ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Honeymoon Murder Case: ಹನಿಮೂನ್ ಕೊಲೆ ಕೇಸ್‌- ಜಾಮೀನಿಗಾಗಿ ಅರ್ಜಿ ಸಲ್ಲಿಸಿದ ಸೋನಮ್

ಇಂದೋರ್‌ನ ವ್ಯಾಪಾರಿ ರಾಜಾ ರಘುವಂಶಿಯನ್ನು ಮದುವೆಯಾದ ಕೆಲವೇ ದಿನಗಳಲ್ಲಿ ಪತಿಯನ್ನು ಕೊಲೆ ಮಾಡಿ ಜೈಲು ಸೇರಿದ್ದ ಸೋನಮ್ ರಘುವಂಶಿ ಇದೀಗ ಜಾಮೀನು ಕೋರಿ ನ್ಯಾಯಾಲಯಕ್ಕೆ ಶುಕ್ರವಾರ ಅರ್ಜಿಯನ್ನು ಸಲ್ಲಿಸಿದ್ದಾರೆ. ಆದರೆ ಪ್ರಾಸಿಕ್ಯೂಷನ್ ಪ್ರಕರಣದ ದಾಖಲೆಗಳನ್ನು ಪರಿಶೀಲಿಸಲು ಸ್ವಲ್ಪ ಸಮಯ ಕೇಳಿದ್ದು, ಈ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 17ಕ್ಕೆ ನಿಗದಿಪಡಿಸಲಾಗಿದೆ.

ಇಂದೋರ್: ಹನಿಮೂನ್ ಕೊಲೆ ಪ್ರಕರಣದ (Honeymoon Murder Case) ಪ್ರಮುಖ ಆರೋಪಿ ಸೋನಮ್ ರಘುವಂಶಿ (Sonam Raghuvanshi) ಅವರು ಚಾರ್ಜ್ ಶೀಟ್ ನಲ್ಲಿ ದೋಷಗಳಿವೆ ಎಂದು ಆರೋಪಿಸಿದ್ದು, ಜಾಮೀನು (Bail) ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮೇಘಾಲಯದಲ್ಲಿ ಹನಿಮೂನ್ ಗೆ ತೆರಳಿದ್ದ ವೇಳೆ ಪತಿ ರಾಜಾ ರಘುವಂಶಿ (Raja Raghuvanshi murder case) ಅವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಸೋನಮ್ ರಘುವಂಶಿ ಉಪವಿಭಾಗದ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 17ಕ್ಕೆ ನಿಗದಿಪಡಿಸಲಾಗಿದೆ.

ಮದುವೆಯಾದ ಕೆಲವೇ ದಿನಗಳಲ್ಲಿ ಪತಿಯನ್ನು ಕೊಲೆ ಮಾಡಿ ಜೈಲು ಸೇರಿದ್ದ ಸೋನಮ್ ಅವರ ಪರವಾಗಿ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ತುಷಾರ್ ಚಂದ್ರ ಅವರು ಅರ್ಜಿಯನ್ನು ಶುಕ್ರವಾರ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಆದರೆ ಪ್ರಾಸಿಕ್ಯೂಷನ್ ಪ್ರಕರಣದ ದಾಖಲೆಗಳನ್ನು ಪರಿಶೀಲಿಸಲು ಸ್ವಲ್ಪ ಸಮಯ ಕೇಳಿದೆ ಎಂದು ಅವರು ತಿಳಿಸಿದ್ದಾರೆ. ಸೋನಮ್ ಅವರ ವಕೀಲರು ಇಂದೋರ್ ಮೂಲದ ಉದ್ಯಮಿ ರಾಜಾ ರಘುವಂಶಿ ಅವರ ಕೊಲೆಯಲ್ಲಿ ಸಲ್ಲಿಸಲಾದ ಚಾರ್ಜ್‌ಶೀಟ್‌ನಲ್ಲಿ ದೋಷಗಳು ಇವೆ ಎಂದು ಹೇಳಿದ್ದಾರೆ.

ಕಳೆದ ಮೇ ತಿಂಗಳಲ್ಲಿ ನಡೆದ ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿ ಅವರ ಪತ್ನಿಸೋನಮ್ ಮತ್ತು ಆಕೆಯ ಗೆಳೆಯ ಭಾಗಿಯಾಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಮೇಘಾಲಯದ ತನಿಖಾಧಿಕಾರಿಗಳು ಕೊಲೆ ಆರೋಪಿಗಳನ್ನು ಬಂಧಿಸುತ್ತಿದ್ದಂತೆ ಸೋನಮ್ ಉತ್ತರ ಪ್ರದೇಶದ ಪೊಲೀಸರ ಮುಂದೆ ಶರಣಾಗಿದ್ದಳು. ಸೋನಮ್, ರಾಜ್ ಮತ್ತು ಮೂವರು ಕೊಲೆಗಾರರಾದ ವಿಶಾಲ್ ಸಿಂಗ್ ಚೌಹಾಣ್, ಆಕಾಶ್ ರಜಪೂತ್ ಮತ್ತು ಆನಂದ್ ಕುರ್ಮಿ ​​ವಿರುದ್ಧ 790 ಪುಟಗಳ ಆರೋಪಪಟ್ಟಿಯನ್ನು ಕಳೆದ ವಾರ ಸಲ್ಲಿಸಲಾಗಿತ್ತು.

ಇದನ್ನೂ ಓದಿ: Osama Bin Laden: ಲಾಡೆನ್‌ ಸಾವಿನ ಬಳಿಕ ಆತನ ಪತ್ನಿಯರು ಏನಾದರು?‌ ಮಾಜಿ ಅಧ್ಯಕ್ಷನ ಆಪ್ತ ಬಿಚ್ಚಿಟ್ಟ ಆ ಶಾಕಿಂಗ್ ಸಂಗತಿ ಏನು?

ಏನಿದು ಪ್ರಕರಣ?

ಇಂದೋರ್‌ನ ವ್ಯಾಪಾರಿ ರಾಜಾ ರಘುವಂಶಿಯ ಮತ್ತು ಪತ್ನಿ ಸೋನಮ್ ಅವರ ಮದುವೆ ಮೇ 11ರಂದು ನಡೆದಿತ್ತು. ಬಳಿಕ ಅವರಿಬ್ಬರು ಮೇಘಾಲಯಕ್ಕೆ ಹನಿಮೂನ್ ಗೆ ತೆರಳಿದ್ದರು. ಮೇ 23ರಂದು ಸೋಹರಾದ ವೈಸಾವ್‌ಡಾಂಗ್ ಜಲಪಾತದ ಬಳಿ ರಾಜಾನನ್ನು ಕೊಲೆಗೈದು ಆತನ ಶವವನ್ನು ಕಂದರಕ್ಕೆ ಎಸೆಯಲಾಗಿತ್ತು. ಜೂನ್ 2ರಂದು ಶವ ಪತ್ತೆಯಾಗಿದ್ದು, ಸೋನಂ ಕಾಣೆಯಾಗಿದ್ದಳು. ಇದು ದೇಶಾದ್ಯಂತ ಭಾರಿ ಕುತೂಹಲಕ್ಕೆ ಕಾರಣವಾಗಿತ್ತು. ಆ ಬಳಿಕ ಆಕೆ ಜೂನ್ 9ರಂದು ಉತ್ತರ ಪ್ರದೇಶದ ಘಾಜಿಪುರದಲ್ಲಿ ಪೊಲೀಸರಿಗೆ ಶರಣಾಗಿದ್ದಳು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸೋನಂ, ರಾಜ್ ಕುಶ್ವಾಹ, ಮತ್ತು ಮೂವರು ಸಹಚರರಾದ ವಿಶಾಲ್, ಆಕಾಶ್, ಮತ್ತು ಆನಂದ್‌ ಎಂಬವರನ್ನು ಬಂಧಿಸಿದ್ದರು.

ವಿದ್ಯಾ ಇರ್ವತ್ತೂರು

View all posts by this author