ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Zubeen Garg: ಜುಬಿನ್ ಗಾರ್ಗ್ ಪ್ರಕರಣದಲ್ಲಿ ಸಾವಿನ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್‌; ಭದ್ರತಾ ಸಿಬ್ಬಂದಿ ಅರೆಸ್ಟ್‌

ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಗಾಯಕ ಜುಬಿನ್ ಗಾರ್ಗ್ ಪ್ರಕರಣಕ್ಕೆ (Zubeen Garg death) ಸಂಬಂಧಿಸಿದಂತೆ ಪೊಲೀಸರು ಹಲವರನ್ನು ವಶಕ್ಕ ಪಡೆದಿದ್ದು, ಇದೀಗ ತನಿಖಾ ತಂಡವು ಶುಕ್ರವಾರ ಅವರ ಭದ್ರತಾ ಸಿಬ್ಬಂದಿಯನ್ನು ಬಂಧಿಸಿದೆ ಎಂದು ವರದಿಯಾಗಿದೆ. ಅಸ್ಸಾಂ ಪೊಲೀಸ್ ಸೇವೆಯ ಅಧಿಕಾರಿ ಮತ್ತು ದಿವಂಗತ ಗಾಯಕ ಜುಬೀನ್ ಗಾರ್ಗ್ ಅವರ ಸೋದರ ಸಂಬಂಧಿ ಸಂದೀಪನ್ ಗಾರ್ಗ್ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು.

ದಿಸ್ಪುರ್:‌ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಗಾಯಕ ಜುಬಿನ್ ಗಾರ್ಗ್ (Zubeen Garg) ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವರನ್ನು ವಶಕ್ಕ ಪಡೆದಿದ್ದು, ಇದೀಗ ತನಿಖಾ ತಂಡವು ಶುಕ್ರವಾರ ಅವರ ಭದ್ರತಾ (Assam) ಸಿಬ್ಬಂದಿಯನ್ನು ಬಂಧಿಸಿದೆ ಎಂದು ವರದಿಯಾಗಿದೆ. ಜುಬೀನ್ ಅವರ ಸೋದರಸಂಬಂಧಿ ಸಂದೀಪನ್ ಗರ್ಗ್ ಅವರನ್ನು ಹೈ ಪ್ರೊಫೈಲ್ ಪ್ರಕರಣದಲ್ಲಿ ಬಂಧಿಸಿದ ಒಂದು ದಿನದ ನಂತರ ಈ ಬಂಧನ ನಡೆದಿದೆ. ಸಂದೀಪನ್ ಕಾಮರೂಪ ಜಿಲ್ಲೆಯಲ್ಲಿ ಅಸ್ಸಾಂ ಪೊಲೀಸ್ ಸೇವೆ (ಎಪಿಎಸ್) ಅಧಿಕಾರಿಯಾಗಿದ್ದರು.

ಅಸ್ಸಾಂ ಪೊಲೀಸ್ ಸೇವೆಯ ಅಧಿಕಾರಿ ಮತ್ತು ದಿವಂಗತ ಗಾಯಕ ಜುಬೀನ್ ಗಾರ್ಗ್ ಅವರ ಸೋದರ ಸಂಬಂಧಿ ಸಂದೀಪನ್ ಗಾರ್ಗ್ ಅವರನ್ನು ಅಸ್ಸಾಂ ಪೊಲೀಸರ ವಿಶೇಷ ತನಿಖಾ ತಂಡ (ಎಸ್‌ಐಟಿ) ಬಂಧಿಸಿದೆ. ಸಂದೀಪನ್ ಕಳೆದ ಐದು ದಿನಗಳಿಂದ ಪ್ರತಿದಿನ ಅಸ್ಸಾಂನ ಅಪರಾಧ ತನಿಖಾ ಇಲಾಖೆ (ಸಿಐಡಿ) ಕಚೇರಿಯಲ್ಲಿ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುತ್ತಿದ್ದರು. ಬುಧವಾರ ಬೆಳಿಗ್ಗೆ 10:30 ರ ಸುಮಾರಿಗೆ ಸಿಐಡಿ ಕಚೇರಿಗೆ ಬಂದ ಸ್ವಲ್ಪ ಸಮಯದ ನಂತರ ಸಂದೀಪನ್ ಅವರನ್ನು ಬಂಧಿಸಲಾಯಿತು. ಸಿಐಡಿ ಮೂಲಗಳು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ 14 ದಿನಗಳ ಕಸ್ಟಡಿಗೆ ಕೋರುವುದಾಗಿ ತಿಳಿಸಿವೆ. ಇದಕ್ಕೂ ಮೊದಲು, ಪ್ರಕರಣಕ್ಕೆ ಸಂಬಂಧಿಸಿದಂತೆ ಜುಬೀನ್ ಅವರ ವ್ಯವಸ್ಥಾಪಕ ಸಿದ್ಧಾರ್ಥ ಶರ್ಮಾ ಮತ್ತು ಸಿಂಗಾಪುರ ಉತ್ಸವದ ಆಯೋಜಕ ಶ್ಯಾಮಕಾನು ಮಹಾಂತ ಅವರನ್ನು ಕಳೆದ ವಾರ ದೆಹಲಿಯಲ್ಲಿ ಬಂಧಿಸಲಾಗಿತ್ತು.

ಸೆಪ್ಟೆಂಬರ್ 19 ರಂದು ಸಿಂಗಾಪುರದಲ್ಲಿ ಸಮುದ್ರದಲ್ಲಿ ಜುಬಿನ್ ಗಾರ್ಗ್ ಈಜುತ್ತಿದ್ದಾಗ ನಿಗೂಢವಾಗಿ ಸಾವನ್ನಪ್ಪಿದ್ದರು. ಈ ಸಂದರ್ಭದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಆಗಿ ಸೇವೆ ಸಲ್ಲಿಸುತ್ತಿದ್ದ ಸಂದೀಪನ್ ಅವರು ದೋಣಿಯಲ್ಲಿದ್ದರು ಎಂದು ಹೇಳಲಾಗಿದೆ. ಈವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಆರು ಜನರನ್ನು ಬಂಧಿಸಲಾಗಿದ್ದು ಇನ್ನೂ ಹೆಚ್ಚಿನವರನ್ನು ವಿಚಾರಣೆಗೆ ಒಳಪಡಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Zubeen Garg: ಗಾಯಕ ಜುಬೀನ್‌ ಗರ್ಗ್‌ ಸಾವಿನ ಪ್ರಕರಣಕ್ಕೆ ಟ್ವಿಸ್ಟ್‌; ಡಿಎಸ್‌ಪಿ ಸಂದೀಪನ್ ಗರ್ಗ್ ಬಂಧನ

ಭಾರತ ಸಿಂಗಾಪುರ ರಾಜತಾಂತ್ರಿಕ ಸಂಬಂಧಗಳ 60 ನೇ ವರ್ಷದ ಆಚರಣೆ ಮತ್ತು ಭಾರತ ಆಸಿಯಾನ್ ಪ್ರವಾಸೋದ್ಯಮ ವರ್ಷ, ಈಶಾನ್ಯ ಭಾರತ ಉತ್ಸವವನ್ನು ಆಚರಿಸಲು ಜುಬೀನ್ ಸಿಂಗಾಪುರಕ್ಕೆ ತೆರಳಿದ್ದಾಗ ಈ ಅವಘಡ ನಡೆದಿದೆ.