Murder Case: ನೀರಿನ ತಗಾದೆ ಕೊಲೆಯಲ್ಲಿ ಅಂತ್ಯ, ಗೂಡ್ಸ್ ಹರಿಸಿ ವ್ಯಕ್ತಿಯ ಹತ್ಯೆ!
Tumkur news: ಗೂಡ್ಸ್ ವಾಹನ ಹರಿಸಿ ಆನಂದ್ ಎನ್ನುವ ವ್ಯಕ್ತಿಯನ್ನು ನಾಗೇಶ್ ಎಂಬಾತ ಭೀಕರವಾಗಿ ಕೊಲೆ ಮಾಡಿದ್ದಾನೆ. ಘಟನೆ ಬಳಿಕ ತಾನೇ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

-

ತುಮಕೂರು: ನೀರಿನ ವಿಚಾರಕ್ಕೆ ನಡೆದ ಜಗಳ (Quarrel) ವ್ಯಕ್ತಿಯ ಕೊಲೆಯಲ್ಲಿ (Murder Case) ಅಂತ್ಯವಾದ ಘಟನೆ ತುಮಕೂರು (Tumkur crime news) ಜಿಲ್ಲೆಯಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಮದುವೆ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಪೊಲೇನಳ್ಳಿಯಲ್ಲಿ ಗೂಡ್ಸ್ ವಾಹನ ಹರಿಸಿ ಆನಂದ್ ಎನ್ನುವ ವ್ಯಕ್ತಿಯನ್ನು ನಾಗೇಶ್ ಎಂಬಾತ ಭೀಕರವಾಗಿ ಕೊಲೆ ಮಾಡಿದ್ದಾನೆ. ಘಟನೆ ಬಳಿಕ ತಾನೇ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿನ್ನೆ ನೀರಿನ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿತ್ತು. ಆನಂದನ ಮನೆಯ ಟ್ಯಾಂಕ್ ತುಂಬಿ ನೀರು ಪೋಲಾಗುತ್ತಿತ್ತು. ಈ ವೇಳೆ ಸ್ಥಳಕ್ಕೆ ಬಂದ ನಾಗೇಶ್ ತಂದೆ ರಾಮಕೃಷ್ಣ ನೀರು ಪೋಲಾಗುತ್ತಿದ್ದುದನ್ನು ಆಕ್ಷೇಪಿಸಿದ್ದಾರೆ. ಈ ವೇಳೆ ಆನಂದನ ಕುಟುಂಬ ಮತ್ತು ನಾಗೇಶನ ಕುಟುಂಬದ ಮಧ್ಯೆ ಗಲಾಟೆ ಆಗಿದೆ.
ಈ ಸಂದರ್ಭದಲ್ಲಿ ನಾಗೇಶ್ ತಾಯಿಯ ಮೇಲೆ ಆನಂದ್ ಹಲ್ಲೆ ಮಾಡಿದ್ದಾನೆ. ತಾಯಿಯ ಮೇಲಿನ ಹಲ್ಲೆಯ ವಿಚಾರ ತಿಳಿದು ಹೊರಗಡೆ ಕೆಲಸಕ್ಕೆ ಹೋಗಿದ್ದ ನಾಗೇಶ್ ಗ್ರಾಮಕ್ಕೆ ಬಂದಿದ್ದಾನೆ. ಮನೆಗೆ ಬರುತ್ತಿದ್ದ ನಾಗೇಶ್ ರಸ್ತೆ ಬದಿ ನಿಂತಿದ್ದ ಆನಂದ್‌ನಿಗೆ ಗೂಡ್ಸ್ ಅನ್ನು ಡಿಕ್ಕಿ ಹೊಡೆಸಿದ್ದಾನೆ. ಆನಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಘಟನೆಯ ಬಳಿಕ ನಾಗೇಶ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಇದನ್ನೂ ಓದಿ: ಚಿಂತಾಮಣಿ ನಗರದಲ್ಲಿ ಕ್ಷುಲ್ಲಕ ಕಾರಣದ ಜಗಳ ಒಬ್ಬರ ಕೊಲೆಯಲ್ಲಿ ಅಂತ್ಯ