ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

GST Council: ಜನಸಾಮಾನ್ಯರಿಗೆ ಗುಡ್‌ನ್ಯೂಸ್‌; ಜಿಎಸ್‌ಟಿಯಲ್ಲಿ ಭಾರೀ ಇಳಿಕೆ, , ಫುಲ್‌ ಚಾರ್ಟ್‌ ಲಿಸ್ಟ್‌ ಇಲ್ಲಿದೆ ನೋಡಿ

ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕ್ಯಾನ್ಸರ್ ಔಷಧಿ, ಜೀವರಕ್ಷಕ ಔಷಧಿಗಳ ಮೇಲೆ ಈ ಹಿಂದೆ ಅನ್ವಯಿಸಲಾಗಿದ್ದ ಜಿಎಸ್‌ಟಿಯನ್ನು ಶೂನ್ಯಗೊಳಿಸಿದ್ದಾರೆ. ಯಾವ ವಸ್ತುಗಳು ಇನ್ನು ಅಗ್ಗವಾಗಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ನವದೆಹಲಿ: ಬುಧವಾರ, ಸೆಪ್ಟೆಂಬರ್‌ 3 ರಂದು ನಡೆದ 56 ನೇ ಜಿಎಸ್‌ಟಿ ಕೌನ್ಸಿಲ್ (GST Council) ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ 5% ಮತ್ತು 18% ರ ಎರಡು ತೆರಿಗೆ ಸ್ಲ್ಯಾಬ್‌ಗಳನ್ನು ಅನುಮೋದಿಸಲಾಯಿತು. ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕ್ಯಾನ್ಸರ್ ಔಷಧಿ, ಜೀವರಕ್ಷಕ ಔಷಧಿಗಳ ಮೇಲೆ ಈ ಹಿಂದೆ ಅನ್ವಯಿಸಲಾಗಿದ್ದ ಜಿಎಸ್‌ಟಿಯನ್ನು ಶೂನ್ಯಗೊಳಿಸಿದ್ದಾರೆ. ಈ ಹೊಸ ನಿಯಮವು ಸೆಪ್ಟೆಂಬರ್ 22, 2025 ರಿಂದ ಜಾರಿಗೆ ಬರಲಿದೆ. ಇದರ ನಂತರ, ದೇಶಾದ್ಯಂತ ಈ ಔಷಧಿಗಳ ಖರೀದಿಗೆ ಯಾವುದೇ ಜಿಎಸ್‌ಟಿ ಪಾವತಿಸಬೇಕಾಗಿಲ್ಲ. ಅಷ್ಟೇ ಅಲ್ಲದೇ, ಗೃಹ ಬಳಕೆ ಉತ್ಪನ್ನಗಳು, ಆರೋಗ್ಯಕ್ಕೆ ಸಂಬಂಧಿಸಿದ ಉತ್ಪನ್ನಗಳ ಮೇಲೆ ಜಿಎಸ್‌ಟಿಯನ್ನು ಕಡಿಮೆ ಮಾಡಲಾಗಿದೆ. ಯಾವ ವಸ್ತುಗಳು ಇನ್ನು ಅಗ್ಗವಾಗಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ದೈನಂದಿನ ಅಗತ್ಯ ವಸ್ತುಗಳು

ಎಷ್ಟಿತ್ತು ಕಡಿಮೆಯಾಗಿದ್ದೆಷ್ಟು
ಕೂದಲಿನ ಎಣ್ಣೆ, ಶಾಂಪೂ, ಬ್ರಶ್‌, ಶೇವಿಂಗ್‌ ಕ್ರೀಮ್‌ 18% 5%
ಬೆಣ್ಣೆ, ತುಪ್ಪ, ಹಾಲಿನ ಉತ್ಪನ್ನ 12% 5%
ಬೇಕರಿ ಉತ್ಪನ್ನಗಳು, ಕುರುಕಲು ತಿಂಡಿ 12% 5%
ನಾಪ್‌ಕಿನ್‌, ಮಕ್ಕಳಿಗೆ ಸಂಬಂಧಿಸಿದ ಉತ್ಪನ್ನಗಳು 12% 5%
ಹೊಲಿಗೆ ಯಂತ್ರ ಮತ್ತು ಬಿಡಿಭಾಗಗಳು 12% 5%

ಆರೋಗ್ಯ

ಎಷ್ಟಿತ್ತು ಕಡಿಮೆಯಾಗಿದ್ದೆಷ್ಟು
ಲೈಫ್‌ ಇನ್ಸುರೆನ್ಸ್‌ 18% ಇಲ್ಲ
ಥರ್ಮೋಮೀಟರ್‌ 18% 5%
ಮೆಡಿಕಲ್‌ ಗ್ರೇಡ್‌ ಆಕ್ಸಿಜನ್‌ 12% 5%
ವೈದ್ಯಕೀಯ ಉಪಕರಣಗಳು 12% 5%
ಗ್ಲುಕೋಮೀಟರ್‌ 12% 5%
ಕನ್ನಡಕಗಳು 12% 5%

ಶಿಕ್ಷಣ ಕ್ಷೇತ್ರ

ಎಷ್ಟಿತ್ತು ಕಡಿಮೆಯಾಗಿದ್ದೆಷ್ಟು
ಮ್ಯಾಪ್‌, ಚಾರ್ಟ್‌, ಇತ್ಯಾದಿ 12% ಇಲ್ಲ
ಪೆನ್ಸಿಲ್‌, ಶಾರ್ಪನರ್‌, ಕ್ರೆಯಾನ್ಸ್‌ 12% ಇಲ್ಲ
ನೋಟ್‌ಬುಕ್ಸ್‌ 12% ಇಲ್ಲ
ಎರೇಸರ್‌ 12% 5%

ಕೃಷಿ ಕ್ಷೇತ್ರ

ಎಷ್ಟಿತ್ತು ಕಡಿಮೆಯಾಗಿದ್ದೆಷ್ಟು
ಟ್ರಾಕ್ಟರ್‌ ಟೈಯರ್ಸ್‌, ಬಿಡಿಭಾಗಗಳು 18% 5%
ಟ್ರಾಕ್ಟರ್ಸ್‌ 12% 5%
ಫಲವತ್ತತೆಗಳು, ಔಷಧಿಗಳು 12% 5%
ನೀರಾವರಿ ಯೋಜನೆಯ ಉಪಕರಣಗಳು 12% 5%
ಕೃಷಿ, ಹೈನುಗಾರಿಗೆಗೆ ಸಂಬಂಧಿತ ಸಲಕರಣೆಗಳು 12% 5%

ಆಟೋಮೊಬೈಲ್‌

ಎಷ್ಟಿತ್ತು ಕಡಿಮೆಯಾಗಿದ್ದೆಷ್ಟು
ಪೆಟ್ರೋಲ್‌, ಪೆಟ್ರೋಲಿಯಮ್‌ ಉತ್ಪನ್ನಗಳು, ಎಲ್‌ಪಿಜಿ ಇತ್ಯಾದಿ 28% 18%
ಡೀಸೆಲ್‌ ಮತ್ತು ಡೀಸೆಲ್‌ ಹೈಬ್ರಿಡ್‌ ಕಾರುಗಳು 28% 18%
ಮೂರು ಚಕ್ರದ ವಾಹನಗಳು 28% 18%
ಮೋಟಾರ್‌ ಸೈಕಲ್‌ (350 Cc Below) 28% 18%
ಸಾಗಾಟದ ವಾಹನಗಳು 28% 18%

ಎಲೆಕ್ಟ್ರಾನಿಕ್‌ ಸಾಧನಗಳು

ಎಷ್ಟಿತ್ತು ಕಡಿಮೆಯಾಗಿದ್ದೆಷ್ಟು
ಹವಾ ನಿಯಂತ್ರಕಕಗಳು (AC) 28% 18%
TV (LED, LCD) 28% 18%
ಮೊನಿಟರ್‌ಗಳು ಮತ್ತು ಪ್ರೊಜೆಕ್ಟರ್ಸ್‌ 28% 18%
ಪಾತ್ರೆ ತೊಳೆಯುವ ಯಂತ್ರಗಳು 28% 18%