Bank Holiday: ಗಾಂಧಿ ಜಯಂತಿ, ದೀಪಾವಳಿ ಸೇರಿ ಅಕ್ಟೋಬರ್ ತಿಂಗಳಲ್ಲಿ ಬ್ಯಾಂಕ್‌ಗಳಿ 21 ದಿನ ರಜೆ; ಇಲ್ಲಿದೆ ಸಂಪೂರ್ಣ ಪಟ್ಟಿ
ಅಕ್ಟೋಬರ್ ಅಂದ್ರೆ ಸಾಲು ಸಾಲು ಹಬ್ಬಗಳ ತಿಂಗಳು. ನವರಾತ್ರಿ, ಗಾಂಧಿ ಜಯಂತಿ, ದಸರಾ, ದೀಪಾವಳಿ ಈ ತಿಂಗಳಲ್ಲೇ ಬಂದಿರುವ ಕಾರಣ ಈ ಬಾರಿ ರಜೆಗಳು ಜಾಸ್ತಿ. ಅದ್ರಲ್ಲೂ ಅಕ್ಟೋಬರ್ ನಲ್ಲಿ ಬ್ಯಾಂಕ್ ಗಳು ಬರೋಬರಿ 21 ದಿನ ಮುಚ್ಚಿರಲಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಬಿಡುಗಡೆಗೊಳಿಸಿರುವ ರಜಾಪಟ್ಟಿ ತಿಳಿಸಿದೆ. ಬ್ಯಾಂಕುಗಳ ರಜೆಗಳಿಗೆ ಸಂಬಂಧಿಸಿ ಆರ್ ಬಿಐ ಪ್ರತಿ ತಿಂಗಳು ರಜಾಪಟ್ಟಿ ಬಿಡುಗಡೆ ಮಾಡುತ್ತದೆ. ಬ್ಯಾಂಕಿಗೆ ರಜೆಯಿರುವ ದಿನ ಆನ್ ಲೈನ್ ವಹಿವಾಟಿಗೆ ಹಾಗೂ ಎಟಿಎಂ ವ್ಯವಹಾರಗಳಿಗೆ ಯಾವುದೇ ತೊಂದರೆ ಇರೋದಿಲ್ಲ.

ಸಾಂಧರ್ಬಿಕ ಚಿತ್ರ -

ನವದೆಹಲಿ: ಅಕ್ಟೋಬರ್ (October) 2025 ಭಾರತದಾದ್ಯಂತ ದಸರಾ, ದೀಪಾವಳಿ (Diwali), ಗಾಂಧಿ ಜಯಂತಿ (Gandhi Jayanti) ಕಾರಣಕ್ಕೆ ರಜಾದಿನಗಳಿವೆ. ಈ ತಿಂಗಳಲ್ಲಿ ಹಲವು ದಿನ ಬ್ಯಾಂಕ್ ರಜೆ (Bank holidays) ಇರುವುದರಿಂದ, ಗ್ರಾಹಕರು ತಮ್ಮ ಬ್ಯಾಂಕಿಂಗ್ ಕೆಲಸಗಳನ್ನು ಪ್ಲ್ಯಾನ್ ಮಾಡಿಕೊಳ್ಳಬೇಕು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಅಕ್ಟೋಬರ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ ಬ್ಯಾಂಕ್‌ಗಳಿಗೆ ಒಟ್ಟು 21 ರಜೆಗಳಿವೆ.
ಬ್ಯಾಂಕ್ ರಜೆಗಳ ಪಟ್ಟಿ
ಪ್ರತಿ ಭಾನುವಾರ: ಅಕ್ಟೋಬರ್ 5, 12, 19, 26.
ಎರಡನೇ ಮತ್ತು ನಾಲ್ಕನೇ ಶನಿವಾರ: ಅಕ್ಟೋಬರ್ 11 ಮತ್ತು 25.
ಅಕ್ಟೋಬರ್ 1: ಮಹಾನವಮಿ, ದಸರಾ, ಆಯುಧಪೂಜೆ, ದುರ್ಗಾಪೂಜೆ ಹಿನ್ನೆಲೆ ಕೇರಳ, ಒಡಿಶಾ, ತ್ರಿಪುರ, ಕರ್ನಾಟಕ, ತಮಿಳುನಾಡು, ನಾಗಾಲ್ಯಾಂಡ್, ಸಿಕ್ಕಿಂ, ಅರುಣಾಚಲ ಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಅಸ್ಸಾಂ, ಜಾರ್ಖಂಡ್, ಮೇಘಾಲಯದಲ್ಲಿ ರಜೆ ಇರಲಿದೆ.
ಅಕ್ಟೋಬರ್ 2: ಗಾಂಧಿ ಜಯಂತಿ, ದಸರಾ, ದುರ್ಗಾಪೂಜೆ ಹಿನ್ನೆಲೆ ದೇಶಾದ್ಯಂತ ರಜೆ.
ಅಕ್ಟೋಬರ್ 3, 4: ಸಿಕ್ಕಿಂನಲ್ಲಿ ದುರ್ಗಾಪೂಜೆಗೆ ರಜೆ.
ಅಕ್ಟೋಬರ್ 6: ತ್ರಿಪುರ ಮತ್ತು ಪಶ್ಚಿಮ ಬಂಗಾಳದಲ್ಲಿ ಲಕ್ಷ್ಮೀಪೂಜೆಗೆ ರಜೆ.
ಅಕ್ಟೋಬರ್ 7: ಮಹರ್ಷಿ ವಾಲ್ಮೀಕಿ ಜಯಂತಿ, ಕುಮಾರ ಪೂರ್ಣಿಮಾ ಹಿನ್ನೆಲೆ ಹಿಮಾಚಲ ಪ್ರದೇಶ, ಒಡಿಶಾ, ಕರ್ನಾಟಕ, ಚಂಡೀಗಢದಲ್ಲಿ ರಜೆ.
ಈ ಸುದ್ದಿಯನ್ನು ಓದಿ: Viral Video: ಛೇ... ಇವೆರೆಂಥಾ ಮನಷ್ಯರು! ಗಾಯಗೊಂಡ ನವಿಲನ್ನು ರಕ್ಷಿಸುವ ಬದಲು ಗರಿಗಳನ್ನು ಕಿತ್ತ ಜನ
ಅಕ್ಟೋಬರ್ 10: ಹಿಮಾಚಲ ಪ್ರದೇಶದಲ್ಲಿ ಕರ್ವಾ ಚೌತ್ ಹಿನ್ನೆಲೆ ರಜೆ.
ಅಕ್ಟೋಬರ್ 18: ಅಸ್ಸಾಂನಲ್ಲಿ ಕಾಟಿ ಬಿಹು ಹಿನ್ನೆಲೆ ರಜೆ.
ಅಕ್ಟೋಬರ್ 20: ದೀಪಾವಳಿ, ನರಕ ಚತುರ್ದಶಿ, ಕಾಳಿಪೂಜೆ ಹಿನ್ನೆಲೆ ಜಮ್ಮು ಕಾಶ್ಮೀರ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಅಸ್ಸಾಂ, ಒಡಿಶಾದ ಹೊರತಾಗಿ ದೇಶಾದ್ಯಂತ ರಜೆ.
ಅಕ್ಟೋಬರ್ 21: ಲಕ್ಷ್ಮೀಪೂಜೆ, ದೀಪಾವಳಿ, ಗೋವರ್ಧನ ಪೂಜೆ ಹಿನ್ನೆಲೆ ಮಹಾರಾಷ್ಟ್ರ, ಒಡಿಶಾ, ಮಣಿಪುರ, ಜಮ್ಮು ಕಾಶ್ಮೀರ, ಸಿಕ್ಕಿಂ, ಮಧ್ಯಪ್ರದೇಶದಲ್ಲಿ ರಜೆ.
ಅಕ್ಟೋಬರ್ 22: ದೀಪಾವಳಿ, ವಿಕ್ರಮ ಸಂವತ್ ಹೊಸ ವರ್ಷ, ಗೋವರ್ಧನ ಪೂಜೆ, ಬಲಿಪಾಡ್ಯಾಮಿ, ಲಕ್ಷ್ಮೀಪೂಜೆ ಹಿನ್ನೆಕೆ ಮಹಾರಾಷ್ಟ್ರ, ಕರ್ನಾಟಕ, ಉತ್ತರಾಖಂಡ, ಸಿಕ್ಕಿಂ, ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಗುಜರಾತ್‌ನಲ್ಲಿ ರಜೆ.
ಅಕ್ಟೋಬರ್ 23: ಭೈದೂಜ್, ಚಿತ್ರಗುಪ್ತ ಜಯಂತಿ, ಲಕ್ಷ್ಮಿ ಪೂಜೆ ಭ್ರಾತ್ರಿದ್ವಿತಿಯಾ ಮತ್ತು ನಿಂಗೋಲ್ ಚಕ್ಕೌಬಾದ ಆಚರಣೆ ಹಿನ್ನೆಲೆ ಸಿಕ್ಕಿಂ, ಪಶ್ಚಿಮ ಬಂಗಾಳ, ಮಣಿಪುರ, ಉತ್ತರ ಪ್ರದೇಶ, ಗುಜರಾತ್, ಹಿಮಾಚಲ ಪ್ರದೇಶದಲ್ಲಿ ರಜೆ.
ಅಕ್ಟೋಬರ್ 27: ಛಥ್ ಪೂಜೆ ಹಿನ್ನೆಲೆ ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್‌ನಲ್ಲಿ ರಜೆ.
ಅಕ್ಟೋಬರ್ 28: ಛಥ್ ಪೂಜೆಗಾಗಿ ಬಿಹಾರ, ಜಾರ್ಖಂಡ್‌ನಲ್ಲಿ ರಜೆ.
ಅಕ್ಟೋಬರ್ 31: ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನ ಹಿನ್ನೆಲೆ ಗುಜರಾತ್‌ನಲ್ಲಿ ರಜೆ.
ಡಿಜಿಟಲ್ ಬ್ಯಾಂಕಿಂಗ್ ಸೇವೆ
ರಜಾದಿನಗಳಂದು ಬ್ಯಾಂಕ್ ಶಾಖೆಗಳು ಮುಚ್ಚಿರುತ್ತವೆಯಾದರೂ, ಮೊಬೈಲ್ ಆ್ಯಪ್, ಇಂಟರ್‌ನೆಟ್ ಬ್ಯಾಂಕಿಂಗ್, ಯುಪಿಐ ಪಾವತಿಗಳು ಮತ್ತು ಎಟಿಎಂ ವಹಿವಾಟುಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತವೆ. ಗ್ರಾಹಕರು ಹಣ ವರ್ಗಾವಣೆ, ಬಿಲ್ ಪಾವತಿಗಳನ್ನು ಅನ್‌ಲೈನ್‌ನಲ್ಲೇ ಮಾಡಬಹುದು. RBI ಪಟ್ಟಿಯಂತೆ, ಅಕ್ಟೋಬರ್‌ನಲ್ಲಿ 21 ರಜಾದಿನಗಳಿವೆ. ಆದ್ದರಿಂದ, ಬ್ಯಾಂಕಿಂಗ್ ಕೆಲಸಗಳಿಗೆ ಮುಂಚಿತವಾಗಿ ಯೋಜನೆ ಮಾಡಿ, ರಜೆಯ ದಿನಗಳಲ್ಲಿ ಡಿಜಿಟಲ್ ಸೇವೆಗಳನ್ನು ಬಳಸಿಕೊಳ್ಳಿ.