ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಜೊಹೊದಿಂದ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಿಗೆ ತನ್ನದೇ ಆದ ಎಲ್.ಎಲ್.ಎಂ. ಮಾಡೆಲ್ ಮತ್ತು ಎ.ಎಸ್.ಆರ್. ಮಾಡೆಲ್ ಬಿಡುಗಡೆ

ಜೊಹೊ 25ಕ್ಕೂ ಹೆಚ್ಚು ಪ್ರಿ-ಬಿಲ್ಟ್ ಏಜೆಂಟ್ಸ್ ಬಿಡುಗಡೆ ಮಾಡಿದ್ದು ಅವುಗಳಲ್ಲಿ ಕೆಲವನ್ನು ಪಾನ್ ಕಾರ್ಡ್ ಮತ್ತು ವೋಟರ್ ಐಡಿ ಪರಿಶೀಲನೆಗಳಿಗೆ ಭಾರತದ ಮಾರುಕಟ್ಟೆಗೇ ರೂಪಿಸಲಾಗಿದೆ. ಇದಲ್ಲದೆ, ಕಂಪನಿಯು ಭಾರತದಲ್ಲಿ 2024ರಲ್ಲಿ ಶೇ.32ರಷ್ಟು ಬೆಳವಣಿಗೆ ಕಂಡಿದೆ ಎಂದು ಹೇಳಿದೆ. ಬೆಂಗಳೂರಿ ನಲ್ಲಿ ಈ ವರ್ಷ ನಡೆದ ಕಂಪನಿಯ ವಾರ್ಷಿಕ ಬಳಕೆದಾರರ ಸಮ್ಮೇಳನ ಜೊಹೊಲಿಕ್ಸ್ ಇಂಡಿಯಾದಲ್ಲಿ ಇದನ್ನು ಪ್ರಕಟಿಸಲಾಯಿತು.

ಬೆಂಗಳೂರು: ಚೆನ್ನೈನಲ್ಲಿ ಕೇಂದ್ರ ಕಛೇರಿ ಹೊಂದಿರುವ ಜಾಗತಿಕ ತಂತ್ರಜ್ಞಾನ ಕಂಪನಿ ಜೊಹೊ ತನ್ನದೇ ಸ್ವಂತ ಲಾರ್ಜ್ ಲಾಂಗ್ವೇಜ್ ಮಾಡೆಲ್ ಜಿಯಾ ಎಲ್.ಎಲ್.ಎಂ. ಬಿಡುಗಡೆ ಮಾಡಿದ್ದು ಇದರೊಂದಿಗೆ ಆಟೊಮ್ಯಾಟಿಕ್ ಸ್ಪೀಚ್ ರಿಕಗ್ನಿಷನ್ (ಎ.ಎಸ್.ಆರ್.) ಮಾಡೆಲ್ ಗಳು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಸ್ಪೀಚ್-ಟು-ಟೆಕ್ಸ್ಟ್ ಆಗಿ ಪರಿವರ್ತಿಸುತ್ತದೆ, ಹೆಚ್ಚು ಭಾರತದ ಭಾಷೆಗಳಿಗೆ ವಿಸ್ತರಿಸುವ ಯೋಜನೆಗಳನ್ನು ಹೊಂದಿದೆ. ಕಂಪನಿಯು ನೋ-ಕೋಡ್ ಎಐ ಏಜೆಂಟ್ ಬಿಲ್ಡರ್ ಜಿಯಾ ಏಜೆಂಟ್ ಸ್ಟುಡಿಯೊ ಮತ್ತು ಮಾಡೆಲ್ ಕಾಂಟೆಕ್ಸ್ಟ್ ಪ್ರೊಟೊಕಾಲ್ (ಎಂಸಿಪಿ) ಸರ್ವರ್ ಅನ್ನು ಕೂಡಾ ಬಿಡುಗಡೆ ಮಾಡಿದ್ದು ಅದು ಜೊಹೊದ ಆಕ್ಷನ್ ಲೈಬ್ರೆರಿಗೆ ಮೂರನೇ ಪಕ್ಷದ ಸಾಧನಗಳಿಗೆ ಅವಕಾಶ ಕಲ್ಪಿಸುತ್ತಿದ್ದು ಎರಡನ್ನೂ ಭಾರತದಲ್ಲಿ ನಿರ್ಮಿಸಲಾಗಿದೆ.

ಜೊಹೊ 25ಕ್ಕೂ ಹೆಚ್ಚು ಪ್ರಿ-ಬಿಲ್ಟ್ ಏಜೆಂಟ್ಸ್ ಬಿಡುಗಡೆ ಮಾಡಿದ್ದು ಅವುಗಳಲ್ಲಿ ಕೆಲವನ್ನು ಪಾನ್ ಕಾರ್ಡ್ ಮತ್ತು ವೋಟರ್ ಐಡಿ ಪರಿಶೀಲನೆಗಳಿಗೆ ಭಾರತದ ಮಾರುಕಟ್ಟೆಗೇ ರೂಪಿಸಲಾಗಿದೆ. ಇದಲ್ಲದೆ, ಕಂಪನಿಯು ಭಾರತದಲ್ಲಿ 2024ರಲ್ಲಿ ಶೇ.32ರಷ್ಟು ಬೆಳವಣಿಗೆ ಕಂಡಿದೆ ಎಂದು ಹೇಳಿದೆ. ಬೆಂಗಳೂರಿನಲ್ಲಿ ಈ ವರ್ಷ ನಡೆದ ಕಂಪನಿಯ ವಾರ್ಷಿಕ ಬಳಕೆದಾರರ ಸಮ್ಮೇಳನ ಜೊಹೊಲಿಕ್ಸ್ ಇಂಡಿಯಾದಲ್ಲಿ ಇದನ್ನು ಪ್ರಕಟಿಸಲಾಯಿತು.

ಇದನ್ನೂ ಓದಿ: Roopa Gururaj Column: ದೇವರ ಅನುಗ್ರಹಕ್ಕೆ ಕೃತಜ್ಞತೆ ಹೇಳಲು ಮರೆತ ಮನುಷ್ಯರು

“ಇಂದಿನ ಪ್ರಕಟಣೆಯು ಗ್ರಾಹಕರ ದತ್ತಾಂಶಗಳು, ವ್ಯವಹಾರ ಸನ್ನಿವೇಶದಲ್ಲಿ ಸಾಮರ್ಥ್ಯಗಳ ಆಳ ಮತ್ತು ಅಗಲ ಮತ್ತು ಮೌಲ್ಯ ರಕ್ಷಣೆಯ ಮೂಲಭೂತ ತಂ‍ತ್ರಜ್ಞಾನ ನಿರ್ಮಿಸುವ ಜೊಹೊದ ದೀರ್ಘಕಾಲೀನ ಗುರಿಗೆ ಒತ್ತು ನೀಡುತ್ತದೆ” ಎಂದು ಜೊಹೊದ ಸಿಇಒ ಮಣಿ ವೆಂಬು ಹೇಳಿದರು. “ಆಂತರಿಕವಾಗಿ ನಿರ್ಮಿಸಲಾದ ನಮ್ಮದೇ ಎಲ್.ಎಲ್.ಎಂ. ಮಾಡೆಲ್ ಅನ್ನು ಪ್ರಸ್ತುತಪಡಿಸಲು ನಾವು ಹೆಮ್ಮೆ ಪಡುತ್ತೇವೆ. ಜಿಯಾ ಎಲ್.ಎಲ್.ಎಂ. ಅನ್ನು ವಿಶೇಷವಾಗಿರಿಸಿರುವುದು ಏನೆಂದರೆ ಇದು ವಿಶೇಷವಾಗಿ ಉದ್ಯಮದ ಬಳಕೆಯ ಪ್ರಕರಣಗಳಿಗೆ ತರಬೇತಿ ಮಾಡಲಾಗಿದ್ದು, ಖಾಸಗಿತನ ವನ್ನು ಅದರ ಕೇಂದ್ರದಲ್ಲಿರಿಸಲಾಗಿದ್ದು ಇದರಿಂದ ಕಡಿಮೆ ಇಂಟರ್ಫೇಸ್ ವೆಚ್ಚ, ಗ್ರಾಹಕರಿಗೆ ಆ ಮೌಲ್ಯವನ್ನು ವರ್ಗಾಯಿಸುವುದು, ಅಲ್ಲದೆ ಅವರು ಎಐ ಉತ್ಪಾದಕತೆ ಮತ್ತು ದಕ್ಷತೆಯನ್ನು ಬಳಸುವುದನ್ನು ದೃಢೀಕರಿಸಿಕೊಳ್ಳುತ್ತದೆ” ಎಂದರು.

ಭಾರತದಿಂದ ಸದೃಢ ಎಐ ತಳಹದಿಗಳ ನಿರ್ಮಾಣ

ಜಿಯಾ ಎಲ್.ಎಲ್.ಎಂ. ಎನ್.ವಿಡಿಯಾದ ಎಐ ಆಕ್ಸಲರೇಟೆಡ್ ಕಂಪ್ಯೂಟಿಂಗ್ ಪ್ಲಾಟ್ ಫಾರಂ ಬಳಸುತ್ತಿದೆ ಮತ್ತು ಭಾರತದಲ್ಲಿ ಇಡಿಯಾಗಿ ನಿರ್ಮಾಣಗೊಂಡಿದೆ. ಎಲ್.ಎಲ್.ಎಂ. ಅನ್ನು ನಿರ್ದಿಷ್ಟವಾಗಿ ಸಂದರ್ಭೋಚಿತ ಬಳಕೆಗೆ ನಿರ್ಮಿಸಲಾಗಿದೆ ಮತ್ತು 1.3, 2.6 ಮತ್ತು 7 ಬಿಲಿಯನ್ ಪ್ಯಾರಾಮೀಟರ್ ಗಳ ಮೂರು ಮಾಡೆಲ್ ಗಳನ್ನು ಹೊಂದಿದೆ ಮತ್ತು ಈ ಮಾಡೆಲ್ ಗಳು ಮಾರು ಕಟ್ಟೆಯಲ್ಲಿ ಹೋಲಿಕೆ ಮಾಡಬಲ್ಲ ಓಪನ್ ಸೋರ್ಸ್ ಮಾಡೆಲ್ ಗಳ ವಿರುದ್ಧ ಸ್ಪರ್ಧಾತ್ಮಕವಾಗಿವೆ. ಈ ಮಾಡೆಲ್ ಗಳು ಜೊಹೊಮ್ಯಾಚ್ ಗೆ ಬಳಕೆದಾರರ ಸನ್ನಿವೇಶಕ್ಕೆ ಸೂಕ್ತ ಎಐನೊಂದಿಗೆ ನೆರವಾಗುವ ಮೂಲಕ ಕಾರ್ಯಕ್ಷಮತೆ ಮತ್ತು ಸಂಪನ್ಮೂಲ ಬಳಕೆಯನ್ನು ಸಮತೋಲನ ಗೊಳಿಸುತ್ತವೆ. ಜಿಯಾ ಎಲ್.ಎಲ್.ಎಂ. ಅನ್ನು ಜೊಹೊ ಉತ್ಪನ್ನದ ಬಳಕೆಯ ಪ್ರಕರಣಗಳಿಗೆ ತರಬೇತಿ ನೀಡಲಾಗಿದ್ದು ಅದರಲ್ಲಿ ಸ್ಟ್ರಕ್ಚರ್ಡ್ ಡೇಟಾ ಎಕ್ಸ್ಟ್ರಾಕ್ಷನ್, ಸಮ್ಮರಯಸೇಷನ್, ಆರ್.ಎ.ಜಿ. ಮತ್ತು ಕೋಡ್ ಜನರೇಷನ್ ಒಳಗೊಂಡಿವೆ. ಕಂಪನಿಯ ಆದ್ಯತೆಯು ಸೂಕ್ತ ಗಾತ್ರದ ಮಾಡೆಲ್ ಕುರಿತಾಗಿದೆ. ಅಲ್ಪಾವಧಿಯಲ್ಲಿ ಜೊಹೊ ತನ್ನ ಮಾಡೆಲ್ ಅನ್ನು ವಿಸ್ತರಿಸಲಿದ್ದು ವರ್ಷಾಂತ್ಯಕ್ಕೆ ಮೊದಲ ಪ್ಯಾರಾಮೀಟರ್ ಅಪ್ ಗ್ರೇಡ್ ಆಗಲಿದೆ.

WhatsApp Image 2025-07-17 at 15.20.42

ಜೊಹೊ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತಿನಿಂದ ಪಠ್ಯಕ್ಕೆ ಪರಿವರ್ತಿಸಲು ಎರಡು ಎ.ಎಸ್.ಆರ್. ಮಾಡೆಲ್ ಗಳನ್ನು ಪರಿಚಯಿಸಿದ್ದು ಇದು ಇಂಗ್ಲಿಷ್ ಎ.ಎಸ್.ಆರ್. ಮಾಡೆಲ್ ನಿರ್ಮಿಸಿದ ಮೊದಲ ಭಾರತೀಯ ಕಂಪನಿಯಾಗಿದೆ. ಕಡಿಮೆ ಸಂಪನ್ಮೂಲದ ಪರಿಸರಗಳಿಗೆ ನಿಖರತೆಯೊಂದಿಗೆ ರಾಜಿಯಾಗದೆ ಗರಿಷ್ಠಗೊಳಿಸಬಹುದಾದ ಅವು ಸ್ಟಾಂಡರ್ಡ್ ಮಾನದಂಡಗಳಿಗೆ ಹೋಲಿಸಿದರೆ ತಮ್ಮ ಸಹವರ್ತಿಗಳಿಗಿಂತ ಶೇ.75ರಷ್ಟು ಹೆಚ್ಚು ಕಾರ್ಯಕ್ಷಮತೆ ನೀಡಬಲ್ಲವು. ಜೊಹೊ ಹೆಚ್ಚು ಭಾರತೀಯ ಮತ್ತು ಯೂರೋಪಿನ ಭಾಷೆಗಳಿಗೆ ವಿಸ್ತರಿಸುವ ಯೋಜನೆಗಳನ್ನು ಹೊಂದಿದೆ ಮತ್ತು ಸದ್ಯದಲ್ಲೇ ರೀಸನಿಂಗ್ ಲಾಂಗ್ವೇಜ್ ಮಾಡೆಲ್ (ಆರ್.ಎಲ್.ಎಂ.)ಗೆ ಪ್ರವೇಶಿಸ ಲಿದೆ.

ಜೊಹೊ ಬಳಕೆದಾರರಿಗೆ ಹಲವು ಎಲ್.ಎಲ್.ಎಂ. ಅಳವಡಿಕೆಗಳಿಗೆ ಬೆಂಬಲಿಸುತ್ತಿದ್ದು ಅದರಲ್ಲಿ ಚಾಟ್ ಜಿಪಿಟಿ, ಲಾಮಾ ಮತ್ತು ಡೀಪ್ ಸೀಕ್ ಒಳಗೊಂಡಿದ್ದು ಜಿಯಾ ಎಲ್.ಎಲ್.ಎಂ. ಗ್ರಾಹಕರಿಗೆ ಅವರ ಡೇಟಾವನ್ನು ಜೊಹೊ ಸರ್ವರ್ ಗಳಿಂದ ಗ್ರಾಹಕರಿಗೆ ಡೇಟಾ ಖಾಸಗಿತನದ ಜೊಹೊದ ಬದ್ಧತೆಯನ್ನು ಮತ್ತಷ್ಟು ದೃಢೀಕರಿಸುತ್ತದೆ. ಪ್ರಸ್ತುತ ಜೊಹೊದ ವಿಸ್ತಾರ ಆಪ್ ಗಳ ಆಂತರಿಕ ಪರೀಕ್ಷೆ ನಡೆಯುತ್ತಿದೆ ಮತ್ತು ಮುಂದಿನ ತಿಂಗಳುಗಳಲ್ಲಿ ಗ್ರಾಹಕರಿಗೆ ಲಭ್ಯವಿರುತ್ತವೆ.

ಜೊಹೊ ತನ್ನ ಉತ್ಪನ್ನಗಳ ಒಳಗಡೆ ಲಭ್ಯವಿರುವಂತೆ ಹಲವಾರು ಎಐ ಏಜೆಂಟ್ ಗಳನ್ನು ಅಭಿವೃದ್ಧಿಪಡಿಸಿದೆ. ಇವುಗಳಲ್ಲಿ ಜೊಹೊಡೆಸ್ಕ್ ಗೆ ಕಸ್ಟಮರ್ ಸರ್ವೀಸ್ ಏಜೆಂಟ್ ಒಳಗೊಂಡಿದ್ದು ಅದು ನೇರವಾಗಿ ಗ್ರಾಹಕರ ಕೋರಿಕೆಗೆ ಉತ್ತರಿಸುತ್ತದೆ ಅಥವಾ ಅದನ್ನು ಮಾನವ ಪ್ರತಿನಿಧಿಗೆ ವರ್ಗಾಯಿಸುವ ಮೂಲಕ ಪ್ರತಿಕ್ರಿಯೆಗಳು ಮತ್ತು ಪರಿಹಾರಗಳನ್ನು ತ್ವರಿತಗೊಳಿಸುತ್ತದೆ. ಆಸ್ಕ್ ಜಿಯಾ ಜೊಹೊದ ಪ್ಲಾಟ್ ಫಾರಂ-ವೈಡ್ ಕಾನ್ವರ್ಸೇಷನಲ್ ಎಐ ಅಸಿಸ್ಟೆಂಟ್ ಆಗಿದ್ದು ಅದನ್ನು ಹೆಚ್ಚುವರಿ ಬಿಐ ಕೌಶಲ್ಯಗಳೊಂದಿಗೆ ವೃದ್ಧಿಸಲಾಗಿದ್ದು ಅದನ್ನು ಡೇಟಾ ಎಂಜಿನಿಯರ್ ಗಳು, ಅನಲಿಸ್ಟ್ ಗಳು ಮತ್ತು ಡೇಟಾ ಸೈಂಟಿಸ್ಟ್ ಗಳಿಗೆ ರೂಪಿಸಲಾಗಿದೆ.

2025ರ ಪ್ರಾರಂಭದಲ್ಲಿ ಮೊದಲಿಗೆ ಪ್ರಕಟಿಸಲಾದ ಜೊಹೊ ಜಿಯಾ ಏಜೆಂಟ್ ಸ್ಟುಡಿಯೊ ಅನುಭವವನ್ನು ಮತ್ತಷ್ಟು ಸರಳೀಕರಿಸಲಾಗಿದ್ದು ಅದನ್ನು ಪೂರ್ಣ ಪ್ರಾಂಪ್ಟ್-ಆಧರಿತ (ಲೋ-ಕೋಡ್ ಬಳಕೆಯ ಆಯ್ಕೆಯೊಂದಿಗೆ) ಆಗುವಂತೆ ಮತ್ತು ಜೊಹೊ ಉತ್ಪನ್ನಗಳ 700 ಕ್ರಿಯೆಗಳ ಸಿದ್ಧ ಲಭ್ಯತೆ ಒಳಗೊಂಡಿರುತ್ತದೆ. ಈ ಏಜೆಂಟ್ಸ್ ಅನ್ನು ಡಿಜಿಟಲ್ ಉದ್ಯೋಗಿಯನ್ನಾಗಿ ಬಳಸುವ ಮೂಲಕ ಲೆಕ್ಕ ಪರಿಶೋಧನೆ ಮತ್ತು ಕಾರ್ಯಕ್ಷಮತೆ ಮೇಲ್ವಿಚಾರಣೆಗೆ ಅನುಮತಿಯ ರಚನೆಯ ಲಭ್ಯತೆ ಕಾಪಾಡಬಹುದು.

ಹಲವಾರು ಪ್ರಿ-ಬಿಲ್ಟ್ ಏಜೆಂಟ್ ಗಳು ಈಗ ಬಳಕೆದಾರರಿಗೆ ಲಭ್ಯವಿವೆ. ಜಿಯಾ ಏಜೆಂಟ್ ಸ್ಟುಡಿಯೊ ದೊಂದಿಗೆ ಜೊಹೊ ಸಿ.ಆರ್.ಎಂ. ಗೆ ಸೃಷ್ಟಿಸಲಾದ ಏಜೆಂಟ್ಸ್ ಗಳಲ್ಲಿ ಕೋಟ್ ಜನರೇಟರ್ ಒಳಗೊಂಡಿದ್ದು ಅದು ಕಂಪನಿಯ ಬೆಲೆಯ ಕಾರ್ಯತಂತ್ರಗಳು, ಡೀಲ್ ಪ್ಯಾರಾಮೀಟರ್ ಗಳು ಮತ್ತು ಗ್ರಾಹಕರ ಸಂವಹನ ಆಧರಿಸಿ ತಕ್ಷಣ ಕೋಟ್ ಗಳನ್ನು ನೀಡುತ್ತದೆ.

ಡೀಲ್ ಅನಲೈಸರ್ ಡೀಲ್ ಗಳನ್ನು ವಿಶ್ಲೇಷಿಸುತ್ತದೆ ಮತ್ತು ಗೆಲ್ಲುವ ಸಾಧ್ಯತೆ, ಮುಂದಿನ ಅತ್ಯುತ್ತಮ ಕ್ರಮ ಮತ್ತು ಫಾಲೋ-ಅಪ್ ಸಲಹೆಗಳನ್ನು ಒಳಗೊಂಡು ಡೀಲ್ ಗಳನ್ನು ವಿಶ್ಲೇಷಿಸುತ್ತದೆ ಮತ್ತು ಒಳನೋಟಗಳನ್ನು ನೀಡುತ್ತದೆ ಮತ್ತು ರೆವಿನ್ಯೂ ಗ್ರೋಥ್ ಸ್ಪೆಷಲಿಸ್ಟ್ ಪ್ರಸ್ತುತ ಗ್ರಾಹಕರಿಗೆ ಅಪ್ ಸೆಲ್ ಮತ್ತು ಕ್ರಾಸ್-ಸೆಲ್ ಮಾಡಲು ಅವಕಾಶಗಳ ಸಲಹೆ ನೀಡುತ್ತದೆ.

ಕಂಪನಿಯು ಭಾರತೀಯ ಉದ್ಯಮಗಳಿಗೆ ಪಾನ್ ಕಾರ್ಡ್, ವೋಟರ್ ಐಡಿ, ಉದ್ಯೋಗ್ ಆಧಾರ್, ಜಿ.ಎಸ್.ಟಿ.ಎನ್, ಚಾಲನಾ ಪರವಾನಗಿ, ಎಲ್.ಪಿ.ಜಿ. ಗ್ಯಾಸ್ ಸಂಪರ್ಕ ಮತ್ತು ವಿದ್ಯುತ್ ಬಿಲ್ ಗಳಿಗೆ ವಿಶೇಷವಾದ ಮೂರು ಏಜೆಂಟ್ಸ್ ಬಿಡುಗಡೆ ಮಾಡಿದೆ. ಉದ್ಯೋಗಿಗಳ ಹಿನ್ನೆಲೆ ಪರಿಶೀಲನೆಗೆ ಎಚ್.ಆರ್. ತಂಡಗಳು ಮತ್ತು ಹಣಕಾಸು ಸೇವೆಯ ಸಂಸ್ಥೆಗಳಲ್ಲಿ ದಾಖಲೆ ಪರಿಶೀಲನೆಯ ಬಳಕೆಯ ಪ್ರಕರಣಗಳಿಗೆ ಬಳಸಬಹುದು. ಈ ಏಜೆಂಟ್ ಗಳು ಜಿಯಾ ಏಜೆಂಟ್ಸ್ ಮಾರ್ಕೆಟ್ ಪ್ಲೇಸ್ ನಲ್ಲಿ ಲಭ್ಯ.

ಜೊಹೊ ಮಾಡೆಲ್ ಕಾಂಟೆಕ್ಸ್ಟ್ ಪ್ರೊಟೊಕಾಲ್ ಅಳವಡಿಸಿಕೊಂಡಿದ್ದು ತನ್ನದೇ ಆದ ಎಂಸಿಪಿ ಸರ್ವರ್ ಒದಗಿಸುತ್ತಿದ್ದು ಅದರಲ್ಲಿ ಹಲವಾರು ಅಪ್ಲಿಕೇಷನ್ ಗಳಲ್ಲಿ ಬಳಸಬಹುದಾದ ಶ್ರೀಮಂತ ಆಕ್ಷನ್ ಲೈಬ್ರೆರಿ ಒಳಗೊಂಡಿದ್ದು ಇದು ಯಾವುದೇ ಎಂಸಿಪಿ ಕ್ಲೈಂಟ್ ಗೆ ಡೇಟಾ ಬಳಸಲು ಮತ್ತು ಗ್ರಾಹಕರ ವ್ಯಾಖ್ಯಾನಿಸಿದ ಅನುಮತಿಯ ರಚನೆಗಳಿಗೆ ಗೌರವಿಸಿ ಹಲವಾರು ಜೊಹೊ ಆಪ್ ಗಳಿಂದ ಕ್ರಮ ಕೈಗೊಳ್ಳಲು ಅವಕಾಶ ನೀಡುತ್ತದೆ. ಜೊಹೊದ ಎಂಸಿಪಿ ಸರ್ವರ್ ನಲ್ಲಿ ಅರ್ಲಿ ಅಕ್ಸೆಸ್ ನಲ್ಲಿ ಲಭ್ಯವಿರುವ 15 ಜೊಹೊ ಟೂಲ್ಸ್ ಹೊಂದಿದೆ. ಹೆಚ್ಚುವರಿಯಾಗಿ ಜೊಹೊ ಅನಲಿಟಿಕ್ಸ್ ಸ್ಥಳೀಯ ಎಂಸಿಪಿ ಸರ್ವರ್ ಗೆ ಬೆಂಬಲ ನೀಡುತ್ತದೆ.

ಜೊಹೊದ ಭಾರತದ ಪ್ರಗತಿ

ಭಾರತದಲ್ಲಿ ಜೊಹೊ ವರ್ಷದಿಂದ ವರ್ಷಕ್ಕೆ ಶೇ.32ರಷ್ಟು ವೃದ್ಧಿಸಿದ್ದು ಜಾಗತಿಕವಾಗಿ ಇದರ ಎರಡನೆಯ ಅತ್ಯಂತ ದೊಡ್ಡ ಮಾರುಕಟ್ಟೆಯಾಗಿದೆ. ಆದಾಯದ ದೃಷ್ಟಿಯಿಂದ ಮುಂಚೂಣೀಯ ಉತ್ಪನ್ನಗಳೆಂದರೆ ಜೊಹೊ ಒನ್(ಉದ್ಯಮಕ್ಕೆ ಆಪರೇಟಿಂಗ್ ಸಿಸ್ಟಂ), ವರ್ಕ್ ಪ್ಲೇಸ್ (ಎಂಟ ರ್ಪ್ರೈಸ್ ಇಮೇಲ್ ಮತ್ತು ಕೊಲಾಬರೇಷನ್ ಸೂಟ್), ಸಿ.ಆರ್.ಎಂ. ಪ್ಲಸ್ (ಕಸ್ಟಮರ್ ಎಕ್ಸ್ ಪೀರಿಯೆನ್ಸ್ ಪ್ಲಾಟ್ ಫಾರಂ), ಸಿ.ಆರ್.ಎಂ ಬುಕ್ಸ್ (ಅಕೌಂಟಿಂಗ್ ಸಾಫ್ಟ್ ವೇರ್) ಮತ್ತು ಜೊಹೊ ಪೀಪಲ್ (ಎಚ್.ಆರ್. ಮ್ಯಾನೇಜ್ಮೆಂಟ್) ಒಳಗೊಂಡಿವೆ. ಪ್ರಗತಿಯನ್ನು ಮುನ್ನಡೆಸುತ್ತಿರುವ ಉದ್ಯಮಗಳು ಐಟಿಇಎಸ್, ಬಿ.ಎಫ್.ಎಸ್.ಐ., ಉತ್ಪಾದನೆ, ರೀಟೇಲ್ ಮತ್ತು ಶಿಕ್ಷಣ. ದೇಶದಲ್ಲಿ ಕಂಪನಿಯ 10 ವರ್ಷದ ಸಿಎಜಿಆರ್ ಶೇ.51ರಷ್ಟಿದೆ.