Larry Ellison: ಒರಾಕಲ್ ಷೇರು ಬೆಲೆ ಹೆಚ್ಚಳ; ಕೋಟ್ಯಧಿಪತಿಗಳಾದ ಭಾರತೀಯ ಉದ್ಯೋಗಿಗಳು
ಒರಾಕಲ್ ಸಂಸ್ಥಾಪಕ ಲ್ಯಾರಿ ಎಲಿಸನ್ ಅವರು ಟೆಸ್ಲಾ ಕಂಪನಿಯ ಎಲಾನ್ ಮಸ್ಕ್ ಅವರನ್ನು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಯ ಅಗ್ರ ಸ್ಥಾನದಿಂದ ಕೆಳಗಿಳಿಸಿದ್ದಾರೆ. ಅವರ ಆದಾಯದಲ್ಲಿ ಭಾರಿ ಹೆಚ್ಚಳವಾಗಿದ್ದು ಮಾತ್ರವಲ್ಲ ಹಲವಾರು ತಂತ್ರಜ್ಞರು ತಮ್ಮ ಆದಾಯವನ್ನು ಭಾರಿ ಹೆಚ್ಚಿಸಿಕೊಂಡು ರಾತ್ರೋರಾತ್ರಿ ಕೋಟ್ಯಾಧಿಪತಿಗಳಾದರು.

-

ವಾಷಿಂಗ್ಟನ್: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಅಮೆರಿಕದ ಉದ್ಯಮಿ ಒರಾಕಲ್ ಸಂಸ್ಥಾಪಕ (Oracle founder) ಲ್ಯಾರಿ ಎಲಿಸನ್ (Larry Ellison) ಹೊರ ಹೊಮ್ಮಿದರು. ಟೆಸ್ಲಾ ಕಂಪನಿಯ ಎಲಾನ್ ಮಸ್ಕ್ (Tesla CEO Elon Musk) ಅವರನ್ನು ಕೆಲ ಹೊತ್ತು ಅಗ್ರ ಸ್ಥಾನದಿಂದ ಕೆಳಗಿಳಿಸಿದ ಲ್ಯಾರಿ ಎಲಿಸನ್ ಅವರಿಂದಾಗಿ ಬೆಂಗಳೂರಿನಲ್ಲಿರುವ (Bengaluru) ಹಲವು ತಂತ್ರಜ್ಞರು ತಮ್ಮ ಆದಾಯವನ್ನು ಭಾರಿ ಹೆಚ್ಚಿಸಿಕೊಂಡು ರಾತ್ರೋರಾತ್ರಿ ಕೋಟ್ಯಾಧಿಪತಿಗಳಾದರು. ಎಲಿಸನ್ ಅಗ್ರಸ್ಥಾನದಲ್ಲಿ ಅಲ್ಪಕಾಲ ಸ್ಥಾನ ಪಡೆದುದರಿಂದ ಒರಾಕಲ್‌ನ ಎಐ ಕ್ಲೌಡ್ ಸೇವೆಗಳಲ್ಲಿ ಬಹುಶತಕೋಟಿ ಡಾಲರ್ ಒಪ್ಪಂದ ಪಡೆದು ಅವರ ನಿವ್ವಳ ಮೌಲ್ಯದಲ್ಲಿ ಭಾರಿ ಹೆಚ್ಚಳವಾಯಿತು.
ಮಸ್ಕ್ ಅವರನ್ನು ಶ್ರೀಮಂತರ ಪಟ್ಟಿಯಿಂದ ಎಲಿಸನ್ ಕೆಳಗಿಳಿಸಿದ ಬಳಿಕ ಒರಾಕಲ್‌ನ ಷೇರು ಬೆಲೆ ಶೇ. 36ರಷ್ಟು ಹೆಚ್ಚಾಯಿತು. ಇದು 1992ರ ಬಳಿಕ ಕಂಪನಿಗೆ ಸಿಕ್ಕಿದ ಅತಿದೊಡ್ಡ ಒಂದು ದಿನದ ಲಾಭ. ಎಐ ಒಪ್ಪಂದಗಳಿಂದಾಗಿ ಎಲಿಸನ್ ಅವರ ಸಂಪತ್ತು ಹೆಚ್ಚಿದ್ದು ಮಾತ್ರವಲ್ಲ ಒರಾಕಲ್‌ನ ಹಲವು ಉದ್ಯೋಗಿಗಳು ರಾತ್ರೋರಾತ್ರಿ ಕೋಟ್ಯಧಿಪತಿಗಳಾದರು.
ಕಂಪನಿಯು ಭವಿಷ್ಯದಲ್ಲಿ ಉದ್ಯೋಗಿಗಳಿಗೆ ಷೇರುಗಳನ್ನು ನೀಡುವುದಾಗಿ ಭರವಸೆ ನೀಡಿದೆ. ಇದಕ್ಕಾಗಿ ಇರುವ ಷರತ್ತು ಎಂದರೆ ಒಂದು ನಿರ್ದಿಷ್ಟ ಅವಧಿಗೆ ಕಂಪನಿಯಲ್ಲೇ ಇರಬೇಕು, ಕಾರ್ಯಕ್ಷಮತೆಯ ಗುರಿಗಳನ್ನು ಸಾಧಿಸಬೇಕು.
ಈ ಕುರಿತು ಯುವತಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದು, ನಾನು ಇಂದು ಮಿಲಿಯನೇರ್ ಆಗಿದ್ದೇನೆ. ಕಳೆದ ಫೆಬ್ರವರಿಯಲ್ಲಿ ಒರಾಕಲ್‌ನಲ್ಲಿ ಕೆಲಸದಿಂದ ತೆಗೆದುಹಾಕಲ್ಪಟ್ಟೆ. ನನ್ನ ಎಲ್ಲ ಷೇರುಗಳನ್ನು ಉಳಿಸಿಕೊಂಡಿದ್ದೇನೆ. ಇದರಿಂದ ಇಂದು ನಾನು ನನ್ನ ಜೀವನದಲ್ಲೇ ಮೊದಲ ಬಾರಿಗೆ ಮಿಲಿಯನೇರ್ ಆಗಿದ್ದೇನೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿರುವ ಯುವ ಉದ್ಯೋಗಿಗಳು ಒರಾಕಲ್ ಸ್ಟಾಕ್ ಸರ್ಜ್‌ನ ನಡುವೆ ಮಿಲಿಯನೇರ್‌ಗಳಾಗಿದ್ದಾರೆ.
ಇದನ್ನೂ ಓದಿ: Viral News: ಆಹಾರ ಸೇವಿಸದೆ ಕೇವಲ ನೀರು, ಸೂರ್ಯನ ಬೆಳಕಿನಿಂದ 411 ದಿನ ಬದುಕುಳಿದಿದ್ದ ವ್ಯಕ್ತಿ: ವಿಜ್ಞಾನಕ್ಕೇ ಸವಾಲು
2022ರಲ್ಲಿ ಒರಾಕಲ್‌ನ ಬೆಂಗಳೂರಿನ ಕಚೇರಿಗೆ ಸೇರಿದ ಬಿಟೆಕ್ ಪದವೀಧರರು, ಒರಾಕಲ್‌ನ ಷೇರು ಬೆಲೆಯಲ್ಲಿ ಐತಿಹಾಸಿಕ ಏರಿಕೆಯ ಅನಂತರ ತಮ್ಮ ನಿವ್ವಳ ಮೌಲ್ಯ 1.5 ಕೋಟಿ ರೂ. ಎಂದು ಅಂದಾಜಿಸಿದ್ದಾರೆ. ಈ ಸಂಪತ್ತು ಹೆಚ್ಚಾಗಿ ಕಂಪೆನಿಯ ಷೇರುಗಳಲ್ಲಿ ಸಂಗ್ರಹವಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಅದನ್ನು ಅವರು ಪಡೆದುಕೊಳ್ಳಬಹುದು ಎನ್ನಲಾಗಿದೆ.
ಇನ್ನೊಂದು ಸಂಸ್ಥೆಯೊಂದರಲ್ಲಿ 2024ರ ಎಂಜಿನಿಯರಿಂಗ್ ಬ್ಯಾಚ್‌ನ 22 ವರ್ಷದ ಯುವಕನಿಗೆ ವಾರ್ಷಿಕ 60 ಲಕ್ಷ ರೂ. ವೇತನವನ್ನು ನೀಡಲಾಗಿದೆ. 60 ಲಕ್ಷ ರೂ. ಮೌಲ್ಯದ ಆರ್‌ಎಸ್‌ಯುಗಳನ್ನು ನೀಡಲು ಮೂರು ವರ್ಷದ ಅವಧಿ ಇರುವುದರಿಂದ ಇದರ ಮೌಲ್ಯವು ಪ್ರಸ್ತುತ 1.25 ಕೋಟಿ ರೂ. ಗಳಿಗೆ ಏರಿದ್ದು, 2027ರ ವೇಳೆಗೆ 2 ಕೋಟಿ ರೂ. ಗಳನ್ನು ಮೀರುವ ಸಾಧ್ಯತೆ ಇದೆ.