ಚೆನ್ನೈ: ಒಂದು ಅಘಾತಕಾರಿ ಘಟನೆಗೆ ಮದ್ರಾಸ್ ಹೈಕೋರ್ಟ್ (Madras High Court) ಸಾಕ್ಷಿಯಾಗಿದ್ದು, ನ್ಯಾಯಾಲಯದ ಕಟ್ಟಡದಿಂದ ಹಾರಿ15 ವರ್ಷದ ಬಾಲಕಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆಡಿದೆ. ಘಟನೆಯಲ್ಲಿ ಬಾಲಕಿಗೆ ಗಂಭೀರ ಗಾಯಗಳಾಗಿದ್ದು, ಆಕೆಯನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಅಷ್ಟಕ್ಕೂ ಆ ಬಾಲಕಿಯ ಆತ್ಮಹತ್ಯೆಗೆ ಯತ್ನಿಸಿದ್ದೇಕೆ..? ಎಂಬ ಮಾಹಿತಿ ಇಲ್ಲಿದೆ.
ಮನನೊಂದು ಆತ್ಮಹತ್ಯೆಗೆ ಯತ್ನ
ಇತ್ತೀಚಿನ ಡಿವೋರ್ಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಣ್ಣ ಸಣ್ಣ ವಿಷಯಗಳಿಗೆ ದಂಪತಿಗಳು ದೂರಾಗುತ್ತಿದ್ದಾರೆ. ಈ ಬೆಳವಣಿಗೆಯಿಂದ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಅವರು ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇಲ್ಲಿಯೂ ಈ ಬಾಲಕಿಯ ಪೋಷಕರು ವಿಚ್ಛೇದಿತರಾಗಿದ್ದು, ಅಪ್ಪ-ಅಮ್ಮ ಬೇರ್ಪಟ್ಟಿದರಿಂದ ಬಾಲಕಿ ಅಜ್ಜಿಯ ಮನೆಯಲ್ಲಿದ್ದಳು. ಆದರೆ ಮಗಳು ತನ್ನ ಸಾಮೀಪ್ಯ ಇರಬೇಕೆಂದು ಬಯಸಿದ ಅಪ್ಪ ಹೇಬಿಯಸ್ ಕಾರ್ಪಸ್ (Habeas corpus), ಮಗಳನ್ನು ತನ್ನ ಕಸ್ಟಡಿಗೆ ಒಪ್ಪಿಸುವಂತೆ ಅರ್ಜಿ ಸಲ್ಲಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಇದಕ್ಕೆ ಬಾಲಕಿಯ ವಿರೋಧ ವ್ಯಕ್ತವಾಗಿದ್ದು, ತಾನು ಅಜ್ಜಿಯ ಮನೆಯಲ್ಲಿ ಇರುವುದಾಗಿ ತಿಳಿಸಿದ್ದಳು . ಇದಕ್ಕೆ ಹೇಬಿಯಸ್ ಕಾರ್ಪಸ್ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಕರಣವನ್ನು ಇತ್ಯರ್ಥ್ಯಗೊಳಿಸಲು ತೀರ್ಮಾನಿಸಿ ಬಾಲಕಿಯನ್ನು ಸರ್ಕಾರಿ ಮಕ್ಕಳ ಗೃಹಕ್ಕೆ ಕಳಿಸುವಂತೆ ಆದೇಶಿಸಿತು. ಇದರಿಂದ ಮನನೊಂದ ಬಾಲಕಿ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದು, ಸದ್ಯ ಐಸಿಯು ಅಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಜಸ್ಟೀಸ್ ಎಂ.ಎಸ್. ರಮೇಶ್ ಮತ್ತು ವಿ. ಲಕ್ಷ್ಮಿನಾರಾಯಣನ್ ಅವರ ದ್ವಿಸದಸ್ಯ ಪೀಠವು ಬಾಲಕಿಯ ಭವಿಷ್ಯವನ್ನು ಗಮದಲ್ಲಿರಿಸಿಕೊಂಡು ಈ ಆದೇಶವನ್ನು ಹೊರಡಿಸಿದ್ದು, ಆರ್ಡರ್ ಬಂದ ಕೆಲವೇ ಕ್ಷಣಗಳಲ್ಲಿ ಈ ಘಟನೆ ನಡೆದಿದೆ. ಇನ್ನು ಬಾಲಕಿಯ ತಂದೆ ಚೆನ್ನೈ ನಿವಾಸಿಯಾಗಿದ್ದು, ತನ್ನ ಮಗಳ ಕಸ್ಟಡಿಗಾಗಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿದ್ದರು. ತಾಯಿಯು ಅಂಡಮಾನ್ ನಲ್ಲಿ ವಾಸಿಸುತ್ತಿದ್ದು,ಬಾಲಕಿಯು ತನ್ನ ಅಜ್ಜಿಯೊಂದಿಗೆ ಅಂಡಮಾನ್‌ನಲ್ಲಿ ವಾಸಿಸುತ್ತಿದ್ದಳು. ಆದರೆ ತಂದೆಯ ಬೇಡಿಕೆಯ ಮೇರೆಗೆ ಕಾನೂನು ಕ್ರಮವನ್ನು ಅನುಸರಿಸಿ ನೀಲಂಕರೈ ಪೊಲೀಸರ ಮೂಲಕ ಹೈಕೋರ್ಟ್‌ಗೆ ಕರೆತರಲಾಗಿತ್ತು.
ಈ ಸುದ್ದಿಯನ್ನೂ ಓದಿ Viral News: ಮೃತ ಮತದಾರರನ್ನು ಭೇಟಿಯಾಗಿ ಟೀ ಕುಡಿದ ರಾಹುಲ್ ಗಾಂಧಿ; ವಿಡಿಯೋ ವೈರಲ್
ಕೋರ್ಟ್ ವಿಚಾರಣೆ
ವಿಚಾರಣೆಯ ವೇಳೆ ಬಾಲಕಿಯು ತನ್ನ ತಾಯಿ ಅಥವಾ ತಂದೆಯೊಂದಿಗೆ ವಾಸಿಸಲು ಇಷ್ಟ ಇಲ್ಲ ಎಂದು ಕೋರ್ಟ್‌ಗೆ ತಿಳಿಸಿದ್ದು, ಆಕೆ ಅಂಡಮಾನ್‌ನಲ್ಲಿರುವ ತನ್ನ ಅಜ್ಜಿಯೊಂದಿಗೆ ಇರುವುದಾಗಿ ತಿಳಿಸಿದ್ದಳು. ಆದರೆ, ಕೋರ್ಟ್‌ನ ಮಧ್ಯಸ್ಥಿಕೆ ಕೇಂದ್ರದ ಗೌಪ್ಯ ವರದಿಯನ್ನು ಪರಿಶೀಲಿಸಿದ ನಂತರ, ನ್ಯಾಯಾಧೀಶರು ಅಂಡಮಾನ್‌ಗೆ ಮರಳುವುದು ಆಕೆಗೆ ಸುರಕ್ಷಿತ ಅಥವಾ ಸೂಕ್ತವಲ್ಲ ಎಂದು ತೀರ್ಮಾನಿಸಿತ್ತು. ತಂದೆಯೊಂದಿಗೆ ವಾಸಿಸಲು ಆಕೆಯ ಒಪ್ಪಿಗೆ ಇಲ್ಲದಿರುವುದರಿಂದ, ಚೆನ್ನೈನ ಕೆಲ್ಸ್‌ನಲ್ಲಿರುವ ಸರ್ಕಾರಿ ಬಾಲಕಿಯರ ಮಕ್ಕಳ ಗೃಹಕ್ಕೆ ಕಳುಹಿಸುವಂತೆ ಮತ್ತು ಆಕೆಗೆ ಮಾನಸಿಕ ಆರೋಗ್ಯ ತಪಾಸಣೆ ನಡೆಸುವಂತೆ ಕೋರ್ಟ್ ಆದೇಶಿಸಿತು.
ಆತ್ಮಹತ್ಯೆ ಯತ್ನ
ಈ ಆದೇಶದಿಂದ ಆಘಾತಕ್ಕೊಳಗಾದ ಬಾಲಕಿಯು, ವಿಚಾರಣೆ ಮುಗಿದ ಕೂಡಲೇ ಕೋರ್ಟ್‌ರೂಮ್‌ನಿಂದ ಪೊಲೀಸ್ ಎಸ್ಕಾರ್ಟ್‌ನೊಂದಿಗೆ ಹೊರಡುವಾಗ ತಪ್ಪಿಸಿಕೊಳ್ಳಲು ಯತ್ನಿಸಿದಳು. ಸ್ವಾತಂತ್ರ್ಯ ದಿನಾಚರಣೆಗಾಗಿ ಅಲಂಕರಿಸಲಾಗಿದ್ದ ಸೀರಿಯಲ್ ಲೈಟ್‌ಗಳನ್ನು ಹಿಡಿದು ಕೆಳಗಿಳಿಯಲು ಪ್ರಯತ್ನಿಸಿದ ಆಕೆ, ಬ್ಯಾಲೆನ್ಸ್ ಕಳೆದುಕೊಂಡು ಮೊದಲ ಮಹಡಿಯಿಂದ ನೆಲಕ್ಕೆ ಬಿದ್ದಳು.
ಕೋರ್ಟ್ ಸಿಬ್ಬಂದಿ ಮತ್ತು ಪೊಲೀಸರು ತಕ್ಷಣ ಆಕೆಯ ಸಹಾಯಕ್ಕೆ ಧಾವಿಸಿದ್ದು, ಗಂಭೀರ ಗಾಯಗೊಂಡಿದ್ದ ಆಕೆಯನ್ನು ಕೋರ್ಟ್‌ನ ಆಂಬುಲೆನ್ಸ್‌ನಲ್ಲಿ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಆಕೆಗೆ ಚಿಕಿತ್ಸೆ ನಡೆಯುತ್ತಿದೆ. ಈ ಘಟನೆಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಮತ್ತು ತಮಿಳುನಾಡು ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ.