ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

New Rules: ನಾಳೆಯಿಂದ ಎಲ್ಲಾ ರೂಲ್‌ ಚೇಂಜ್‌! ಯುಪಿಐ, ರೈಲ್ವೇ ಟಿಕೆಟ್, LPG ದರ ಸೇರಿ ಹಲವು ಬದಲಾವಣೆ

ಅಕ್ಟೋಬರ್ 1 ರಿಂದ ಭಾರತದಲ್ಲಿ ಕೆಲವು ಮಹತ್ವದ ಬದಲಾವಣೆಗಳಾಗಲಿವೆ. ಈ ಹಣಕಾಸಿನ ಬದಲಾವಣೆಗಳನ್ನು ಜನಸಾಮಾನ್ಯರು ತಿಳಿದುಕೊಳ್ಳಲೇಬೇಕು. ಈ ಬದಲಾವಣೆಗಳು ನೇರವಾಗಿ ನಿಮ್ಮ ಜೇಬಿನ ಮೇಲೆ ಪರಿಣಾಮ ಬೀರುತ್ತವೆ. ಎನ್‌ಪಿಸಿಐ ಈ ತಿಂಗಳಿನಿಂದ ಕೆಲವು ನಿಯಮಗಳನ್ನು ತಂದಿದೆ. ಯುಪಿಐ ವ್ಯವಸ್ಥೆಗೆ ಸಂಬಂಧಿಸಿದಂತೆ ಕೆಲವು ಮಹತ್ವದ ಬದಲಾವಣೆಗಳನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಘೋಷಿಸಿದ್ದು, ಯುಪಿಐ, ರೈಲ್ವೆ ಟಿಕೆಟ್, ಎಲ್‌ಪಿಜಿ ಬೆಲೆ ಸೇರಿ ಹಲವು ಬದಲಾವಣೆ ಆಗಲಿದೆ.

ನವದೆಹಲಿ: ಅಕ್ಟೋಬರ್ (October) 1 ರಿಂದ ಭಾರತದಲ್ಲಿ (India) ಹಲವು ಹೊಸ ನಿಯಮಗಳು ಜಾರಿಗೆ ಬರಲಿವೆ. ಯುಪಿಐ ವಹಿವಾಟು (UPI Transactions:), ರೈಲ್ವೆ ಟಿಕೆಟ್ ಬುಕಿಂಗ್ (Railway Ticket Booking), ಎನ್‌ಪಿಎಸ್, ಎಲ್‌ಪಿಜಿ ಬೆಲೆಗಳಿಂದ ಹಿಡಿದು ಆನ್‌ಲೈನ್ ಗೇಮಿಂಗ್‌ವರೆಗೆ ಈ ಬದಲಾವಣೆಗಳು ಸಾಮಾನ್ಯ ಜನರ ಮೇಲೆ ಪರಿಣಾಮ ಬೀರಲಿವೆ.

ಯುಪಿಐ ವಹಿವಾಟು

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಎಸ್‌ಐ) ಯುಪಿಐನಲ್ಲಿ ಪೀರ್-ಟು-ಪೀರ್ (P2P) ‘ಕಲೆಕ್ಟ್ ರಿಕ್ವೆಸ್ಟ್’ ಅಥವಾ ‘ಪುಲ್ ಟ್ರಾನ್ಸಾಕ್ಷನ್’ ಸೌಲಭ್ಯವನ್ನು ಅಕ್ಟೋಬರ್ 2 ರಿಂದ ಸ್ಥಗಿತಗೊಳಿಸಲಿದೆ. ಫೋನ್‌ಪೇ, ಗೂಗಲ್ ಪೇ, ಪೇಟಿಎಂನಂತಹ ಯುಪಿಐ ವೇದಿಕೆಗಳಲ್ಲಿ ಈ ಬದಲಾವಣೆ ಜಾರಿಯಾಗಲಿದೆ. ಆನ್‌ಲೈನ್ ವಂಚನೆ ತಡೆಗಟ್ಟಲು ಮತ್ತು ಸುರಕ್ಷತೆ ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎನ್‌ಪಿಎಸ್‌ಐ ಸುತ್ತೋಲೆ ತಿಳಿಸಿದೆ.

ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್)

ಖಾಸಗಿ ವಲಯದ ಎನ್‌ಪಿಎಸ್ ಚಂದಾದಾರರು ಇನ್ಮುಂದೆ ತಮ್ಮ ಪಿಂಚಣಿ ನಿಧಿಯ 100% ವರೆಗೆ ಈಕ್ವಿಟಿ ಸಂಬಂಧಿತ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು, ಈ ಹಿಂದಿನ 75%ನಿಂದ 100%ಗೆ ಏರಿಕೆಯಾಗಿದೆ. ಜೊತೆಗೆ, ಎನ್‌ಪಿಎಸ್ ಖಾತೆ ತೆರೆಯುವ ಶುಲ್ಕ (ಇ-ಪ್ರಾನ್ ಕಿಟ್‌ಗೆ ₹18, ಫಿಸಿಕಲ್ ಪ್ರಾನ್ ಕಾರ್ಡ್‌ಗೆ ₹40) ಮತ್ತು ನಿರ್ವಹಣೆ ಶುಲ್ಕವೂ ಬದಲಾಗಿದೆ. ಶೂನ್ಯ ಬ್ಯಾಲೆನ್ಸ್ ಖಾತೆಗಳಿಗೆ ವಾರ್ಷಿಕ ನಿರ್ವಹಣೆ ಶುಲ್ಕ ಶೂನ್ಯವಾಗಿರುತ್ತದೆ ಎಂದು ಸೆಪ್ಟೆಂಬರ್ 15ರ ಸುತ್ತೋಲೆ ತಿಳಿಸಿದೆ.

ರೈಲ್ವೆ ಟಿಕೆಟ್ ಬುಕಿಂಗ್

ಅಕ್ಟೋಬರ್ 1 ರಿಂದ ಭಾರತೀಯ ರೈಲ್ವೆಯು ಕಾಯ್ದಿರಿಸುವ ಜನರಲ್ ಟಿಕೆಟ್‌ಗಳ ಬುಕಿಂಗ್‌ಗೆ ಆಧಾರ್ ದೃಢೀಕೃತ ಬಳಕೆದಾರರಿಗೆ ಆದ್ಯತೆ ನೀಡಲಿದೆ. ರಿಸರ್ವೇಷನ್ ತೆರೆದ ಮೊದಲ 15 ನಿಮಿಷಗಳಲ್ಲಿ ಕೇವಲ ಆಧಾರ್ ದೃಢೀಕರಣಗೊಂಡವರು IRCTC ವೆಬ್‌ಸೈಟ್ ಆ್ಯಪ್ ಮೂಲಕ ಟಿಕೆಟ್ ಬುಕ್ ಮಾಡಬಹುದು. ಇದು ದುರ್ಬಳಕೆ ತಡೆಗಟ್ಟಲು ಮತ್ತು ಸಾಮಾನ್ಯ ಜನರಿಗೆ ಲಾಭವಾಗಲು ಜಾರಿಗೊಂಡಿದೆ.

ಈ ಸುದ್ದಿಯನ್ನು ಓದಿ: Bank Holiday: ಗಾಂಧಿ ಜಯಂತಿ, ದೀಪಾವಳಿ ಸೇರಿ ಅಕ್ಟೋಬರ್‌ ತಿಂಗಳಲ್ಲಿ ಬ್ಯಾಂಕ್‌ಗಳಿ 21 ದಿನ ರಜೆ; ಇಲ್ಲಿದೆ ಸಂಪೂರ್ಣ ಪಟ್ಟಿ

ಎಲ್‌ಪಿಜಿ ಸಿಲಿಂಡರ್ ಬೆಲೆ

ಎಲ್‌ಪಿಜಿ ಸಿಲಿಂಡರ್ ಬೆಲೆಗಳನ್ನು ಪ್ರತಿ ತಿಂಗಳು ಪರಿಶೀಲಿಸಲಾಗುತ್ತದೆ. ಅಕ್ಟೋಬರ್ 1 ರಿಂದ ಬೆಲೆ ಏರಿಕೆ ಆಗಬಹುದು, ಇಳಿಕೆ ಆಗಬಹುದು ಅಥವಾ ಯಥಾಸ್ಥಿತಿ ಕಾಯ್ದುಕೊಳ್ಳಬಹುದು, ಇದು ಮನೆಯ ಬಜೆಟ್‌ನ ಮೇಲೆ ಪರಿಣಾಮ ಬೀರಲಿದೆ.

ಆನ್‌ಲೈನ್ ಗೇಮಿಂಗ್

ಆನ್‌ಲೈನ್ ಗೇಮಿಂಗ್‌ಗೆ ಹೊಸ ನಿಯಮಗಳು ಜಾರಿಗೆ ಬರಲಿವೆ. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ರಿಯಲ್-ಮನಿ ಗೇಮಿಂಗ್‌ಗೆ ಅವಕಾಶವಿರುತ್ತದೆ. ಪಾರದರ್ಶಕತೆ, ಸುರಕ್ಷತೆ ಮತ್ತು ಆಟಗಾರರ ರಕ್ಷಣೆಗೆ ಒತ್ತು ನೀಡಲಾಗಿದೆ ಎಂದು ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಬ್ಯಾಂಕ್ ರಜೆಗಳು

ಅಕ್ಟೋಬರ್‌ನಲ್ಲಿ ದಸರಾ, ದೀಪಾವಳಿ, ಛತ್ ಪೂಜೆ ಸೇರಿ 21 ದಿನ ಬ್ಯಾಂಕ್ ರಜೆಗಳಿವೆ. ಜನರು ಬ್ಯಾಂಕಿಂಗ್ ಕೆಲಸಗಳನ್ನು ಮೊದಲೇ ಫ್ಲ್ಯಾನ್ ಮಾಡುವುದು ಒಳ್ಳೆಯರು. ಅಲ್ಲೆ ಆರ್‌ಬಿಐ 0.25% ಬಡ್ಡಿದರ ಕಡಿತಗೊಳಿಸುವ ನಿರೀಕ್ಷೆಗಳು ಸಾಲದ ಬಡ್ಡಿದರಗಳ ಮೇಲೆ ಪ್ರಭಾವ ಬೀರಬಹುದು.