Katrina Kaif: ಮೊದಲ ಮಗುವಿನ ನಿರೀಕ್ಷೆಯಲ್ಲಿ ಕತ್ರಿನಾ- ವಿಕ್ಕಿ ದಂಪತಿ; ಆಪ್ತ ಬಳಗ ಹೇಳಿದ್ದೇನು?
ಬಾಲಿವುಡ್‌ನ ಫೇಮಸ್ ಜೋಡಿ ಕತ್ರಿನಾ ಕೈಫ್ ಮತ್ತು ವಿಕಿ ಕೌಶಲ್ (Vicky Kaushal) ಪೋಷಕರಾಗುವ ಕುರಿತು ಹಲವು ಆಗಾಗ ಸುದ್ದಿ ಹರಿದಾಡುತ್ತಿರುತ್ತದೆ. ಇದೀಗ ಮತ್ತೆ ಹೇಳಲಾಗುತ್ತಿದ್ದು, ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

-

ಮುಂಬೈ: ಬಾಲಿವುಡ್‌ನ ಫೇಮಸ್ ಜೋಡಿ ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal) ಪೋಷಕರಾಗುವ ಕುರಿತು ಹಲವು ಆಗಾಗ ಸುದ್ದಿ ಹರಿದಾಡುತ್ತಿರುತ್ತದೆ. ಇದೀಗ ಮತ್ತೆ ಹೇಳಲಾಗುತ್ತಿದ್ದು, ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕತ್ರಿನಾ ತನ್ನ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಮತ್ತು ಮಗು ಅಕ್ಟೋಬರ್-ನವೆಂಬರ್‌ನಲ್ಲಿ ಜನಿಸಲಿದೆ ಎಂದು ಅವರ ಆಪ್ತ ಬಳಗವೊಂದು ತಿಳಿಸಿದೆ. ಆದರೆ ದಂಪತಿಯಿಂದ ಇದುವರೆಗೂ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ.
ಇದೇ ವರ್ಷದ ಮೇ ತಿಂಗಳಿನಲ್ಲಿ, ಕತ್ರಿನಾ ತನ್ನ ಪತಿ ಹಾಗೂ ನಟ ವಿಕ್ಕಿ ಕೌಶಲ್ ಅವರೊಂದಿಗೆ ಲಂಡನ್‌ನಲ್ಲಿ ಓಡಾಡುತ್ತಿರುವ ಫೋಟೋ ವೈರಲ್ ಆಗಿತ್ತು. ಕತ್ರಿನಾ ಕೈಫ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರಬಹುದು. ಹಾಗಾಗಿ ಯಾರಿಗೂ ಅನುಮಾನ ಬಾರದಂತೆ ದೊಡ್ಡದಾದ ಬ್ಲೇಜರ್ ಧರಿಸಿರಿವುದನ್ನು ಫೋಟೋದಲ್ಲಿ ನಾವು ಕಾಣಬಹುದು ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದರು.
ಲಂಡನ್‌ನ ಬೇಕರ್ ಸ್ಟ್ರೀಟ್ನಲ್ಲಿ ತಾರಾ ದಂಪತಿಯು ತಿರುಗಾಡುವ ದೃಶ್ಯವನ್ನು ಯಾರೋ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು ಅದರನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ನಟಿಯು ದೊಡ್ಡದಾದ ಬ್ಲೇಜರ್ ಧರಿಸಿರಿವುದನ್ನು ಮತ್ತು ನಡಿಗೆಯಲ್ಲಿನ ವ್ಯತ್ಯಾಸ ಕಂಡು ಅನುಮಾನ ವ್ಯಕ್ತಪಡಿಸಿರುವ ನೆಟ್ಟಿಗರು, ಮಾಧ್ಯಮ ಮತ್ತು ಫ್ಯಾನ್ಸ್ಗಳಿಗೆ ಗೊತ್ತಾಗಬಾರದರು ಎಂಬ ಕಾರಣದಿಂದ ವಿಕ್ಕಿ ಕೌಶಲ್ ಪತ್ನಿಯನ್ನು ಲಂಡನ್ಗೆ ತೆರಳಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಕತ್ರಿನಾ ಕೈಫ್ ಪ್ರೆಗ್ನೆಂಟ್ ಎಂಬುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿರಲಿಲ್ಲ. ಇದೀಗ ಕತ್ರಿನಾ ಆಪ್ತ ವಲಯ ಈ ಸುದ್ದಿಯನ್ನು ಕನ್ಫರ್ಮ್ ಮಾಡಿದೆ.
ಈ ಸುದ್ದಿಯನ್ನೂ ಓದಿ: Vicky Kaushal: ಛಾವಾ ಸಕ್ಸಸ್ ನಂತ್ರ ವಿಕ್ಕಿ ಕೌಶಲ್ ಏನ್ ಮಾಡ್ತಿದ್ದಾರೆ? ಖ್ಯಾತ ನಟನ ಬಯೋಪಿಕ್‌ನಲ್ಲಿ ನಟಿಸೋದು ಗಾರಂಟಿನಾ?
ಮಾರ್ಚ್‌ನಲ್ಲಿ ಕತ್ರಿನಾ ಕೈಫ್ ಅವರು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದರು. ಸಾಮಾನ್ಯವಾಗಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮದುವೆಯಾಗದವರು, ಮಕ್ಕಳಾಗದವರು ಹೆಚ್ಚಾಗಿ ಭೇಟಿ ನೀಡುತ್ತಾರೆ. ದೋಷ ನಿವಾರಣೆಗೆ ಅನೇಕರು ಸರ್ಪ ಸಂಸ್ಕಾರ ಪೂಜೆ ನೆರವೇರಿಸುತ್ತಾರೆ. ಬಾಲಿವುಡ್ ನಟಿ ಕತ್ರಿನಾ ಕೂಡ ಸುಬ್ರಹ್ಮಣ್ಯನ ಮೊರೆ ಹೋಗಿದ್ದರು. ಇದಾದ ಬಳಿಕ ಕತ್ರಿನಾ ಸಿಹಿ ಸುದ್ದಿ ನೀಡಿದ್ದಾರೆ.