IPL 2025: ಎಂಎಸ್ ಧೋನಿಯ ನಿಜ ಸ್ವರೂಪವನ್ನು ರಿವೀಲ್ ಮಾಡಿದ ಡೆವಾಲ್ಡ್ ಬ್ರೆವಿಸ್!
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದ ಡೆವಾಲ್ಡ್ ಬ್ರೆವಿಸ್ ಎಲ್ಲರ ಗಮನವನ್ನು ಸೆಳೆದಿದ್ದರು ಹಾಗೂ ಸಿಎಸ್‌ಕೆ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದಾರೆ. ಇದೀಗ ಅವರು ಎಂಎಸ್ ಧೋನಿಯ ಬಗ್ಗೆ ಮಾತನಾಡಿದ್ದಾರೆ.

ಎಂಎಸ್ ಧೋನಿ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಡೆವಾಲ್ಡ್ ಬ್ರೆವಿಸ್. -

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಯುವ ಬ್ಯಾಟ್ಸ್‌ಮನ್ ಡೆವಾಲ್ಡ್ ಬ್ರೆವಿಸ್ (Dewald Brewis) ದಿಗ್ಗಜ ನಾಯಕ ಎಂಎಸ್ ಧೋನಿಯನ್ನು (MS Dhoni) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಸಿಎಸ್‌ಕೆ ಪರ ಆಡುವಾಗ ಎಂಎಸ್ ಧೋನಿ ಅವರೊಂದಿಗೆ ಗುಣಮಟ್ಟದ ಸಮಯವನ್ನು ಕಳೆದಿದ್ದೇನೆಂದು ಬೇಬಿ ಎಬಿಡಿ ತಿಳಿಸಿದ್ದಾರೆ. ಕಳೆದ 2025ರ ಐಪಿಎಲ್ ಟೂರ್ನಿಯಲ್ಲಿ ಡೆವಾಲ್ಡ್ ಬ್ರೆವಿಸ್ ಅವರು ಸಿಎಸ್‌ಕೆ ಪರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು ಹಾಗೂ ಚೆನ್ನೈ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದಾರೆ. ಅವರು ಮುಂದಿನ ಆವೃತ್ತಿಯ ಟೂರ್ನಿಯಲ್ಲಿಯೂ ಸಿಎಸ್‌ಕೆ ಪರ ಆಡಲಿದ್ದಾರೆ.
2025ರ ಐಪಿಎಲ್ ಟೂರ್ನಿಯ ಮೆಗಾ ಹರಾಜಿನಲ್ಲಿ ಡೆವಾಲ್ಡ್ ಬ್ರೆವಿಸ್ ಅನ್‌ಸೋಲ್ಡ್ ಆಗಿದ್ದರು. ಆದರೆ, ಟೂರ್ನಿಯ ಆರಂಭದಲ್ಲಿ ಗಾಯಾಳು ಆಟಗಾರನ ಸ್ಥಾನಕ್ಕೆ ಬಂದ ಬ್ರೆವಿಸ್ ಗಮನಾರ್ಹ ಬ್ಯಾಟಿಂಗ್ ಪ್ರದರ್ಶನವನ್ನು ತೊರಿದರು. ಅವರನ್ನು ಚೆನ್ನೈ ಫ್ರಾಂಚೈಸಿ 2.2 ಕೋಟಿ ರೂ. ಗಳಿಗೆ ಖರೀದಿಸಿತ್ತು. ಸಿಎಸ್‌ಕೆ ಪರ ಆಡಿದ ಆರು ಇನಿಂಗ್ಸ್‌ಗಳಿಂದ ಅವರು 180ರಸ್ಟ್ರೈಕ್ ರೇಟ್‌ನಲ್ಲಿ 225 ರನ್‌ಗಳನ್ನು ಕಲೆ ಹಾಕಿದ್ದರು. ಇದರಲ್ಲಿ ಅವರು ಎರಡು ಅರ್ಧಶತಕಗಳನ್ನು ಬಾರಿಸಿದ್ದರು.
Asia Cup 2025: ಇಂದು ಟೀಮ್ ಇಂಡಿಯಾ ಆಟಗಾರರ ದುಬೈ ಪ್ರಯಾಣ
ಎಬಿ ಡಿ ವಿಲಿಯರ್ಸ್ ಅವರ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಡೆವಾಲ್ಡ್ ಬ್ರೆವಿಸ್, "ನಾನು ಜನರಿಗೆ ಅದು ಅದ್ಭುತವಾಗಿದೆ ಎಂದು ಹೇಳಿದಾಗಲೆಲ್ಲಾ ನಾನು ಅದನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ. ಐಪಿಎಲ್ ಟೂರ್ನಿಯಲ್ಲಿ ನನ್ನ ನಾಲ್ಕು ವರ್ಷಗಳು ಅದ್ಭುತವಾಗಿವೆ. ಇದು ನಿಜಕ್ಕೂ ಅಸಾಧಾರಣವಾಗಿದೆ. ನಾನು ಆ ಎಲ್ಲಾ ಪ್ರಯಾಣವನ್ನು ಸುಂದರವಾಗಿ ನಡೆಸಬೇಕಾಯಿತು ಮತ್ತು ಎಂಎಸ್ ಧೋನಿ ಅವರಿಂದ ನಾನು ಹೇಳಬಹುದಾದ ಒಂದು ವಿಷಯವೆಂದರೆ ಅವರ ವಿನಮ್ರತೆ ಮತ್ತು ಅವರು ನನಗೆ ಎದ್ದು ಕಾಣುವ ವ್ಯಕ್ತಿ. ಅವರು ಮೂಲತಃ ಮೈದಾನದಿಂದ ಹೊರಗೆ ಹೇಗೆ ಇದ್ದಾರೆ, ಜನರಿಗಾಗಿ ಆಟಗಾರರಿಗಾಗಿ ಅವರು ಹೊಂದಿರುವ ಸಮಯ," ಎಂದು ಹೇಳಿದ್ದಾರೆ.
Asia Cup 2025: ಏಷ್ಯಾಕಪ್‌ಗೆ ಯುಎಇ ತಂಡ ಪ್ರಕಟ; ವಸೀಮ್ ನಾಯಕ
"ಅವರ ಕೊಠಡಿಯ ಬಾಗಿಲು ಯಾವಾಗಲೂ ತೆರೆದಿರುತ್ತದೆ. ಅವರು ನಿದ್ರೆ ಮಾಡುತ್ತಿರುವಾಗ ಮಾತ್ರ ಅವರ ಬಾಗಿಲು ಮುಚ್ಚಿರುತ್ತದೆ. ನಾನು ಹಲವು ಬಾರಿ ಎಂಎಸ್ ಧೋನಿ ಅವರ ಕೊಠಡಿಯಲ್ಲಿ ಕುಳಿತಿದ್ದೇನೆ, ಅವರು ಜೊತೆ ಸಾಕಷ್ಟು ಸಂಭಾಷಣೆಯನ್ನು ನಡೆಸಿದ್ದೇನೆ. ಅವರ ಹವ್ಯಾಸಗಳ ಬಗ್ಗೆ ಮಾತನಾಡಿದ್ದೇನೆ, ಅವರ ಜೊತೆ ಕ್ರಿಕೆಟ್ ವೀಕ್ಷಿಸಿದ್ದೇನೆ ಹಾಗೂ ಇದು ಅದ್ಭುತವಾಗಿದೆ. ಮೈದಾನದಲ್ಲಿ ಹಾಗೂ ಅದರ ಹೊರಗಡೆ ಎಂಎಸ್ ಧೋನಿ ಏನು ಮಾಡುತ್ತಾರೆಂದು ಎಲ್ಲರಿಗೂ ತಿಳಿದಿದೆ. ಅವರ ಜೊತೆಗೆ ತರಬೇತಿ ನಡೆಸುವುದು ನಿಜಕ್ಕೂ ಅದ್ಭುತವಾಗಿದೆ," ಎಂದು ಬೇಬಿ ಎಬಿಡಿ ತಿಳಿಸಿದ್ದಾರೆ.
Asia Cup 2025: ಟಿ20 ಕ್ರಿಕೆಟ್‌ನಲ್ಲಿ ದೊಡ್ಡ ದಾಖಲೆಯ ಸನಿಹದಲ್ಲಿ ಹಾರ್ದಿಕ್ ಪಾಂಡ್ಯ!
ಸಿಎಸ್‌ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್ ಬಗ್ಗೆ ಬ್ರೆವಿಸ್ ಹೇಳಿಕೆ
ಕಳೆದ ಐಪಿಎಲ್ ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಡೆವಾಲ್ಡ್ ಬ್ರೆವಿಸ್ ಸಿಎಸ್‌ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರ ಮೆಚ್ಚಿಗೆಗೆ ಪಾತ್ರರಾಗಿದ್ದಾರೆ.
"ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿನ ಸಮಯವನ್ನು ನಾನು ಆನಂದಿಸಿದ್ದೇನೆ. ಪ್ಲೆಮಿಂಗ್ ಸೇರಿದಂತೆ ಎಲ್ಲಾ ಕೋಚ್‌ಗಳು ಕೂಡ ಅದ್ಭುತ, ಅವರು ಹೇಗೆ ನನ್ನನ್ನು ತೆಗೆದುಕೊಂಡರು, ಅವರು ಬೆಂಬಲಿಸಿದ ರೀತಿ ಅತ್ಯುತ್ತಮವಾಗಿದೆ. ನಾನು ತಂಡಕ್ಕೆ ಸೇರ್ಪಡೆಯಾದ ತಕ್ಷಣ, ನಾನು ಇಲ್ಲಿ ಹೊಂದಿಕೊಂಡಿರುವ ಆಟಗಾರ ಎಂಬ ಭಾವನೆ ನನ್ನಲ್ಲಿ ಹುಟ್ಟಿತ್ತು. ನಾನು ಮೊದಲನೇ ಪಂದ್ಯವನ್ನು ಆಡಿರಲಿಲ್ಲ ಹಾಗೂ ನನಗಾಗಿ ನನಗೆ ಯೋಜನೆ ಇದೆ ಎಂದು ನನಗೆ ತಿಳಿದಿತ್ತು. ಹೌದು, ಇದು ಅದ್ಭುತವಾಗಿದೆ. ಎಲ್ಲಾ ಆಟಗಾರರ ಜೊತೆ ನಾನು ಆನಂದಿಸಿದ್ದೇನೆ. ಕೆಲ ವಿದೇಶಿ ಶ್ರೇಷ್ಠ ಆಟಗಾರರು ಕೂಡ ತಂಡದಲ್ಲಿದ್ದರು ಹಾಗೂ ಸ್ಥಳೀಯ ಆಟಗಾರರು ಇದ್ದರು," ಎಂದು ಡೆವಾಲ್ಡ್ ಬ್ರೆವಿಸ್ ತಿಳಿಸಿದ್ದಾರೆ.