ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Blackmail Case: ಪತ್ನಿ ಸ್ನಾನ ಮಾಡುತ್ತಿರುವ ವಿಡಿಯೊ ರೆಕಾರ್ಡ್‌ ಮಾಡಿ ಪತಿ ಬ್ಲ್ಯಾಕ್‌ಮೇಲ್‌! EMI ಕಟ್ಟುವಂತೆ ಬೆದರಿಕೆ

ಮಹಿಳೆಯೊಬ್ಬಳು ತನ್ನ ಪತಿಖಾಸಗಿ ಫೋಟೋ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಪುಣೆಯ ಅಂಬೆಗಾಂವ್‌ನಲ್ಲಿ 30 ವರ್ಷದ ಮಹಿಳೆಯೊಬ್ಬರು ತಮ್ಮ ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ.

ಪತ್ನಿಯ ಖಾಸಗಿ ವಿಡಿಯೋ ರೆಕಾರ್ಡ್‌ ಮಾಡಿ ಪತಿಯಿಂದಲೇ ಬ್ಲ್ಯಾಕ್‌ಮೇಲ್‌!

Profile Sushmitha Jain Jul 23, 2025 2:10 PM

ಪುಣೆ: ಗಂಡ-ಹೆಂಡತಿಯನ್ನ (Husband And Wife), ಹೆಂಡತಿ-ಗಂಡನನ್ನು ಕೊಲ್ಲುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಈ ಮಧ್ಯೆ ಬ್ಲ್ಯಾಕ್ ಮೇಲೆ ಪ್ರಕರಣಗಳು ಕೇಳಿ ಬರುತ್ತಿವೆ. ಇದೀಗ ಅಂತಹದೇ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬಳು ತನ್ನ ಪತಿ (Husband) ಖಾಸಗಿ ಫೋಟೋ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಪುಣೆಯ (Pune) ಅಂಬೆಗಾಂವ್‌ನಲ್ಲಿ 30 ವರ್ಷದ ಮಹಿಳೆಯೊಬ್ಬರು ತಮ್ಮ ಪತಿಯ (Husband) ವಿರುದ್ಧ ದೂರು (Complaint) ದಾಖಲಿಸಿದ್ದಾರೆ.

ಪತಿಯು ಆಕೆ ಸ್ನಾನ ಮಾಡುವಾಗ ರಹಸ್ಯವಾಗಿ ವಿಡಿಯೋ ಚಿತ್ರೀಕರಿಸಿ, ಕಾರಿನ EMI ಕಟ್ಟಲು ತನ್ನ ಕುಟುಂಬದಿಂದ ಹೆಚ್ಚಿನ ಹಣ ತರದಿದ್ದರೆ ಆ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದಾಳೆ. 2020ರಲ್ಲಿ ವಿವಾಹವಾದ ಮಹಿಳೆ, ಪತಿಯಿಂದ ಮಾನಸಿಕ ಮತ್ತು ದೈಹಿಕ ಕಿರುಕುಳಕ್ಕೆ ಒಳಗಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಆಕೆಯ ಪತಿಯು ಖಾಸಗಿ ಕ್ಷಣಗಳನ್ನು ಚಿತ್ರೀಕರಿಸಿ, ಕಾರಿನ ಇನ್‌ಸ್ಟಾಲ್‌ಮೆಂಟ್ ಕಟ್ಟಲು ತನ್ನ ಪೋಷಕರಿಂದ 1.5 ಲಕ್ಷ ರೂ. ತರಲು ಒತ್ತಾಯಿಸಿದ್ದಾನೆ ಎಂದು ಆರೋಪಿಸಿದ್ದಾರೆ. ದಂಪತಿಗಳಿಬ್ಬರೂ ಸರ್ಕಾರಿ ಉದ್ಯೋಗಿಗಳಾಗಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿ, ಆರೋಪಿಯಾದ ಪತಿ ಮತ್ತು ಇತರ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ತಾಂತ್ರಿಕ ಸಾಕ್ಷ್ಯ, ವಿಡಿಯೋ ದೃಶ್ಯಾವಳಿಗಳು ಮತ್ತು ಇತರ ವಿವರಗಳನ್ನು ತನಿಖೆಯ ಭಾಗವಾಗಿ ಪರಿಶೀಲಿಸುತ್ತಿದ್ದಾರೆ.

ಈ ಘಟನೆಯು ಮಹಿಳೆಯರ ಸುರಕ್ಷತೆ ಮತ್ತು ಗೌಪ್ಯತೆಯ ಕುರಿತಾದ ಗಂಭೀರ ಚರ್ಚೆಗೆ ಕಾರಣವಾಗಿದೆ. ಈ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಸಾರ್ವಜನಿಕರಲ್ಲಿ ಆಕ್ರೋಶವನ್ನುಂಟುಮಾಡಿವೆ. ಕಾನೂನು ತಜ್ಞರ ಪ್ರಕಾರ, ಇಂತಹ ದೌರ್ಜನ್ಯ ಮತ್ತು ಬೆದರಿಕೆಯ ಕೃತ್ಯಗಳು ಗಂಭೀರ ಅಪರಾಧವಾಗಿದ್ದು, ಆರೋಪಿಗೆ ಕಠಿಣ ಶಿಕ್ಷೆಯಾಗಬಹುದು. ಈ ಪ್ರಕರಣವು ವೈವಾಹಿಕ ಸಂಬಂಧಗಳಲ್ಲಿ ಗೌಪ್ಯತೆಯ ದುರುಪಯೋಗ ಮತ್ತು ದೌರ್ಜನ್ಯದ ವಿರುದ್ಧ ಕಠಿಣ ಕ್ರಮದ ಅಗತ್ಯವನ್ನು ಎತ್ತಿ ತೋರಿಸಿದೆ.

ಈ ಸುದ್ದಿಯನ್ನು ಓದಿ: Viral video: ಅಪ್ರಾಪ್ತ ಬಾಲಕಿಯ ಕುತ್ತಿಗೆಗೆ ಚಾಕು ಹಿಡಿದ ಹುಚ್ಚು ಪ್ರೇಮಿ...ಮುಂದೇನಾಯ್ತು?

ಇನ್ನು ಪತ್ನಿಯ ಮೇಲೆ ದೌರ್ಜನ್ಯವೆಸಗಿ, ಆಕೆಯ ಖಾಸಗಿ ವಿಡಿಯೋ ಇಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆಯೊಡ್ಡುತ್ತಿರುವ ಪ್ರಕರಣಗಳು ಮುನ್ನೆಲೆಗೆ ಬರುತ್ತಿದ್ದು, ಈ ಹಿಂದೆ ಗುಜರಾತ್‌ನ ಅಹಮದಾಬಾದ್‌ನ ಮಹಿಳೆಯೊಬ್ಬಳು ತನ್ನ ಪತಿಯ ಖಾಸಗಿ ಫೋಟೋ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಳು.ಮಹಿಳೆ ಪತಿಯ ಮನೆ ತೊರೆಯುವ ಸಮಯದಲ್ಲಿ ಅಲರ್ಜಿಯಾಗಿದ್ದು, ಮೈಮೇಲೆ ಗುಳ್ಳೆಗಳಾಗಿದ್ದವು. ಬಳಿಕ ಗುಣವಾಗಿತ್ತು. ಅದನ್ನು ಪತಿಗೆ ತೋರಿಸಲು ಇನ್‌ಸ್ಟಾಗ್ರಾಮ್ ವೀಡಿಯೊ ಕರೆ ಮಾಡಿದ್ದಾಗ ಆತ ಒಪ್ಪಿಗೆಯಿಲ್ಲದೆ ವಿಡಿಯೋ ಕರೆಯನ್ನು ರೆಕಾರ್ಡ್ ಮಾಡಿಕೊಂಡು ಈಗ ಬೆದರಿಸುತ್ತಿದ್ದಾನೆ ಎಂದು ಆರೋಪಿಸಿದ್ದಳು. ಪತಿಯ ಮನೆಗೆ ಮರಳಲು ನಿರಾಕರಿಸಿ ವಿಚ್ಛೇದನಕ್ಕೆ ಒತ್ತಾಯಿಸಿದಾಗ, ಅವನು ಅವಳನ್ನು ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದ್ದು, ಅವನು ಅವಳ ಖಾಸಗಿ ಚಿತ್ರಗಳು ಮತ್ತು ವೀಡಿಯೊಗಳನ್ನು ವಾಟ್ಸಾಪ್ ಸ್ಟೇಟಸ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ ಎಂದು ಪ್ರಕರಣ ದಾಖಲಾಗಿತ್ತು.