ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Physical Abuse Case: ಜಾಮೀನು ಸಿಗುತ್ತಿದ್ದಂತೆ ಮೆರವಣಿಗೆ , ರೋಡ್‌ ಶೋ....... ಗ್ಯಾಂಗ್ ರೇಪ್ ಆರೋಪಿಗಳು ಮತ್ತೆ ಅಂದರ್

ಕಳೆದ ವರ್ಷ ಹಾವೇರಿಯ (Haveri) ಹಾನಗಲ್‌ನಲ್ಲಿ ಮಹಿಳೆಯ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಸಿಕ್ಕ ಬಳಿಕ ಜೈಲಿನಿಂದ ಬಿಡುಗಡೆಯಾಗಿ ಕಾರುಗಳಲ್ಲಿ ರೋಡ್ ಶೋ ಮಾಡಿ ವಿಜಯೋತ್ಸವ ಮಾಡಿದ್ದ ಏಳು ಆರೋಪಿಗಳನ್ನು ಪೊಲೀಸರು ಮತ್ತೆ ಜೈಲಿಗಟ್ಟಿದ್ದಾರೆ.

ಜಾಮೀನು ಸಿಗುತ್ತಿದ್ದಂತೆ  ರೋಡ್‌ ಶೋ;ಗ್ಯಾಂಗ್ ರೇಪ್ ಆರೋಪಿಗಳು ಮತ್ತೆ ಅಂದರ್

Profile Vishakha Bhat May 25, 2025 12:25 PM

ಹಾವೇರಿ: ಕಳೆದ ವರ್ಷ ಹಾವೇರಿಯ (Haveri) ಹಾನಗಲ್‌ನಲ್ಲಿ ಮಹಿಳೆಯ ಮೇಲೆ ನಡೆದಿದ್ದ ಅತ್ಯಾಚಾರ (Physical Abuse Case) ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಸಿಕ್ಕ ಬಳಿಕ ಜೈಲಿನಿಂದ ಬಿಡುಗಡೆಯಾಗಿ ಕಾರುಗಳಲ್ಲಿ ರೋಡ್ ಶೋ ಮಾಡಿ ವಿಜಯೋತ್ಸವ ಮಾಡಿದ್ದ ಏಳು ಆರೋಪಿಗಳನ್ನು ಪೊಲೀಸರು ಮತ್ತೆ ಜೈಲಿಗಟ್ಟಿದ್ದಾರೆ. ಗ್ಯಾಂಗ್ ರೇಪ್ ಪ್ರಕರಣದ ಪ್ರಮುಖ ಏಳು ಆರೋಪಿಗಳಿಗೆ ಜಾಮೀನು ದೊರೆತ ಕೂಡಲೇ ತಾವೇನೋ ಸಾಧನೆ ಮಾಡಿದ ರೀತಿಯಲ್ಲಿ ಐದು ಕಾರುಗಳಲ್ಲಿ 20ಕ್ಕೂ ಹೆಚ್ಚು ಹಿಂಬಾಲಕರೊಂದಿಗೆ ವಿಜಯೋತ್ಸವ ರೀತಿಯಲ್ಲಿ ಮೆರವಣಿಗೆ ನಡೆಸಿದ್ದರು.

ಹಾವೇರಿ ಸಬ್ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಾದ ಅಫ್ತಾದ್‌ಚಂದನ ಕಟ್ಟಿ, ಮದರ್‌ಸಾಬ್ ಮಂಡಕ್ಕಿ, ಸಮಿವುಲ್ಲ ಲಾಲನವರ್, ಮೊಹ್ಮದ್ ಸಾದಿಕ್ ಅಗಸಿನಿ, ಶೋಯಿಬ್‌ ಮುಲ್ಲ, ತೌಸಿಫ್‌ಚೋಟಿ ಮತ್ತು ರಿಯಾಜ್‌ಸೆವಿಕೇರಿ ಇವರುಗಳು ಕಾರುಗಳಲ್ಲಿ, ಬೈಕ್‌ಗಳಲ್ಲಿ ಕುಳಿತು ವಿಜಯೋತ್ಸವದ ರೀತಿಯಲ್ಲಿ ಮೆರವಣಿಗೆ ನಡೆಸಿರುವ ವೀಡಿಯೊಗಳು ವೈರಲ್ ಆಗಿದ್ದವು. ವಿಡಿಯೋ ಹೊರ ಬರುತ್ತಿದ್ದಂತೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು.

ಆರೋಪಿಗಳ ಕುಟುಂಬಸ್ಥರು ಹಾಗೂ ಸ್ನೇಹಿತರು ಅದ್ಧೂರಿ ಮೆರವಣಿಗೆ ಸಿದ್ಧತೆ ಮಾಡಿದ್ದರು. ಜೈಲಿನಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಅವರ ಊರು ಅಕ್ಕಿಹಾಳೂರಿಗೆ ಮೆರವಣಿಗೆ ಏರ್ಪಡಿಸಿದ್ದರು. 10 ಕಾರುಗಳು, 30 ಬೈಕ್ ಗಳು, ಡಿಜೆ ಸಂಗೀತದೊಂದಿಗೆ ದಾರಿಯುದ್ದಕ್ಕೂ ವಿಕ್ಟರಿ ಚಿನ್ಹೆ ತೋರಿಸುತ್ತಾ ಆರೋಪಿಗಳು ರೋಡ್ ಶೋ ಮಾಡಿದ್ದರು. ಇದೀಗ ಪೊಲೀಸರು ಆರೋಪಿಗಳಿಗೆ ಶಾಕ್‌ ನೀಡಿದ್ದಾರೆ. ಎಲ್ಲ 7 ಆರೋಪಿಗಳನ್ನು ಬಂಧಿಸಿ ಮತ್ತದೇ ಹಾವೇರಿ ಜೈಲಿಗೆ ಅಟ್ಟಿದ್ದಾರೆ.

ಈ ಸುದ್ದಿಯನ್ನೂ ಓದಿ: Lokeshwara Swamiji: ಲೋಕೇಶ್ವರ ಸ್ವಾಮೀಜಿಯಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ, ಬಂಧನ; ಮಠದಲ್ಲಿ ಮಾರಕಾಸ್ತ್ರ ಪತ್ತೆ

ಜಾಮೀನು ನೀಡಿಕೆ ನಿಯಮಗಳನ್ನು ಆರೋಪಿಗಳು ಉಲ್ಲಂಘಿಸಿದ ಹಿನ್ನಲೆಯಲ್ಲಿ ನ್ಯಾಯಾಲಯ ಜಾಮೀನು ರದ್ದು ಪಡಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಂಶು ಕುಮಾರ್ ಎಸ್ ತಿಳಿಸಿದ್ದಾರೆ. ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯದಿಂದ ಇತ್ತೀಚೆಗೆ ಜಾಮೀನು ಪಡೆದ ಏಳು ಆರೋಪಿಗಳನ್ನು ಜಾಮೀನು ನಿಯಮಗಳನ್ನು ಉಲ್ಲಂಘಿಸಿದ ನಂತರ ಪೊಲೀಸ್ ಇಲಾಖೆ ಬಂಧಿಸಿದೆ. ಆರೋಪಿಗಳು ಹಾನಗಲ್ ಪಟ್ಟಣ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್‌ಗಳಾಗಿದ್ದು, ಜಾಮೀನು ಪಡೆದು ಮೆರವಣಿಗೆಯಲ್ಲಿ ಭಾಗವಹಿಸಿದ್ದರು' ಎಂದಿದ್ದಾರೆ.