ತು ಗ್ರೂಪ್ ಹೆಡ್ ಹಾಗೂ ಸಿಎಂಓ ಶ್ರೀ. ರವಿ ಸಂತಾನಮ್ ಅವರು, “ನಮ್ಮ ವಾರ್ಷಿಕ ಶಾಪಿಂಗ್ ಮೇಳ ಫೆಸ್ಟಿವ್ ಟ್ರೀಟ್ಸ್ ಹಬ್ಬದ ಸಂಭ್ರಮವನ್ನು ಹೆಟ್ಟು ಮಾಡಲಿದೆ.
ನಮ್ಮ ಭೌತಿಕ ಮತ್ತು ಡಿಜಿಟಲ್ ಜಾಲದ ಮೂಲಕ ಈ ಆಯ್ದ ಆಫರ್ ಗಳನ್ನು ಗ್ರಾಹಕರಿಗೆ ತಲುಪಿಸುತ್ತೇವೆ. ಓಣಂನಿಂದ ದೀಪಾವಳಿಯವರೆಗೆ ಹಂತಹಂತವಾಗಿ, ಸ್ಥಳೀಯ ಚಟುವಟಿಕೆ ಗಳೊಂದಿಗೆ ಫೆಸ್ಟಿವ್ ಟ್ರೀಟ್ಸ್ ಆಫರ್ ಒದಗಿಸುವ ಮೂಲಕ, ಆಫರ್ ಗಳು ಆಕರ್ಷಕವಾಗಿರುವಂತೆ ಮಾತ್ರವಲ್ಲ, ಸ್ಥಳೀಯ ಸಮುದಾಯಗಳಿಗೆ ಸೂಕ್ತ ಸಮಯದಲ್ಲಿ ಒದಗುವಂತೆ ನೋಡಿಕೊಳ್ಳ ಲಿದ್ದೇವೆ” ಎಂದು ಹೇಳಿದರು.
ಅಪೂರ್ವ ಉಳಿತಾಯ: ರಾಷ್ಟ್ರೀಯ, ಪ್ರಾದೇಶಿಕ ಮತ್ತು ಸ್ಥಳೀಯ ಪಾಲುದಾರರೊಂದಿಗಿನ ಸಹ ಭಾಗಿತ್ವದಲ್ಲಿ 10,000ಕ್ಕೂ ಹೆಚ್ಚು ಆಯ್ದ ಆಫರ್ ಗಳು •ಸಮಗ್ರ ಹಣಕಾಸು ಪರಿಹಾರಗಳು: ಎಚ್‌ಡಿ ಎಫ್‌ಸಿ ಬ್ಯಾಂಕ್ ಕಾರ್ಡ್ ಗಳ ಮೂಲಕ ಪರ್ಸನಲ್, ಕಾರ್, ದ್ವಿಚಕ್ರ ವಾಹನ, ಉದ್ಯಮ ಸಾಲಗಳು, ಈಸಿಇಎಂಐ, ಪೇಜಪ್ ಸೇರಿದಂತೆ ವಿವಿಧ ರೀತಿಯ ಕೈಗೆಟಕುವ ದರದ ಸಾಲ ಸೌಲಭ್ಯ.
•ಪ್ರಾದೇಶಿಕ ಲಭ್ಯತೆ: ಭಾರತದಾದ್ಯಂತ 4,000ಕ್ಕೂ ಹೆಚ್ಚು ನಗರಗಳು ಮತ್ತು ಪಟ್ಟಣಗಳಲ್ಲಿ ಆಫರ್ ಗಳು ಲಭ್ಯವಿದ್ದು, ವಿವಿಧ ರೀತಿಯ ಮಾರುಕಟ್ಟೆಗಳಲ್ಲಿ ಸಂಸ್ಥೆ ಕಾರ್ಯನಿರ್ವಹಿಸಲಿದೆ.