ನವದೆಹಲಿ: ಜೀವನದಲ್ಲಿ ನಡೆದ ಕೆಲ ಘಟನೆಗಳ ಆಧಾರದ ಮೇಲೆ ಸಿನಿಮಾ ಮಾಡೋದು ಸಹಜ, ಆದರೇ ಜೀವನೇ ಒಂದು ಸಿನಿಮಾ ತರ ಆದ್ರೆ? ಹೌದು... ಬಿಹಾರ (Bihar)ಮೂಲದ ರಸಾಯನಶಾಸ್ತ್ರ (Chemistry Scholar) ಪ್ರಾಧ್ಯಪಕನೊಬ್ಬನ ಜೀವನ ಯಾವ ಸಿನಿಮಾಗೂ ಕಮ್ಮಿ ಇಲ್ಲ. ಅನಾರೋಗ್ಯ, ಆರ್ಥಿಕ ಸಂಕಷ್ಟಗಳಿಂದಾಗಿ ವಿದ್ಯಾವಂತನಾಗಿದ್ದರೂ ಅಪರಾಧದ ಹಾದಿ ಹಿಡಿದು ಇದೀಗ ಪೊಲೀಸರ ಅಥಿತಿ ಆಗಿದ್ದಾನೆ. ಈ ಸುದ್ದಿ ಭಾರೀ ವೈರಲ್(Viral News) ಆಗಿದೆ.
2017, 2021ರಲ್ಲಿ ದೆಹಲಿ(Delhi) ಮತ್ತು ಬಿಹಾರ ರಾಜ್ಯಗಳಲ್ಲಿ ನಡೆದ ದರೋಡೆ(Robber) ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ದೀಪ್ ಶುಭಂ, ಹರಿಯಾಣದ ಸೋಹ್ನಾ ಪ್ರದೇಶ (Haryana's Sohna Area)ದಲ್ಲಿ ಕಾಣಿಸಿಕೊಂಡ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಬಳಿಕ ತಂತ್ರಜ್ಞಾನ, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಸೀತಾಮರ್ಹಿ ಜಿಲ್ಲೆಯ 32 ವರ್ಷದ ದೀಪ್ ಶುಭಂ, ದೆಹಲಿಯ ಪ್ರತಿಷ್ಠಿತ ಕಾಲೇಜ್‌ವೊಂದರಿಂದ ರಸಾಯನಶಾಸ್ತ್ರ ವಿಷಯದಲ್ಲಿ ಪದವಿಪೂರ್ವ ಮತ್ತು ಸ್ನಾತಕೋತ್ತರ ಪದವಿಗಳನ್ನು ಪೂರ್ಣಗೊಳಿಸಿದ್ದ. ಬಳಿಕ ಎಂ.ಫಿಲ್ ಪದವಿಯನ್ನೂ ಪಡೆದು, ಕಾನೂನು ಅಧ್ಯಯನ ಮಾಡಲು ನಿರ್ಧರಿಸಿದ್ದ. ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣ ಕೂಡ ಅದ.
ಈ ಸುದ್ದಿಯನ್ನೂ ಓದಿ: Viral News: ಹೊರರಾಜ್ಯಕ್ಕೆ ಪ್ರವಾಸ ಹೋಗೋ ಮುನ್ನ ಎಚ್ಚರ... ಎಚ್ಚರ! ಕೂದಲೆಳೆ ಅಂತರದಲ್ಲಿ ಪಾರಾಯ್ತು ಈ ಕುಟುಂಬ
ನಂತರ ಎಲ್ಎಲ್‌ಬಿ ಓದುತ್ತಿದ್ದಾಗ, ಕುಟುಂಬದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಶುಭಂ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು. ಕುಟುಂಬವು ನನಗೆ ಹಣ ಕಳಿಸಲು ಸಾಧ್ಯವಾಗದೇ ಇದ್ದಾಗ ಈ ತಪ್ಪು ದಾರಿ ಹಿಡಿಯಬೇಕಾಯಿತು ಎಂದು ಶುಭಂ ಹೇಳಿಕೊಂಡಿದ್ದಾನೆ. ಇಷ್ಟೊಂದು ಓದಿದ್ದ ಶುಭಂ ಯಾವುದಾದರೂ ಉದ್ಯೋಗ ಹುಡುಕಬಹುದಿತ್ತು, ಆದರೆ ಆತ ಅಪರಾಧದ ಮಾರ್ಗ ಹಿಡಿದಿದ್ದೇ ಆಶ್ವರ್ಯಕರ.
2017ರಲ್ಲಿ ಪಟಾಕಿ, ಮೆಥೈಲ್ ಅಸಿಟೇಟ್ ಮತ್ತು ಬೆಂಜಿನ್ ಬಳಸಿ ಸ್ಮೋಕ್ ಬಾಂಬ್ ತಯಾರಿಸುವ ಮೂಲಕ ದೀಪ್ ಶುಭಂ ಮೊದಲ ಬಾರಿಗೆ ಅಪರಾಧದ ದಾರಿ ಹಿಡಿದಿದ್ದ. ನಂತರ ಬಿಹಾರದ ಸೀತಾಮರ್ಹಿಯ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯಲ್ಲಿ ₹3.6 ಲಕ್ಷ ದರೋಡೆ ಮಾಡಿ, ಶಿಕ್ಷೆಗೂ ಗುರಿಯಾಗಿದ್ದ.
ಬಳಿಕ ದೀಪ್ ಜೈಲಿನಿಂದ ಹೊರಬಂದ ನಂತರ, ತನ್ನ ತಪ್ಪನ್ನು ಅರಿತು ಒಂದೊಳ್ಳಿ ಜೀವನ ರೂಪಸಿಕೊಳ್ಳಬಹುದಿತ್ತು. ಆದರೆ, ಆತ ಮತ್ತೆ ಹಿಡಿದ್ದು ಆ ಹಳೆಯ ದಾರಿಯನ್ನೇ. ಮತ್ತೊಬ್ಬ ಅಪರಾಧಿ ರಿತೇಶ್ ಠಾಕೂರ್‌ನೊಂದಿಗೆ ಸೇರಿ 2021ರ ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಲ್ಲಿ ದೆಹಲಿಯ ಎರಡು ಬ್ಯಾಂಕ್‌ಗಳಲ್ಲಿ ದರೋಡೆ ನಡೆಸಿದ. ಅಲ್ಲದೇ ದೆಹಲಿಯ ಗುಜ್ರಾನ್‌ವಾಲಾದಲ್ಲಿ ಸುಮಾರು 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಮೊಬೈಲ್‌ಗಳನ್ನು ದೋಚಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಪೊಲೀಸ್ ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತ ಹರ್ಷ್ ಇಂದೋರಾ, "ಕಳೆದ ವಾರ ದೀಪ್ ಶುಭಂನನ್ನು ಬಂಧಿಸಲಾಗಿದೆ. ದೀಪ್ ಅಷ್ಟೊಂದು ವಿದ್ಯಾವಂತನಾಗಿದ್ದರೂ ಅಪರಾಧದ ಮಾರ್ಗ ಹಿಡಿದು, ಅಪರಾಧಿಗಳು ಸೇರಿರುವ ಜಾಗಕ್ಕೆ ತಲುಪಿದ್ದಾನೆ," ಎಂದಿದ್ದಾರೆ.