ಭೋಪಾಲ್: ಇಂದೋರ್‌ನಲ್ಲಿ ಬುಧವಾರ ರಾತ್ರಿ (ಮಂಗಳಮುಖಿ) ಟ್ರಾನ್ಸ್‌ಜೆಂಡರ್ ಸಮುದಾಯದ ಸುಮಾರು 25 ಜನರು ಫಿನಾಯಿಲ್ (Self Harming) ಸೇವಿಸಿದ್ದು, ತಕ್ಷಣವೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಮ್ಮ ಆಸ್ಪತ್ರೆಗೆ ಟ್ರಾನ್ಸ್‌ಜೆಂಡರ್ ಸಮುದಾಯದ ಸುಮಾರು 25 ಜನರನ್ನು ದಾಖಲಿಸಲಾಗಿದೆ. ಅವರು ಫಿನಾಯಿಲ್ ಸೇವಿಸಿದ್ದಾರೆಂದು ಹೇಳಿಕೊಂಡಿದ್ದಾರೆ, ಆದರೆ ಇದನ್ನು ತಕ್ಷಣವೇ ದೃಢಪಡಿಸಲು ಸಾಧ್ಯವಿಲ್ಲ" ಎಂದು ಸರ್ಕಾರಿ ಸ್ವಾಮ್ಯದ ಮಹಾರಾಜ ಯಶವಂತರಾವ್ ಆಸ್ಪತ್ರೆಯ (ಎಂವೈಎಚ್) ಉಸ್ತುವಾರಿ ಸೂಪರಿಂಟೆಂಡೆಂಟ್-ಇನ್-ಚಾರ್ಜ್ ಡಾ. ಬಸಂತ್ ಕುಮಾರ್ ನಿಂಗ್ವಾಲ್ ತಿಳಿಸಿದ್ದಾರೆ.
ಮಂಗಳಮುಖಿ ಸಮುದಾಯದ ವ್ಯಕ್ತಿಗಳ ಸಾಮೂಹಿಕ ಕೃತ್ಯಕ್ಕೆ ಕಾರಣವೇನು ಎಂಬುದು ಇದುವರೆಗೂ ತಿಳಿದು ಬಂದಿಲ್ಲ. ಘಟನೆಯ ಬಗ್ಗೆ ಕೇಳಿದಾಗ, ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ರಾಜೇಶ್ ದಂಡೋಟಿಯಾ, "ತನಿಖೆಯ ನಂತರವೇ ಟ್ರಾನ್ಸ್ಜೆಂಡರ್ ಸಮುದಾಯದ ಜನರು ಯಾವ ವಸ್ತುವನ್ನು ಸೇವಿಸಿದ್ದಾರೆ ಮತ್ತು ಏಕೆ ಎಂಬುದು ಸ್ಪಷ್ಟವಾಗುತ್ತದೆ" ಎಂದು ಹೇಳಿದರು. ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ಈ ಘಟನೆಯು ಮಂಗಳಮುಖಿಯರ ಸಮುದಾಯದ ಎರಡು ಸ್ಥಳೀಯ ಗುಂಪುಗಳ ನಡುವಿನ ವಿವಾದಕ್ಕೆ ಸಂಬಂಧಿಸಿರಬಹುದು ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಪ್ರತ್ಯೇಕ ಘಟನೆಯಲ್ಲಿ ಒಂದೇ ಕುಟುಂಬದ ಮೂವರು ಸದಸ್ಯರು ಆತ್ಮಹತ್ಯೆ (Self Harming) ಮಾಡಿಕೊಂಡ ಘಟನೆ ರಾಜಸ್ಥಾನದ (Rajasthan) ರಾಜಧಾನಿ ಜೈಪುರದ ಕರ್ಣಿ ವಿಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಹಿರಾಪುರ ಕಾಲೋನಿಯಲ್ಲಿ ನಡೆದಿದೆ. ಶನಿವಾರ ಕುಟುಂಬಸ್ಥರು ಯಾರೂ ಬಾಗಿಲು ತೆಗೆದು ಹೊರ ಬರದ ಕಾರಣ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದರು. ಕೋಣೆಯಲ್ಲಿನ ಮೇಜಿನ ಮೇಲೆ ಪೊಲೀಸರಿಗೆ ಇಂಗ್ಲಿಷ್‌ನಲ್ಲಿ ಬರೆದ ಒಂದು ಪುಟದ ಆತ್ಮಹತ್ಯೆ ಪತ್ರ ಸಿಕ್ಕಿದ್ದು, ಅದರಲ್ಲಿ ಪರಿಚಯಸ್ಥರೊಬ್ಬರ ವಿರುದ್ಧ ಮಾನಸಿಕ ಕಿರುಕುಳದ ಗಂಭೀರ ಆರೋಪಗಳನ್ನು ಮಾಡಿದೆ. ಆತ್ಮಹತ್ಯೆ ಪತ್ರವನ್ನು ಆಧರಿಸಿ ವ್ಯಕ್ತಿಯ ಮೇಲೆ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Self Harming: ಐಪಿಎಸ್ ಅಧಿಕಾರಿ ಆತ್ಮಹತ್ಯೆ ಪ್ರಕರಣಕ್ಕೆ ಭಾರೀ ಟ್ವಿಸ್ಟ್; ಪೂರನ್ ವಿರುದ್ಧವೇ ಆರೋಪಿಸಿ ಶೂಟ್ ಮಾಡಿಕೊಂಡ ಪೊಲೀಸ್!
ಕರ್ಣಿ ವಿಹಾರ್ ಪೊಲೀಸ್ ಠಾಣೆಯ ಉಸ್ತುವಾರಿ ಹವಾ ಸಿಂಗ್ ಮಾತನಾಡಿ, ಮಗ ಪುಲ್ಕಿತ್ ಮನೆಯ ಮುಖ್ಯ ದ್ವಾರದ ಹಿಂದೆ ಪತ್ತೆಯಾಗಿದ್ದರೆ, ತಂದೆಯ ಶವ ಕಾರಿಡಾರ್‌ನಲ್ಲಿ ಮತ್ತು ತಾಯಿಯ ಶವ ಲಿವಿಂಗ್ ರೂಮನಿಲ್ಲಿ ಪತ್ತೆಯಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.