ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WIPRO: ವಿಪ್ರೊದಿಂದ ಜೂನ್ 30ಕ್ಕೆ ಅಂತ್ಯವಾದ ತ್ರೈಮಾಸಿಕ ಫಲಿತಾಂಶಗಳ ಪ್ರಕಟಣೆ

ಮುಂಚೂಣಿಯ ಎಐ-ಸನ್ನದ್ಧ ತಂತ್ರಜ್ಞಾನ ಸೇವೆಗಳು ಮತ್ತು ಕನ್ಸಲ್ಟಿಂಗ್ ಕಂಪನಿ ವಿಪ್ರೊ ಲಿಮಿಟೆಡ್ (ಎನ್.ವೈ.ಎಸ್.ಇ.: ಡಬ್ಲ್ಯೂಐಟಿ, ಬಿ.ಎಸ್.ಇ: 507685, ಎನ್.ಎಸ್.ಇ: ವಿಪ್ರೊ) ಜೂನ್ 30, 2025ಕ್ಕೆ ಅಂತ್ಯವಾದ ತ್ರೈಮಾಸಿಕದ ಹಣಕಾಸು ಫಲಿತಾಂಶಗಳನ್ನು ಅಂತಾರಾಷ್ಟ್ರೀಯ ಹಣಕಾಸು ವರದಿಗಾರಿಕೆ ಮಾನದಂಡಗಳು (ಐ.ಎಫ್.ಆರ್.ಎಸ್.) ಅನ್ವಯ ಪ್ರಕಟಿಸಿದೆ

ಬೆಂಗಳೂರು: ಮುಂಚೂಣಿಯ ಎಐ-ಸನ್ನದ್ಧ ತಂತ್ರಜ್ಞಾನ ಸೇವೆಗಳು ಮತ್ತು ಕನ್ಸಲ್ಟಿಂಗ್ ಕಂಪನಿ ವಿಪ್ರೊ ಲಿಮಿಟೆಡ್ (ಎನ್.ವೈ.ಎಸ್.ಇ.: ಡಬ್ಲ್ಯೂಐಟಿ, ಬಿ.ಎಸ್.ಇ: 507685, ಎನ್.ಎಸ್.ಇ: ವಿಪ್ರೊ) ಜೂನ್ 30, 2025ಕ್ಕೆ ಅಂತ್ಯವಾದ ತ್ರೈಮಾಸಿಕದ ಹಣಕಾಸು ಫಲಿತಾಂಶಗಳನ್ನು ಅಂತಾರಾಷ್ಟ್ರೀಯ ಹಣಕಾಸು ವರದಿಗಾರಿಕೆ ಮಾನದಂಡಗಳು (ಐ.ಎಫ್.ಆರ್.ಎಸ್.) ಅನ್ವಯ ಪ್ರಕಟಿಸಿದೆ.

ಈ ಫಲಿತಾಂಶಗಳ ಪ್ರಮುಖಾಂಶಗಳು:

  1. ಈ ತ್ರೈಮಾಸಿಕದ ನಿವ್ವಳ ಲಾಭ ₹3,330 ಕೋಟಿ ($388.4 ಮಿಲಿಯನ್1) ಇದ್ದು ವರ್ಷದಿಂದ ವರ್ಷಕ್ಕೆ 10.9% ಹೆಚ್ಚಳ ಕಂಡಿದೆ
  2. ನಿವ್ವಳ ಆದಾಯ ₹22,130 ಕೋಟಿ ($2,581.61) ಇದ್ದು ವರ್ಷದಿಂದ ವರ್ಷಕ್ಕೆ 0.8% ಹೆಚ್ಚಳ ಕಂಡಿದೆ
  3. ಒಟ್ಟು ಬುಕಿಂಗ್ ಗಳು3 $4,971ಮಿಲಿಯನ್ ಇದ್ದು ವರ್ಷದಿಂದ ವರ್ಷಕ್ಕೆ 50.7% ಸತತ ಕರೆನ್ಸಿ2 ಹೆಚ್ಚಳ ಕಂಡಿದೆ
  4. ದೊಡ್ಡ ಡೀಲ್ ಬುಕಿಂಗ್ ಗಳು4 $2,666 ಮಿಲಿಯನ್ ಇದ್ದು ವರ್ಷದಿಂದ ವರ್ಷಕ್ಕೆ 130.8%ರಷ್ಟು ಸತತ ಕರೆನ್ಸಿ2 ಹೆಚ್ಚಳ ಕಂಡಿದೆ
  5. ಕ್ಯೂ1’ 26ರ ಐಟಿ ಸೇವೆಗಳ ಆಪರೇಟಿಂಗ್ ಮಾರ್ಜಿನ್ ಶೇ.17.3 ಇದ್ದು ವರ್ಷದಿಂದ ವರ್ಷಕ್ಕೆ ಶೇ.0.8 ವಿಸ್ತರಣೆ ಕಂಡಿದೆ
  6. ಪ್ರತಿ ಈಕ್ವಿಟಿ ಷೇರಿಗೆ ಮಧ್ಯಂತರ ಡಿವಿಡೆಂಡ್ ₹5 ಪ್ರಕಟಿಸಲಾಗಿದೆ.

ಇದನ್ನೂ ಓದಿ: Vishweshwar Bhat Column: ವಿಮಾನ ನಿರ್ವಹಣಾ ತಂತ್ರಜ್ಞರು

ವಿಪ್ರೊ ಇಂದು ಪ್ರಕಟಿಸಿದಂತೆ ಜೂನ್ 30, 2025ಕ್ಕೆ ಅಂತ್ಯವಾದ ತ್ರೈಮಾಸಿಕದಲ್ಲಿ ಕಂಪನಿಯು ರೂ.22,130 ಕೋಟಿ ನಿವ್ವಳ ಆದಾಯ ಗಳಿಸಿದೆ ಮತ್ತು ರೂ.3,330 ಕೋಟಿ ಲಾಭ ಗಳಿಸಿದೆ. ಈ ತ್ರೈಮಾಸಿಕ ಐಟಿ ಸೇವೆಗಳ ಆಪರೇಟಿಂಗ್ ಮಾರ್ಜಿನ್ 17.3% ಇದ್ದು ವರ್ಷದಿಂದ ವರ್ಷಕ್ಕೆ 0.8% ವಿಸ್ತರಿಸಲಾಗಿದೆ. ಈ ತ್ರೈಮಾಸಿಕದಲ್ಲಿ ಕಂಪನಿಯು $2,666 ದೊಡ್ಡ ಡೀಲ್ ಗಳನ್ನು ಬುಕ್ ಮಾಡಿದ್ದು ಇದು ವರ್ಷದಿಂದ ವರ್ಷಕ್ಕೆ 131% ಹೆಚ್ಚಳ ಕಂಡಿದೆ.

ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀನಿ ಪಲ್ಲಿಯಾ, “ಆರ್ಥಿಕ ಅನಿಶ್ಚಿತತೆಯ ತ್ರೈಮಾಸಿಕ ದಲ್ಲೂ ಗ್ರಾಹಕರು ದಕ್ಷತೆ ಮತ್ತು ವೆಚ್ಚದ ಆಪ್ಟಿಮೈಸೇಷನ್ ಗೆ ಆದ್ಯತೆ ನೀಡಿದರು. ನಾವು ಈ ಅಗತ್ಯ ಗಳನ್ನು ಪೂರೈಸಲು ಅವರೊಂದಿಗೆ ಸಹಯೋಗ ಹೊಂದಿದ್ದೆವು, ಇದರಿಂದ 16 ಬೃಹತ್ ಡೀಲ್ ಗಳು ಹಾಗೂ ಎರಡು ಮೆಗಾ ಡೀಲ್ ಗಳು ಸಾಧ್ಯವಾದವು. ಹಿಂದಿನ ತ್ರೈಮಾಸಿಕದ ವೇಗದ ಮೇಲೆ ನಿರ್ಮಿಸಿದ ಮತ್ತು ಅದಕ್ಕೆ ಬೆಂಬಲವಾಗಿ ಮತ್ತಷ್ಟು ಸರತಿಯಲ್ಲಿದ್ದು ದ್ವಿತೀಯಾರ್ಧಕ್ಕೆ ನಾವು ಉತ್ತಮ ರೀತಿಯಲ್ಲಿ ಸಿದ್ಧರಾಗಿದ್ದೇವೆ. ಎಐ ಪ್ರಯೋಗಾತ್ಮಕವಲ್ಲ- ಇದು ನಮ್ಮ ಗ್ರಾಹಕರ ಕಾರ್ಯತಂತ್ರಗಳ ಕೇಂದ್ರವಾಗಿದೆ ಮತ್ತು ನಾವು ನೈಜ ಪರಿಣಾಮವನ್ನು ದೊಡ್ಡ ಪ್ರಮಾಣದಲ್ಲಿ ಪೂರೈಸುತ್ತಿದ್ದೇವೆ” ಎಂದರು.

ಕಂಪನಿಯು ಪ್ರತಿ ಈಕ್ವಿಟಿ ಷೇರಿಗೆ ಮಧ್ಯಂತರ ಡಿವಿಡೆಂಡ್ ರೂ.5 ಕೂಡಾ ಪ್ರಕಟಿಸಿದೆ.