ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಕ್ಷುಲಕ ವಿಷಯಕ್ಕಾಗಿ ಜಗಳ; 4 ಮಕ್ಕಳ ತಾಯಿಯನ್ನು ಕೊಂದ ಪ್ರಿಯಕರ

4 ಮಕ್ಕಳ ತಾಯಿಯನ್ನು (mother) ಕೊಂದು ಆಟೋದಲ್ಲಿ ಶವವಿಟ್ಟು ಪ್ರಿಯಕರ ಪರಾರಿ ಆಗಿರುವ ಘಟನೆ ಬೆಂಗಳೂರಿನ ತಿಲಕ್‌ ನಗರದಲ್ಲಿ ನಡೆದಿದೆ. ಸಲ್ಮಾ(35) ಎಂಬ ಮಹಿಳೆಯನ್ನು ಪ್ರಿಯಕರ ಸುಬ್ಬುಮಣಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಬೆಂಗಳೂರು: 4 ಮಕ್ಕಳ ತಾಯಿಯನ್ನು (mother) ಕೊಂದು ಆಟೋದಲ್ಲಿ ಶವವಿಟ್ಟು ಪ್ರಿಯಕರ ಪರಾರಿ ಆಗಿರುವ ಘಟನೆ ಬೆಂಗಳೂರಿನ ತಿಲಕ್‌ ನಗರದಲ್ಲಿ ನಡೆದಿದೆ. ಸಲ್ಮಾ(35) ಎಂಬ ಮಹಿಳೆಯನ್ನು ಪ್ರಿಯಕರ ಸುಬ್ಬುಮಣಿ ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ಶವವನ್ನು ಆಟೋದಲ್ಲಿರಿಸಿದ್ದಾನೆ. ಆಟೋದಲ್ಲಿ ಮೃತದೇಹ ಇದ್ದುದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೇಸ್ ದಾಖಲಿಸಿಕೊಂಡು ತಿಲಕ್​ನಗರ ಠಾಣೆ ಪೊಲೀಸರಿಂದ ತನಿಖೆ ಮಾಡಲಾಗುತ್ತಿದೆ.

ಸಲ್ಮಾ ಪತಿ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರು. ಬಳಿಕ ಸಲ್ಮಾಗೆ ಸುಬ್ಬುಮಣಿ ಪರಿಚಯವಾಗಿತ್ತು. ನಿನ್ನೆ ರಾತ್ರಿ ಇಬ್ಬರ ನಡುವೆ ಜಗಳವಾಗಿದ್ದು, ಈ ವೇಳೆ ಸುಬ್ಬುಮಣಿ, ಸಲ್ಮಾ ತಲೆಗೆ ಹೊಡೆದು ಹತ್ಯೆ ಮಾಡಿದ್ದಾರೆ. ಸಲ್ಮಾ ಮೃತದೇಹಕ್ಕೆ ಬಟ್ಟೆಸುತ್ತಿ ಕೆಟ್ಟುನಿಂತಿದ್ದ ಆಟೋದಲ್ಲಿಟ್ಟು ಪರಾರಿ ಆಗಿದ್ದಾನೆ. ಮೃತದೇಹ ಇದ್ದುದನ್ನು ಗಮನಿಸಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿ, ತಿಲಕ್​ನಗರ ಠಾಣೆ ಪೊಲೀಸರು ಪರಿಶೀಲಿಸಿದ್ದರು. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಸಲ್ಮಾ ಶವ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಪ್ರತ್ಯೇಕ ಘಟನೆಯಲ್ಲಿ ತ್ನಿಯನ್ನು ಕೊಂದು (Murder Case) ಹಾಸಿಗೆಯ ಕೆಳಗೆ ಗುಂಡಿ ತೋಡಿ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿ ಪತಿಯನ್ನು ಉತ್ತರ ಪ್ರದೇಶದ ಪೊಲೀಸರು (Uttar Pradesh Police) ಬಂಧಿಸಿದ್ದಾರೆ. ಹರಿಯಾಣದಲ್ಲಿ (Haryana) ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಹರಿಕಿಶನ್ ಎಂಬಾತ ಪತ್ನಿ ಪುಲಾ ದೇವಿಯನ್ನು ಕೊಂದು ಹಾಸಿಗೆಯ ಕೆಳಗೆ ಗುಂಡಿ ತೋಡಿ ಹೂತಿಟ್ಟಿದ್ದ. ಬಳಿಕ ಸುಮಾರು 12 ದಿನಗಳ ಕಾಲ ಅದೇ ಹಾಸಿಗೆಯ ಮೇಲೆ ಮಲಗಿದ್ದನು. ಪುಲಾ ದೇವಿ ಸಹೋದರ ನಾಪತ್ತೆ ದೂರು (Missing case) ದಾಖಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಈ ಸುದ್ದಿಯನ್ನೂ ಓದಿ: Konda Surekha: ತೆಲಂಗಾಣದಲ್ಲಿ ಹೈಡ್ರಾಮಾ! ರಾಜ್ಯ ಸರ್ಕಾರ ಕೊಲೆ ಯತ್ನ ಮಾಡುತ್ತಿದೆ ಎಂದು ಕಿರುಚಿದ ಸಚಿವೆಯ ಪುತ್ರಿ

ಅನೈತಿಕ ಸಂಬಂಧದ ಆರೋಪದಲ್ಲಿ ಹರಿ ಕಿಶನ್ ತನ್ನ ಪತ್ನಿಯನ್ನು ಕೊಂದು ಹಾಕಿದ್ದಾನೆ. ಹರಿಯಾಣದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಹರಿಕಿಶನ್ ಇತ್ತೀಚೆಗೆ ಮನೆಗೆ ಮರಳಿದ್ದನು. ಬಳಿಕ ಅಕ್ಟೋಬರ್ 6 ರಿಂದ ಆತನ ಪತ್ನಿ ಫೂಲಾ ದೇವಿ (45) ನಾಪತ್ತೆಯಾಗಿದ್ದಳು. ಈ ಕುರಿತು ಅಕ್ಟೋಬರ್ 13ರಂದು ಆಕೆಯ ಸಹೋದರ ನಾಪತ್ತೆ ದೂರು ದಾಖಲಿಸಿದ್ದನು. ಈ ಘಟನೆ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಹರಿಕಿಶನ್ (48) ಎಂಬಾತನನ್ನು ಬಂಧಿಸಲಾಗಿದೆ.