ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkamagaluru News: ಎಂಗೇಜ್‌ಮೆಂಟ್‌ಗೆಂದು ಬಂದ ಯುವತಿ ಹೋಂ ಸ್ಟೇ ಬಾತ್‌ರೂಂನಲ್ಲಿ ಶವವಾಗಿ ಪತ್ತೆ!

ಮೂಡಿಗೆರೆ (Mudigere) ತಾಲೂಕಿನ ಹಾಂದಿ ಗ್ರಾಮದಲ್ಲಿರುವ ಖಾಸಗಿ ಹೋಂಸ್ಟೇ (Home Stay) ಸ್ನಾನದ ಗೃಹದಲ್ಲಿ ಯುವತಿ ಅನುಮಾಸ್ಪದ ಸಾವನ್ನಪ್ಪಿದ್ದಾಳೆ. ಬೆಂಗಳೂರಿನಿಂದ (Bengaluru) ಚಿಕ್ಕಮಗಳೂರಿಗೆ ಎಂಗೇಜ್​​ಮೆಂಟ್​​​ಗೆಂದು ತೆರಳಿದ್ದ 27 ವರ್ಷದ ರಂಜಿತಾ ಸಾವನ್ನಪ್ಪಿದ್ದ ಯುವತಿ ಎಂದು ತಿಳಿದು ಬಂದಿದೆ.

ಚಿಕ್ಕಮಗಳೂರು: ಮೂಡಿಗೆರೆ (Mudigere) ತಾಲೂಕಿನ ಹಾಂದಿ ಗ್ರಾಮದಲ್ಲಿರುವ ಖಾಸಗಿ ಹೋಂಸ್ಟೇ (Home Stay) ಸ್ನಾನದ ಗೃಹದಲ್ಲಿ ಯುವತಿ ಅನುಮಾಸ್ಪದ ಸಾವನ್ನಪ್ಪಿದ್ದಾಳೆ. ಬೆಂಗಳೂರಿನಿಂದ (Bengaluru) ಚಿಕ್ಕಮಗಳೂರಿಗೆ ಎಂಗೇಜ್​​ಮೆಂಟ್​​​ಗೆಂದು ತೆರಳಿದ್ದ 27 ವರ್ಷದ ರಂಜಿತಾ ಸಾವನ್ನಪ್ಪಿದ್ದ ಯುವತಿ. ಎಂಗೇಜ್​ಮೆಂಟ್ ಕಾರ್ಯಕ್ರಮಕ್ಕೆಂದು ಬೆಂಗಳೂರಿನಿಂದ ಸ್ನೇಹಿತರ ಜೊತೆ ರಂಜಿತಾ ಚಿಕ್ಕಮಗಳೂರಿಗೆ ಬಂದಿದ್ದರು. ಮೂಡಿಗೆರೆ ತಾಲೂಕಿನ ಹಿಪ್ಲ ಹೋಮ್​ ಸ್ಟೇ‌ನಲ್ಲಿ ಸ್ನೇಹಿತೆಯ ಜೊತೆ ತಂಗಿದ್ದರು. ತನ್ನ ಸ್ನೇಹಿತೆ ರೇಖಾ‌ ಜೊತೆ ಹಿಪ್ಲ‌ ಹೋಂ ಸ್ಟೇನಲ್ಲಿ ತಂಗಿದ್ದರು. ಬೆಳಗ್ಗೆ ಹೋಮ್​​ ಸ್ಟೇ ಸ್ನಾನ ಗೃಹದಲ್ಲಿ ರಂಜಿತಾ ಶವ ಪತ್ತೆಯಾಗಿದೆ.

ಎಂಗೇಜ್ಮೆಂಟ್‌ಗೆ ಬಂದಿದ್ದ ರಂಜಿತಾ, ರೇಖಾ ಇಬ್ಬರೂ ಮೂಡಿಗೆರೆ ಪಟ್ಟಣದ ಹೋಟೆಲ್‌ನಲ್ಲಿ ಸಂಜೆ ಊಟ ಮಾಡಿ ಬಂದಿದ್ದಾರೆ. ಬಳಿಕ ಇಬ್ಬರೂ ತಮ್ಮ ಸ್ಕೂಟಿಯಲ್ಲಿ ಹೋಮ್​​ ಸ್ಟೇ‌ಗೆ ಬಂದಿದ್ದರು. ಹೋಂ ಸ್ಟೇ ಸಿಸಿಟಿವಿ ಸರಿಯಿಲ್ಲ ಕಾರಣ ಈ ದೃಶ್ಯಗಳು ಸೆರೆಯಾಗಿಲ್ಲ. ಮೂಲತಃ ಬೇಲೂರು ತಾಲೂಕಿನ ದೇವಲಾಪುರ ಗ್ರಾಮದ ರಂಜಿತಾ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನೂ ಓದಿ: Gas Geyser leak: ಗ್ಯಾಸ್‌ ಗೀಸರ್‌ ಸೋರಿಕೆಯಾಗಿ ಅಕ್ಕ- ತಂಗಿ ಉಸಿರುಗಟ್ಟಿ ಸಾವು

ರಂಜಿತಾರ ಮರಣೋತ್ತರ ಪರೀಕ್ಷೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದ್ದು, ಆಕೆಯ ಪೋಷಕರು ನೀಡಿದ ದೂರಿನ ಅನ್ವಯ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೋಂ ಸ್ಟೇನಲ್ಲಿ ಯುವತಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯುವತಿ ಸಾವನ್ನಪ್ಪಿದ ಹೋಮ್​​ ಸ್ಟೇಗೆ ಲೈಸೆನ್ಸ್ ಇರಲಿಲ್ಲ. ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಲೈಸೆನ್ಸ್ ನೀಡದೆ ಇದ್ದರೂ ಮಾಲೀಕ ಹೋಂ ಸ್ಟೇ ನಡೆಸುತ್ತಿದ್ದ. ಹೀಗಿದ್ದರೂ ಹೋಂ ಸ್ಟೇ ವಿರುದ್ಧ ಇಲ್ಲಿಯವರೆಗೆ ಯಾಕೆ ಕ್ರಮ ಆಗಿಲ್ಲ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಪೊಲೀಸರು , ಪ್ರವಾಸೋದ್ಯಮ ಇಲಾಖೆ ವಿರುದ್ಧವೇ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಯುವತಿಯ ಸಾವಿನ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.