ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Assault Case: ಅನೈತಿಕ ಸಂಬಂಧ ಆರೋಪದಲ್ಲಿ ಮಹಿಳೆ ಮೇಲೆ ಬರ್ಬರ ಹಲ್ಲೆ

ನಸ್ರೀನ್ ಬಾನು, ನಸ್ರಿನ್ ಮತ್ತು ಫಯಾಜ್ ಎನ್ನುವವರ ಮೇಲೆ ಹಲ್ಲೆ ನಡೆಸಲಾಗಿದೆ. ಮಹಿಳೆ ಮೇಲೆ ಹಗ್ಗ ಮತ್ತು ದೊಣ್ಣೆ ಕಬ್ಬಿಣದ ಪೈಪ್‌ಗಳಿಂದ ಹಲ್ಲೆ ನಡೆಸಲಾಗಿದೆ ಎಂದು ಗೊತ್ತಾಗಿದೆ. ಮೊಹಮ್ಮದ್ ಫಯಾಜ್ ಎನ್ನುವ ವ್ಯಕ್ತಿಯಿಂದ ಮಹಿಳೆಯ ಮೇಲೆ ಹಲ್ಲೆ ನಡೆದಿದೆ.

ಅನೈತಿಕ ಸಂಬಂಧ ಆರೋಪದಲ್ಲಿ ಮಹಿಳೆ ಮೇಲೆ ಬರ್ಬರ ಹಲ್ಲೆ

ಹಲ್ಲೆ

ಹರೀಶ್‌ ಕೇರ ಹರೀಶ್‌ ಕೇರ Apr 14, 2025 8:15 AM

ದಾವಣಗೆರೆ : ಅನೈತಿಕ ಸಂಬಂಧ (illicit relationship) ಶಂಕೆ ಹಿನ್ನೆಲೆಯಲ್ಲಿ ಮುಸ್ಲಿಂ ಮಹಿಳೆ (woman) ಹಾಗೂ ಆಕೆಯ ಸಂಬಂಧಿಕರ ಮೇಲೆ ಹಲ್ಲೆ (Assault case) ನಡೆಸಲಾಗಿದೆ. ನಡು ರಸ್ತೆಯಲ್ಲಿಯೇ ಮಹಿಳೆಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ದಾವಣಗೆರೆ ಜಿಲ್ಲೆಯ (Davanagere news) ಚೆನ್ನಗಿರಿ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ನಡೆದಿದೆ. ತಾವರೆಕೆರೆ ಗ್ರಾಮದಲ್ಲಿ ಏಪ್ರಿಲ್ 9ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ನಸ್ರೀನ್ ಬಾನು, ನಸ್ರಿನ್ ಮತ್ತು ಫಯಾಜ್ ಎನ್ನುವವರ ಮೇಲೆ ಹಲ್ಲೆ ನಡೆಸಲಾಗಿದೆ. ಮಹಿಳೆ ಮೇಲೆ ಹಗ್ಗ ಮತ್ತು ದೊಣ್ಣೆ ಕಬ್ಬಿಣದ ಪೈಪ್ ಗಳಿಂದ ಹಲ್ಲೆ ನಡೆಸಲಾಗಿದೆ ಎಂದು ಗೊತ್ತಾಗಿದೆ. ಮೊಹಮ್ಮದ್ ಫಯಾಜ್ ಎನ್ನುವ ವ್ಯಕ್ತಿಯಿಂದ ಮಹಿಳೆಯ ಮೇಲೆ ಹಲ್ಲೆ ನಡೆದಿದೆ. ಮಹಮ್ಮದ್ ಗೌಸ್ ಪೀರ್, ಚಾಂದ್ ಪೀರ್, ದಸ್ತಗಿರ್ ಇನಾಯತ್ ಉಲ್ಲಾ, ರಸೂಲ್ ಟಿ ಆರ್‌ನಿಂದ ಮಹಿಳೆಯ ಮೇಲೆ ಹಲ್ಲೆ ನಡೆದಿದೆ. ಆರೋಪಿಗಳನ್ನು ಪೊಲೀಸರು ಆರೆಸ್ಟ್ ಮಾಡಿದ್ದಾರೆ. ಅಲ್ಲದೆ ಮಹಿಳೆಯ ಮೇಲೆ ಹಲ್ಲೆ ಮಾಡುವ ದೃಶ್ಯ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಬೆಳಗಾವಿಯ ಹಾಸ್ಟೆಲ್‌ನಲ್ಲಿ ಬಿಸಿಎ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

ಬೆಳಗಾವಿ: ಬಿಸಿಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ನೇಣಿಗೆ ಶರಣಾದ ಘಟನೆ ಬೆಳಗಾವಿಯ ಮಹಾಂತೇಶ್ ನಗರದ ಸಮಾಜ ಕಲ್ಯಾಣ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ನಡೆದಿದೆ. ಶಿಲ್ಪಾ ಯರಮಸನಾಳ (20) ಆತ್ಮಹತ್ಯೆ (Self Harming) ಮಾಡಿಕೊಂಡ ಯುವತಿ.‌ ಹಾವೇರಿ ಜಿಲ್ಲೆಯ ಶಿಗ್ಗಾಂವ ಮೂಲದ ವಿದ್ಯಾರ್ಥಿನಿ ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಕಾಲೇಜಿನಲ್ಲಿ ಬಿಸಿಎ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಹಾಸ್ಟೆಲ್‌ನ ಐದನೇ ಕೊಠಡಿಯಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣಾಗಿದ್ದು, ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಮಾಳಮಾರುತಿ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.‌

ಇದನ್ನೂ ಓದಿ: Self Harming: ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಆರೋಪಿ ಜೈಲಿನಲ್ಲಿ ಆತ್ಮಹತ್ಯೆ