ಬೆಂಗಳೂರು: ಪೀಣ್ಯ ಎಲಿವೆಟೇಡ್ ಫ್ಲೈಓವರ್ ಮೇಲೆ ಇಂದು ಬೆಳ್ಳಂಬೆಳಗ್ಗೆ ಭೀಕರ ಅಪಘಾತ (Road Accident) ಸಂಭವಿಸಿದೆ. ಇಂದು ಬೆಳಗ್ಗೆ 6:30ರ ಸುಮಾರಿಗೆ ರಸ್ತೆ ಅಪಘಾತ ಸಂಭವಿಸಿದೆ. ಅಪರಿಚಿತ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾದ ಶಂಕೆಯಿದ್ದು, ಪೀಣ್ಯ ಸಂಚಾರ ಪೊಲೀಸರು ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಅಪಘಾತದ ಸ್ಥಳದಲ್ಲಿ ಬೈಕ್ ಮತ್ತು ಬೈಕ್ ಸವಾರ ಬಿಟ್ಟು, ಬೇರೆ ಯಾವುದೇ ವಾಹನ ಇಲ್ಲವಾಗಿದ್ದು, ಅಪಘಾತ ಮಾಡಿರುವವರು ಯಾರು ಎಂಬುದು ತಿಳಿದುಬಂದಿಲ್ಲ. ಸದ್ಯ ಹಿಟ್ ಆಂಡ್ ರನ್ ಕೇಸ್ ದಾಖಲಿಸಲಾಗಿದೆ.
ಪೀಣ್ಯ ಸಂಚಾರ ಪೊಲೀಸರು ಘಟನೆಯ ಸ್ಥಳಕ್ಕೆ ತಕ್ಷಣವೇ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸಾಕ್ಷಿಗಳಿಂದ ಮಾಹಿತಿ ಸಂಗ್ರಹಿಸಲಾಗಿದ್ದು, ಸಮೀಪದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಡಿಕ್ಕಿ ಹೊಡೆದ ವಾಹನದ ವಿವರಗಳು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಪೊಲೀಸರು ವಾಹನದ ಗುರುತನ್ನು ಪತ್ತೆಹಚ್ಚಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ. ಈ ಘಟನೆಯನ್ನು ಭಾರತೀಯ ಕಾನೂನು ಸಂಹಿತೆಯ (BNS) ಸೆಕ್ಷನ್ 106ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಫ್ಲೈಓವರ್ ಕಾಂಕ್ರೀಟ್ ಬಿದ್ದು ಆಟೋ ಜಖಂ
ಬೆಂಗಳೂರಿನಲ್ಲಿ ಫ್ಲೈಓವರ್ ನಲ್ಲಿ ಕಾಂಕ್ರೀಟ್ ಬಿದ್ದು ಆಟೋ ಜಖಂಗೊಂಡಿದ್ದು, ಆಟೋ ಚಾಲಕ ಗಾಯಗೊಂಡಿರುವ ಘಟನೆ ನಡೆದಿದೆ. ಬೆಂಗಳೂರಿನ ಈಜೀಪುರ ಫ್ಲೈಓವರ್ ನಲ್ಲಿ ಮಧ್ಯರಾತ್ರಿ ಅವಘಡ ಸಂಭವಿಸಿದೆ. . ಫ್ಲೈಓವರ್ ಕಾಂಕ್ರೀಟ್ ಬಿದ್ದು ಆಟೋ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಳೆದ 10 ವರ್ಷಗಳಿಂದ ಫ್ಲೈಓವರ್ ಕಾಮಗಾರಿ ನಡೆಯುತ್ತಿದ್ದು, ಫ್ಲೈಓವರ್ ಕಾಂಕ್ರೀಟ್ ಬೃಹತ್ ಪೀಸುಗಳು ಬೀಳುವ ಹಂತದಲ್ಲಿವೆ. ಜನರ ಸಂಚಾರಕ್ಕೆ ಮೊದಲೇ ಕಾಂಕ್ರೀಟ್ ಉದುರಿ ಬೀಳುತ್ತಿವೆ. ಆಡೋಗೋಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಸುದ್ದಿಯನ್ನೂ ಓದಿ: ಜಾವ ಯೆಜ್ಡಿ ರೋಡ್‌ಸ್ಟರ್ ಮೋಟಾರ್ ಬೈಕ್ ಬಿಡುಗಡೆ: ಗತವೈಭವ ಮರಳಿ ಪಡೆದ ಜಾವಾ
ಈಜಿಪುರ ಮೇಲ್ಸೇತುವೆ ನಿರ್ಮಾಣಕ್ಕೆ ಒಟ್ಟಾರೆ 176.11 ಕೋಟಿ ರೂ. ವೆಚ್ಚವಾಗಲಿದೆ, ಇದು ಮೂಲ ವೆಚ್ಚಕ್ಕಿಂತ 48.02 ಕೋಟಿ ರೂ. ಹೆಚ್ಚು. ಈಗಾಗಲೇ 52.08 ಕೋಟಿ ರೂ. ಪಾವತಿಸಲಾಗಿದೆ. ಈಜಿಪುರ ಫ್ಲೈಓವರ್ ಕಾಮಗಾರಿ ಶುರುವಾಗಿ ಸರಿಸುಮಾರು ಎಂಟು ವರ್ಷಗಳು ಕಳೆದಿವೆ.