ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Self Harming: ಪ್ರಿಯಕರನ ಜೊತೆ ಓಡಿ ಹೋದ ನಾಲ್ಕು ಮಕ್ಕಳ ತಾಯಿ; ಮನನೊಂದು ವಿಡಿಯೋ ಮಾಡಿಟ್ಟು ಪತಿ ಆತ್ಮಹತ್ಯೆ

ಉತ್ತರಪ್ರದೇಶದ ಹರ್ದೋಯಿಯ ಕಾರ್ಮಿಕ ಸರ್ವೇಶ್ ಎಂಬವರ ಪತ್ನಿ ರಿಂಕಿ ಪ್ರಿಯಕರನೊಂದಿಗೆ ಓಡಿ ಹೋದ ಬಳಿಕ ಸರ್ವೇಶ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ವೇಶ್ ಮತ್ತು ರಿಂಕಿ ದಂಪತಿಗೆ ನಾಲ್ವರು ಮಕ್ಕಳಿದ್ದಾರೆ. ರಿಂಕಿ ಪ್ರಿಯಕರನೊಂದಿಗೆ ಹೋಗುವುದಕ್ಕೂ ಮುನ್ನ ಸರ್ವೇಶ್ ಗೆ ವಿಷ ಕುಡಿದು ಸಾಯಿ ಎಂದು ಹೇಳಿದ್ದಾಳೆ ಎನ್ನಲಾಗಿದೆ.

ಗಂಡನನ್ನು ಸಾಯಲು ಹೇಳಿ ಪ್ರಿಯಕರನ ಜೊತೆ ಓಡಿ ಹೋದಳು

ಹರ್ದೋಯ್‌: ನಾಲ್ವರು ಮಕ್ಕಳ ತಾಯಿ ಪ್ರಿಯಕರನೊಂದಿಗೆ (Lover) ಓಡಿ ಹೋಗಿದ್ದು, ಇದರಿಂದ ನೊಂದ ಆಕೆಯ ಪತಿ ಆತ್ಮಹತ್ಯೆ (Self Harming) ಮಾಡಿಕೊಂಡ ಘಟನೆ ಉತ್ತರ ಪ್ರದೇಶದ (Uttar Pradesh) ಹರ್ದೋಯ್‌ನಲ್ಲಿ (Hardoi) ನಡೆದಿದೆ. ಸರ್ವೇಶ್ (46) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರ ಪತ್ನಿ ರಿಂಕಿ ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ. ನಾಲ್ಕು ಮಕ್ಕಳ ತಾಯಿಯಾಗಿದ್ದ ರಿಂಕಿ ಪ್ರಿಯಕರನೊಂದಿಗೆ ಹೋಗುವ ಮುನ್ನ ಗಂಡ ಸರ್ವೇಶ್ ಗೆ ವಿಷ ಕುಡಿದು ಸಾಯಿ (Eat Poison And Die) ಎಂದು ಹೇಳಿದ್ದಾಳೆ ಎನ್ನಲಾಗಿದೆ.

ಪತ್ನಿ ಪ್ರಿಯಕರನೊಂದಿಗೆ ಓಡಿ ಹೋದ ಬಳಿಕ ಕಾರ್ಮಿಕ ಸರ್ವೇಶ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಸರ್ವೇಶ್ ಮತ್ತು ರಿಂಕಿ ದಂಪತಿಗೆ ನಾಲ್ವರು ಮಕ್ಕಳಿದ್ದಾರೆ. ರಿಂಕಿ ಪ್ರಿಯಕರನೊಂದಿಗೆ ಹೋಗುವ ಯೋಜನೆ ಮಾಡಿಕೊಂಡಿದ್ದಳು. ಇದಕ್ಕೂ ಮುನ್ನ ಆಕೆ ಸರ್ವೇಶ್ ಗೆ ವಿಷ ಕುಡಿದು ಸಾಯಿ ಎಂದು ಹೇಳಿದ್ದಾಳೆ.

ಪತ್ನಿ ಪ್ರಿಯಕರನೊಂದಿಗೆ ಹೋಗಿದ್ದರಿಂದ ನೊಂದ 46 ವರ್ಷದ ಸರ್ವೇಶ್ ವಿಷ ಸೇವಿಸಿದ್ದಾನೆ. ಕೂಡಲೇ ಆತನ ಮನೆಯವರು ಅವನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಆತ ವಿಡಿಯೊ ಮಾಡಿ ತಾನು ಸಾಯುತ್ತಿರುವುದಾಗಿ ಹೇಳಿದ್ದಾನೆ.



ವಿಡಿಯೊದಲ್ಲಿ ಏನಿದೆ?

ಸಾಯುವ ಮೊದಲು ಸರ್ವೇಶ್ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿರುವ ವಿಡಿಯೊದಲ್ಲಿ ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಹೇಳಿಕೊಂಡಿದ್ದಾನೆ. ಆತನ ಪತ್ನಿ ರಿಂಕಿ ಸುಮಾರು ಒಂದು ವರ್ಷದಿಂದ ಹಕೀಮ್ ಎಂಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು ಎಂದಿರುವ ಸರ್ವೇಶ್, ನಾನು ಆಕೆಯೊಂದಿಗೆ ಮಾತನಾಡಲು ಹಲವು ಬಾರಿ ಪ್ರಯತ್ನಿಸಿದೆ. ಆದರೆ ಅವಳು ಕೇಳಲಿಲ್ಲ. ತನಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಹೇಳಿ ಹಕೀಮ್ ಜೊತೆ ಹೋಗಿದ್ದಾಳೆ. ಶಹಾಬಾದ್‌ನ ಹಕೀಮ್ ಮತ್ತು ಸರ್ವೇಶ್ ನೆರೆಹೊರೆಯವರಾಗಿದ್ದಾರೆ.

ರಿಂಕಿ ಮತ್ತು ಸರ್ವೇಶ್ ಜಗಳದ ಬಗ್ಗೆ ಅವರ ಮಗಳು ರಾಶಿ ಹೇಳುವುದು ಹೀಗೆ. ನಾವು ನಾಲ್ಕು ಮಂದಿ ಮಕ್ಕಳು. ತಂದೆ ತಾಯಿ ಪ್ರತಿದಿನ ಜಗಳವಾಡುತ್ತಿದ್ದರು. ಒಮ್ಮೆ ತಾಯಿ ಹಕೀಮ್ ಜೊತೆ ಹೋಗಿದ್ದರು. ಆದರೆ ಮಕ್ಕಳ ಹಿತದೃಷ್ಟಿಯಿಂದ ತಂದೆ ಅವರನ್ನು ವಾಪಸ್ ಕರೆದುಕೊಂಡು ಬಂದರು.

ಇದನ್ನೂ ಓದಿ: PM Modi: ಜಮ್ಮು-ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಗುಜರಾತ್ ಭೇಟಿ ಶ್ಲಾಘಿಸಿದ ಪ್ರಧಾನಿ ಮೋದಿ

ಸರ್ವೇಶ್ ಸಾವಿನ ಬಳಿಕ ಆತನ ಕುಟುಂಬ ರಿಂಕಿ ಮತ್ತು ಆಕೆಯ ಪ್ರಿಯಕರನ ವಿರುದ್ಧ ದೂರು ದಾಖಲಿಸಿದೆ. ಇದರಿಂದ ಹೆದರಿದ ಹಕೀಮ್ ಮತ್ತು ಆತನ ಕುಟುಂಬವು ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.