ವಿವಾಹಿತ ಮಹಿಳೆಯ ಮನೆಯಲ್ಲಿದ್ದ ಎಸ್ಐ; ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ ಪತ್ನಿ, ಕುಟುಂಬಸ್ಥರು
Caught with married woman: ಮಹಿಳೆಯರ ಗುಂಪೊಂದು ಸಬ್-ಇನ್ಸ್‌ಪೆಕ್ಟರ್(ಎಸ್‌ಐ)ನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಕೋಲುಗಳಿಂದ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಈ ಘಟನೆಯ ವಿಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.


ಭೋಪಾಲ್: ಮಹಿಳೆಯರ ಗುಂಪೊಂದು ಸಬ್-ಇನ್ಸ್‌ಪೆಕ್ಟರ್ (ಎಸ್‌ಐ)ನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಕೋಲುಗಳಿಂದ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಗುರುವಾರ ಮುಂಜಾನೆ ಮಧ್ಯ ಪ್ರದೇಶದ ಇಂದೋರ್‌ನಲ್ಲಿ ನಡೆದಿದೆ (Caught with married woman). ಖಜ್ರಾನಾ ಪ್ರದೇಶದಲ್ಲಿ ವಿವಾಹಿತ ಮಹಿಳೆಯ ಜತೆ ಆಕೆಯ ಮನೆಯಲ್ಲಿ ಎಸ್‌ಐ ಮದ್ಯ ಸೇವಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಇದರಿಂದ ಕೋಪಗೊಂಡ ಎಸ್ಐ ಪತ್ನಿ ಹಾಗೂ ಕುಟುಂಬಸ್ಥರು ಆತನನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಮನಬಂದಂತೆ ಥಳಿಸಿದ್ದಾರೆ. ಗುರುವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಈ ಘಟನೆಯ ವಿಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ವರದಿಗಳ ಪ್ರಕಾರ, ಖೇಡಿ ಪ್ರದೇಶದ ಮಹಿಳೆಯೊಬ್ಬರ ಮನೆಯಲ್ಲಿ ಎಸ್‌ಐ ಸುರೇಶ್ ಪತ್ತೆಯಾಗಿದ್ದಾನೆ. ಪತ್ನಿ ತನ್ನ ಗಂಡನೊಂದಿಗೆ ಆಗಾಗ ಜಗಳ ಮಾಡುತ್ತಿದ್ದರು. ಕಳೆದ ಎರಡು ತಿಂಗಳಿನಿಂದ ಸುರೇಶ್ ಆಕೆಯ ಮನೆಗೆ ಭೇಟಿ ನೀಡುತ್ತಿದ್ದ ಎನ್ನಲಾಗಿದೆ.
ವಿಡಿಯೊ ವೀಕ್ಷಿಸಿ:
#WATCH | Indore Sub-Inspector Beaten With Sticks, Tied To Pole After Being Found Drunk At Woman’s House In Khajrana Area#IndoreNews #MadhyaPradesh #MPNews pic.twitter.com/ldbBVdQpQn
— Free Press Madhya Pradesh (@FreePressMP) July 24, 2025
ಗುರುವಾರ ಮಹಿಳೆಯ ಕೆಲವು ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರು ಸುರೇಶ್‌ನನ್ನು ಆಕೆಯ ಮನೆಯಲ್ಲಿ ನೋಡಿದ್ದಾರೆ. ಈ ವೇಳೆ ಎಸ್‌ಐ ಮದ್ಯ ಕುಡಿದಿದ್ದು, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ ಎಂದು ಜನರು ಆರೋಪಿಸಿದರು. ಆತನನ್ನು ಆ ಸ್ಥಿತಿಯಲ್ಲಿ ನೋಡಿ ಕೋಪಗೊಂಡ ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ಥಳಿಸಿದ್ದಾರೆ.
ಆತನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ, ಬಟ್ಟೆ ಹರಿದು ಹಾಕಲು ಪ್ರಯತ್ನಿಸಿದರು. ಕೋಲುಗಳಿಂದ ಥಳಿಸಿದ್ದಾರೆ. ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಜನಸಂದಣಿಯಿಂದ ಸುರೇಶ್‌ನನ್ನು ರಕ್ಷಿಸಲು ಪೊಲೀಸರು ಹೆಚ್ಚುವರಿ ಪಡೆಯನ್ನು ಕರೆಯಬೇಕಾಯಿತು. ನಂತರ ಹಲ್ಲೆಯಲ್ಲಿ ಭಾಗಿಯಾಗಿದ್ದ ಕೆಲವು ಮಹಿಳೆಯರನ್ನು ವಶಕ್ಕೆ ಪಡೆಯಲಾಯಿತು. ಇನ್ನು ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.