ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Self Harming: ತಂದೆ, ತಾಯಿ, ಮಗ ಒಟ್ಟಿಗೇ ಆತ್ಮಹತ್ಯೆ ; ಡೆತ್‌ ನೋಟ್‌ನಲ್ಲಿತ್ತು ಆ ರಹಸ್ಯ

ಒಂದೇ ಕುಟುಂಬದ ಮೂವರು ಸದಸ್ಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಸ್ಥಾನದ ರಾಜಧಾನಿ ಜೈಪುರದ ಕರ್ಣಿ ವಿಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಹಿರಾಪುರ ಕಾಲೋನಿಯಲ್ಲಿ ನಡೆದಿದೆ. ವರದಿಗಳ ಪ್ರಕಾರ, ಮೃತರನ್ನು 63 ವರ್ಷದ ರೂಪೇಂದ್ರ ಶರ್ಮಾ, ಅವರ 58 ವರ್ಷದ ಪತ್ನಿ ಸುಶೀಲಾ ಶರ್ಮಾ ಮತ್ತು ಅವರ 32 ವರ್ಷದ ಮಗ ಪುಲ್ಕಿತ್ ಶರ್ಮಾ ಎಂದು ಗುರುತಿಸಲಾಗಿದೆ.

ಜೈಪುರ: ಒಂದೇ ಕುಟುಂಬದ ಮೂವರು ಸದಸ್ಯರು ಆತ್ಮಹತ್ಯೆ (Self Harming) ಮಾಡಿಕೊಂಡ ಘಟನೆ ರಾಜಸ್ಥಾನದ (Rajasthan) ರಾಜಧಾನಿ ಜೈಪುರದ ಕರ್ಣಿ ವಿಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಹಿರಾಪುರ ಕಾಲೋನಿಯಲ್ಲಿ ನಡೆದಿದೆ. ಶನಿವಾರ ಕುಟುಂಬಸ್ಥರು ಯಾರೂ ಬಾಗಿಲು ತೆಗೆದು ಹೊರ ಬರದ ಕಾರಣ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಗಿಲು ಒಡೆದು ನೋಡಿದಾಗ ಪತಿ, ಪತ್ನಿ ಮತ್ತು ಅವರ ಮಗ ಮೃತಪಟ್ಟಿರುವುದು ಕಂಡುಬಂದಿದೆ.

ವರದಿಗಳ ಪ್ರಕಾರ, ಮೃತರನ್ನು 63 ವರ್ಷದ ರೂಪೇಂದ್ರ ಶರ್ಮಾ, ಅವರ 58 ವರ್ಷದ ಪತ್ನಿ ಸುಶೀಲಾ ಶರ್ಮಾ ಮತ್ತು ಅವರ 32 ವರ್ಷದ ಮಗ ಪುಲ್ಕಿತ್ ಶರ್ಮಾ ಎಂದು ಗುರುತಿಸಲಾಗಿದೆ. ಅವರ ಶವಗಳು ಪ್ರತ್ಯೇಕ ಕೊಠಡಿಗಳಲ್ಲಿ ಪತ್ತೆಯಾಗಿವೆ. ಪ್ರಾಥಮಿಕ ತನಿಖೆಯ ಪ್ರಕಾರ ಅವರು ವಿಷ ಸೇವಿಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ರೂಪೇಂದ್ರ ಶರ್ಮಾ ಇತ್ತೀಚೆಗೆ ರಾಜಸ್ಥಾನ ಬ್ಯಾಂಕಿನಿಂದ ವಿಆರ್‌ಎಸ್ ಪಡೆದಿದ್ದರೆ, ಅವರ ಮಗ ಖಾಸಗಿ ಬ್ಯಾಂಕಿನಲ್ಲಿ ಉದ್ಯೋಗದಲ್ಲಿದ್ದ ಎಂದು ತಿಳಿದು ಬಂದಿದೆ.

ಕೋಣೆಯಲ್ಲಿನ ಮೇಜಿನ ಮೇಲೆ ಪೊಲೀಸರಿಗೆ ಇಂಗ್ಲಿಷ್‌ನಲ್ಲಿ ಬರೆದ ಒಂದು ಪುಟದ ಆತ್ಮಹತ್ಯೆ ಪತ್ರ ಸಿಕ್ಕಿದ್ದು, ಅದರಲ್ಲಿ ಪರಿಚಯಸ್ಥರೊಬ್ಬರ ವಿರುದ್ಧ ಮಾನಸಿಕ ಕಿರುಕುಳದ ಗಂಭೀರ ಆರೋಪಗಳನ್ನು ಮಾಡಿದೆ. ಆತ್ಮಹತ್ಯೆ ಪತ್ರವನ್ನು ಆಧರಿಸಿ ವ್ಯಕ್ತಿಯ ಮೇಲೆ ಪೊಲೀಸರು ಎಫ್‌ ಐ ಆರ್‌ ದಾಖಲಿಸಿದ್ದಾರೆ. ಕರ್ಣಿ ವಿಹಾರ್ ಪೊಲೀಸ್ ಠಾಣೆಯ ಉಸ್ತುವಾರಿ ಹವಾ ಸಿಂಗ್ ಮಾತನಾಡಿ, ಮಗ ಪುಲ್ಕಿತ್ ಮನೆಯ ಮುಖ್ಯ ದ್ವಾರದ ಹಿಂದೆ ಪತ್ತೆಯಾಗಿದ್ದರೆ, ತಂದೆಯ ಶವ ಕಾರಿಡಾರ್‌ನಲ್ಲಿ ಮತ್ತು ತಾಯಿಯ ಶವ ಲಿವಿಂಗ್‌ ರೂಮನಿಲ್ಲಿ ಪತ್ತೆಯಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಬಳಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಮಾಹಿತಿ ನೀಡಿದರು. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಅಧಿಕಾರಿ ಪತ್ನಿಗೆ ಸೋನಿಯಾ ಗಾಂಧಿ ಪತ್ರ

ಪ್ರತ್ಯೇಕ ಘಟನೆಯಲ್ಲಿ ಕಾಲೇಜು ವಾಲಿಬಾಲ್ ತರಬೇತುದಾರನ ಕಿರುಕುಳದಿಂದ ಬೇಸತ್ತು 19 ವರ್ಷದ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್‌ನಲ್ಲಿ (Hyderabad) ನಡೆದಿದೆ. ಹೈದರಾಬಾದ್‌ನ ತರ್ನಾಕ ಪ್ರದೇಶದ ರೈಲ್ವೆ ಪದವಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ವಾಲಿಬಾಲ್ ತರಬೇತುದಾರ ಅಂಬಾಜಿ ನಾಯಕ್ ಆಕೆಗೆ ಕಿರುಕುಳ ನೀಡುತ್ತಿದ್ದ. ತನ್ನೊಂದಿಗೆ ಸಂಬಂಧ ಬೆಳೆಸುವಂತೆ ಒತ್ತಡ ಹೇರುತ್ತಿದ್ದ ಎಂದು ಆಕೆಯ ತಂದೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.