ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಾರುಕಟ್ಟೆ ಗಳಿಕೆಗಳ ಜೊತೆಗೆ ಸುಸ್ಥಿರ ಫಲಿತಾಂಶ ದಾಖಲಿಸಿದ ಎಚ್‌ಡಿಎಫ್‌ಸಿ ಲೈಫ್‌

ಎಚ್‌ಡಿಎಫ್‌ಸಿ ಲೈಫ್‌ನ 2026 ರ ವಿತ್ತ ವರ್ಷದ 1ನೇ ತ್ರೈಮಾಸಿಕವು ಉತ್ತಮವಾಗಿ ಆರಂಭ ವಾಗಿದ್ದು, ಟಾಪ್ ಲೈನ್‌ನಲ್ಲಿ ಆರೋಗ್ಯಕರ ಬೆಳವಣಿಗೆ, ಹೊಸ ಉದ್ಯಮದ ಮೌಲ್ಯ ಮತ್ತು ಸ್ಥಿರ ಮಾರ್ಜಿನ್‌ ಗಳನ್ನು ದಾಖಲಿಸಿದೆ. ವೈಯಕ್ತಿಕ ವಾರ್ಷಿಕಗೊಳಿಸಿದ ಪ್ರೀಮಿಯಂ ತತ್ಸಮಾನ (ಎಪಿಇ) ವಾರ್ಷಿಕವಾಗಿ 12.5% ಬೆಳವಣಿಗೆ ಕಂಡಿದ್ದು, 21% ಸುಸ್ಥಿರ 2 ವರ್ಷದ ಸಿಎಜಿಆರ್ ಆಗಿದೆ.

ಎಚ್‌ಡಿಎಫ್‌ಸಿ ಲೈಫ್‌ನ 2026 ರ ವಿತ್ತ ವರ್ಷದ 1ನೇ ತ್ರೈಮಾಸಿಕವು ಉತ್ತಮವಾಗಿ ಆರಂಭ ವಾಗಿದ್ದು, ಟಾಪ್ ಲೈನ್‌ನಲ್ಲಿ ಆರೋಗ್ಯಕರ ಬೆಳವಣಿಗೆ, ಹೊಸ ಉದ್ಯಮದ ಮೌಲ್ಯ ಮತ್ತು ಸ್ಥಿರ ಮಾರ್ಜಿನ್‌ಗಳನ್ನು ದಾಖಲಿಸಿದೆ. ವೈಯಕ್ತಿಕ ವಾರ್ಷಿಕಗೊಳಿಸಿದ ಪ್ರೀಮಿಯಂ ತತ್ಸಮಾನ (ಎಪಿಇ) ವಾರ್ಷಿಕವಾಗಿ 12.5% ಬೆಳವಣಿಗೆ ಕಂಡಿದ್ದು, 21% ಸುಸ್ಥಿರ 2 ವರ್ಷದ ಸಿಎಜಿಆರ್ ಆಗಿದೆ.

ಉದ್ಯಮ ಮತ್ತು ಖಾಸಗಿ ವಲಯಕ್ಕಿಂತ ಉತ್ತಮ ಸಾಧನೆ ಮಾಡುವ ತನ್ನ ಬದ್ಧತೆಯನ್ನು ಕಂಪನಿ ಯು ಮುಂದುವರಿಸಿದೆ. ಇದೇ ರೀತಿ, ಎಚ್‌ಡಿಎಫ್‌ಸಿ ಲೈಫ್‌ನ ಮಾರುಕಟ್ಟೆ ಪಾಲಿನಲ್ಲಿ 70 ಬಿಪಿಎಸ್ ಏರಿಕೆ ಇದ್ದು, ಒಟ್ಟಾರೆ ಮಟ್ಟದಲ್ಲಿ ಇದು 12.1% ಆಗಿದೆ ಮತ್ತು ಕಂಪನಿಗೆ ಇದು ಹೊಸ ಮೈಲಿ ಗಲ್ಲಾಗಿದೆ. ಮುಂದುವರಿದು, ಖಾಸಗಿ ವಲಯದಲ್ಲಿ 40 ಬಿಪಿಎಸ್ ಗಳಿಕೆ ಇದ್ದು, ಖಾಸಗಿ ಮಾರುಕಟ್ಟೆ ಪಾಲನ್ನು 17.5% ಕ್ಕೆ ಕೊಂಡೊಯ್ದಿದೆ.

ಇತರ ಪ್ರಮುಖ ಮಾನದಂಡಗಳ ಪೈಕಿ ಎಂಬೆಡ್ಡೆಡ್ ಮೌಲ್ಯವು ರೂ. 58,355 ಕೋಟಿಗೆ ಏರಿಕೆ ಯಾಗಿದ್ದು, 12 ತಿಂಗಳ ಆಧಾರದಲ್ಲಿ 16.3% ಇವಿಯಲ್ಲಿ ಕಾರ್ಯಾಚರಣೆ ರಿಟರ್ನ್ ನೀಡಿದೆ. ಸಾಲ್ವೆನ್ಸಿ ದರವು 192% ಮಟ್ಟದಲ್ಲಿ ಸುಸ್ಥಿರವಾಗಿದೆ. ತೆರಿಗೆ ನಂತರದ ಲಾಭವು 14% ರಲ್ಲಿ ಏರಿಕೆ ಯಾಗಿದ್ದು, ರೂ. 546 ಕೋಟಿ ಆಗಿದೆ ಮತ್ತು ಬ್ಯಾಕ್ ಬುಕ್ ಲಾಭದಲ್ಲಿ 15% ಬೆಳವಣಿಗೆ ಕಂಡಿದೆ. ಬಳಕೆ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲೂ, ಎಚ್‌ಡಿಎಫ್‌ಸಿ ಲೈಫ್‌ನ ನವೀಕರಣ ಕಲೆಕ್ಷನ್‌ ವಾರ್ಷಿಕವಾಗಿ 19% ಬೆಳವಣಿಗೆ ದಾಖಲಿಸಿದೆ. ಪರ್ಸಿಸ್ಟೆನ್ಸಿ ಮಾನದಂಡವು ಆರೋಗ್ಯಕರ ವಾಗಿದ್ದು, 13 ಮತ್ತು 61ನೇ ತಿಂಗಳ ಪರ್ಸಿಸ್ಟೆನ್ಸಿಯು ಅನುಕ್ರಮವಾಗಿ 86% ಮತ್ತು 64% ರಲ್ಲಿದೆ.

ಇದನ್ನೂ ಓದಿ: IPL 2025: ಎಂಎಸ್‌ ಧೋನಿಯ ನಿಜ ಸ್ವರೂಪವನ್ನು ರಿವೀಲ್‌ ಮಾಡಿದ ಡೆವಾಲ್ಡ್‌ ಬ್ರೆವಿಸ್‌!

ಈ ವರ್ಷದ ಆರಂಭದಲ್ಲಿ ನಿರೀಕ್ಷೆಗೆ ಅನುಗುಣವಾಗಿ, 2026 ವಿತ್ತ ವರ್ಷದ 1ನೇ ತ್ರೈಮಾಸಿಕಕ್ಕೆ ಹೊಸ ಬ್ಯುಸಿನೆಸ್‌ನ ಮೌಲ್ಯ (ವಿಎನ್‌ಬಿ) 809 ಕೋಟಿ ರೂ. ಆಗಿದ್ದು, ವಾರ್ಷಿಕವಾಗಿ 12.7% ಬೆಳವಣಿಗೆ ಕಂಡಿದೆ ಮತ್ತು 2 ವರ್ಷದ ಸಿಎಜಿಆರ್ 15% ಆಗಿದೆ. ಹೊಸ ಬ್ಯುಸಿನೆಸ್ ಮಾರ್ಜಿನ್‌ ಸ್ಥಿರವಾಗಿ 25.1% ರಲ್ಲಿದೆ. ಹೊಸ ಸರೆಂಡರ್ ಮೌಲ್ಯದ ನಿಯಮಗಳು 30 ಮೂಲಾಂಶ ಮಾರ್ಜಿನ್ ಅನ್ನು ಕಂಪ್ರೆಸ್ ಮಾಡಿದೆ. ಆದರೆ, ಸೂಚಿಸಿದ ಮಾರ್ಜಿನ್‌ ವರ್ಷವಿಡೀ ರೇಂಜ್‌ನಲ್ಲೇ ಇರಲಿದೆ ಎಂದು ಸೂಚಿಸಿದ್ದು, ಸುಸ್ಥಿರ ಮತ್ತು ಲಾಭದಾಯಕ ಬೆಳವಣಿಗೆ ದೀರ್ಘಕಾಲೀನ ಅಜೆಂಡಾ ದೊಂದಿಗೆ ಅಲ್ಪಾವಧಿ ಡೈನಾಮಿಕ್ಸ್ ಅನ್ನು ಸಮತೋಲನಗೊಳಿಸುತ್ತಿದೆ.

ವಿಮೆ ಸಂಸ್ಥೆಯ ಯಶಸ್ಸಿಗೆ ಕೊಡುಗೆ ನೀಡಿದ ಇನ್ನೊಂದು ಅಂಶವೆಂದರೆ, ಸಮತೋಲಿತ ಉತ್ಪನ್ನ ಮಿಶ್ರಣವಾಗಿದೆ. 2026 ವಿತ್ತ ವರ್ಷದ 1ನೇ ತ್ರೈಮಾಸಿಕದಲ್ಲಿ ಮಿಶ್ರಣವು ಉತ್ತಮವಾಗಿ ವೈವಿಧ್ಯ ಮಯಗೊಂಡಿದ್ದು, ಯುಲಿಪ್‌ಗಳು 38%, ಭಾಗವಹಿಸುವ ಉತ್ಪನ್ನಗಳು 32%, ನಾನ್ ಪಾರ್ ಸೇವಿಂಗ್ಸ್ 19%, ಟರ್ಮ್ 6% ಮತ್ತು ಆನ್ಯುಟಿ 5% ಇದೆ. ಯಾವುದೇ ಒಂದು ಖಾತೆಯ ಇಡೀ ಬ್ಯುಸಿ ನೆಸ್‌ನ ಅರ್ಧದಷ್ಟು ಇರಬಾರದು ಎಂದು ಎಚ್‌ಡಿಎಫ್‌ಸಿ ಲೈಫ್ ಪ್ರಜ್ಞಾಪೂರ್ವಕವಾಗಿ ಖಾತರಿ ಪಡಿಸಿಕೊಂಡಿದೆ. ಈ ಶಿಸ್ತುಬದ್ಧ ಕಾರ್ಯತಂತ್ರವು ಉತ್ತಮ ರಿಸ್ಕ್ ನಿರ್ವಹಣೆಯ ಜೊತೆಗೆ ಸಮತೋಲಿತ ಬೆಳವಣಿಗೆಯನ್ನು ಒದಗಿಸಿದೆ.

ಭಾರತದ ತಲಾ ಆದಾಯದ ಜಿಡಿಪಿ 2022 ರಲ್ಲಿ 2.4 ಸಾವಿರ ಯುಎಸ್‌ಡಿ ಇಂದ 2032 ರಲ್ಲಿ 4.3 ಸಾವಿರ ಯುಎಸ್‌ಡಿಗೆ ದುಪ್ಪಟ್ಟಾಗುತ್ತದೆ ಎಂದು ಸ್ವಿಸ್ ರೀ ಅಂದಾಜು ಮಾಡಿದೆ. ಭಾರತದ ಮಧ್ಯಮ ವರ್ಗವು 2020 ರಲ್ಲಿ ಒಟ್ಟಾರೆ 30% ಆಗಿತ್ತು. 2030 ರ ವೇಳೆಗೆ ಇದು 46% ಕ್ಕೆ ಏರುತ್ತದೆ ಎಂದು ಪ್ರೈಸ್ (ಪೀಪಲ್ ರಿಸರ್ಚ್ ಆನ್ ಇಂಡಿಯಾ ಕನ್ಸ್ಯೂಮರ್ ಎಕಾನಮಿ) ಅಂದಾಜು ಮಾಡಿದೆ. ಜೀವ ವಿಮೆ ಎಲ್ಲರನ್ನೂ ತಲುಪುವಿಕೆ ಪ್ರಮಾಣ ಕಡಿಮೆ ಇರುವುದು ಮತ್ತು ರಕ್ಷಣೆ ಮತ್ತು ದೀರ್ಘಕಾಲೀನ ಉಳಿತಾಯಕ್ಕೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಜೀವ ವಿಮೆ ಉದ್ಯಮಕ್ಕೆ ಉತ್ತಮ ಬೆಳವಣಿಗೆ ಅವಕಾಶವಿದೆ.

ನವೀನ, ಗ್ರಾಹಕ ಕೇಂದ್ರಿತ ಸೌಲಭ್ಯಗಳನ್ನು ಒದಗಿಸುವ ಮೂಲಕ 2ನೇ ಮತ್ತು 3ನೇ ಹಂತದ ಮಾರುಕಟ್ಟೆಗಳಲ್ಲಿ ತನ್ನ ವ್ಯಾಪ್ತಿಯನ್ನು ಇನ್ನಷ್ಟು ಆಳವಾಗಿಸುವುದಕ್ಕೆ ಎಚ್‌ಡಿಎಫ್‌ಸಿ ಲೈಫ್ ಮುಂದುವರಿಯುತ್ತಿದೆ. ಗಮನಾರ್ಹ ಸಂಗತಿಯೆಂದರೆ, 1ನೇ ತ್ರೈಮಾಸಿಕದಲ್ಲಿ ಪಡೆದ 70% ಹೊಸ ಗ್ರಾಹಕರು ಎಚ್‌ಡಿಎಫ್‌ಸಿ ಲೈಫ್‌ನಲ್ಲಿ ಮೊದಲ ಬಾರಿಯ ಖರೀದಿದಾರರಾಗಿದ್ದಾರೆ. ಇದು ಸಂಸ್ಥೆಯ ಖರೀದಿ ಕಾರ್ಯತಂತ್ರವನ್ನು ಸೂಚಿಸುತ್ತದೆ ಮತ್ತು ಹಂತ 1, 2 ಮತ್ತು 3 ನಗರಗಳಲ್ಲಿ ಹೆಜ್ಜೆ ಗುರುತು ವಿಸ್ತರಿಸುತ್ತಿರುವುದನ್ನು ಸೂಚಿಸುತ್ತದೆ.

ವಿತರಣೆ ಸಾಮರ್ಥ್ಯವು 2.5 ಲಕ್ಷಕ್ಕೂ ಹೆಚ್ಚು ಏಜೆಂಟರ ಏಜೆನ್ಸಿ ನೆಟ್‌ವರ್ಕ್‌ನಿಂದ ಬೆಂಬಲಿತ ವಾಗಿದ್ದು, ಭಾರತದಲ್ಲಿ 650 ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಕಳೆದ ಕೆಲವು ವರ್ಷಗಳಿಂದ ಲೂ, ಕಂಪನಿಯು ಹಲವು ಬ್ಯಾಂಕ್‌ಗಳು, ಎನ್‌ಬಿಎಫ್‌ಸಿಗಳು, ಎಂಎಫ್‌ಐಗಳು, ಬ್ರೋಕರ್‌ಗಳು ಮತ್ತು ಹೊಸ ಪಾಲುದಾರರನ್ನು ಮಾಡಿಕೊಂಡಿದ್ದು, ಇಂತಹ ಪಾಲುದಾರಿಕೆಯು ಈಗ 500 ಕ್ಕೂ ಹೆಚ್ಚಾಗಿದೆ.