ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Physical Abuse: ಮದ್ಯದ ನಶೆಯಲ್ಲಿ ಪತ್ನಿಗೆ ಕಿರುಕುಳ; ಸೀಮೆಎಣ್ಣೆ ಸುರಿದು ಕೊಲೆಗೆ ಯತ್ನಿಸಿದ ಪಾಪಿ ಪತಿ

ಜಿಲ್ಲೆಯಲ್ಲಿ ಅಮಾನುಷ ಘಟನೆಯೊಂದು ನಡೆದಿದ್ದು, ಕುಡಿತ ನಶೆಯಲ್ಲಿ ವ್ಯಕ್ತಿಯೊಬ್ಬ ಪತ್ನಿಯ ಮೇಲೆ ಸೀಮೆ ಎಣ್ಣೆ ಸುರಿದು ಕೊಲೆಗೆ ಯತ್ನಿಸಿದ್ದಾನೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಗ್ರಾಮದ ಶ್ರೀಮಂತ ಎನ್ನುವ ವ್ಯಕ್ತಿ ಕುಡಿತ ಚಟವನ್ನು ಹೊಂದಿದ್ದ.

ಹಾಸನ: ಜಿಲ್ಲೆಯಲ್ಲಿ ಅಮಾನುಷ ಘಟನೆಯೊಂದು ನಡೆದಿದ್ದು, ಕುಡಿತ ನಶೆಯಲ್ಲಿ ವ್ಯಕ್ತಿಯೊಬ್ಬ ಪತ್ನಿಯ ಮೇಲೆ ಸೀಮೆ ಎಣ್ಣೆ ಸುರಿದು ಕೊಲೆಗೆ (Physical Abuse) ಯತ್ನಿಸಿದ್ದಾನೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಗ್ರಾಮದ ಶ್ರೀಮಂತ ಎನ್ನುವ ವ್ಯಕ್ತಿ ಕುಡಿತ ಚಟವನ್ನು ಹೊಂದಿದ್ದ. ಪತ್ನಿ ಸುಶ್ಮಿತಾಗೆ ನಿತ್ಯ ಕಿರುಕುಳ ನೀಡುತ್ತಿದ್ದ ಮದ್ಯ ಸೇವನೆ ಜೊತೆಗೆ ಶ್ರೀಮಂತ ಅಕ್ರಮ ಸಂಬಂಧ ಕೂಡ ಹೊಂದಿದ್ದ ಎಂದು ಆರೋಪ ಕೇಳಿ ಬಂದಿದೆ. ಜುಲೈ 30ರ ರಾತ್ರಿ ಕುಡಿದು ಬಂದು ಸುಶ್ಮಿತಾ ಮೇಲೆ ಹಲ್ಲೆ ನಡೆಸಿದ್ದ. ನಂತರ ಆಕೆಯನ್ನು ಕೊಲೆ ಮಾಡಲು ಯತ್ನಿಸಿದ್ದಾನೆ.

ಅಸ್ವಸ್ಥಗೊಂಡಿದ್ದ ನವವಿವಾಹಿತೆಯನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪತಿಯ ವಿರುದ್ಧ ಸದ್ಯ ಯಸಳೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಇವರ ಮದುವೆಯಾಗಿ ಕೇವಲ 7 ತಿಂಗಳುಗಳಾಗಿದ್ದವು. ಪತ್ನಿಗೆ ಕಿರುಕುಳ ನೀಡಿ ಪತಿಯೇ ಕೊಲೆಗೆ ಯತ್ನಿಸಿರುವ ಆರೋಪ ಕೇಳಿ ಬಂದಿದೆ. ಪತ್ನಿ ಸುಶ್ಮಿತಾಗಿಗೆ ಬಲವಂತಾಗಿ ಮಾತ್ರೆ ತಿನ್ನಿಸಿ ಸೀಮೆಎಣ್ಣೆ ಸುರಿದು ಪತಿ ಶ್ರೀಮಂತ ಬೆಂಕಿ ಹಚ್ಚಲು ಯತ್ನಿಸಿರುವ ಆರೋಪ ಕೇಳಿ ಬಂದಿದ್ದು, ಪತಿ ಶ್ರೀಮಂತ ಪರಾರಿಯಾಗಿದೆ. ಸದ್ಯ ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.

ಪ್ರತ್ಯೇಕ ಘಟನೆಯಲ್ಲಿ, ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ತಮ್ಮ ದೇಹದ ಮೇಲೆಯೇ ಡೆತ್‌ನೋಟ್‌ ಬರೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದ ಬಾಗಪತ್‌ನಲ್ಲಿ ಜರುಗಿದೆ. ಮನೀಷಾ ಮೃತ ಮಹಿಳೆ. ಅವರು 2023ರಲ್ಲಿ ನೊಯ್ಡಾ ನಿವಾಸಿ ಕುಂದನ್‌ ಅವರನ್ನು ವಿವಾಹವಾಗಿದ್ದರು. ಮದುವೆಯಾದ ಕೆಲ ತಿಂಗಳಲ್ಲೇ ಪತಿ ಹಾಗೂ ಅತ್ತೆ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎಂದು ಅವರು ಬರೆದಿದ್ದಾರೆ. ಮನೀಷಾ ತಮ್ಮ ಮೊಬೈಲ್‌ನಲ್ಲಿ ವಿಡಿಯೊ ರೆಕಾರ್ಡ್‌ ಮಾಡಿಕೊಂಡು ಇರಿಸಿರುವುದು ಸದ್ಯ ಪೊಲೀಸರಿಗೆ ದೊರೆತಿದೆ.

ಅದರಲ್ಲಿತಾನು ಎದುರಿಸಿದ ಕ್ರೂರತೆ ಬಗ್ಗೆ ವಿವರಿಸಿದ್ದಾರೆ. ಈ ವಿಡಿಯೊ ತುಣುಕಿನಲ್ಲಿ ಮನೀಷಾ ಅಳುತ್ತಾ, ''ಪತಿ, ಅವರ ತಾಯಿ, ತಂದೆ ಮತ್ತು ಸಹೋದರ ವರದಕ್ಷಿಣೆಗಾಗಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಮದುವೆ ಸಂದರ್ಭದಲ್ಲಿ ನಮ್ಮ ಕುಟುಂಬಸ್ಥರು 20 ಲಕ್ಷ ರೂ. ಖರ್ಚು ಮಾಡಿದ್ದರು. ವರದಕ್ಷಿಣೆಯಾಗಿ ಬುಲೆಟ್‌ ಬೈಕ್‌ ಸಹ ನೀಡಿದ್ದರು. ಆದರೆ ಪತಿ ಮನೆಯವರು ಆಗಾಗ್ಗೆ ಕಾರು ಮತ್ತು ಹಣವನ್ನು ಕೇಳುತ್ತಿದ್ದರು,'' ಎಂದು ವಿವರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Self Harming: ಪ್ರಿಯಕರನ ಜೊತೆ ಓಡಿ ಹೋದ ನಾಲ್ಕು ಮಕ್ಕಳ ತಾಯಿ; ಮನನೊಂದು ವಿಡಿಯೋ ಮಾಡಿಟ್ಟು ಪತಿ ಆತ್ಮಹತ್ಯೆ

ನನ್ನ ಸಾವಿಗೆ ಕಾರಣರಾದವರು ಪತಿ ಕುಂದನ್, ಅತ್ತೆ, ಸೋದರ ಮಾವ ದೀಪಕ್ ಮತ್ತು ವಿಶಾಲ್. ಕಿರುಕುಳದ ಬಗ್ಗೆ ನನ್ನ ಕುಟುಂಬ ಚರ್ಚಿಸಿದ ಸಮಯದಲ್ಲಿ ಅವರು ನನ್ನ ಕುಟುಂಬಕ್ಕೆ ಬೆದರಿಕೆ ಹಾಕಿದ್ದರುʼ ಎಂದು ತನ್ನ ಕಾಲಿನ ಮೇಲೆ ಬರೆದು ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.